ಭಾರತದಲ್ಲಿ ನಾಯ್ಸ್‌ನ ಹೊಸ ಸ್ಮಾರ್ಟ್‌ವಾಚ್‌ ಲಾಂಚ್; ಆಕರ್ಷಕ ಫೀಚರ್ಸ್‌, ಬಜೆಟ್‌ ಬೆಲೆ!

|

ಜನಪ್ರಿಯ ಬ್ರ್ಯಾಂಡ್‌ಗಳಲ್ಲಿ ಒಂದಾದ ಸ್ವದೇಶಿ ಬ್ರ್ಯಾಂಡ್ ನಾಯ್ಸ್‌ ಕಂಪೆನಿಯು ಈಗಾಗಲೇ ಹೆಡ್‌ಫೋನ್‌, ಇಯರ್‌ಬಡ್ಸ್‌ ಹಾಗೂ ನೆಕ್‌ಬ್ಯಾಂಡ್‌ ವಿಭಾಗದಲ್ಲಿ ಹೆಚ್ಚಿನ ಜನಮನ್ನಣೆ ಗಳಿಸಿದೆ. ಇದರ ಜೊತೆಗೆ ಆಕರ್ಷಕ ಫೀಚರ್ಸ್‌ ಇರುವ ಭಿನ್ನ ವಿಭಿನ್ನ ಸ್ಮಾರ್ಟ್‌ವಾಚ್‌ಗಳನ್ನೂ ಸಹ ಮಾರುಕಟ್ಟೆಗೆ ಪರಿಚಯಿಸಿ ತನ್ನದೇ ಆದ ಪ್ರಭಾವ ಬೀರಿದೆ. ಇದರೊಂದಿಗೆ ಹೊಸ ಸ್ಮಾರ್ಟ್‌ವಾಚ್‌ ಅನ್ನು ಅನಾವರಣ ಮಾಡಿದ್ದು, ಈ ವಾಚ್‌ ಬ್ಲೂಟೂತ್‌ ಕರೆ ಸೌಲಭ್ಯವನ್ನು ಹೊಂದಿದೆ.

ಕಲರ್‌ಫಿಟ್‌ಪ್ರೊ

ಹೌದು, ನಾಯ್ಸ್‌ ಕಲರ್‌ಫಿಟ್‌ಪ್ರೊ 4 ಆಲ್ಫಾ (Noise ColorFit Pro 4 Alpha) ಎಂಬ ಸ್ಮಾರ್ಟ್‌ವಾಚ್‌ ಅನ್ನು ಭಾರತದಲ್ಲಿ ಅನಾವರಣ ಮಾಡಲಾಗಿದ್ದು, ಈ ವಾಚ್‌ 100 ಸ್ಪೋರ್ಟ್ಸ್‌ ಮೋಡ್‌ಗಳನ್ನು ಹೊಂದಿದ್ದು, ಡಬಲ್-ಟ್ಯಾಪ್ ಗೆಸ್ಚರ್ ಈ ವಾಚ್‌ನ ವಿಶೇಷವಾಗಿದೆ. ಹಾಗಿದ್ರೆ, ಈ ವಾಚ್‌ನ ಪ್ರಮುಖ ಫೀಚರ್ಸ್‌ ಹಾಗೂ ಭಾರತದಲ್ಲಿ ಈ ವಾಚ್‌ಗೆ ನಿಗದಿಪಡಿಸಿದ ಆಫರ್ ಬೆಲೆ ಜೊತೆಗೆ ಇತರೆ ಪ್ರಮುಖ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ ಓದಿರಿ.

ಡಿಸ್‌ಪ್ಲೇ ವಿವರ

ಡಿಸ್‌ಪ್ಲೇ ವಿವರ

ನಾಯ್ಸ್‌ ಕಲರ್‌ಫಿಟ್‌ಪ್ರೊ 4 ಆಲ್ಫಾ ಸ್ಮಾರ್ಟ್‌ವಾಚ್‌ 1.78 ಇಂಚಿನ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದ್ದು, ಈ ಡಿಸ್‌ಪ್ಲೇ 268 x 448 ಪಿಕ್ಸೆಲ್ ರೆಸಲ್ಯೂಶನ್‌ ನೀಡಲಿದೆ. ಹಾಗೆಯೇ 60Hz ರಿಫ್ರೆಶ್ ರೇಟ್‌ ಇದರಲ್ಲಿದ್ದು, ಡಿಸ್‌ಪ್ಲೇ ಆಫ್‌ ಮಾಡಲು ಪಾಮ್ ಕಂಟ್ರೋಲ್‌ ಅನ್ನು ಪಡೆದುಕೊಂಡಿದೆ. ಹಾಗೆಯೇ ಅದನ್ನು ಆನ್‌ ಮಾಡಲು ಡಬಲ್-ಟ್ಯಾಪ್ ಗೆಸ್ಚರ್ ಪಡೆದುಕೊಂಡಿರುವುದು ಮತ್ತಷ್ಟು ವಿಶೇಷ.

ಇತರೆ ಫೀಚರ್ಸ್‌

ಇತರೆ ಫೀಚರ್ಸ್‌

ಈ ಹೊಸ ಸ್ಮಾರ್ಟ್‌ವಾಚ್‌ AoD ಡಿಸ್‌ಪ್ಲೇಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ 4 ವಾಚ್ ಫೇಸ್‌ಗಳನ್ನು ಬೆಂಬಲಿಸಲಿದ್ದು, UI ನಾದ್ಯಂತ ನ್ಯಾವಿಗೇಟ್ ಮಾಡಲು ಹಾಗೂ ಮೆನುವನ್ನು ಪ್ರವೇಶಿಸಲು, ಡಿವೈಸ್‌ನ ಬದಿಯಲ್ಲಿ ಡಿಜಿಟಲ್ ಕ್ರೌನ್‌ ಬಟನ್‌ ಆಯ್ಕೆ ಹೊಂದಿದೆ. ಹಾಗೆಯೇ ಬ್ಲೂಟೂತ್‌ ಕಾಲ್ ಫೀಚರ್ಸ್‌ ಬೆಂಬಲ ಪಡೆದುಕೊಂಡಿದ್ದು, ಸ್ಮಾರ್ಟ್‌ಫೊನ್‌ಗೆ ಬರುವ ಕರೆಗಳನ್ನು ಈ ವಾಚ್‌ನಿಂದಲೇ ಕಂಟ್ರೋಲ್‌ ಮಾಡಬಹುದು.

ಆರೋಗ್ಯ

ಇನ್ನು ಆರೋಗ್ಯ ವಿಷಯದಲ್ಲಿ ಹೃದಯ ಬಡಿತ ಮಾನಿಟರ್, SpO2 ಸೆನ್ಸರ್‌, ನಿದ್ದೆಯ ಟ್ರ್ಯಾಕ್‌, ಒತ್ತಡ ನಿರ್ವಹಣೆ ಮತ್ತು ಸ್ತ್ರೀ ಆರೋಗ್ಯ ಟ್ರ್ಯಾಕಿಂಗ್‌ ಸೇರಿದಂತೆ ಇನ್ನಿತರೆ ಮಾಹಿತಿಯನ್ನು ನೀಡುತ್ತದೆ. ಇದರೊಂದಿಗೆ ನೈಜ ಸಮಯದಲ್ಲಿ ಹೃದಯ ಬಡಿತವನ್ನು ಟ್ರ್ಯಾಕ್ ಮಾಡಲು ಇದು ಸಹಕಾರಿಯಾಗಿದ್ದು, ಗರಿಷ್ಠ, ನಿಮಿಷ ಮತ್ತು ಸರಾಸರಿ ಬಿಪಿಎಂ ಅನ್ನು ಪ್ರದರ್ಶಿಸುತ್ತದೆ.

ದೈಹಿಕ ಚಟುವಟಿಕೆ

ದೈಹಿಕ ಚಟುವಟಿಕೆ ವಿಷಯದಲ್ಲಿ ಈ ವಾಚ್‌ 100 ಸ್ಪೋರ್ಟ್ಸ್‌ ಮೋಡ್‌ ಆಯ್ಕೆ ಹೊಂದಿದ್ದು, ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP68 ರೇಟಿಂಗ್‌, ಜ್ಞಾಪನೆ, ಹವಾಮಾನ ಸಂಬಂಧ ಅಪ್‌ಡೇಟ್‌, ಸ್ಟಾಕ್ ಮಾರ್ಕೆಟ್‌ ಅಪ್‌ಡೇಟ್‌, ಕ್ಯಾಲ್ಕುಲೇಟರ್ ಸೇರಿದಂತೆ ಇತರೆ ಫೀಚರ್ಸ್‌ಗಳ ಜೊತೆಗೆ 150 ಕ್ಕೂ ಹೆಚ್ಚು ವಾಚ್‌ಫೇಸ್‌ಗಳು ಈ ವಾಚ್‌ನಲ್ಲಿವೆ.

ಬ್ಯಾಟರಿ ಸಾಮರ್ಥ್ಯ

ಬ್ಯಾಟರಿ ಸಾಮರ್ಥ್ಯ

ನಾಯ್ಸ್ ಕಲರ್‌ಫಿಟ್ ಪ್ರೊ 4 ಆಲ್ಫಾ ಸ್ಮಾರ್ಟ್‌ವಾಚ್‌ 270mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಆಗಿದ್ದು, ಒಂದು ಪೂರ್ಣ ಚಾರ್ಜ್‌ನಲ್ಲಿ 7 ದಿನಗಳವರೆಗೆ ಬಳಕೆ ಮಾಡಬಹುದಾಗಿದೆ. ಹಾಗೆಯೇ ಬ್ಲೂಟೂತ್‌ ಕಾಲ್‌ ಫೀಚರ್ಸ್‌ ಸಕ್ರಿಯವಿದ್ದಾಗ ಐದುದಿನಗಳ ವರೆಗೆ ಬ್ಯಾಕಪ್‌ ನೀಡಲಿದೆ. ಇನ್ನು ವೇಗದ ಚಾರ್ಜಿಂಗ್‌ ಆಯ್ಕೆ ಇದರಲ್ಲಿದ್ದು, 10 ನಿಮಿಷದ ಚಾರ್ಜ್‌ನಲ್ಲಿ ಒಂದು ದಿನ ಪೂರ್ತಿ ಬಳಕೆ ಮಾಡಬಹುದಾಗಿದೆ. ಹಾಗೆಯೇ ಪೂರ್ಣವಾಗಿ ಚಾರ್ಜ್‌ ಮಾಡಲು 2 ಗಂಟೆ ಸಮಯ ಮೀಸಲಿಡಬೇಕಿದೆ.

ಬೆಲೆ ಹಾಗೂ ಲಭ್ಯತೆ

ಬೆಲೆ ಹಾಗೂ ಲಭ್ಯತೆ

ನಾಯ್ಸ್ ಕಲರ್‌ಫಿಟ್ ಪ್ರೊ 4 ಆಲ್ಫಾ ಸ್ಮಾರ್ಟ್‌ವಾಚ್‌ ಅನ್ನು ಭಾರತದಲ್ಲಿ ಆಫರ್‌ ಬೆಲೆ 3,799 ರೂ. ಗಳಿಗೆ ಖರೀದಿ ಮಾಡಬಹುದು. ಹಾಗೆಯೇ ಜೆಟ್ ಬ್ಲಾಕ್, ಡೀಪ್ ವೈನ್, ರೋಸ್ ಪಿಂಕ್, ವಿಂಟೇಜ್ ಬ್ರೌನ್ ಮತ್ತು ಸಿಲ್ವರ್ ಗ್ರೇ ಬಣ್ಣದ ಆಯ್ಕೆಯಲ್ಲಿ ಲಭ್ಯವಿದ್ದು, ಈ ವಾಚ್‌ ಅನ್ನು ಖರೀದಿ ಮಾಡಬೇಕು ಎಂದರೆ ನೀವು ಅಮೆಜಾನ್‌ ತಾಣಕ್ಕೆ ಭೇಟಿ ನೀಡಬೇಕಿದೆ.

Best Mobiles in India

English summary
Noise ColorFit Pro 4 Alpha with 1.78 inch Display Launched in India.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X