Subscribe to Gizbot

ಗೂಗಲ್‌ನಲ್ಲಿ ಫೋಟೋಗನ್ನು ಡೌನ್‌ಲೋಡ್ ಮಾಡುವ ಮುನ್ನ ಎಚ್ಚರ..! ಯಾಕೆ ಅಂದ್ರಾ..?

Written By:

ಇನ್ನು ಮುಂದೆ ನೀವು ಗೂಗಲ್ ನಲ್ಲಿ ದೊರೆಯುವ ಎಲ್ಲಾ ಫೋಟೋಗಳನ್ನು ಸುಲಭವಾಗಿ ಡೌನ್‌ಲೋಡ್ ಮಾಡಿಕೊಂಡು ನಿಮ್ಮ ಇಷ್ಟಕ್ಕೆ ಬಂದಂತೆ ಬಳಕೆ ಮಾಡಿಕೊಳ್ಳಲು ಸಾಧ್ಯವಾಗುದಿಲ್ಲ. ಕಾರಣ ಗೂಗಲ್ ತನ್ನ ಪಾಲಿಸಿಗಳನ್ನು ಬದಲಾಯಿಸಿದ್ದು, ಈ ಮೂಲಕ ಎಲ್ಲಾ ಇಮೇಜ್‌ಗಳನ್ನು ಕಾಪಿ ರೈಟ್ ಪ್ರೈವಸಿಗೆ ಒಳಪಡಿಸಿದೆ. ಹೀಗಾಗಿ ಸಿಕ್ಕ ಸಿಕ್ಕ ಫೋಟೋಗಳನ್ನು ಡೌನ್‌ಲೋಡ್ ಮಾಡಿಕೊಂಡರೆ ತೊಂದರೆ ಎದುರಿಸಬೇಕಾಗಿದೆ.

ಗೂಗಲ್‌ನಲ್ಲಿ ಫೋಟೋಗನ್ನು ಡೌನ್‌ಲೋಡ್ ಮಾಡುವ ಮುನ್ನ ಎಚ್ಚರ..! ಯಾಕೆ ಅಂದ್ರಾ..?

ಇನ್ನು ಮುಂದೆ ನೀವು ಗೂಗಲ್ ನಲ್ಲಿ ಇಮೇಜ್ ಗಳನ್ನು ಹುಡುಕುವ ಸಂದರ್ಭದಲ್ಲಿ ವಿವ್ ಇಮೇಜ್ ಎನ್ನುವ ಬಟನ್ ಅನ್ನು ಕಾಣುವ ಸಾಧ್ಯತೆ ಇಲ್ಲ. ನೀವು ಗೂಗಲ್ ನಲ್ಲಿ ಯಾವುದೇ ಇಮೇಜ್ ಹುಡುಕಿದ ಸಂದರ್ಭದಲ್ಲಿ ಆ ಇಮೇಜ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಲು ವಿಸಿಟ್ ಪೇಜ್ ಗೆ ಹೋಗಲೇಬೇಕು, ಆ ಇಮೇಜ್ ಅನ್ನು ಹಾಕಿರುವ ವೆಬ್‌ ಸೈಟಿನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬೇಕಾಗಿದೆ. ಇದರಿಂದ ಬಳಕೆದಾರರಿಗೆ ಮತ್ತು ಚಿತ್ರಗಳ ಮಾಲೀಕರಿಗೆ ಉಪಯೋಗವಾಗಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಿವ್ ಇಮೇಜ್

ವಿವ್ ಇಮೇಜ್

ಇನ್ನು ಮುಂದೆ ಗೂಗಲ್ ನಲ್ಲಿ ನೀವು ಸರ್ಚ್ ಮಾಡಿದ ಸಂದರ್ಭದಲ್ಲಿ ವಿವ್ ಇಮೇಜ್ ಎನ್ನುವ ಆಯ್ಕೆಯನ್ನು ಕಾಣಲು ಸಾಧ್ಯವಿಲ್ಲ. ಕಾರಣ ಇದನ್ನು ಗೂಗಲ್ ತೆಗೆದು ಹಾಕಿದೆ ಎನ್ನಲಾಗಿದೆ. ಇದರಿಂದಾಗಿ ಬಳಕೆದಾರರಿಗೆ ಮತ್ತು ವೆಬ್‌ ಸೈಟ್‌ಗಳಿಗೆ ಲಾಭವಾಗಲಿದೆ.

ರೆವೆನ್ಯೂ ವೆಬ್‌ ಸೈಟ್‌ಗಳು

ರೆವೆನ್ಯೂ ವೆಬ್‌ ಸೈಟ್‌ಗಳು

ಗೂಗಲ್ ಇಮೇಜ್ ಮೂಲಕ ಆದಾಯವನ್ನು ಮಾಡಿಕೊಳ್ಳುವ ವೆಬ್ ಸೈಟುಗಳಿಗೆ ಲಾಭ ಮಾಡಿಕೊಡುವ ಸಲುವಾಗಿ ಈ ಬದಲಾವಣೆಯನ್ನು ಮಾಡಿದೆ ಎನ್ನಲಾಗಿದೆ. ಕಾಪಿರೈಟ್ ವಿಷಯಕ್ಕೆ ಹೆಚ್ಚಿನ ತೊಂದರೆ ಯಾಗುತ್ತಿರುವ ಕಾರಣ ಈ ನಿರ್ಧಾರಕ್ಕೆ ಗೂಗ್ ಬಂದಿದೆ ಎನ್ನಲಾಗಿದೆ.

Redmi Note 5 ಬಿಡುಗಡೆಗೆ..! ಬೆಸ್ಟ್, ಬಜೆಟ್, ಬೊಂಬಾಟ್
ಕಾರಣವೇನು..?

ಕಾರಣವೇನು..?

ಗೂಗಲ್ ಕಳೆದ ವಾರ ಜೆಟ್ಟಿ ಇಮೇಜ್ ನೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದ್ದು, ಈ ಹಿನ್ನಲೆಯಲ್ಲಿ ಗೂಗಲ್ ತನ್ನ ಪ್ರೈವಸಿ ಪಾಲಿಸಿಯಲ್ಲಿ ಬದಲಾವಣೆಯನ್ನು ಮಾಡಿದೆ. ಈ ಒಪ್ಪಂದದ ಫಲವಾಗಿ ಗೂಗಲ್ ಇಮೇಜ್ ವಿವ್ಸ್ ಆಯ್ಕೆಯನ್ನು ಕಿತ್ತು ಹಾಕಿದೆ. ಇದರಿಂದಾಗಿ ಇನ್ನು ಮುಂದೆ ಉಚಿತ ಇಮೇಜ್‌ಗಳು ದೊರೆಯುವುದಿಲ್ಲ.

ಎಚ್ಚರ

ಎಚ್ಚರ

ಇಂದಿನ ದಿನದಲ್ಲಿ ಎಲ್ಲಾ ವೆಬ್ ಸೈಟ್‌ಗಳು ತಮ್ಮದೇ ಓರ್ಜಿನಲ್ ಇಮೇಜ್‌ಗಳನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕಾಗಿ ತಮ್ಮದೇ ಹಕ್ಕುಗಳನ್ನು ಪಡೆದುಕೊಂಡಿರುತ್ತಾರೆ. ಆದರೆ ಕೆಲವರು ಅದನ್ನು ದುರ್ಬಳಕೆ ಮಾಡಿಕೊಳ್ಳುತ್ತಾರೆ ಎನ್ನಲಾಗಿದೆ. ಇದರಿಂದಾಗಿ ಗೂಗಲ್ ಪ್ರೈವಸಿ ವಿಚಾರವನ್ನು ಬದಲಾವಣೆಯನ್ನು ಮಾಡಿದೆ. ಈ ಹಿನ್ನಲೆಯಲ್ಲಿ ನೀವು ಯಾವುದೇ ಇಮೇಜ್ ಡೌನ್‌ಲೋಡ್ ಮಾಡಿಕೊಂಡೆ ತೊಂದರೆ ಎದುರಿಸಬೇಕಾಗುವ ಸಾಧ್ಯತೆ ಇದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
No more free photos on Google. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot