ಭಾರತದಲ್ಲಿ ನಾಯ್ಸ್‌ ಏರ್‌ಬಡ್ಸ್‌ 2 ಲಾಂಚ್‌; ಬರೋಬ್ಬರಿ 40 ಗಂಟೆಗಳ ಪ್ಲೇಟೈಮ್

|

ನಾಯ್ಸ್‌ ಸಂಸ್ಥೆಯು ಈಗಾಗಲೇ ಹಲವಾರು ವಿಧದ ಸ್ಮಾರ್ಟ್‌ವಾಚ್‌, ಇಯರ್‌ಬಡ್ಸ್‌ ಹಾಗೂ ನೆಕ್‌ಬ್ಯಾಂಡ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿ ಜನಪ್ರಿಯತೆ ಗಳಿಸಿಕೊಂಡಿದೆ. ಇದರ ಭಾಗವಾಗಿ ತನ್ನ TWS ವ್ಯಾಪ್ತಿಯನ್ನು ವಿಸ್ತರಣೆ ಮಾಡಿಕೊಳ್ಳುವ ಉದ್ದೇಶದಿಂದ ಈಗ ಮತ್ತೊಂದು ಆಕರ್ಷಕ ಫೀಚರ್ಸ್‌ ಇರುವ ಹೊಸ ಇಯರ್‌ಬಡ್ಸ್‌ ಅನ್ನು ಭಾರತದಲ್ಲಿ ಲಾಂಚ್‌ ಮಾಡಿದೆ. ಈ ಇಯರ್‌ಬಡ್ಸ್‌ ಬರೋಬ್ಬರಿ 40 ಗಂಟೆಗಳ ಪ್ಲೇಟೈಮ್ ಅನ್ನು ನೀಡುತ್ತದೆ.

 ನಾಯ್ಸ್‌ ಏರ್‌ಬಡ್ಸ್‌ 2

ಹೌದು, ಭಾರತದಲ್ಲಿ ನಾಯ್ಸ್‌ ಸಂಸ್ಥೆಯು ನಾಯ್ಸ್‌ ಏರ್‌ಬಡ್ಸ್‌ 2 (Noise Air Buds 2) ಅನ್ನು ಅನಾವರಣ ಮಾಡಿದೆ. ಈ ಬಡ್ಸ್‌ ಆಫ್‌-ಇನ್-ಇಯರ್ ವಾಯರ್‌ಲೆಸ್‌ ವಿನ್ಯಾಸ ಪಡೆದಿದ್ದು, ಎನ್ವಿರಾನ್ಮೆಂಟಲ್ ನಾಯ್ಸ್ ಕ್ಯಾನ್ಸಲೇಶನ್ (ENC) ಆಯ್ಕೆಯನ್ನು ಹೊಂದಿದೆ. ಹಾಗಿದ್ರೆ ಭಾರತದಲ್ಲಿ ಇದರ ಬೆಲೆ ಎಷ್ಟು? ಹಾಗೂ ಪ್ರಮುಖ ಫೀಚರ್ಸ್‌ ಏನು ಎಂಬುದನ್ನು ಈ ಲೇಖನದಲ್ಲಿ ವಿವರಿಸಿದ್ದೇವೆ ನೋಡಿ.

ಪ್ರಮುಖ ಫೀಚರ್ಸ್‌

ಪ್ರಮುಖ ಫೀಚರ್ಸ್‌

ಹೋಮ್‌ಗ್ರೋನ್ ಬ್ರ್ಯಾಂಡ್ ನಾಯ್ಸ್ ಈ ನಾಯ್ಸ್ ಏರ್ ಬಡ್ಸ್ 2 ಅನ್ನು ಬಿಡುಗಡೆ ಮಾಡುವ ಮೂಲಕ ತನ್ನ ಪ್ರಮುಖ TWS ಶ್ರೇಣಿಯನ್ನು ವಿಸ್ತರಣೆ ಮಾಡಿಕೊಂಡಿದೆ. ಅದರಂತೆ ಈ ಬಡ್ಸ್‌ ಆಪ್‌-ಇನ್-ಇಯರ್ ವಾಯರ್‌ಲೆಸ್‌ ರಚನೆ ಜೊತೆಗೆ ಎನ್ವಿರಾನ್ಮೆಂಟಲ್ ನಾಯ್ಸ್ ಕ್ಯಾನ್ಸಲೇಶನ್ (ENC) ಆಯ್ಕೆ ಪಡೆದಿದೆ. ಹಾಗೆಯೇ ಬಡ್‌ಗಳ ಚಾರ್ಜಿಂಗ್ ಕೇಸ್ ಅರೆಪಾರದರ್ಶಕ ಮುಚ್ಚಳದೊಂದಿಗೆ ಪ್ಯಾಕ್‌ ಆಗಿರಲಿದೆ. ಅಂದರೆ ಈ ಕೇಸ್‌ ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯ ಇರುವ ಒಪ್ಪೋ ಎನ್ಕೋ ಏರ್‌ 2 ಕೇಸ್ ಅನ್ನೇ ಹೋಲುತ್ತದೆ.

ವೇಕ್ ಆಂಡ್‌ ಪೇರ್ ಫೀಚರ್ಸ್‌

ವೇಕ್ ಆಂಡ್‌ ಪೇರ್ ಫೀಚರ್ಸ್‌

ಇನ್ನು ಕನೆಕ್ಟಿವಿಟಿ ವಿಚಾರಕ್ಕೆ ಬಂದರೆ ಈ ಇಯರ್‌ಬಡ್‌ಗಳು ಬ್ಲೂಟೂತ್ 5.3 ಆವೃತ್ತಿಯಲ್ಲಿ ಕೆಲಸ ಮಾಡಲಿದ್ದು, ಇದರೊಂದಿಗೆ ವೇಕ್ ಆಂಡ್‌ ಪೇರ್ ಫೀಚರ್ಸ್‌ ಪಡೆದುಕೊಂಡಿದೆ. ಹಾಗೆಯೇ 13 ಎಂಎಂ ಆಡಿಯೊ ಡ್ರೈವರ್‌ ಆಯ್ಕೆಯನ್ನು ಪಡೆದಿರುವುದರ ಜೊತೆಗೆ ನಿಮ್ಮ ಕರೆಗಳಲ್ಲಿ ಉತ್ತಮ ಅನುಭವ ಪಡೆಯಲು ಇನ್‌ಬಿಲ್ಟ್‌ ಕ್ವಾಡ್ ಮೈಕ್ರೊಫೋನ್ ಆಯ್ಕೆಯನ್ನು ನೀಡಲಾಗಿದೆ. ಇದರೊಂದಿಗೆ ಗೂಗಲ್‌ ಅಸಿಸ್ಟೆಂಟ್‌ ಮತ್ತು ಸಿರಿ ವಾಯ್ಸ್‌ ಅಸಿಸ್ಟೆಂಟ್‌ ಮತ್ತಷ್ಟು ಹೆಚ್ಚಿನ ಅನುಭವ ನೀಡುತ್ತದೆ.

ಇಯರ್‌ಬಡ್ಸ್‌

ಹಾಗೆಯೇ, ಈ ಇಯರ್‌ಬಡ್ಸ್‌ ಆಂಡ್ರಾಯ್ಡ್‌ ಹಾಗೂ ಐಓಎಸ್‌ ಡಿವೈಸ್‌ಗಳಿಗೆ ಹೊಂದಿಕೆಯಾಗಲಿದ್ದು, ಈ ಬಡ್ಸ್‌ಗಳಲ್ಲಿ ಟಚ್‌ಕಂಟ್ರೋಲ್‌ ಆಯ್ಕೆ ನೀಡಲಾಗಿದ್ದು, ಈ ಮೂಲಕ ನೀವು ಮ್ಯೂಸಿಕ್‌ ಕಂಟ್ರೋಲ್ ಮಾಡಬಹುದು, ಹಾಗೆಯೇ ಕರೆಗಳನ್ನು ಸ್ವೀಕರಿಸಲು ಅಥವಾ ತಿರಸ್ಕರಿಸಲು ಉಪಯೋಗಿಸಬಹುದು. ಜೊತೆಗೆ ಸ್ವೆಟ್‌ ಹಾಗೂ ವಾಟರ್‌ ರೆಸಿಸ್ಟೆಂಟ್‌ಗಾಗಿ IPX4 ರೇಟ್ ನೀಡಲಾಗಿದೆ.

ಬ್ಯಾಟರಿ ಸಾಮರ್ಥ್ಯ

ಬ್ಯಾಟರಿ ಸಾಮರ್ಥ್ಯ

ಈ ಏರ್ ಬಡ್ಸ್ 2 ಡಿವೈಸ್‌ 40 ಗಂಟೆಗಳವರೆಗೆ ಪ್ಲೇ ಟೈಮ್‌ ನೀಡಲಿದೆ ಎಂದು ಕಂಪೆನಿ ಹೇಳಿಕೊಂಡಿದೆ. ಈ ಬಡ್ಸ್‌ಗಳು 10 ನಿಮಿಷಗಳ ಚಾರ್ಜಿಂಗ್‌ನೊಂದಿಗೆ ನಾಲ್ಕು ಗಂಟೆಗಳ ಪ್ಲೇಟೈಮ್ ಅನ್ನು ನೀಡಬಲ್ಲವು. ಇನ್ನುಳಿದಂತೆ ಚಾರ್ಜಿಂಗ್‌ಗಾಗಿ USB ಟೈಪ್-ಸಿ ಪೋರ್ಟ್‌ ಆಯ್ಕೆಯನ್ನು ನೀಡಲಾಗಿದೆ.

ಬೆಲೆ ಹಾಗೂ ಲಭ್ಯತೆ

ಬೆಲೆ ಹಾಗೂ ಲಭ್ಯತೆ

ಈ ಹೊಸ ಇಯರ್‌ಬಡ್ಸ್‌ಗಳ ಬೆಲೆಯನ್ನು ಭಾರತದಲ್ಲಿ 1,799 ರೂ.ಗಳಿಗೆ ನಿಗದಿ ಮಾಡಲಾಗಿದೆ. ಹಾಗೆಯೇ ಇದು ಬ್ಲಾಕ್ ಮತ್ತು ಕ್ಲಿಯರ್ ವೈಟ್ ಎಂಬ ಎರಡು ಬಣ್ಣಗಳಲ್ಲಿ ಲಭ್ಯವಿದೆ. ಈ ಇಯರ್‌ಬಡ್ಸ್‌ಗಳು ನವೆಂಬರ್‌ 24 ರಿಂದ ಮಾರುಕಟ್ಟೆಯಲ್ಲಿ ಲಭ್ಯ ಇದ್ದು, ನೀವು ಇ-ಕಾಮರ್ಸ್‌ ಪ್ಲಾಟ್‌ಫಾರ್ಮ್‌ಗಳಾದ ಅಮೆಜಾನ್‌, ಫ್ಲಿಪ್‌ಕಾರ್ಟ್‌ ಜೊತೆಗೆ ನಾಯ್ಸ್‌ನ ಗೋ ನಾಯ್ಡ್‌ ಸೈಟ್‌ಗೆ ಭೇಟಿ ನೀಡುವ ಮೂಲಕವೂ ಖರೀದಿ ಮಾಡಬಹುದು.

ಇಯರ್‌ಬಡ್ಸ್‌

ಪ್ರಮುಖವಾಗಿ ಈ ಡಿವೈಸ್‌ನ ಬೆಲೆ ಹಾಗೂ ವಿನ್ಯಾಸವನ್ನು ಗಮನಿಸಿದರೆ ಇಯರ್‌ಬಡ್ಸ್‌ ಒಪ್ಪೋ ಎನ್ಕೋ ಬಡ್ಸ್‌ 2, ಡಿಜೋ ಬಡ್ಸ್ Z ಹಾಗೂ ಬೋಟ್‌ನ ಏರ್‌ಡೋಪ್ಸ್ 431 ಗೆ ಪೈಪೋಟಿ ನೀಡುತ್ತದೆ ಎಂದು ಹೇಳಲಾಗುತ್ತಿದೆ.

Best Mobiles in India

Read more about:
English summary
Noise Air Buds 2 Launched In India; Features, Specs.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X