ಮಾರುಕಟ್ಟೆಗೆ ಬರಲಿದೆ ನೋಕಿಯಾ 4G ಫೀಚರ್ ಫೋನ್...!

Written By: Lekhaka

ಭಾರತೀಯ ಮಾರುಕಟ್ಟೆಯಲ್ಲಿ ಸದ್ಯ 4G ಫೀಚರ್ ಫೋನ್ ಗಳ ಹಾವಳಿ ಹೆಚ್ಚಾಗುತ್ತಿದ್ದು, ಇದೇ ಸಾಲಿಗೆ ನೋಕಿಯಾ ಸಹ ಸೇರಿಕೊಳ್ಳಲಿದೆ. ಈ ಹಿಂದೆ ಮಾರುಕಟ್ಟೆಯಲ್ಲಿ ಫೀಚರ್ ಫೋನ್ ಗಳ ಮಾರಾಟದಲ್ಲಿ ಅಧಿಪತ್ಯವನ್ನು ಸ್ಥಾಪಿಸಿದ್ದ ನೋಕಿಯಾ ಶೀಘ್ರವೇ 4G ಫೀಚರ್ ಫೋನ್ ಲಾಂಚ್ ಮಾಡಲಿದೆ ಎನ್ನಲಾಗಿದೆ. ಈಗಾಗಲೇ ಈ ಪೋನ್ ಕುರಿತಂತೆ ಸಾಕಷ್ಟು ರೂಮರ್ ಗಳು ಶುರುವಾಗಿದೆ.

ಮಾರುಕಟ್ಟೆಗೆ ಬರಲಿದೆ ನೋಕಿಯಾ 4G ಫೀಚರ್ ಫೋನ್...!

ಈಗಾಗಲೇ HMD ಸಂಸ್ಥಯೂ ನೋಕಿಯಾ 4G ಫೀಚರ್ ಫೋನ್ ಲಾಂಚ್ ಮಾಡಲು ಮುಂದಾಗಿದೆ ಎನ್ನುವ ಸುದ್ದಿಯು ಹೆಚ್ಚು ಚಾಲ್ತಿಯಲ್ಲಿದ್ದು ಇದರಂತೆ ನೋಕಿಯಾ 4G ಫೀಚರ್ ಫೋನ್ ಶೀಘ್ರವೇ ಮಾರುಕಟ್ಟೆ ಪ್ರವೇಶಿಸಲಿದ್ದು, ಡ್ಯುಯಲ್ ಸಿಮ್ ಮತ್ತು ಸಿಂಗಲ್ ಸಿಮ್ ಆಯ್ಕೆಯಲ್ಲಿ ಕಾಣಿಸಿಕೊಳ್ಳಲಿದೆ.

ಇದಲ್ಲದೇ ನೋಕಿಯಾ ಲಾಂಚ್ ಮಾಡಲಿರುವ 4G ಫೀಚರ್ ಫೋನ್ ನಲ್ಲಿ ಕ್ವಾಲ್ಟಿ ಕೀಪ್ಯಾಡ್ ಅನ್ನು ಕಾಣಬಹುದಾಗಿದೆ. ಈ ಮೂಲಕ ಮತ್ತೇ ಮಾರುಕಟ್ಟೆಯಲ್ಲಿ ಕ್ವಾಲ್ಟಿ ಕೀಪ್ಯಾಡ್ ಫೋನ್ ಗಳನ್ನು ಪರಿಚಯ ಮಾಡಲು ಮುಂದಾಗಿದೆ. ಈ ಹಿಂದಿನ ನೋಕಿಯಾ E ಸರಣಿಯ ಸ್ಮಾರ್ಟ್ ಫೋನ್ ಗಳು ಈ ಮಾದರಿಯ ಕೀಪ್ಯಾಡ್ ಗಳನ್ನು ಹೊಂದಿದ್ದವು.

ಮೂಲಗಳ ಪ್ರಕಾರ ನೋಕಿಯಾದ ಈ ಹೊಸ ಫೋನ್ ಜನವರಿ 16ಕ್ಕೆ ಲಾಂಚ್ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ. ಒಂದು ವೇಳೆ ಮಾರುಕಟ್ಟೆಗೆ ಈ ಫೋನ್ ಕಾಲಿಟ್ಟರೆ ವಿವಿಧ ಫೋನ್ ತಯಾರಕ ಕಂಪನಿಗಳು ನಷ್ಟವನ್ನು ಅನುಭವಿಸಲಿದೆ. ಈಗಾಗಲೇ ಜನರು ನೋಕಿಯಾ ಮೇಲೆ ನಂಬಿಕೆ ಇಟ್ಟಿರುವುದು ಇದಕ್ಕೆ ಕಾರಣವಾಗಿದೆ.

ನೋಕಿಯಾದಿಂದ ಮತ್ತೆರಡು ಹಳೇ ಫೋನ್ ಗೆ ಹೊಸ ಜೀವ..!

ಇದಲ್ಲದೇ ನೋಕಿಯಾ 9 ಮತ್ತು ನೋಕಿಯಾ 6 ನೂತನ ಆವೃತ್ತಿಯು ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಿದೆ. ಈ ಮೂಲಕ ಹೊಸ ವರ್ಷದ ಆರಂಭದಲ್ಲಿಯೇ ನೋಕಿಯಾ ತನ್ನ ಅಭಿಮಾನಿಗಳಿಗೆ ಮೂರು ಹೊಸ ಫೋನ್ ಗಳನ್ನು ನೀಡಲಿದೆ ಎನ್ನಲಾಗಿದೆ.

Read more about:
English summary
Nokia 4g feature phone, nokia feature phone, 4g feature phones, nokia mobiles, upcoming nokia phones, nokia 4g phone, nokia 9, nokia 6 (2018)
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot