2018ರಲ್ಲಿ ಬರಲಿರುವ ನೋಕಿಯಾ ಫೋನ್ಗಳ ಹೆಸರು ಬಿಚ್ಚಿಟ್ಟ ನೋಕಿಯಾ ಕ್ಯಾಮೆರಾ ಆಪ್

By Tejaswini P G
|

2017ರಲ್ಲಿ HMD ಗ್ಲೋಬಲ್ ಸಂಸ್ಥೆಯು ನೋಕಿಯಾ 6, ನೋಕಿಯಾ 5, ನೋಕಿಯಾ 3, ನೋಕಿಯಾ 8, ನೋಕಿಯಾ 7 ಮತ್ತು ನೋಕಿಯಾ 2 ಮೊದಲಾದ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆಮಾಡಿತ್ತು. ಇನ್ನು ಈ ತಿಂಗಳು ನೋಕಿಯಾ 9 ಮತ್ತು ನೋಕಿಯಾ 6(2018) ಅನ್ನು ಲಾಂಚ್ ಮಾಡುವ ಮೂಲಕ ಈ ವರ್ಷದ ಬಿಡುಗಡೆಗಳ ಶುಭಾರಂಭವನ್ನು ಮಾಡಲಿದೆ.

2018ರಲ್ಲಿ ಬರಲಿರುವ ನೋಕಿಯಾ ಫೋನ್ಗಳ ಹೆಸರು ಬಿಚ್ಚಿಟ್ಟ ನೋಕಿಯಾ ಕ್ಯಾಮೆರಾ ಆಪ್

ಸಧ್ಯಕ್ಕೆ ಈ ಎರಡೇ ಮಾಡೆಲ್ಗಳ ಬಗ್ಗೆ ಮಾತ್ರ ತಿಳಿದಿದ್ದು, HMD ಗ್ಲೋಬಲ್ 2018ರಲ್ಲಿ ಈ ಎರಡು ಮಾಡೆಲ್ಗಳನ್ನು ಮಾತ್ರ ಲಾಂಚ್ ಮಾಡಲಿದೆ ಎಂದು ಇದರ ಅರ್ಥವಲ್ಲ.

ಇತ್ತೀಚೆಗೆ ಸೋರಿಕೆಯಾದ ನೋಕಿಯಾ ಕ್ಯಾಮೆರಾ ಆಪ್ ಕೂಡ ಇದನ್ನೇ ಅನುಮೋದಿಸುತ್ತಿದೆ. ಗಿಜ್ಮೋಚೈನಾದ ಮೂಲಕ ಐಟಿಹೋಮ್ ಪ್ರಕಟಿಸಿರುವ ಚೀನಾ ದ ವರದಿಯೊಂದರ ಅನುಸಾರ ನೋಕಿಯಾ ಕ್ಯಾಮೆರಾ ಆಪ್ ನ APK ಹಲವು ನೋಕಿಯಾ ಸ್ಮಾರ್ಟ್ಫೋನ್ಗಳ ಪಟ್ಟಿಯನ್ನು ಬಹಿರಂಗಪಡಿಸಿದ್ದು, ಅವುಗಳ ಪೈಕಿ ಕೆಲವನ್ನು HMD ಗ್ಲೋಬಲ್ ಈಗಾಗಲೇ ಲಾಂಚ್ ಮಾಡಿದ್ದರೆ ಇನ್ನು ಕೆಲವು ಇನ್ನೂ ಬಿಡುಗೆಡೆಯಾಗಿಲ್ಲ.

ಮುಂದೆ ಬರಲಿರುವ ನೋಕಿಯಾ ಸ್ಮಾರ್ಟ್ಫೋನ್ಗಳ ಕುರಿತು ಹೇಳುವುದಾದರೆ, ನೋಕಿಯಾ ಕ್ಯಾಮೆರಾ ಆಪ್ ನೋಕಿಯಾ 4, ನೋಕಿಯಾ 7 ಪ್ಲಸ್ ಮತ್ತು ನೋಕಿಯಾ 1 ಎಂಬ ಹೆಸರುಗಳನ್ನು ಬಹಿರಂಗ ಪಡಿಸಿದೆ. ಇವುಗಳ ಪೈಕಿ ನೋಕಿಯಾ 1 HMD ಗ್ಲೋಬಲ್ ಸಂಸ್ಥೆಯ ಆಂಡ್ರಾಯ್ಡ್ ಒನ್ ಫೋನ್ ಆಗಲಿದ್ದು ಈ ವರ್ಷ ಮಾರ್ಚ್ ತಿಂಗಳಲ್ಲಿ ಲಾಂಚ್ ಆಗಬಹುದು. ಆದರೆ ನೋಕಿಯಾ 4 ಮತ್ತು ನೋಕಿಯಾ 7 ಪ್ಲಸ್ ಕುರಿತು ಯಾವುದೇ ಮಾಹಿತಿ ಸಧ್ಯಕ್ಕೆ ಲಭ್ಯವಿಲ್ಲ.

ಸ್ಫೋಟಕ ವರದಿ: ವಾಟ್ಸ್‌ಆಪ್‌ನಲ್ಲಿ ರೂ.500ಕ್ಕೆ 100 ಕೋಟಿ ಆಧಾರ್ ಮಾಹಿತಿ ಮಾರಾಟ.!ಸ್ಫೋಟಕ ವರದಿ: ವಾಟ್ಸ್‌ಆಪ್‌ನಲ್ಲಿ ರೂ.500ಕ್ಕೆ 100 ಕೋಟಿ ಆಧಾರ್ ಮಾಹಿತಿ ಮಾರಾಟ.!

ಸಧ್ಯಕ್ಕೆ ಈ ಮೊಬೈಲ್ಗಳು ಯಾವಾಗ ಬಿಡುಗಡೆಯಾಗಬಹುದು ಎಂಬ ಅಂದಾಜು ಮಾಹಿತಿ ಇದೆ. HMD ಗ್ಲೋಬಲ್ ಸಂಸ್ಥೆಯು ನೋಕಿಯಾ 9 ಮತ್ತು ನೋಕಿಯಾ 6(2018) ಅನ್ನು ಜನವರಿ 19 ರಂದು ನಡೆಯಲಿರುವ ಒಂದು ಸಮಾರಂಭದಲ್ಲಿ ಬಿಡುಗಡೆ ಮಾಡಲಿದೆ. ಹೀಗಾಗಿ HMD ಗ್ಲೋಬಲ್ ಸಂಸ್ಥೆಯು ಈ ವರ್ಷ ಇನ್ನೂ ಐದಾರು ಮೊಬೈಲ್ಗಳನ್ನು ಲಾಂಚ್ ಮಾಡುವ ಸಂಭವವಿದೆ.

How to Sharing a Mobile Data Connection with Your PC (KANNADA)

ಇತ್ತೀಚೆಗಷ್ಟೆ ಸ್ನ್ಯಾಪ್ಡ್ರಾಗನ್ 845 SoC ಹೊಂದಿರುವ ನೋಕಿಯಾ 10 ಸ್ಮಾರ್ಟ್ಫೋನ್ ಆಗಸ್ಟ್ ತಿಂಗಳಲ್ಲಿ ಬಿಡುಗಡೆಯಾಗಲಿರುವ ಕುರಿತು ಮಾಹಿತಿ ಕೇಳಿಬಂದಿತ್ತು.ಆದರೆ ಈ ಫ್ಲ್ಯಾಗ್ಶಿಪ್ ಮೊಬೈಲ್ ಕುರಿತು ಹೆಚ್ಚಿನ ಮಾಹಿತಿ ಇನ್ನೆಲ್ಲೂ ಕೇಳಿಬಂದಿಲ್ಲ.

ನೋಕಿಯಾ ಕ್ಯಾಮೆರಾ ಆಪ್ ಈ ಸ್ಮಾರ್ಟ್ಫೋನ್ಗಳ ಹೆಸರು ಬಿಟ್ಟರೆ ಬೇರೇನೂ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಅಲ್ಲದೆ ನೋಕಿಯಾ 7 ಪ್ಲಸ್ ಈಗಾಗಲೇ ಲಭ್ಯವಿರುವ ನೋಕಿಯಾ 7 ನ ಸುಧಾರಿತ ಆವೃತ್ತಿಯಾಗಿರಬಹುದೆಂಬ ಊಹೆಯಿದ್ದು, ಕ್ವಾಲ್ಕಮ್ ಸ್ನ್ಯಾಪ್ಡ್ರಾಗನ್ 660 SoC ಪ್ರಾಸೆಸರ್ ಬಳಸುವ ಸಾಧ್ಯತೆಯಿದೆ.

ಇಲ್ಲಿ ಹೇಳಿರುವ ಎಲ್ಲಾ ಮಾಡೆಲ್ಗಳು ಈ ವರ್ಷವೇ ಬಿಡುಗಡೆಯಾಗಲಿದೆ ಎಂದು ಖಂಡಿತವಾಗಿ ಹೇಳಲು ಸಾಧ್ಯವಿಲ್ಲ. ಇಲ್ಲಿ ನೀಡಿರುವ ಮಾಹಿತಿಯೆಲ್ಲವೂ ಸೋರಿಕೆಯಾದ ಮಾಹಿತಿಗಳಾಗಿದ್ದು, ನಿಜವಾದ ಮಾಹಿತಿ ಸಿಗುವವರೆಗೆ ಇದನ್ನು ಊಹೆಯಾಗಿಯೇ ಪರಿಗಣಿಸಬೇಕು.

Best Mobiles in India

Read more about:
English summary
Nokia Camera app APK information has leaked the details of upcoming smartphones - Nokia 4, Nokia 7 Plus and Nokia 1. Nokia 1 is likely to be the company’s Android One smartphone to be launched this year. But we have not heard about the other two. We can expect the Nokia 7 Plus to use the Snapdragon 660 SoC.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X