ನೋಕಿಯಾ 5 ಮತ್ತು ನೋಕಿಯಾ 8 ಗೆ ಭಾರತದಲ್ಲಿ ಲಭಿಸಿದೆ ಶಾಶ್ವತ ಬೆಲೆ ಕಡಿತ!

By Tejaswini P G
|

ನೋಕಿಯಾ ಆಭಿಮಾನಿಗಳಿಗೊಂದು ಸಿಹಿ ಸುದ್ದಿ! ನೋಕಿಯಾ ತನ್ನ ನೋಕಿಯಾ 5 ಮತ್ತು ನೋಕಿಯಾ 8 ಸ್ಮಾರ್ಟ್ಫೋನ್ಗಳಿಗೆ ನೀಡಿದೆ ಭಾರತದಲ್ಲಿ ಬೆಲೆ ಕಡಿತ! ನೋಕಿಯಾ 8 ರ ಬೆಲೆಯಲ್ಲಿ ರೂ 8000 ದಷ್ಟು ಕಡಿತ ನೀಡಿದ್ದರೆ, ನೋಕಿಯಾ 5 ಪಡೆದಿದೆ ರೂ 1000 ದ ಬೆಲೆ ಕಡಿತ. ನೀವು ನೋಕಿಯಾ ದ ಫ್ಲ್ಯಾಗ್ಶಿಪ್ ಮೊಬೈಲ್ ಖರೀದಿಸುವ ಇರಾದೆ ಹೊಂದಿದ್ದರೆ ಇದೇ ಅದಕ್ಕೆ ಸರಿಯಾದ ಸಮಯ. ಇದೇ ಬೆಲೆಯ ಶ್ರೇಣಿಯಲ್ಲಿ ಚೀನಾದ ಮಧ್ಯಮ ಶ್ರೇಣಿಯ ಮೊಬೈಲ್ಗಳು ಲಭ್ಯವಿದ್ದು ನೀವು ಬಯಸಿದರೆ ಆ ಮೊಬೈಲ್ಗಳನ್ನೂ ಬಳಸಬಹುದು.

ನೋಕಿಯಾ 5 ಮತ್ತು ನೋಕಿಯಾ  8 ಗೆ ಭಾರತದಲ್ಲಿ ಲಭಿಸಿದೆ ಶಾಶ್ವತ ಬೆಲೆ ಕಡಿತ!


ರೂ 13,499 ಬೆಲೆಯಲ್ಲಿ ಲಾಂಚ್ ಆಗಿದ್ದ ನೋಕಿಯಾ 5(3 GB ಆವೃತ್ತಿ) ಈಗ ರೂ 12,499 ಕ್ಕೆ ಲಭ್ಯವಿದೆ.ಹಾಗೆಯೇ ರೂ 36,999 ಬೆಲೆಗೆ ಲಾಂಚ್ ಆಗಿದ್ದ ರೂ 28,999 ಕ್ಕೆ ಲಭ್ಯವಿದೆ. ವರದಿಗಳ ಅನುಸಾರ ಈ ಹೊಸ ಬೆಲೆ ಫೆಬ್ರವರಿ 1 ರಿಂದ ಜಾರಿಗೆ ಬರಲಿದೆ. ಆದರೆ ಈ ಲೇಖನ ಬರೆಯುವ ವೇಳೆಗೆ ಖ್ಯಾತ ಇ-ಕಾಮರ್ಸ್ ವೆಬ್ಸೈಟ್ಗಳಲ್ಲಿ ಬೆಲೆ ಇಳಿಕೆಯಾಗಿರಲಿಲ್ಲ. ಆಫ್ಲೈನ್ ಮಾರಾಟದಲ್ಲೂ ಈ ಹೊಸ ಬೆಲೆ ಜಾರಿಯಾಗಬೇಕಿದೆ.

MWC 2018 ಪ್ರಾರಂಭವಾಗುವ ಮೊದಲು ನೋಕಿಯಾ ಈ ಬೆಲೆ ಕಡಿತವನ್ನು ಘೋಷಿಸಿದ್ದು, HMD ಗ್ಲೋಬಲ್ ಈ ಸಮ್ಮೇಳನದಲ್ಲಿ ನೋಕಿಯಾ ದ ಹೊಸ ಮಾಡೆಲ್ ಗಳನ್ನು ಮಾರುಕಟ್ಟೆಗೆ ಲಾಂಚ್ ಮಾಡಲಿದೆ. ಹಳೆಯ ಮೊಬೈಲ್ಗಳ ಬೆಲೆ ಇಳಿಸುವ ಮೂಲಕ ಹೊಸ ಮೊಬೈಲ್ಗಳಿಗೆ ದಾರಿ ಸುಗಮವಾಗಿಸಲು ಹೊರಟಿದೆ.

ಈ ಎರಡು ಮೊಬೈಲ್ಗಳ ಫೀಚರ್ಗಳನ್ನು ಮತ್ತೊಮ್ಮೆ ಮೆಲುಕು ಹಾಕೋಣ

ನೋಕಿಯಾ 5 ಮತ್ತು ನೋಕಿಯಾ  8 ಗೆ ಭಾರತದಲ್ಲಿ ಲಭಿಸಿದೆ ಶಾಶ್ವತ ಬೆಲೆ ಕಡಿತ!


ನೋಕಿಯಾ 5

ನೋಕಿಯಾ 5 5.2 ಇಂಚ್ HD(720X1080 ಪಿಕ್ಸೆಲ್) IPS LCD ಪ್ಯಾನಲ್ ಹೊಂದಿದ್ದು, 2.5D ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ರಕ್ಷಣಾ ಕವಚ ಹೊಂದಿದೆ. ಒಕ್ಟಾ-ಕೋರ್ ಕ್ವಾಲ್ಕಮ್ ಸ್ನ್ಯಾಪ್ಡ್ರ್ಯಾಗನ್ 430 SoC ಪ್ರಾಸೆಸರ್ ಹೊಂದಿರುವ ನೋಕಿಯಾ 5 3GB RAM ಹೊಂದಿದೆ. 16GB ಆಂತರಿಕ ಸ್ಟೋರೇಜ್ ಇದ್ದು, ಇದನ್ನು ಮೈಕ್ರೋSD ಕಾರ್ಡ್ ಬಳಸಿ 128GB ವರೆಗೆ ವಿಸ್ತರಿಸಬಹುದಾಗಿದೆ.

ನೋಕಿಯಾ 5 13MP ಪ್ರೈಮರಿ ಕ್ಯಾಮೆರಾ ಸೆನ್ಸರ್ ಹೊಂದಿದ್ದು f/2.0 ಅಪರ್ಚರ್, PDAF ಲೆನ್ಸ್ ಮತ್ತು ಡ್ಯುಯಲ್ ಟೋನ್ ಫ್ಲ್ಯಾಶ್ ಹೊಂದಿದೆ. ಇನ್ನು ಫೋನಿನ ಮುಂಭಾಗದಲ್ಲಿ 8MP ಆಟೋಫೋಕಸ್ ಕ್ಯಾಮೆರಾ ಸೆನ್ಸರ್ ಇದ್ದು, f/2,0 ಅಪರ್ಚರ್, 84 ಡಿಗ್ರೀ ಫೀಲ್ಡ್-ಆಫ್-ವ್ಯೂ ಲೆನ್ಸ್ ಹೊಂದಿದೆ. 3000mAh ಸಾಮರ್ಥ್ಯದ ಬ್ಯಾಟರಿ ಹೊಂದಿರುವ ನೋಕಿಯಾ 5 ಆಂಡ್ರಾಯ್ಡ್ 7.1.1 ನುಗಾಟ್ ಹೊಂದಿದ್ದು, ಈಗ ಆಂಡ್ರಾಯ್ಡ್ ಓರಿಯೋ ಅಪ್ಡೇಟ್ ಪಡೆಯುತ್ತಿದೆ.

ಡ್ಯುಯಲ್ ಸಿಮ್ ಹ್ಯಾಂಡ್ಸೆಟ್ ಆದ ನೋಕಿಯಾ 5 4G VoLTE, ವೈಫೈ 802.11 a/b/g/n, ಬ್ಲೂಟೂತ್ v4.1, ಜಿಪಿಎಸ್/ ಎ-ಜಿಪಿಎಸ್, ಮೈಕ್ರೋ-USB OTG ಯೊಂದಿಗೆ ಮತ್ತು 3.5mm ಹೆಡ್ಫೋನ್ ಜ್ಯಾಕ್ ಹೊಂದಿದೆ. ಆಕ್ಸೆಲರೋಮೀಟರ್, ಆಮ್ಬಿಯೆಂಟ್ ಲೈಟ್ ಸೆನ್ಸರ್, ಡಿಜಿಟಲ್ ಕಂಪಾಸ್, ಗೈರೋಸ್ಕೋಪ್, ಪ್ರಾಕ್ಸಿಮಿಟಿ ಸೆನ್ಸರ್ ಮೊದಲಾದ ಸೆನ್ಸರ್ಗಳನ್ನು ಕೂಡ ಹೊಂದಿದೆ.

ನೋಕಿಯಾ 5 ಮತ್ತು ನೋಕಿಯಾ  8 ಗೆ ಭಾರತದಲ್ಲಿ ಲಭಿಸಿದೆ ಶಾಶ್ವತ ಬೆಲೆ ಕಡಿತ!
Nokia 6 - ಚೀನಾ ಕಂಪೆನಿಗಳಿಗೆ ಸೆಡ್ಡು ಹೊಡೆಯುವ ಏಕೈಕ ಫೋನ್ 'ನೋಕಿಯಾ 6'!!

ನೋಕಿಯಾ 8

ನೋಕಿಯಾ 8 ನೋಕಿಯಾದ ಫ್ಲ್ಯಾಗ್ಶಿಪ್ ಮೊಬೈಲ್ ಆಗಿದೆ.ನೋಕಿಯಾ 8 5.3ಇಂಚ್ QHD(1440X2560 ಪಿಕ್ಸೆಲ್ಗಳು) IPS ಡಿಸ್ಪ್ಲೇ ಹೊಂದಿದ್ದು 2.5D ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ರಕ್ಷಣಾ ಕವಚ ಹೊಂದಿದೆ. ಒಕ್ಟಾ-ಕೋರ್ ಕ್ವಾಲ್ಕಮ್ ಸ್ನ್ಯಾಪ್ಡ್ರ್ಯಾಗನ್ 835 SoC ಪ್ರಾಸೆಸರ್ ಹೊಂದಿರುವ ನೋಕಿಯಾ 8 4GB LPDDR4X RAM ಹೊಂದಿದೆ. 64GB ಆಂತರಿಕ ಸ್ಟೋರೇಜ್ ಇದ್ದು, ಇದನ್ನು ಮೈಕ್ರೋSD ಕಾರ್ಡ್ ಬಳಸಿ 256GB ವರೆಗೆ ವಿಸ್ತರಿಸಬಹುದಾಗಿದೆ.

ನೋಕಿಯಾ 8 ರ ಕ್ಯಾಮೆರಾ ಕುರಿತು ಹೇಳುವುದಾದರೆ, ಇದರಲ್ಲಿ ಡ್ಯುಯಲ್ ರೇರ್ ಕ್ಯಾಮೆರಾ ಸೆಟಪ್ ಇದ್ದು, ಎರಡು 13MP ಇಮೇಜ್ ಸೆನ್ಸರ್ಗಳನ್ನು ಹೊಂದಿದೆ. ಈ ಪೈಕಿ ಒಂದು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್(OIS) ಹೊಂದಿರುವ RGB ಸೆನ್ಸರ್ ಆದರೆ ಮತ್ತೊಂದು ಮೋನೋಕ್ರೋಮ್ ಸೆನ್ಸರ್ ಆಗಿದೆ. ಈ ಎರಡೂ ಸೆನ್ಸರ್ಗಳು f/2.0 ಅಪರ್ಚರ್,PDAF,76.9 ಡಿಗ್ರೀ ವೈಡ್ ಆಂಗಲ್ ಲೆನ್ಸ್,ಡ್ಯುಯಲ್ ಟೋನ್ ಫ್ಲ್ಯಾಶ್ ಮತ್ತು IR ರೇಂಜ್ ಫೈಂಡರ್ ಹೊಂದಿದೆ.

ನೋಕಿಯಾ 3310-ಜಿಯೋ ಫೋನ್:ಯಾವುದು ಬೆಸ್ಟ್..?ನೋಕಿಯಾ 3310-ಜಿಯೋ ಫೋನ್:ಯಾವುದು ಬೆಸ್ಟ್..?

ನೋಕಿಯಾ 8 3090mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು ಆಂಡ್ರಾಯ್ಡ್ 7.1 ನುಗಾಟ್ ಹೊಂದಿದೆ. ಇತ್ತೀಚೆಗೆ ನೋಕಿಯಾ ಸಂಸ್ಥೆಯು ನೋಕಿಯಾ 8 ಗೆ ಆಂಡ್ರಾಯ್ಡ್ 8.0 ಓರಿಯೋ ಬೀಟಾ ಟೆಸ್ಟಿಂಗ್ ಪ್ರಾರಂಭಿಸಿದೆ.ಡ್ಯುಯಲ್ ಸಿಮ್ ಹ್ಯಾಂಡ್ಸೆಟ್ ಆದ ನೋಕಿಯಾ 8 4G VoLTE, ವೈಫೈ 802.11 a/b/g/n/ac, ಬ್ಲೂಟೂತ್ v5.0, ಜಿಪಿಎಸ್/ ಎ-ಜಿಪಿಎಸ್, USB ಟೈಪ್-ಸಿ(v3.1) ಮತ್ತು 3.5mm ಹೆಡ್ಫೋನ್ ಜ್ಯಾಕ್ ಹೊಂದಿದೆ. ಆಕ್ಸೆಲರೋಮೀಟರ್, ಆಮ್ಬಿಯೆಂಟ್ ಲೈಟ್ ಸೆನ್ಸರ್,ಬ್ಯಾರೋಮೀಟರ್, ಡಿಜಿಟಲ್ ಕಂಪಾಸ್, ಗೈರೋಸ್ಕೋಪ್, ಪ್ರಾಕ್ಸಿಮಿಟಿ ಸೆನ್ಸರ್ ಮೊದಲಾದ ಸೆನ್ಸರ್ಗಳನ್ನು ಕೂಡ ಹೊಂದಿದೆ. ನೋಕಿಯಾ 8 IP54-ರೇಟೆಡ್ ಬಿಲ್ಡ್ ಹೊಂದಿದ್ದು Splash-ರೆಸಿಸ್ಟೆಂಟ್ ಆಗಿದೆ.

Best Mobiles in India

Read more about:
English summary
Nokia has now revised the prices of Nokia 5 and Nokia 8 in India. The two devices are receiving a price cut of up to Rs. 8,000 on Nokia 8 and Rs. 1,000 on Nokia 5.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X