ನಾಯ್ಸ್‌ ಕಂಪೆನಿಯಿಂದ ಹೊಸ ಸ್ಮಾರ್ಟ್‌ವಾಚ್‌ ಪರಿಚಯ!..ಒಂದು ವಾರದ ಬ್ಯಾಟರಿ ಅವಧಿ!

|

ಭಾರತದಲ್ಲಿ ಸ್ಮಾರ್ಟ್‌ಫೋನ್‌ ಮಾರುಕಟ್ಟೆ ಮಾತ್ರವಲ್ಲ ಸ್ಮಾರ್ಟ್‌ವಾಚ್‌ ಮಾರುಕಟ್ಟೆ ಕೂಡ ಸಾಕಷ್ಟು ವಿಶಾಲವಾಗಿದೆ. ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ ವೆರಿಯೆಬಲ್ಸ್‌ ಮಾರುಕಟ್ಟೆ ಹೆಚ್ಚಿನ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಇದೇ ಕಾರಣಕ್ಕೆ ಭಾರತದಲ್ಲಿ ಹಲವು ಪ್ರತಿಷ್ಠಿತ ಕಂಪೆನಿಗಳು ತಮ್ಮ ನವೀನ ಮಾದರಿಯ ಸ್ಮಾರ್ಟ್‌ವಾಚ್‌ಗಳನ್ನು ಪರಿಚಯಿಸುತ್ತಾ ಬಂದಿವೆ. ಇದರಲ್ಲಿ ನಾಯ್ಸ್‌ ಕಂಪೆನಿ ಕೂಡ ಒಂದಾಗಿದೆ. ಈಗಾಗಲೇ ಹಲವು ಆಕರ್ಷಕ ಸ್ಮಾರ್ಟ್‌ವಾಚ್‌ಗಳನ್ನು ಪರಿಚಯಿಸಿರುವ ನಾಯ್ಸ್‌ ಕಂಪೆನಿ ಇದೀಗ ಹೊಸ ನಾಯ್ಸ್‌ಫಿಟ್‌ ಕೋರ್‌ 2 ಅನ್ನು ಲಾಂಚ್‌ ಮಾಡಿದೆ.

ನಾಯ್ಸ್‌

ಹೌದು, ನಾಯ್ಸ್‌ ಕಂಪೆನಿ ಭಾರತದಲ್ಲಿ ಹೊಸ ನಾಯ್ಸ್‌ಫಿಟ್‌ ಕೋರ್‌ 2 ಸ್ಮಾರ್ಟ್ ವಾಚ್ ಅನ್ನು ಬಿಡುಗಡೆ ಮಾಡಿದೆ. ಇದು SpO2 ಮಾನಿಟರ್, ನಿರಂತರ ಹೃದಯ ಬಡಿತ ಮಾನಿಟರಿಂಗ್ ಮಾಡುವ ಫೀಚರ್ಸ್‌ಗಳನ್ನು ಒಳಗೊಂಡಿದೆ. ಈ ಸ್ಮಾರ್ಟ್‌ವಾಚ್‌ 1.28-ಇಂಚಿನ LCD ಡಿಸ್‌ಪ್ಲೇ ಹೊಂದಿದ್ದು, 100 ಕ್ಲೌಡ್ ಆಧಾರಿತ ವಾಚ್ ಫೇಸ್‌ಗಳನ್ನು ನೀಡಲಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ವಾಚ್‌ ಏನೆಲ್ಲಾ ಫೀಚರ್ಸ್‌ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ನಾಯ್ಸ್‌ಫೀಟ್‌ ಕೋರ್‌ 2

ನಾಯ್ಸ್‌ಫೀಟ್‌ ಕೋರ್‌ 2 ಸ್ಮಾರ್ಟ್‌ವಾಚ್‌ 1.28-ಇಂಚಿನ LCD ಡಿಸ್‌ಪ್ಲೇ ಹೊಂದಿದೆ. ಇದು 240 x 240 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಡಿಸ್‌ಪ್ಲೇ 500 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಅನ್ನು ಒಳಗೊಂಡೊದೆ. ಜೊತೆಗೆ ಈ ಸ್ಮಾರ್ಟ್‌ವಾಚ್‌ ವೃತ್ತಾಕಾರದ ಡಯಲ್ ಮತ್ತು ಮೆಟಾಲಿಕ್ ಫಿನಿಶ್ ಹೊಂದಿದೆ. ಇದು ಹಗುರವಾದ ವಿನ್ಯಾಸವನ್ನು ಒಳಗೊಂಡಿದೆ. ಈ ಸ್ಮಾರ್ಟ್‌ವಾಚ್‌ ಸುಮಾರು 50 ಸ್ಪೋರ್ಟ್ಸ್‌ ಮೋಡ್‌ಗಳನ್ನು ಒಳಗೊಂಡಿದೆ. ಇದರಲ್ಲಿ ನೀವು ನಿಮ್ಮ ಆಕ್ಟಿವಿಟಿ ಹಿಸ್ಟರಿಯನ್ನು ಕೂಡ ನೋಡುವ ಆಯ್ಕೆ ಲಭ್ಯವಿದೆ.

ನಾಯ್ಸ್‌ಫೀಟ್‌ ಕೋರ್‌ 2

ನಾಯ್ಸ್‌ಫೀಟ್‌ ಕೋರ್‌ 2 ಸ್ಮಾರ್ಟ್‌ವಾಚ್‌ SpO2 ಮಾನಿಟರಿಂಗ್, 24 x 7 ಹೃದಯ ಬಡಿತ ಟ್ರ್ಯಾಕಿಂಗ್ ಮತ್ತು ಹೆಚ್ಚಿನ ಹೆಲ್ತ್‌ ಫೀಚರ್ಸ್‌ಗಳನ್ನು ಒಳಗೊಂಡಿದೆ. ಈ ಸ್ಮಾರ್ಟ್ ವಾಚ್ ಮೂಲಕ ನಿಮ್ಮ ನಿದ್ರೆಯ ಮಾದರಿಗಳನ್ನು ಮತ್ತು ಒತ್ತಡದ ಮಟ್ಟವನ್ನು ಸಹ ಅಳೆಯಬಹುದು. ಈ ಡಿವೈಸ್‌ ಬ್ರೀತ್ ಟ್ರ್ಯಾಕರ್ ಅನ್ನು ಕೂಡ ಹೊಂದಿದ್ದು, ನಿಮ್ಮ ಉಸಿರಾಟದ ಮಟ್ಟವನ್ನು ಟ್ರ್ಯಾಕ್‌ ಮಾಡಲಿದೆ. ಜೊತೆಗೆ ಇದು ನಿಮ್ಮ ಹೆಜ್ಜೆಗಳನ್ನು ಟ್ರ್ಯಾಕ್ ಮಾಡುವ ಸಾಮರ್ಥ್ಯದೊಂದಿಗೆ ಬರುತ್ತದೆ.

ನಾಯ್ಸ್‌ಫಿಟ್‌ ಕೋರ್‌ 2

ಇದಲ್ಲದೆ ನಾಯ್ಸ್‌ಫಿಟ್‌ ಕೋರ್‌ 2 ಸ್ಮಾರ್ಟ್‌ವಾಚ್‌ 230mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 7 ದಿನಗಳ ಬ್ಯಾಟರಿ ಅವಧಿಯನ್ನು ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಈ ಸ್ಮಾರ್ಟ್‌ವಾಚ್ 30 ದಿನಗಳ ಬ್ಯಾಟರಿ ಅವಧಿಯನ್ನು ನೀಡುತ್ತದೆ ಎನ್ನಲಾಗಿದೆ. ಅಲ್ಲದೆ ಈ ಸ್ಮಾರ್ಟ್‌ವಾಚ್‌ ಅನ್ನು ಸುಮಾರು ಎರಡು ಗಂಟೆಗಳಲ್ಲಿ ಬ್ಯಾಟರಿ ಚಾರ್ಜ್ ಮಾಡಬಹುದಾಗಿದೆ ಎಂದು ಕಂಪೆನಿ ಹೇಳಿಕೊಂಡಿದೆ.

ಸ್ಮಾರ್ಟ್ ವಾಚ್

ಇನ್ನು ಈ ಸ್ಮಾರ್ಟ್ ವಾಚ್ ಆಂಡ್ರಾಯ್ಡ್ ಮತ್ತು ಐಒಎಸ್ ಎರಡು ಡಿವೈಸ್‌ಗಳಿಗೂ ಹೊಂದಿಕೊಳ್ಳುತ್ತದೆ. ಈ ಸ್ಮಾರ್ಟ್‌ವಾಚ್‌ನಲ್ಲಿ ನೀವು ಪಡೆದುಕೊಳ್ಳಬಹುದಾದ ಇತರೆ ಫೀಚರ್ಸ್‌ಗಳಲ್ಲಿ ರಿಮೋಟ್ ಮ್ಯೂಸಿಕ್, ಕ್ಯಾಮೆರಾ ಕಂಟ್ರೋಲ್‌ಗಳು, ಫ್ಲ್ಯಾಶ್‌ಲೈಟ್, ಫೈಂಡ್ ಮೈ ಫೋನ್, ಡೋಂಟ್ ಡಿಸ್ಟರ್ಬ್ ಮೋಡ್, ವೇಕ್ ಗೆಸ್ಚರ್, ಅಲಾರಮ್‌ ಸೇರಿದೆ. ಇದಲ್ಲದೆ ಈ ಡಿವೈಸ್‌ IP68 ವಾಟರ್‌-ಪ್ರೂಫ್‌ ರೇಟಿಂಗ್ ಅನ್ನು ಸಹ ಹೊಂದಿದೆ.

ಸ್ಮಾರ್ಟ್‌ವಾಚ್‌

ಪ್ರಸ್ತುತ ಈ ಸ್ಮಾರ್ಟ್‌ವಾಚ್‌ ಭಾರತದಲ್ಲಿ 3,999ರೂ. ಮೂಲ ಬೆಲೆ ಹೊಂದಿದೆ. ಆದರೆ ಲಾಂಚ್‌ ಆಫರ್‌ನಲ್ಲಿ ನಿಮಗೆ ಕೇವಲ 1,799 ರೂ.ಗಳಿಗೆ ದೊರೆಯಲಿದೆ. ಇದನ್ನು ಕಂಪನಿಯ ಅಧಿಕೃತ ವೆಬ್‌ಸೈಟ್ ಮತ್ತು ಫ್ಲಿಪ್‌ಕಾರ್ಟ್ ಮೂಲಕ ಖರೀದಿಸಬಹುದಾಗಿದೆ. ಇದು ಜೆಟ್ ಬ್ಲಾಕ್, ಮಿಡ್ನೈಟ್ ಬ್ಲೂ, ಸಿಲ್ವರ್ ಗ್ರೇ, ರೋಸ್ ಪಿಂಕ್ ಮತ್ತು ಆಲಿವ್ ಗ್ರೀನ್ ಬಣ್ಣಗಳಲ್ಲಿ ಖರೀದಿಸಬಹುದಾಗಿದೆ.

ಕಲರ್‌ಫಿಟ್‌

ಇದಲ್ಲದೆ ನಾಯ್ಸ್‌ ಕಂಪೆನಿ ಇತ್ತೀಚಿಗೆ ಭಾರತದಲ್ಲಿ ನಾಯ್ಸ್‌ ಕಂಪೆನಿ ಭಾರತದಲ್ಲಿ ಹೊಸ ನಾಯ್ಸ್‌ ಕಲರ್‌ಫಿಟ್‌ ಅಲ್ಟ್ರಾ 2 Buzz ಸ್ಮಾರ್ಟ್ ವಾಚ್ ಬಿಡುಗಡೆ ಮಾಡಿದೆ. ಇದು ಅಮೋಲೆಡ್‌ ಡಿಸ್‌ಪ್ಲೇ ಮತ್ತು ಬ್ಲೂಟೂತ್ ಕಾಲ್‌ ಎರಡನ್ನು ಹೊಂದಿರುವ ಮೊದಲ ಸ್ಮಾರ್ಟ್‌ವಾಚ್‌ ಇದಾಗಿದೆ ಎಂದು ನಾಯ್ಸ್‌ ಕಂಪನಿ ಹೇಳಿದೆ. ಜೊತೆಗೆ ಈ ಸ್ಮಾರ್ಟ್‌ವಾಚ್‌ನಲ್ಲಿ ಕರೆಗಳಿಗೆ ಉತ್ತರಿಸಲು ಇಂಟರ್‌ಬಿಲ್ಟ್‌ ಮೈಕ್ರೊಫೋನ್ ಮತ್ತು ಸ್ಪೀಕರ್ ಅನ್ನು ಸಹ ಅಳವಡಿಸಲಾಗಿದೆ.

Best Mobiles in India

English summary
The smartwatch has features like a SpO2 monitor, continuous heart rate monitoring, and more.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X