ವಿಮಾನ ನಿಲ್ದಾಣದ ಪ್ರವೇಶ ಇನ್ನಷ್ಟು ಸುಲಭ; ಹೇಗೆ ಎಂದು ತಿಳಿಯಿರಿ!

|

ಶೀಘ್ರದಲ್ಲಿ ಬೇಕಾದ ಸ್ಥಳವನ್ನು ತಲುಪಲು ಹಾಗೂ ಬೇರೆ ದೇಶ ಮತ್ತು ರಾಜ್ಯಗಳಿಗೆ ಹೋಗಲು ವಿಮಾನ ಸೇವೆ ಒದಗಿಸಲಾಗಿದೆ. ಅದರಲ್ಲೂ ಭಾರತದಲ್ಲಿ ಹಲವಾರು ಸಂಸ್ಥೆಗಳು ಗ್ರಾಹಕರಿಗೆ ಈ ವಿಮಾನಯಾನ ಸೇವೆ ನೀಡುತ್ತಾ ಬರುತ್ತಿವೆ. ವಿಷಯ ಏನೆಂದರೆ ವಿಮಾನದಲ್ಲಿ ಕೂತು ಪ್ರಯಾಣಿಸುವಷ್ಟು ವಿಮಾನ ನಿಲ್ದಾಣಕ್ಕೆ ಪ್ರವೇಶ ಪಡೆಯುವ ಪ್ರಕ್ರಿಯೆ ಸಾಮಾನ್ಯವಾದುದಲ್ಲ.ಇದರಿಂದ ಅದೆಷ್ಟೋ ಸಮಯವನ್ನು ಮೀಸಲಿಡಬೇಕಾಗುತ್ತದೆ.

ವಿಮಾನ

ಹೌದು, ಬೆಂಗಳೂರಂತಹ ಮಹಾನಗರಗಳಲ್ಲಿ ವಿಮಾನ ನಿಲ್ದಾಣಕ್ಕೆ ಹೋಗಬೇಕಾದರೆ ಸಾಕಷ್ಟು ಸಂಚಾರ ದಟ್ಟಣೆ ಸಮಸ್ಯೆ ಎದುರಿಸಬೇಕು. ಅದರಲ್ಲೂ ವಿಮಾನ ನಿಲ್ದಾಣದ ಮುಖ್ಯ ದ್ವಾರದಲ್ಲಿ ಪರಿಶೀಲನೆಗೆ ಒಳಗಾಗಬೇಕು. ಇಷ್ಟೆಲ್ಲಾ ಪರಿಶ್ರಮದ ನಂತರ ವಿಮಾನದ ಒಳಗೆ ಹೋಗಿ ಕೂರುವುದು ಕೆಲವರಿಗೆ ಕಷ್ಟದ ಕೆಲಸ. ಅದರಲ್ಲೂ ಭದ್ರತೆ ದೃಷ್ಟಿಯಿಂದ ಪ್ರವೇಶ ದ್ವಾರದಲ್ಲಿ ತಪಾಸಣೆಗೆ ಒಳಗಾಗುವಾಗ ಹಲವರು ಕಿರಿಕಿರಿ ಅನುಭವಿಸುವುದುಂಟು. ಆದರೆ, ಇನ್ಮುಂದೆ ಈ ಸಮಸ್ಯೆ ಎದುರಾಗುವುದಿಲ್ಲ.

ಕಂಪ್ಯೂಟರ್ ಟೊಮೊಗ್ರಫಿ ತಂತ್ರಜ್ಞಾನ

ಕಂಪ್ಯೂಟರ್ ಟೊಮೊಗ್ರಫಿ ತಂತ್ರಜ್ಞಾನ

ವಿಮಾನ ನಿಲ್ದಾಣಗಳಲ್ಲಿ ಕಂಪ್ಯೂಟರ್ ಟೊಮೊಗ್ರಫಿ ತಂತ್ರಜ್ಞಾನ ಅಳವಡಿಸಲು ಮುಂದಾಗಿದ್ದು, ಈ ಮೂಲಕ ಸುಲಭವಾಗಿ ವಿಮಾನ ನಿಲ್ದಾಣಕ್ಕೆ ಪ್ರವೇಶ ಪಡೆಯಬಹುದಾಗಿದೆ. ಇನ್ನು ಟೊಮೊಗ್ರಫಿ ತಂತ್ರಜ್ಞಾನದ ಆಧಾರದ ಮೇಲೆ ಸ್ಕ್ಯಾನರ್‌ಗಳನ್ನು ಅಳವಡಿಸಲು ಭದ್ರತಾ ನಿಯಂತ್ರಕರು ಪ್ರಸ್ತಾಪಿಸಿದ್ದಾರೆ ಎಂದು ಬಿಸಿಎಸಿ ಜಂಟಿ ಮಹಾನಿರ್ದೇಶಕ ಜೈದೀಪ್ ಪ್ರಸಾದ್ ಮಾಹಿತಿ ನೀಡಿದ್ದಾರೆ.

ಈ ತಂತ್ರಜ್ಞಾನದ ಕೆಲಸ ಏನು?

ಈ ತಂತ್ರಜ್ಞಾನದ ಕೆಲಸ ಏನು?

ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಸೆಕ್ಯುರಿಟಿ (BCAS) ದೇಶದ ವಿಮಾನ ನಿಲ್ದಾಣಗಳಲ್ಲಿ ಕಂಪ್ಯೂಟರ್ ಟೊಮೊಗ್ರಫಿ ತಂತ್ರಜ್ಞಾನದ ಆಧಾರದ ಮೇಲೆ ಸ್ಕ್ಯಾನರ್‌ಗಳನ್ನು ಅಳವಡಿಸಲು ಶಿಫಾರಸು ಮಾಡಿದೆ. ಈ ಮೊದಲು ಪ್ರವೇಶ ದ್ವಾರದಲ್ಲಿ ಯಾರೇ ಹಾದುಹೋದರೂ ತಮ್ಮ ಬ್ಯಾಗ್‌ನಲ್ಲಿ ಇರುವ ಅಥವಾ ಜೇಬಿನಲ್ಲಿ ಇರಿಸಿಕೊಳ್ಳುವ ಮೊಬೈಲ್‌ ಹಾಗೂ ಇನ್ನಿತರೆ ಡಿವೈಸ್‌ಗಳನ್ನು ತೆಗೆದು ತೋರಿಸಬೇಕಾಗಿತ್ತು. ಆದರೆ, ಈ ಹೊಸ ತಂತ್ರಜ್ಞಾನದಲ್ಲಿ ಸ್ಕ್ಯಾನರ್‌ಗಳು ನಿಮ್ಮ ಬಳಿ ಇರುವ ಬ್ಯಾಗ್‌ ಒಳಗೆ ಏನಿದೆ ಎಂಬುದನ್ನು ತಿಳಿದುಕೊಂಡು ಸುಲಭ ಪ್ರವೇಶಕ್ಕೆ ಅನುವು ಮಾಡಿಕೊಡುತ್ತವೆ.

ಬ್ಯಾಗ್‌

ಈ ಸೌಲಭ್ಯದಿಂದ ಬ್ಯಾಗ್‌ನಲ್ಲಿನ ಸರಕುಗಳ ಚಿತ್ರಗಳನ್ನು ಬ್ಯಾಗ್‌ ಓಪನ್‌ ಮಾಡದೆ ನೋಡಬಹುದು. ಇದರಿಂದ ಪ್ರಯಾಣಿಕರು ತಮ್ಮ ಬ್ಯಾಗ್‌ಗಳಿಂದ ಡಿವೈಸ್‌ಗಳನ್ನು ಹೊರತೆಗೆಯುವ ಅಗತ್ಯವಿಲ್ಲ. ಹಾಗೆಯೇ ಈ ರೀತಿಯ ಸ್ಕ್ಯಾನರ್‌ಗಳ ಸ್ಥಾಪನೆಯು ವಿಮಾನ ನಿಲ್ದಾಣಗಳಲ್ಲಿ ಭದ್ರತಾ ತಪಾಸಣೆಯನ್ನು ತ್ವರಿತವಾಗಿ ಮಾಡಲು ಸಹಾಯ ಮಾಡುತ್ತದೆ ಬಿಸಿಎಎಸ್‌ ಜಂಟಿ ಮಹಾನಿರ್ದೇಶಕ ಜೈದೀಪ್ ಪ್ರಸಾದ್ ಹೇಳಿದ್ದಾರೆ.

ಸೆಕ್ಯುರಿಟಿ

ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಸೆಕ್ಯುರಿಟಿ ವಿಮಾನಯಾನ ಸಚಿವಾಲಯದ ಅಡಿಯಲ್ಲಿ ಬರಲಿದ್ದು. ಈ ಹಿಂದೆ, ದೇಶದ ವಿವಿಧ ವಿಮಾನ ನಿಲ್ದಾಣಗಳಲ್ಲಿ, ವಿಶೇಷವಾಗಿ ರಾಷ್ಟ್ರ ರಾಜಧಾನಿ ದೆಹಲಿ ವಿಮಾನ ನಿಲ್ದಾಣದಲ್ಲಿ ಜನದಟ್ಟಣೆ ಮತ್ತು ದೀರ್ಘಾವಧಿಯ ಸಮಯದ ಬಗ್ಗೆ ದೂರುಗಳು ಕೇಳಿಬಂದಿದ್ದವು. ಇದಾದ ಬಳಿಕ ಅಧಿಕಾರಿಗಳು ಹಲವು ಕ್ರಮಗಳನ್ನು ಕೈಗೊಂಡಿದ್ದು, ಜನಸಂದಣಿ ಸಮಸ್ಯೆ ಕಡಿಮೆಯಾಗಿದೆ.

ವಿಮಾನಯಾನ

ನಾಗರಿಕ ವಿಮಾನಯಾನ ಸಚಿವಾಲಯದ ಪ್ರಕಾರ, ಸೂಕ್ಷ್ಮ ವಿಮಾನ ನಿಲ್ದಾಣಗಳಲ್ಲಿ ನಿಯೋಜಿಸಲಾದ ಕೆಲವು ತಂತ್ರಜ್ಞಾನಗಳಲ್ಲಿ ಕಂಪ್ಯೂಟರ್-ಟೊಮೊಗ್ರಫಿ ಸ್ಫೋಟಕ ಪತ್ತೆ ವ್ಯವಸ್ಥೆಗಳು (CT-EDS) ಯಂತ್ರಗಳು ಮತ್ತು ಡ್ಯುಯಲ್-ಜನರೇಟರ್ X-BIS ಯಂತ್ರಗಳು ಸೇರಿವೆ. ಇದರ ನಡುವೆ ಪರಿಧಿಯ ಒಳನುಗ್ಗುವಿಕೆ ಪತ್ತೆ ವ್ಯವಸ್ಥೆಗೆ (PIDS) ಅನ್ನು ಸಹ ಇರಿಸಲಾಗಿದ್ದು, ಇವು ಹೈದರಾಬಾದ್ ಮತ್ತು ಬೆಂಗಳೂರು ವಿಮಾನ ನಿಲ್ದಾಣಗಳಲ್ಲಿ ಕೆಲಸ ಮಾಡಲಿವೆ

ನಿಲ್ದಾಣ

ವಿಮಾನ ನಿಲ್ದಾಣಗಳಲ್ಲಿ ರೇಡಿಯೊಲಾಜಿಕಲ್ ಡಿಟೆಕ್ಷನ್ ಎಕ್ವಿಪ್ಮೆಂಟ್ (RDE) ನಿಯೋಜನೆಯನ್ನು ಸಹ ಹಂತಹಂತವಾಗಿ ಯೋಜಿಸಲಾಗುತ್ತಿದೆ. ಇದೆಲ್ಲದರ ಜೊತೆಗೆ ಭಾರತವು ಜಾಗತಿಕವಾಗಿ ವೇಗವಾಗಿ ಬೆಳೆಯುತ್ತಿರುವ ನಾಗರಿಕ ವಿಮಾನಯಾನ ಮಾರುಕಟ್ಟೆಗಳಲ್ಲಿ ಒಂದಾಗಿದ್ದು, ಇತ್ತೀಚಿನ ದಿನಗಳಲ್ಲಿ ದೇಶದ ದೇಶೀಯ ವಿಮಾನ ಸಂಚಾರವು 4 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊಂದಿದೆ. ಅದರಲ್ಲೂ ಕೊರೊನಾ ಪೂರ್ವಕ್ಕೂ ಈ ಸಮಯಕ್ಕೂ ಹೋಲಿಕೆ ಮಾಡಿದರೆ ಹೆಚ್ಚಿನ ಬೆಳವಣಿಗೆ ಕಂಡು ಬಂದಿದೆ.

Best Mobiles in India

English summary
No need to take out electronic devices from hand bag for scanning at airports.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X