ಮಾರುಕಟ್ಟೆಗೆ ಶೀಘ್ರವೇ ಲಾಂಚ್ ಆಗಲಿದೆ ನೋಕಿಯಾ 1: ಹೇಗಿದೆ ಸ್ಮಾರ್ಟ್ ಪೋನ್..?

By Lekhaka
|

HMD ಗ್ಲೊಬಲ್ ಕಂಪನಿಯೂ ಶೀಘ್ರವೇ ಮಾರುಕಟ್ಟೆಗೆ ಪರಿಚಯಿಸಲಿರುವ ನೋಕಿಯಾ 1 ಆಂಡ್ರಾಯ್ಡ್ ಗೋ ಸ್ಮಾರ್ಟ್ ಫೋನ್ ಕುರಿತಾದ ಮಾಹಿತಿಯೂ ಲಭ್ಯವಾಗಿದ್ದು, ಅತೀ ಕಡಿಮೆ ಬೆಲೆಗೆ ಮಾರಾಟವಾಗಲಿರುವ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಹುಟ್ಟುಹಾಕಲಿದೆ ಎನ್ನಲಾಗಿದೆ. ಮಾರ್ಚ್ ನಲ್ಲಿ ಕಾಣಿಸಿಕೊಳ್ಳುವ ಸ್ಮಾರ್ಟ್ ಫೋನ್ ಕುರಿತಾದ ಮಾಹಿತಿಯೂ ಮುಂದಿನಂತಿದೆ.

ಮಾರುಕಟ್ಟೆಗೆ ಶೀಘ್ರವೇ ಲಾಂಚ್ ಆಗಲಿದೆ ನೋಕಿಯಾ 1: ಹೇಗಿದೆ ಸ್ಮಾರ್ಟ್ ಪೋನ್..?


ನೋಕಿಯಾ 1 ಸ್ಮಾರ್ಟ್ ಫೋನ್ ಫೋಟೋ ಲೀಕ್ ಆಗಿದ್ದು, ಈ ಸ್ಮಾರ್ಟ್ ಫೋನ್ ಹೇಗಿದೆ ಎಂಬ ಮಾಹಿತಿಯೂ ದೊರೆತಿದೆ. ಈ ಸ್ಮಾರ್ಟ್ ಪೋನ್ ಯಾವ ರೀತಿಯಲ್ಲಿ ಕಾಣಿಸಿಕೊಳ್ಳಲಿದೆ ಎಂಬುದು ಇದರಿಂದ ತಿಳಿದು ಬಂದಿದೆ. ಅಲ್ಲದೇ ಈ ಸ್ಮಾರ್ಟ್ ಫೋನ್ ನೋಡಲು ಸಹ ಉತ್ತಮ ವಿನ್ಯಾಸವನ್ನು ಹೊಂದಿದೆ ಎನ್ನಲಾಗಿದೆ.

ನೋಕಿಯಾ 1 ಸ್ಮಾರ್ಟ್ ಫೋನ್ ಹಿಂಭಾಗದಲ್ಲಿ LED ಫ್ಲಾಷ್ ಲೈಟ್ ಅನ್ನು ಕಾಣಬಹುದಾಗಿದ್ದು, ವರ್ಟಿಕಲ್ ಕ್ಯಾಮೆರಾವನ್ನು ಈ ಫೋನಿನಲ್ಲಿ ಅಳವಡಿಸಲಾಗಿದೆ. ಇದಲ್ಲದೇ ಈ ಸ್ಮಾರ್ಟ್ ಫೋನ್ ನಲ್ಲಿ 212 ಚಿಪ್ ಸೆಟ್ ಅನ್ನು ಸಹ ಇದರಲ್ಲಿದೆ. ಇದರೊಂದಿಗೆ 1GB RAM 16GB ಇಂಟರ್ನಲ್ ಮೆಮೊರಿಯನ್ನು ಸಹ ನೋಡಬಹುದಾಗಿದೆ.

ನಿಮ್ಮ ಐಫೋನ್ ಮೂಸಿಕ್ ಆಪ್ ನಿಂದ ಆಪಲ್ ಮ್ಯೂಸಿಕ್ ತೆಗೆಯುವುದು ಹೀಗೆ!ನಿಮ್ಮ ಐಫೋನ್ ಮೂಸಿಕ್ ಆಪ್ ನಿಂದ ಆಪಲ್ ಮ್ಯೂಸಿಕ್ ತೆಗೆಯುವುದು ಹೀಗೆ!

ಇದಲ್ಲದೇ ಇದು ನೋಕಿಯಾದ ಮೊದಲ ಗೋ ಆವೃತ್ತಿಯ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಇದಾಗಿದೆ. ಅಲ್ಲದೇ ಇದು ಓರಿಯೊದಲ್ಲಿ ಕಾರ್ಯನಿರ್ವಹಿಸಲಿದ್ದು, ಕಡಿಮೆ ವೇಗದ ಫೋನ್ ನಲ್ಲಿಯೂ ಉತ್ತಮವಾಗಿ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ. ಇದಕ್ಕಾಗಿ ಗೂಗಲ್ ಗೋ ಸರಣಿಯ ಆಪ್ ಗಳನ್ನು ಗೂಗಲ್ ಬಿಡುಗಡೆ ಮಾಡಿದೆ.

ಇದಲ್ಲದೇ ಪ್ಲೇ ಸ್ಟೋರ್, ಜಿಮೇಲ್, ಮ್ಯಾಪ್, ಗೂಗಲ್, ಯೂಟ್ಯೂಬ್ ಸೇರಿದಂತೆ ಮುಂತಾದ ಲೈಟ್ ಆಪ್ ಗಳನ್ನು ಗೋ ಹೆಸರಿನಲ್ಲಿ ಲಾಂಚ್ ಮಾಡಿದೆ ಎನ್ನಲಾಗಿದೆ. ಈ ಸ್ಮಾರ್ಟ್ ಫೋನ್ ಶೀಘ್ರವೇ ಅನಾವರಣಗೊಳ್ಳಲಿದೆ. ಸುಮಾರು ರೂ. 6000ದ ಒಳಗೆ ದೊರೆಯಲಿದೆ. ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಸೃಷ್ಟಿಸಲಿದೆ ಎನ್ನಲಾಗಿದೆ.

Aadhaar Number ವೆರಿಫಿಕೇಷನ್ ಮಾಡುವುದು ಹೇಗೆ..?

Source

Best Mobiles in India

Read more about:
English summary
HMD Global is likely prepping to launch an Android Go smartphone called Nokia 1 that could be the most affordable one coming from the company. A couple of hands-on images of the alleged Nokia 1 smartphone have been leaked. The images show that the alleged design of this Android Go smartphone and its price is also out.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X