Subscribe to Gizbot

ನ್ಯೂಯಿರ್ ಸೆಲೆಬ್ರೆಷನ್ ಕೈಕೊಟ್ಟ ಓಲಾ-ಉಬರ್: ಫೊಲೀಸರು ಮಾಡಿದ್ದೇನು..?

Written By:

ಬೆಂಗಳೂರಿನಲ್ಲಿ ಪ್ರಮುಖ ಸ್ಥಳಗಳಲ್ಲಿ ನ್ಯೂಯಿರ್ ರಾತ್ರಿ ಸೆಲೆಬ್ರೆಷನ್‌ನಲ್ಲಿ ಪಾರ್ಟಿ ಮುಗಿಸಿ ನಡುರಾತ್ರಿಯಲ್ಲಿ ಮನೆಗಳಿಗೆ ಹಿಂತಿರುಗಲು ಕ್ಯಾಬ್ ಬುಕ್ ಮಾಡಲು ಹೊದವರಿಗೆ ಶಾಕ್ ಕಾದಿತ್ತು. ಆಪ್ ಆಧಾರಿತ ಟ್ಯಾಕ್ಸಿ ಸೇವೆಯನ್ನು ನೀಡುವ ಓಲಾ-ಉಬರ್ ಎರಡು ಒಂದೇ ಸಂದರ್ಭದಲ್ಲಿ ಕೈ ಕೊಟ್ಟಿತ್ತು ಎನ್ನಲಾಗಿದೆ.

ನ್ಯೂಯಿರ್ ಸೆಲೆಬ್ರೆಷನ್ ಕೈಕೊಟ್ಟ ಓಲಾ-ಉಬರ್: ಫೊಲೀಸರು ಮಾಡಿದ್ದೇನು..?

ಓದಿರಿ: 2018 ಬಂತು, 2017ರಲ್ಲಿ ನೀವು ಹುಡುಕಿದ ಫೋನ್ ಯಾವುದು.? ಇವುಗಳ ನೋಡಿ.!

ಅತೀ ಹೆಚ್ಚು ಜನರು ಒಂದೇ ಸಂದರ್ಭದಲ್ಲಿ ಕ್ಯಾಬ್ ಬುಕ್ ಮಾಡಲು ಮುಗಿ ಬಿದ್ದ ಕಾರಣ ಓಲಾ-ಉಬರ್ ಸರ್ವರ್ ಗಳು ವಾಟ್ಸ್‌ಆಪ್ ಮಾದರಿಯಲ್ಲಿಯೇ ಜಾಮ್ ಆಗಿತ್ತು ಎನ್ನಲಾಗಿದ್ದು, ಈ ಹಿನ್ನಲೆಯಲ್ಲಿ ಕ್ಯಾಬ್‌ ಬುಕ್ ಮಾಡಲು ಸಾಧ್ಯವಾಗದೆ ಪರದಾಡುವಂತಾಗಿತ್ತು. ಈ ಸಂದರ್ಭದಲ್ಲಿ ನಗರ ಫೊಲೀಸರು ಸಹಾಯ ಮಾಡಿದ್ದಾರೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಪೊಲೀಸ್ ಕ್ಯಾಬ್:

ಪೊಲೀಸ್ ಕ್ಯಾಬ್:

ಉಬರ್-ಓಲಾ ಕ್ಯಾಬ್ ಆಪ್ ಜಾಮ್‌ ಆಗಿದ್ದ ಕಾರಣ ಹಲವು ಮಂದಿ ಕ್ಯಾಬ್‌ ನಂಬಿಕೊಂಡಿದ್ದವರು ಇಕ್ಕಟ್ಟಿಗೆ ಸಿಲುಕಿದರು. ಈ ಸಂದರ್ಭದಲ್ಲಿ ನೆರವಿಗೆ ಬಂದ ಪೊಲೀಸರು ತಮ್ಮ ಬಿಟ್ ವಾಹನದಲ್ಲಿ ಮಹಿಳೆಯರು ಮತ್ತು ಮಕ್ಕಳಿಗೆ ಆದ್ಯತೆ ನೀಡಿ ಎಲ್ಲಾ ವಾಹನಗಳಲ್ಲಿ ಸುರಕ್ಷಿತವಾಗಿ ಮನೆಗೆ ತಲುಪಿಸಿದ್ದಾರೆ.

Aadhaar Number ವೈರಿಫಿಕೇಷನ್ ಮಾಡುವುದು ಹೇಗೆ..?
ಫೊಲೀಸರ ಕಾರ್ಯಕ್ಕೆ ಮೆಚ್ಚುಗೆ:

ಫೊಲೀಸರ ಕಾರ್ಯಕ್ಕೆ ಮೆಚ್ಚುಗೆ:

ಕ್ಯಾಬ್ ಇಲ್ಲವೇ ಮನೆಗಳಿಗೆ ಹೋಗಲು ಪರದಾಡುತ್ತಿದ್ದವರಿಗೆ ಫೊಲೀಸರು ತಮ್ಮ ವಾಹನದಲ್ಲಿ ಡ್ರಾಪ್ ಮಾಡಿದ್ದು, ಈ ಕಾರ್ಯಕ್ಕೆ ಸಾರ್ವಜನಿಕರು ವೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ವಾಟ್ಸ್‌ಆಪ್ ಸಹ ಸ್ಥಗಿತ:

ವಾಟ್ಸ್‌ಆಪ್ ಸಹ ಸ್ಥಗಿತ:

ಹೊಸವರ್ಷದ ಶುಭಾಷಯದ ಮೇಸೆಜ್‌ಗಳು ಒಂದೇ ಸಮಯದಲ್ಲಿ ಹೆಚ್ಚು ಪ್ರಮಾಣದಲ್ಲಿ ಕಳುಹಿಸಲು ಮುಂದಾದ ಕಾರಣ ಮಧ್ಯರಾತ್ರಿಯಲ್ಲಿ ವಾಟ್ಸ್‌ಆಪ್ ಸಹ ಒಂದು ಗಂಟೆಗಳ ಕಾಲ ಸ್ಥಗಿತಗೊಂಡಿತ್ತು ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
No uber-Ola: police drop to people. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot