ನಾಯ್ಸ್‌ ಕಂಪೆನಿಯಿಂದ ಹೊಸ ಸ್ಮಾರ್ಟ್‌ ಗ್ಲಾಸ್‌ ಲಾಂಚ್‌! ಬೆಲೆ ಎಷ್ಟು?

|

ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ ಕನ್ನಡಕಗಳಿಗೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಇದೆ. ಸದ್ಯ ಇದೀಗ ನಾಯ್ಸ್‌ ಕಂಪೆನಿ ಕೂಡ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಸ್ಮಾರ್ಟ್‌ ಗ್ಲಾಸ್‌ ನಾಯ್ಸ್‌ i1 ಅನ್ನು ಲಾಂಚ್‌ ಮಾಡಿದೆ. ಇದು ನಾಯ್ಸ್‌ ಕಂಪೆನಿಯ ಮೊದಲ ಸ್ಮಾರ್ಟ್‌ ಕನ್ನಡಕ ಆಗಿದೆ. ಇದು ಗೂಗಲ್‌ ಪರಿಚಯಿಸಿರುವ ಸ್ಮಾರ್ಟ್‌ ಗ್ಲಾಸ್‌ಗಿಂದ ಭಿನ್ನವಾಗಿದ್ದು, ಇದು ಕ್ಯಾಮೆರಾ ಬದಲಿಗೆ ಸ್ಪೀಕರ್‌ ಸೆಟ್‌ ಅನ್ನು ಒಳಗೊಂಡಿದೆ. ಅಂದರೆ ವೀಡಿಯೋಗಿಂತ ಆಡಿಯೋ ಫೀಚರ್ಸ್‌ ಅನ್ನು ಇದು ಕೇಂದ್ರಿಕರಿಸಿದೆ.

ಕನ್ನಡಕ

ಹೌದು, ಇಂದು ನೀವು ದರಿಸುವ ಕನ್ನಡಕ ಕೇವಲ ಕಣ್ಣಿಗೆ ತಂಪನ್ನು ಮಾತ್ರವಲ್ಲ ಸ್ಮಾರ್ಟ್‌ ಆಗಿ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಕೂಡ ಹೊಂದಿವೆ. ಇದರ ಪರಿಕಲ್ಪನೆಯೆ ಸ್ಮಾರ್ಟ್‌ ಗ್ಲಾಸ್‌ ಅಥವಾ ಸ್ಮಾರ್ಟ್‌ ಕನ್ನಡಕ ಅಂತಾ ಹೇಳಬಹುದು. ಈಗಾಗಲೇ ಮಾರುಕಟ್ಟೆಯಲ್ಲಿ ಗೂಗಲ್‌ ಸ್ಮಾರ್ಟ್‌ ಗ್ಲಾಸ್‌ ಲಭ್ಯವಿದೆ. ಅದೇ ಸಾಲಿಗೆ ನಾಯ್ಸ್‌ ಕಂಪೆನಿ ಕೂಡ ಎಂಟ್ರಿ ನೀಡಿದೆ. ಆದರೆ ಗೂಗಲ್‌ಗಿಂತ ವೈವಿಧ್ಯಮಯವಾದ ಸ್ಮಾರ್ಟ್‌ ಗ್ಲಾಸ್‌ ಅನ್ನು ಪರಿಚಯಿಸುವಲ್ಲಿ ಯಶಸ್ವಿಯಾಗಿದೆ.

ಸ್ಮಾರ್ಟ್‌ಗ್ಲಾಸ್‌

ನಾಯ್ಸ್‌ ಕಂಪನಿಯ ನಾಯ್ಸ್‌ i1 ಆಡಿಯೋ ಕೇಂದ್ರಿತ ಸ್ಮಾರ್ಟ್‌ಗ್ಲಾಸ್‌ ಆಗಿದೆ. ಇದನ್ನು ನಾಯ್ಸ್ ಲ್ಯಾಬ್ಸ್ ಅಡಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಅದರಲ್ಲೂ ಈ ಸ್ಮಾರ್ಟ್‌ ಗ್ಲಾಸ್‌ ಮೇಡ್ ಇನ್ ಇಂಡಿಯಾ ಆಗಿದ್ದು, ಮೋಷನ್ ಎಸ್ಟಿಮೇಶನ್, ಮೋಷನ್ ಕಾಂಪೆನ್ಸೇಶನ್ (MEMS) ಕರೆಗಾಗಿ ಮೈಕ್, ಮ್ಯಾಗ್ನೆಟಿಕ್ ಚಾರ್ಜಿಂಗ್ ಮತ್ತು ಹ್ಯಾಂಡ್ಸ್-ಫ್ರೀ ವಾಯ್ಸ್‌ ಕಂಟ್ರೋಲ್‌ ಫೀಚರ್ಸ್‌ಗಳನ್ನು ಒಳಗೊಂಡಿದೆ. ಹಾಗಾದ್ರೆ ನಾಯ್ಸ್‌ i1 ಸ್ಮಾರ್ಟ್‌ ಗ್ಲಾಸ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಸ್ಮಾರ್ಟ್‌ಗ್ಲಾಸ್‌

ನಾಯ್ಸ್‌ i1 ಸ್ಮಾರ್ಟ್‌ಗ್ಲಾಸ್‌ ಹೊಸ ಮಾದರಿಯ ಫೀಚರ್ಸ್‌ಗಳನ್ನು ಹೊಂದಿದ್ದು, "ಮಾರ್ಗದರ್ಶಿ ಆಡಿಯೋ ವಿನ್ಯಾಸ"ವನ್ನು ಪಡೆದುಕೊಂಡಿದೆ. ಈ ಕನ್ನಡಕ ನಿಮ್ಮ ಸುತ್ತಮುತ್ತಲಿನ ಹೆಚ್ಚಿನ ಶಬ್ದವನ್ನು ನಿರ್ಬಂಧಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಇದು ಬಳಕೆದಾರರಿಗೆ ತಲ್ಲೀನಗೊಳಿಸುವ ಅಕೌಸ್ಟಿಕ್ ಅನುಭವವನ್ನು ಪಡೆಯಲು ಅನುವು ಮಾಡಿಕೊಡುತ್ತದೆ. ಇದರ ಬ್ಯಾಟರಿ ಬ್ಯಾಕ್‌ಅಪ್‌ಗೆ ಸಂಬಂಧಿಸಿದಂತೆ, ಈ ಡಿವೈಸ್‌ ಸಿಂಗಲ್‌ ಚಾರ್ಜ್‌ನಲ್ಲಿ 9 ಗಂಟೆಗಳ ಪ್ಲೇಟೈಮ್ ಅನ್ನು ನೀಡುತ್ತದೆ ಎನ್ನಲಾಗಿದೆ.

ಸ್ಮಾರ್ಟ್‌ಗ್ಲಾಸ್‌

ಇನ್ನು ಈ ಸ್ಮಾರ್ಟ್‌ಗ್ಲಾಸ್‌ ಬ್ಲೂಟೂತ್ 5.1 ಕನೆಕ್ಟಿವಿಟಿಯನ್ನು ಸಹ ಹೊಂದಿದೆ. ಇದರಿಂದ ನೀವು ಟೆಂಪಲ್ಸ್‌ ಅನ್ನು ತೆರೆದ ತಕ್ಷಣ ಸ್ಮಾರ್ಟ್ ಕನ್ನಡಕವು ನಿಮ್ಮ ಫೋನ್‌ಗೆ ಕನೆಕ್ಟ್‌ ಆಗಲಿದೆ. ಜೊತೆಗೆ ಇದು ಸ್ಮಾರ್ಟ್‌ಫೋನ್‌ನಿಂದ 10 ಮೀಟರ್ ದೂರದ ಅಂತರದಲ್ಲಿಯೂ ಸುಲಭವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳುತ್ತದೆ. ಅಂದರೆ ಕಂಪನಿಯ ಪ್ರಕಾರ, ಇದು 15 ನಿಮಿಷಗಳ ಚಾರ್ಜ್‌ನಲ್ಲಿ 120 ನಿಮಿಷಗಳ ಪ್ಲೇಟೈಮ್ ಅನ್ನು ನೀಡುತ್ತದೆ. ಅಲ್ಲದೆ ಈ ಸ್ಮಾರ್ಟ್ ಕನ್ನಡಕವು IPX4 ಪ್ರೊಟೆಕ್ಷನ್‌ ಅನ್ನು ಹೊಂದಿದ್ದು, ವಾಟರ್‌ಪ್ರೂಪ್‌ ಆಗಿದೆ.

ಟಚ್‌ ಕಂಟ್ರೋಲ್‌ ಮತ್ತು ವಾಯ್ಸ್‌ ಅಸಿಸ್ಟೆಂಟ್‌

ಟಚ್‌ ಕಂಟ್ರೋಲ್‌ ಮತ್ತು ವಾಯ್ಸ್‌ ಅಸಿಸ್ಟೆಂಟ್‌

ಈ ಸ್ಮಾರ್ಟ್‌ಗ್ಲಾಸ್‌ ಹೊಂದಿರುವ ವಿಶೇಷ ಫೀಚರ್ಸ್‌ಗಳಲ್ಲಿ ಟಚ್‌ ಕಂಟ್ರೋಲ್‌ ಮತ್ತು ವಾಯ್ಸ್‌ ಅಸಿಸ್ಟೆಂಟ್‌ ಫೀಚರ್ಸ್‌ ಪ್ರಮುಖವಾಗಿದೆ. ಇದು ಮಲ್ಟಿ-ಟಾಸ್ಕಿಂಗ್‌ ಟಚ್‌ ಕಂಟ್ರೋಲ್‌ಗಳನ್ನು ಹೊಂದಿದೆ. ಇದರಿಂದ ಬಳಕೆದಾರರು ಸ್ಮಾರ್ಟ್‌ ಗ್ಲಾಸ್‌ ಮೂಲಕವೇ ಕರೆಗಳನ್ನು ಸ್ವೀಕರಿಸಲು ಮತ್ತು ತಿರಸ್ಕರಿಸಲು, ಮ್ಯೂಸಿಕ್‌ ಅನ್ನು ನಿರ್ವಹಿಸುವುದಕ್ಕೆ ಅವಕಾಶ ಸಿಗಲಿದೆ. ಇದಲ್ಲದೆ ವಾಯ್ಸ್‌ ಅಸಿಸ್ಟೆಂಟ್‌ ಅನ್ನು ಆಕ್ಟಿವ್‌ ಮಾಡುವುದಕ್ಕೆ ಕೂಡ ಅನುವು ಮಾಡಿಕೊಡುತ್ತದೆ. ಅಂದರೆ ಇದು ಸಿರಿ ಮತ್ತು ಗೂಗಲ್ ಅಸಿಸ್ಟೆಂಟ್‌ನಂತಹ ಇನ್-ಬಿಲ್ಟ್ ವಾಯ್ಸ್ ಅಸಿಸ್ಟೆಂಟ್‌ಗಳನ್ನು ಹೊಂದಿದೆ.

ಸನ್ ಗ್ಲಾಸ್‌

ಸನ್ ಗ್ಲಾಸ್‌

ಇನ್ನು ಈ ಸ್ಮಾರ್ಟ್‌ಗ್ಲಾಸ್‌ ಸನ್‌ಗ್ಲಾಸ್‌ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಅಂದತೆ ಈ ಸ್ಮಾರ್ಟ್‌ಗ್ಲಾಸ್‌ಗಳು ಸನ್‌ಗ್ಲಾಸ್ ಲೆನ್ಸ್‌ಗಳಲ್ಲಿ ಸೂರ್ಯನ ಕಿರಣಗಳ ವಿರುದ್ಧ UVA/B 99% ಪ್ರೊಟೆಕ್ಷನ್‌ ಅನ್ನು ನೀಡಲಿದೆ. ಬಿಸಿಲಿನಲ್ಲಿ ಇದ್ದರೂ ಕೂಡ ನಿಮ್ಮ ಕಣ್ಣುಗಳಿಗೆ ಸೂಕ್ತ ರಕ್ಷಣೆ ನೀಡಲಿದೆ. ಇದಲ್ಲದೆ ಲ್ಯಾಪ್‌ಟಾಪ್‌ಗಳು, ಫೋನ್‌ಗಳು ಮತ್ತು ಡೆಸ್ಕ್‌ಟಾಪ್‌ಗಳಲ್ಲಿ ಕೆಲಸ ಮಾಡುವಾಗ ಕಣ್ಣಿನ ಆಯಾಸವನ್ನು ಕಡಿಮೆ ಮಾಡಲು ಬ್ಲೂ ಲೈಟ್‌ ಫಿಲ್ಟರಿಂಗ್ ಟ್ರಾನ್ಸಫರೆಂಟ್‌ ಲೆನ್ಸ್‌ಗಳೊಂದಿಗೆ ಕನ್ನಡಕವನ್ನು ಬದಲಿಸುವ ಆಯ್ಕೆಯನ್ನು ಕೂಡ ಹೊಂದಿದೆ.

ಹೊಸ ನಾಯ್ಸ್‌ i1 ಸ್ಮಾರ್ಟ್‌ಗ್ಲಾಸ್‌ ಬಗ್ಗೆ ನಾಯ್ಸ್‌ ಕಂಪೆನಿಯ ಸಹ-ಸಂಸ್ಥಾಪಕ ಅಮಿತ್ ಖತ್ರಿ "ನಾಯ್ಸ್ ಲ್ಯಾಬ್‌ನಲ್ಲಿ ಅಭಿವೃದ್ಧಿಪಡಿಸಿದ ಮೊದಲ ಸ್ಮಾರ್ಟ್ ಕನ್ನಡಕವಾದ ನಾಯ್ಸ್ ಐ1 ಅನ್ನು ಪರಿಚಯಿಸಲು ನಾವು ಹೆಮ್ಮೆಪಡುತ್ತೇವೆ ಎಂದಿದ್ದಾರೆ. ಅಲ್ಲದೆ ಭವಿಷ್ಯದ ದೃಷ್ಟಿಯಿಂದ ನಾವು ಅತ್ಯುತ್ತಮವಾದ-ವರ್ಗದ ಆಡಿಯೋ ಅನುಭವವನ್ನು ಬಯಸುವ ಯಾರಿಗಾದರೂ ಇದು ಶುದ್ಧವಾದ ತಾಂತ್ರಿಕ ಅನುಭವವನ್ನು ನೀಡಲಿದೆ. ಇದಕ್ಕಾಗಿ ನಾವು ನಮ್ಮ ಸ್ಮಾರ್ಟ್ ಕನ್ನಡಕವನ್ನು ವಿನ್ಯಾಸಗೊಳಿಸಿದ್ದೇವೆ ಎಂದು ಹೇಳಿದೆ. ನಾವು ಅದಕ್ಕಾಗಿ ಎಲ್ಲಾ ರೀತಿಯ ಅಗತ್ಯ ಫೀಚರ್ಸ್‌ಗಳನ್ನು ಈ ಸ್ಮಾರ್ಟ್‌ಗ್ಲಾಸ್‌ನಲ್ಲಿ ಸೇರಿಸಿದ್ದೇವೆ ಎಂದು ಹೇಳಿದ್ದಾರೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ನಾಯ್ಸ್‌ ಕಂಪೆನಿ ಪರಿಚಯಿಸಿರುವ ಹೊಸ ನಾಯ್ಸ್‌ i1 ಕನ್ನಡಕ ಭಾರತದಲ್ಲಿ 5,999 ರೂ.ಗಳಲ್ಲಿ ಲಭ್ಯವಿದೆ. ಸದ್ಯ ಈ ಹೊಸ ಉತ್ಪನ್ನವನ್ನು ಸೀಮಿತ ಸಂಖ್ಯೆಯಲ್ಲಿ ಬಿಡುಗಡೆ ಮಾಡಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಆದ್ದರಿಂದ ಇದು ಕಡಿಮೆ ಅವಧಿಯಲ್ಲಿ ಸ್ಟಾಕ್‌ನಿಂದ ಹೊರಹೋಗಬಹುದು. ಇನ್ನು ಈ ಕನ್ನಡಕವನ್ನು ನೀವು gonoise.com ಮೂಲಕ ಖರೀದಿಸಬಹುದಾಗಿದೆ.

ಸ್ಮಾರ್ಟ್‌ ಗ್ಲಾಸ್‌

ಇನ್ನು ಶಿಯೋಮಿ ಕಂಪೆನಿ ಕೂಡ ಈಗಾಗಲೇ ತನ್ನದೇ ಆದ ಸ್ಮಾರ್ಟ್‌ ಗ್ಲಾಸ್‌ ಪರಿಚಯಿಸಿ ಸೈ ಎನಿಸಿಕೊಂಡಿದೆ. ಕಳೆದ ವರ್ಷ ಬಿಡುಗಡೆಯಾದ ಶಿಯೋಮಿಯ ಸ್ಮಾರ್ಟ್ ಗ್ಲಾಸ್‌ ಮೈಕ್ರೊ ಎಲ್‌ಇಡಿ ಇಮೇಜಿಂಗ್ ತಂತ್ರಜ್ಞಾನವನ್ನು ಒಳಗೊಂಡಿದೆ. ಇದು ನೋಡಲು ಸಾಮಾನ್ಯ ಕನ್ನಡಕ ತರಹವೇ ಕಾಣಿಸುತ್ತದೆ. ಹಾಗೆಯೇ ಹಗುರವಾಗಿ ರಚನೆಯನ್ನು ಇದು ಪಡೆದಿದೆ. ಇನ್ನು ಈ ಸ್ಮಾರ್ಟ್‌ ಗ್ಲಾಸ್‌ ಡಿವೈಸ್ 0.13-ಇಂಚಿನ ಮೈಕ್ರೋ ಎಲ್‌ಇಡಿ ಡಿಸ್‌ಪ್ಲೇ ಅನ್ನು ಹೊಂದಿದ್ದು, ಮೈಕ್ರೋ ಎಲ್‌ಇಡಿಗಳು ಹೆಚ್ಚಿನ ಪಿಕ್ಸೆಲ್ ಸಾಂದ್ರತೆಯನ್ನು ಹೊಂದಿವೆ. ಬಳಕೆದಾರರಿಗೆ ಇದು ಕಾಂಪ್ಯಾಕ್ಟ್ ಡಿಸ್‌ಪ್ಲೇ ಎನಿಸಲಿದೆ. ಈ ಡಿವೈಸ್‌ನಲ್ಲಿ ಆಪ್ಟಿಕಲ್ ವೇವ್‌ಗೈಡ್ ತಂತ್ರಜ್ಞಾನ ಇದ್ದು, ಇದು ಮೈಕ್ರೊ ಎಲ್‌ಇಡಿ ಡಿಸ್‌ಪ್ಲೇ ಆಪ್ಟಿಕಲ್ ವೇವ್‌ಗೈಡ್ ಲೆನ್ಸ್‌ನ ಸೂಕ್ಷ್ಮ ರಚನೆಯ ಮೂಲಕ ಮಾನವನ ಕಣ್ಣಿಗೆ ಬೆಳಕಿನ ಕಿರಣಗಳನ್ನು ಸರಿಯಾಗಿ ರವಾನಿಸುತ್ತದೆ

Best Mobiles in India

Read more about:
English summary
The company claims that the Noise i1 has been made in limited numbers hence it might go out of stock within a short period

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X