Subscribe to Gizbot

2018 ಬಂತು, 2017ರಲ್ಲಿ ನೀವು ಹುಡುಕಿದ ಫೋನ್ ಯಾವುದು.? ಇವುಗಳ ನೋಡಿ.!

Written By:

ಗೂಗಲ್ ನಲ್ಲಿ ಭಾರತೀಯರು ಹುಡಕದ ವಿಚಾರವೇ ಇಲ್ಲ ಎನ್ನಬಹುದು. ಇದೇ ಮಾದರಿಯಲ್ಲಿ ಗೂಗಲ್ 2017ರಲ್ಲಿ ಭಾರತೀಯರು ಯಾವ ಸ್ಮಾರ್ಟ್‌ಫೋನ್‌ ಬಗ್ಗೆ ಹೆಚ್ಚು ಹುಡುಕಾಟ ನಡೆಸಿದ್ದಾರೆ ಎಂಬ ವಿಷಯವನ್ನು ಬಹಿರಂಗಗೊಳಿಸಿದ್ದು, ಆಚ್ಚರಿ ಎನ್ನುವಂತೆ ಭಾರತೀಯರು ಜನಪ್ರಿಯವೆಂದುಕೊಂಡಿರುವ ಸ್ಮಾರ್ಟ್‌ಫೋನ್‌ ಬಗ್ಗೆ ಹೆಚ್ಚಿನ ಹುಡುಕಾಟವನ್ನು ನಡೆಸಿಲ್ಲ ಎನ್ನಲಾಗಿದೆ.

2018 ಬಂತು, 2017ರಲ್ಲಿ ನೀವು ಹುಡುಕಿದ ಫೋನ್ ಯಾವುದು.? ಇವುಗಳ ನೋಡಿ.!

ಓದಿರಿ: 4G ವೇಗ- ಕಡಿಮೆ ಬೆಲೆಗೆ ಸ್ಮಾರ್ಟ್‌ಪೋನ್‌: ದೇಶದಲ್ಲಿ ಆಗುತ್ತಿರುವ ಬದಲಾವಣೆ ಏನು..?

ಭಾರತೀಯರು ಜಿಯೋ ಫೋನ್‌ ಬಗ್ಗೆ ಇಲ್ಲವೇ ಐಫೋನ್ X ಬಗ್ಗೆ ಹೆಚ್ಚಿನ ಹುಡುಕಾಟವನ್ನು ನಡೆಸಿರಬಹುದು ಎಂದುಕೊಂಡಿದ್ದರೇ ಅದು ನಿಮ್ಮ ತಪ್ಪು ಗ್ರಹಿಕೆ. ಕಾರಣ ಕಳೆದ ವರ್ಷದಲ್ಲಿ ಭಾರತೀಯರು ಅತೀ ಹೆಚ್ಚು ಹುಡುಕಿರುವ ಸ್ಮಾರ್ಟ್‌ಫೋನ್ ಎಂದರೆ ಐಫೋನ್ 8.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಟಾಪ್ ಫೋನ್‌ಗಳು:

ಟಾಪ್ ಫೋನ್‌ಗಳು:

2017ರಲ್ಲಿ ಭಾರತೀಯರು ಹೆಚ್ಚು ಹುಡಕಿದ ಸ್ಮಾರ್ಟ್‌ಫೋನ್‌ಗಳಲ್ಲಿ ಐಫೋನ್ 8 ಮೊದಲ ಸ್ಥಾನವನ್ನು ಪಡೆದುಕೊಂಡಿದ್ದು, ಇದನ್ನು ಬಿಟ್ಟರೇ ಎರಡನೇ ಸ್ಥಾನದಲ್ಲಿ ರೆಡ್‌ಮಿ ನೋಟ್ 4 ಕಾಣಿಸಿಕೊಂಡಿದೆ. ನಂತರದ ಮೂರನೇ ಸ್ಥಾನದಲ್ಲಿದೇ ಜಿಯೊ ಪೋನ್.

ನಾಲ್ಕನೇ ಸ್ಥಾನದಲ್ಲಿ:

ನಾಲ್ಕನೇ ಸ್ಥಾನದಲ್ಲಿ:

ಇದಲ್ಲದೇ ನಾಲ್ಕನೇ ಸ್ಥಾನದಲ್ಲಿ ರೆಡ್‌ಮಿ ಬಿಡುಗಡೆ ಮಾಡಿರುವ ರೆಡ್‌ಮಿ 5A ಸ್ಮಾರ್ಟ್‌ಫೋನ್ ಕಾಣಿಸಿಕೊಂಡಿದೆ. ಇದಲ್ಲದೇ ಹೆಚ್ಚಿನ ಸದ್ದು ಮಾಡಿದ್ದ ಓನ್‌ಪ್ಲಸ್ 5 ಸ್ಮಾರ್ಟ್‌ಫೋನ್ 5 ನೇ ಸ್ಥಾನದಲ್ಲಿದೆ ಎನ್ನಲಾಗಿದ್ದು, ದುಬಾರಿ ಬೆಲೆಯ ಐಫೋನ್ X ಆರನೇ ಸ್ಥಾನವನ್ನು ಪಡೆದುಕೊಂಡಿದೆ.

7ನೇ ಸ್ಥಾನದಲ್ಲಿ ನೋಕಿಯಾ:

7ನೇ ಸ್ಥಾನದಲ್ಲಿ ನೋಕಿಯಾ:

ಇದರೊಂದಿಗೆ ನೋಕಿಯಾ ಭಾರತದಲ್ಲಿ ಬಿಡುಗಡೆ ಮಾಡಿದ್ದ ನೋಕಿಯಾ 6 ಸ್ಮಾರ್ಟ್‌ಫೋನ್ 7ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದು, ನಂತರದಲ್ಲಿ ವಿವೋ V7 ಮತ್ತು ಒಪ್ಪೋ F5 ಸ್ಮಾರ್ಟ್‌ಫೋನ್‌ಗಳು ಟಾಪ್ ಟೆನ್‌ ಪಟ್ಟಿಯಲ್ಲಿ ಸ್ಥಾನವನ್ನು ಪಡೆದುಕೊಂಡಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
iPhone 8 is India's top trending mobile phone of 2017. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot