ಭಾರತದಲ್ಲಿ ಹೊಸ ಮಾದರಿಯ ಸ್ಮಾರ್ಟ್‌ವಾಚ್‌ ಪರಿಚಯಿಸಿದ ನಾಯ್ಸ್‌ ಕಂಪೆನಿ!

|

ಟೆಕ್‌ ವಲಯದಲ್ಲಿ ಸ್ಮಾರ್ಟ್‌ವಾಚ್‌ ಮಾರುಕಟ್ಟೆ ಕೂಡ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಸ್ಮಾರ್ಟ್‌ ಡಿವೈಸ್‌ಗಳ ಬಳಕೆ ಹೆಚ್ಚಾದಂತೆ ಸ್ಮಾರ್ಟ್‌ವಾಚ್‌ ಬಳಸುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಅದರಲ್ಲೂ ಫಿಟ್ನೆಸ್‌ ಆಧಾರಿತ ಸ್ಮಾರ್ಟ್‌ವಾಚ್‌ಗಳು ಇಂದಿನ ದಿನಗಳಲ್ಲಿ ಹೆಚ್ಚು ಬೇಡಿಕೆ ಪಡೆದುಕೊಂಡಿವೆ. ಇದೇ ಕಾರಣಕ್ಕೆ ಹಲವು ಪ್ರಮುಖ ಟೆಕ್‌ ಕಂಪೆನಿಗಳು ತಮ್ಮದೇ ಆದ ಸ್ಮಾರ್ಟ್‌ವಾಚ್‌ಗಳು ಹಾಗೂ ಸ್ಮಾರ್ಟ್‌ ಬ್ಯಾಂಡ್‌ಗಳನ್ನು ಪರಿಚಯಿಸಿವೆ. ಇದರಲ್ಲಿ ನಾಯ್ಸ್‌ ಕಂಪೆನಿ ಕೂಡ ಜನಪ್ರಿಯ ಸ್ಮಾರ್ಟ್‌ವಾಚ್‌ ತಯಾರಕ ಎನಿಸಿಕೊಂಡಿದೆ.

ಸ್ಮಾರ್ಟ್‌ವಾಚ್‌

ಹೌದು, ನಾಯ್ಸ್‌ ಕಂಪೆನಿ ಸ್ಮಾರ್ಟ್‌ವಾಚ್‌ ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ ವಾಚ್‌ಗಳನ್ನು ಪರಿಚಯಿಸಿದೆ. ತನ್ನ ವೈವಿಧ್ಯಮಯ ಹಾಗೂ ಆಕರ್ಷಕ ಫೀಚರ್ಸ್‌ಗಳ ಕಾರಣಕ್ಕೆ ನಾಯ್ಸ್‌ ಕಂಪೆನಿಯ ಸ್ಮಾರ್ಟ್‌ವಾಚ್‌ಗಳು ಮಾರುಕಟ್ಟೆಯಲ್ಲಿ ವಿಶೇಷ ಸ್ಥಾನವನ್ನು ಪಡೆದುಕೊಂಡಿವೆ. ಸದ್ಯ ಇದೀಗ ನಾಯ್ಸ್‌ ಕಂಪೆನಿ ಭಾರತದಲ್ಲಿ ಎರಡು ಹೊಸ ಸ್ಮಾರ್ಟ್‌ವಾಚ್‌ಗಳನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ವಾಚ್‌ಗಳನ್ನು ನಾಯ್ಸ್‌ ಕಲರ್‌ಫಿಟ್‌ ಪ್ರೊ 4 ಮತ್ತು ಕಲರ್‌ಫಿಟ್‌ ಪ್ರೊ 4 ಮ್ಯಾಕ್ಸ್‌ ಎಂದು ಹೆಸರಿಸಲಾಗಿದೆ.

ನಾಯ್ಸ್‌

ನಾಯ್ಸ್‌ ಕಂಪೆನಿ ಭಾರತದಲ್ಲಿ ಲಾಂಚ್‌ ಮಾಡಿರುವ ಕಲರ್‌ಫಿಟ್‌ ಪ್ರೊ 4 ಮತ್ತು ಕಲರ್‌ಫಿಟ್‌ ಪ್ರೊ 4 ಮ್ಯಾಕ್ಸ್‌ ಸ್ಮಾರ್ಟ್‌ವಾಚ್‌ಗಳು ವಿಶೇಷ ಫೀಚರ್ಸ್‌ಗಳನ್ನು ಒಳಗೊಂಡಿವೆ. ಜೊತೆಗೆ ಫಿಟ್ನೆಸ್‌ ಆಧಾರಿತ ಫೀಚರ್ಸ್‌ಗಳು ಕೂಡ ಸೇರಿವೆ. ಬ್ಲೂಟೂತ್‌ ಕಾಲ್‌ ಮಾಡುವ ಫೀಚರ್ಸ್‌ ಅನ್ನು ಈ ವಾಚ್‌ನಲ್ಲಿ ಅಳವಡಿಸಿರುವುದು ಇದರ ಮತ್ತೊಂದು ಹೈಲೈಟ್‌ ಆಗಿದೆ. ಇದಲ್ಲದೆ ಈ ಸ್ಮಾರ್ಟ್‌ವಾಚ್‌ಗಳ ಬೆಲೆಯ ವಿಚಾರವೂ ಕೂಡ ಗಮನ ಸೆಳೆದಿದೆ. ಹಾಗಾದ್ರೆ ನಾಯ್ಸ್‌ ಕಂಪೆನಿ ಪರಿಚಯಿಸಿರುವ ಹೊಸ ಸ್ಮಾರ್ಟ್‌ವಾಚ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ನಾಯ್ಸ್‌ ಕಲರ್‌ಫಿಟ್ ಪ್ರೊ 4 ಸ್ಮಾರ್ಟ್‌ವಾಚ್‌

ನಾಯ್ಸ್‌ ಕಲರ್‌ಫಿಟ್ ಪ್ರೊ 4 ಸ್ಮಾರ್ಟ್‌ವಾಚ್‌

ನಾಯ್ಸ್‌ ಕಲರ್‌ಫಿಟ್ ಪ್ರೊ 4 ಸ್ಮಾರ್ಟ್‌ವಾಚ್‌ 311 ppi ಪಿಕ್ಸೆಲ್ ಸಾಂದ್ರತೆಯನ್ನು ಒಳಗೊಂಡಿರುವ 1.72 ಇಂಚಿನ ಬಿಗ್ ಡಿಸ್‌ಪ್ಲೇ ಹೊಂದಿದೆ. ಇನ್ನು ಈ ಡಿಸ್‌ಪ್ಲೇ 500 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಅನ್ನು ಹೊಂದಿದೆ. ಜೊತೆಗೆ ಈ ಸ್ಮಾರ್ಟ್‌ವಾಚ್‌ನಲ್ಲಿ ಮೆನುಗಳ ಮೂಲಕ ನ್ಯಾವಿಗೇಟ್ ಮಾಡಲು ಮತ್ತು ವಾಲ್ಯೂಮ್‌ ಅನ್ನು ಸೆಟ್‌ ಮಾಡಲು ಬಳಸಬಹುದಾದ ಡಿಜಿಟಲ್ ಕ್ರೌನ್‌ ಅನ್ನು ಹೊಂದಿದೆ. ಈ ಸ್ಮಾರ್ಟ್‌ವಾಚ್‌ ಕ್ಲಾಕ್‌ ಫೇಸ್‌ಗಳನ್ನು ಬದಲಾಯಿಸುವುದಕ್ಕೆ ಸಹ ಸಹಾಯ ಮಾಡುತ್ತದೆ.

ಕಲರ್‌ಫಿಟ್

ಇನ್ನು ನಾಯ್ಸ್‌ ಕಲರ್‌ಫಿಟ್ ಪ್ರೊ 4 ಸ್ಮಾರ್ಟ್‌ವಾಚ್‌ನ ಮತ್ತೊಂದು ವಿಶೇಷವೆಂದರೆ ಇದರಲ್ಲಿರುವ ಬ್ಲೂಟೂತ್ ಕಾಲ್‌ ಮಾಡುವ ಆಯ್ಕೆಯಾಗಿದೆ. ಈ ಆಯ್ಕೆಯನ್ನು ಬಳಸಿ ನೀವು ಬ್ಲೂಟೂತ್‌ ಮೂಲಕ ಕಾಲ್‌ ಮಾಡಬಹುದಾಗಿದೆ. ಮೊಬೈಲ್‌ನಲ್ಲಿ ಬ್ಲೂಟೂತ್‌ ಅನ್ನು ಕನೆಕ್ಟ್‌ ಮಾಡಿದ್ದರೆ ಕರೆ ಮಾಡುವುದು ಸುಲಭವಾಗಲಿದೆ. ಇನ್ನು ಈ ಡಿವೈಸ್‌ ಸೈಕ್ಲಿಂಗ್, ವಾಕಿಂಗ್, ರನ್ನಿಂಗ್‌ ಸೇರಿದಂತೆ 100 ಕ್ಕೂ ಹೆಚ್ಚು ಸ್ಪೋರ್ಟ್ಸ್‌ ವಿಧಾನಗಳನ್ನು ಬೆಂಬಲಿಸುತ್ತದೆ. ಜೊತೆಗೆ ಇದು ಹೃದಯ ಬಡಿತ ಟ್ರ್ಯಾಕಿಂಗ್ ಮತ್ತು ಸ್ಲೀಪಿಂಗ್ ಮ್ಯಾಪಿಂಗ್‌ನಂತಹ ಸಾಮಾನ್ಯ ಆರೋಗ್ಯ ಸಂಬಂಧಿತ ಸೆನ್ಸಾರ್‌ಗಳನ್ನು ಕೂಡ ಒಳಗೊಂಡಿದೆ.

ನಾಯ್ಸ್‌ ಕಲರ್‌ಫಿಟ್ ಪ್ರೊ 4 ಮ್ಯಾಕ್ಸ್

ನಾಯ್ಸ್‌ ಕಲರ್‌ಫಿಟ್ ಪ್ರೊ 4 ಮ್ಯಾಕ್ಸ್

ನಾಯ್ಸ್‌ ಕಂಪೆನಿಯ ಕಲರ್‌ಫಿಟ್‌ ಪ್ರೊ 4 ಮ್ಯಾಕ್ಸ್‌ ಸ್ಮಾರ್ಟ್‌ವಾಚ್‌ ವಿಶೇಷ ಫೀಚರ್ಸ್‌ಗಳನ್ನು ಒಳಗೊಂಡಿದೆ. ಈ ಸ್ಮಾರ್ಟ್‌ವಾಚ್‌ ಕೂಡ ಬಿಗ್‌ ಸೈಜ್‌ ಅಂದರೆ 1.8 ಇಂಚಿನ ಡಿಸ್‌ಪ್ಲೇಯನ್ನು ಒಳಗೊಂಡಿದೆ. ಅಲ್ಲದೆ ಬಳಕೆದಾರರಿಗೆ ಸುಲಭವಾಗಿ ನ್ಯಾವಿಗೇಶನ್‌ ಅನ್ನು ನೀಡುವುದಕ್ಕೆ ಸೈಡ್ ಬಟನ್ ಅನ್ನು ನೀಡಲಾಗಿದೆ. ಇದಲ್ಲದೆ ಈ ಸ್ಮಾರ್ಟ್‌ವಾಚ್‌ ಕೂಡ ಬ್ಲೂಟೂತ್ ಮೂಲಕ ಕಾಲ್‌ ಮಾಡುವುದಕ್ಕೆ ಅವಕಾಶವನ್ನು ನೀಡಲಿದೆ. ಜೊತೆಗೆ ಇದು ಅಲೆಕ್ಸಾ ವಾಯ್ಸ್ ಅಸಿಸ್ಟೆಂಟ್‌ಗೆ ಸಹ ಬೆಂಬಲವನ್ನು ಹೊಂದಿದೆ.

ಸ್ಮಾರ್ಟ್‌ವಾಚ್‌

ಈ ಸ್ಮಾರ್ಟ್‌ವಾಚ್‌ ಆರೋಗ್ಯಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಫೀರ್ಚರ್ಸ್‌ಗಳನ್ನು ಒಳಗೊಂಡಿದೆ. ಇದರಲ್ಲಿ ಫಿಟ್ನೆಸ್‌ಗಾಗಿ 100ಕ್ಕೂ ಅಧಿಕ ಸ್ಪೋರ್ಟ್ಸ್ ಮೋಡ್‌ಗಳನ್ನು ನೀಡಲಾಗಿದೆ. ಇನ್ನು ಈ ವಾಚ್‌ ಹೃದಯ ಬಡಿತ ಟ್ರ್ಯಾಕಿಂಗ್, SpO2 ರಕ್ತ ಆಮ್ಲಜನಕದ ಮ್ಯಾಪಿಂಗ್ ಮತ್ತು ನಿದ್ರೆಯ ಮೇಲ್ವಿಚಾರಣೆ ಮಾಡುವ ಹೆಲ್ತ್‌ ಸೆನ್ಸಾರ್‌ಗಳನ್ನು ಒಳಗೊಂಡಿದೆ. ಇದಲ್ಲದೆ ಈ ಸ್ಮಾರ್ಟ್‌ವಾಚ್‌ನಲ್ಲಿ IP68 ರೇಟಿಂಗ್, 150+ ವಾಚ್ ಫೇಸ್‌ಗಳು ಮತ್ತು ವಾಯ್ಸ್‌ ಡಿಟೆಕ್ಷನ್‌ ಫೀಚರ್ಸ್‌ ಅನ್ನು ಕೂಡ ಅಳವಡಿಸಲಾಗಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಭಾರತದಲ್ಲಿ ಕಲರ್‌ಫಿಟ್ ಪ್ರೊ 4 ಸ್ಮಾರ್ಟ್‌ವಾಚ್‌ ಲಾಂಚ್‌ ಆಫರ್‌ನಲ್ಲಿ 3,499ರೂ.ಬೆಲೆಯನ್ನು ಹೊಂದಿದೆ. ಇದು ಇದೇ ಜುಲೈ 4 ರಿಂದ ಅಮೆಜಾನ್‌ನಲ್ಲಿ ಮಾರಾಟಕ್ಕೆ ಬರಲಿದೆ. ಈ ಸ್ಮಾರ್ಟ್‌ವಾಚ್‌ ಮಿಂಟ್ ಗ್ರೀನ್, ಡೀಪ್ ವೈನ್, ರೋಸ್ ಪಿಂಕ್, ಮಿಡ್‌ನೈಟ್ ಬ್ಲೂ, ಚಾರ್ಕೋಲ್ ಬ್ಲ್ಯಾಕ್, ಸನ್‌ಸೆಟ್ ಆರೆಂಜ್, ಟೀಲ್ ನೀಲಿ, ಮತ್ತು ಬೆಳ್ಳಿ ಸೇರಿದಂತೆ ವಿವಿಧ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಇನ್ನು ಕಲರ್‌ಫಿಟ್‌ ಪ್ರೊ 4 ಮ್ಯಾಕ್ಸ್‌ ಸ್ಮಾರ್ಟ್‌ವಾಚ್‌ 3,999ರೂ.ಬೆಲೆಯನ್ನು ಹೊಂದಿದೆ. ಈ ಸ್ಮಾರ್ಟ್‌ವಾಚ್‌ ಕೂಡ ಇದೇ ಜುಲೈ 4 ರಿಂದ ಅಮೆಜಾನ್‌ ನಲ್ಲಿ ಲಭ್ಯವಿರುತ್ತದೆ. ಇದು ಜೆಟ್ ಬ್ಲಾಕ್, ವಿಂಟೇಜ್ ಬ್ರೌನ್, ರೋಸ್ ಗೋಲ್ಡ್, ಸಿಲ್ವರ್ ಗ್ರೇ ಮತ್ತು ನೇವಿ ಗೋಲ್ಡ್‌ನಂತಹ ಬಹು ಬಣ್ಣದ ಆಯ್ಕೆಗಳಲ್ಲಿ ದೊರೆಯಲಿದೆ.

ನಾಯ್ಸ್‌

ಇದಲ್ಲದೆ ನಾಯ್ಸ್‌ ಕಂಪನಿ ಇತ್ತೀಚಿಗೆ ಹೊಸ ನಾಯ್ಸ್‌ i1 ಆಡಿಯೋ ಕೇಂದ್ರಿತ ಸ್ಮಾರ್ಟ್‌ಗ್ಲಾಸ್‌ ಪರಿಚಯಿಸಿದೆ. ಈ ಸ್ಮಾರ್ಟ್‌ ಗ್ಲಾಸ್‌ ಅನ್ನು ನಾಯ್ಸ್ ಲ್ಯಾಬ್ಸ್ ಅಡಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಇದು ಮೇಡ್ ಇನ್ ಇಂಡಿಯಾ ಆಗಿದ್ದು, ಮೋಷನ್ ಎಸ್ಟಿಮೇಶನ್, ಮೋಷನ್ ಕಾಂಪೆನ್ಸೇಶನ್ (MEMS) ಕರೆಗಾಗಿ ಮೈಕ್, ಮ್ಯಾಗ್ನೆಟಿಕ್ ಚಾರ್ಜಿಂಗ್ ಮತ್ತು ಹ್ಯಾಂಡ್ಸ್-ಫ್ರೀ ವಾಯ್ಸ್‌ ಕಂಟ್ರೋಲ್‌ ಫೀಚರ್ಸ್‌ಗಳನ್ನು ಒಳಗೊಂಡಿದೆ.

ನಾಯ್ಸ್‌

ಇನ್ನು ನಾಯ್ಸ್‌ i1 ಸ್ಮಾರ್ಟ್‌ಗ್ಲಾಸ್‌ ಹೊಸ ಮಾದರಿಯ ಫೀಚರ್ಸ್‌ಗಳನ್ನು ಹೊಂದಿದ್ದು, "ಮಾರ್ಗದರ್ಶಿ ಆಡಿಯೋ ವಿನ್ಯಾಸ"ವನ್ನು ಪಡೆದುಕೊಂಡಿದೆ. ಈ ಕನ್ನಡಕ ನಿಮ್ಮ ಸುತ್ತಮುತ್ತಲಿನ ಹೆಚ್ಚಿನ ಶಬ್ದವನ್ನು ನಿರ್ಬಂಧಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಇದರ ಬ್ಯಾಟರಿ ಬ್ಯಾಕ್‌ಅಪ್‌ಗೆ ಸಂಬಂಧಿಸಿದಂತೆ, ಈ ಡಿವೈಸ್‌ ಸಿಂಗಲ್‌ ಚಾರ್ಜ್‌ನಲ್ಲಿ 9 ಗಂಟೆಗಳ ಪ್ಲೇಟೈಮ್ ಅನ್ನು ನೀಡುತ್ತದೆ ಎನ್ನಲಾಗಿದೆ.

Best Mobiles in India

English summary
Noise ColorFit Pro 4 & ColorFit Pro 4 Max launched in India: price, specifications

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X