ನಂಬಿದರೆ ನಂಬಿ...ಇಲ್ಲೋರ್ವ 3500 ಹಳೆ ಮೊಬೈಲ್‌ಗಳನ್ನು ಸಂಗ್ರಹಿಸಿಟ್ಟಿದ್ದಾನೆ.!!

  |

  ಈಗಿನ ಮಕ್ಕಳಿಗೆ ಮೊಬೈಲ್ ಎಂದರೆ ಒಂದು ಸಾಮಾನ್ಯ ವಿಷಯವಾದರೆ, ಬಹುಶಃ 90ರ ದಶಕಕ್ಕಿಂತ ಮೊದಲು ಹುಟ್ಟಿದವರಿಗೆ ಮೊಬೈಲ್ ಎಂದರೆ ಒಂದು ಯುಗ ಎಂಬ ಅನುಭವವಾಗಿರಬಹುದು. ಏಕೆಂದರೆ, ಮೊಬೈಲ್‌ಗಳು ಅಷ್ಟು ವೇಗದಲ್ಲಿ ಎಲ್ಲರ ಜೀವನದಲ್ಲಿ ಬದಲಾವಣೆ ತಂದವು ಎನ್ನಬಹುದು.

  ಇಂದು ಬೇಸಿಕ್ ಮೊಬೈಲ್‌ಗಳು ಕಾಣೆಯಾಗಿ ಎಲ್ಲರೂ ಸ್ಮಾರ್ಟ್‌ಫೋನ್‌ಗಳನ್ನು ಬಳಸುತ್ತಿದ್ದಾರೆ. ಎಲ್ಲರೂ ತಮ್ಮ ಹಳೆಯ ಮೊಬೈಲ್‌ ಫೋನ್‌ಗಳ ಬಗ್ಗೆಯೂ ಒಲವನ್ನು ಇಟ್ಟಿಕೊಂಡಿದ್ದಾರೆ. ಆದರೆ, ಯಾರೂ ಕೂಡ ಹಳೆ ಫೋನ್‌ಗಳ ಸಂಗ್ರಹ ಹೊಂದಿಲ್ಲ. ಹೋಗಲಿ ತಾವು ಉಪಯೋಗಿಸಿದ ಹಳೆ ಫೋನ್ ಅನ್ನು ಹೊಂದಿದ್ದಾರೆಯೇ?. ಇಲ್ಲ ತಾನೆ?!

  ನಂಬಿದರೆ ನಂಬಿ...ಇಲ್ಲೋರ್ವ 3500 ಹಳೆ ಮೊಬೈಲ್‌ಗಳನ್ನು ಸಂಗ್ರಹಿಸಿಟ್ಟಿದ್ದಾನೆ.!!

  ನೀವು ನಂಬಿದರೆ ನಂಬಿ ಬಿಟ್ಟರೆ ಬಿಡಿ ಇಲ್ಲೋರ್ವ 3500 ಹಳೆ ಫೋನ್‌ಗಳನ್ನು ಸಂಗ್ರಹಿಸಿಟ್ಟಿದ್ದಾನೆ. ಅಂಚೆ ಈಟಿ ಮತ್ತು ನಾಣ್ಯ ಸಂಗ್ರಹದ ಹವ್ಯಾಸದಂತೆ ಇವನಿಗೆ ಹಳೆ ಮೊಬೈಲ್‌ಗಳನ್ನು ಸಂಗ್ರಹಿಸುವ ಹವ್ಯಾಸವಿದ್ದು, ಆ ಸಂಗ್ರಹಕಾರ ಯಾರು? ಎಲ್ಲಿದೆ ಆ ಸಂಗ್ರಾಹಾಲಯ ಎಂದು ತಿಳಿಯಲು ಕೆಳಗಿನ ಸ್ಲೈಡರ್‌ಗಳಲ್ಲಿ ನೋಡಿ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  26 ವರ್ಷದ ಯುವಕ ಸ್ಟೆಫನ್ ಪೊಲ್ಗರಿ!

  ಸ್ಲೊವೇಕಿಯಾ ದೇಶದ 26 ವರ್ಷದ ಸ್ಟೆಫನ್ ಪೊಲ್ಗರಿ ಎಂಬ ಯುವಕನೋರ್ವ ಬೇಸಿಕ್ ಫೋನ್‌ಗಳನ್ನು ಸಂಗ್ರಹಿಸಿ ಫೋನ್ ಸಂಗ್ರಹಾಲಯ ನಿರ್ಮಿಸಿದ್ದಾರೆ.!ಜಗತ್ತಿನ ಸುಮಾರು 1500 ಮಾದರಿಗಳ ಸುಮಾರು 3500 ಬೇಸಿಕ್ ಫೋನ್‌ಗಳನ್ನು ಸಂಗ್ರಹಿಸಿ ಫೋನ್ ಸಂಗ್ರಹಾಲಯ ಮಾಡಿದ್ದಾರೆ.

  ಎಲ್ಲಿದೆ ಸಂಗ್ರಹಾಲಯ?

  ಸ್ಲೊವೇಕಿಯಾ ದೇಶದ ಪೂರ್ವದಲ್ಲಿರುವ ಡಾಬ್ಸಿನಾದಲ್ಲಿನ ತನ್ನ ಮನೆಯ ಎರಡು ಕೊಠಡಿಗಳನ್ನು ಸ್ಟೆಫನ್ ಪೊಲ್ಗರಿ ವಸ್ತುಸಂಗ್ರಹಾಲಯವಾಗಿ ಪರಿವರ್ತಿಸಿದ್ದಾರೆ. ಸಂಗ್ರಹಾಲಯ ಚಿಕ್ಕದಾಗಿದ್ದರೂ ಅತ್ಯದ್ಬುತವಾಗಿ ಮೊಬೈಲ್‌ಗಳ ಜೋಡಣೆಯಿಂದಾಗಿ ಸಂಗ್ರಹಾಲಯ ಎಲ್ಲರನ್ನು ಸೆಳೆಯುತ್ತಿದೆ.

  ಇಟ್ಟಿಗೆ ಗಾತ್ರದ ಫೋನ್‌ಗಳಿವೆ.!

  ಸ್ಟೆಫನ್ ಪೊಲ್ಗರಿ ಸಂಗ್ರಹಾಲಯದಲ್ಲಿ ಇಟ್ಟಿಗೆ ಗಾತ್ರದ ಫೋನ್‌ಗಳಿಂದ ಹಿಡಿದೂ ಪ್ರಸಿದ್ದ ನೋಕಿಯಾ ಬೇಸಿಕ್ ಮೊಬೈಲ್‌ಗಳೂ ಕೂಡ ಸ್ಥಾನ ಪಡೆದಿವೆ.! ಸ್ಟೆಫನ್ ಪೊಲ್ಗರಿ ಅವರು ಆನ್‌ಲೈನ್‌ನಲ್ಲಿ ಹಳೆ ಮೊಬೈಲ್‌ಗಳನ್ನು ಖರೀದಿಸಿ ಈ ಸಂಗ್ರಹಾಲಯ ನಿರ್ಮಿಸಿದ್ದಾರೆ.

  ವಾರದಲ್ಲಿ ಒಂದು ದಿನ ಮಾತ್ರ!

  ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮೊಬೈಲ್ ಸಂಗ್ರಹಾಲಯ ನಿರ್ಮಿಸಿರುವ ಸ್ಟೆಫನ್ ಪೊಲ್ಗರಿ ವಾರದಲ್ಲಿ ಒಂದು ದಿನ ಮಾತ್ರ ಸಾರ್ವಜನಿಕರಿಗೆ ನೋಡಲು ಅವಕಾಶ ನೀಡಿದ್ದಾರೆ.!! ಬೇರೆ ದಿನ ನೋಡಬೇಕಿದ್ದರೆ ಅವರಿಗೆ ಮೊದಲೇ ತಿಳಿಸಿ ಒಪ್ಪಿಗೆ ಪಡೆದು ಸಂಗ್ರಹಾಲಯ ನೋಡಬಹುದು.

  ಬಳಕೆ ಮಾಡುವುದು ಮಾತ್ರ ಐಫೋನ್

  ಹಳೆ ಮೊಬೈಲ್ ಸಂಗ್ರಹದ ಹವ್ಯಾಸವಿರುವ ಸ್ಟೆಫನ್ ಪೊಲ್ಗರಿ ಅವರು ಯಾವ ಪೋನ್ ಉಪಯೋಗಿಸುತ್ತಾರೆ ಎಂಬ ಕುತೋಹಲ ಎಲ್ಲರಿಗೂ ಇದ್ದೇ ಇರುತ್ತದೆ.!! ಹಳೆ ಮೊಬೈಲ್‌ಗಳ ಮೇಲೆ ಅವರಿಗೆ ಪ್ರೀತಿ ಇದ್ದರೂ ಸಹ ಅವರು ಬಳಕೆ ಮಾಡುವ ಫೋನ್ ಮಾತ್ರ ಐಫೋನ್.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  As new smartphones hit the market month in month out, one Slovak technology buff is offering visitors to his vintage cellphone museum a trip down memory lane. to know more visit to kannada.gizbot.com

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more