ನೋಕಿಯಾ ಫೋನ್ ಗಳಿಗೆ ಆಂಡ್ರಾಯ್ಡ್ ಮೊದಲ ಆಪ್ಡೇಟ್

Written By: Lekhaka

ಗೂಗಲ್ ಫೋನ್ ಗಳನ್ನು ಬಿಟ್ಟರೇ ಮೊದಲ ಆಂಡ್ರಾಯ್ಡ್ ಸೆಕ್ಯುರಿಟಿ ಪ್ಯಾಚ್ ಅನ್ನು ಪಡೆಯುವುದರಲ್ಲಿ ನೋಕಿಯಾ ಮೊದಲ ಸ್ಥಾನದಲ್ಲಿ ಇರಲಿದೆ ಎನ್ನಲಾಗಿದೆ. ಸ್ಟಾಕ್ ಆಂಡ್ರಾಯ್ಡ್ ಇರುವ ಫೋನ್ ಗಳು ಬಹುಬೇಗನೇ ಈ ಸೆಕ್ಯೂರಿಟಿ ಪ್ಯಾಚ್ ಪಡೆದುಕೊಳ್ಳಲಿವೆ.

ನೋಕಿಯಾ ಫೋನ್ ಗಳಿಗೆ ಆಂಡ್ರಾಯ್ಡ್ ಮೊದಲ ಆಪ್ಡೇಟ್

ಈ ಬಾರಿ HDM ಗ್ಲೂಬಲ್ ಸಂಸ್ಥೆಯೂ ಗೂಗಲ್ ನೊಂದಿಗೆ ಮಾತು ಕಥೆಯನ್ನು ನಡೆಸಿದ್ದು, ನೋಕಿಯಾ ಫೋನ್ ಗಳಿಗೆ ಮೊದಲ ಆಂಡ್ರಾಯ್ಡ್ ಸೆಕ್ಯುರಿಟಿ ಪ್ಯಾಚ್ ಬಿಡುಗಡೆಗೊಳಿಸುವಂತೆ ಮನವಿ ಮಾಡಿದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಸೆಪ್ಟೆಂಬರ್ ಅಂತ್ಯದ ವೇಳೆಗೆ ನೋಕಿಯಾ ಫೋನ್ ಗಳಿಗೆ ಇದು ಲಭ್ಯವಿರಲಿದೆ.

ಮೂಲಗಳ ಪ್ರಕಾರ ನೋಕಿಯಾ 6 ಮತ್ತು ನೋಕಿಯಾ 5 ಗಳು ಇದನ್ನು ಮೊದಲು ಪಡೆದುಕೊಳ್ಳಲಿದ್ದು, ನಂತರದಲ್ಲಿ ಬೇರೆ ಬೇರೆ ಕಂಪನಿಗಳ ಫೋನ್ ಗಳಿಗೆ ಇದು ಲಭ್ಯವಿರಲಿದೆ. ಇದು 142 MB ತ್ರದಲ್ಲಿ ಇರಲಿದೆ ಎನ್ನಲಾಗಿದೆ.

ಈಗಾಗಲೇ ನೋಕಿಯಾ ಫೋನ್ ಗಳು ಕ್ಲಿನ್ ಆಂಡ್ರಾಯ್ಡ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಈಗಾಗಲೇ ಓರಿಯೋ ಆಪ್ಡೇಟ್ ಸಹ ಪಡೆಯಲಿವೆ ಎನ್ನಲಾಗಿದೆ. ನೋಕಿಯಾ 3, 5 ಮತ್ತು 6 ಈಗಾಗಲೇ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದೆ.

ಐಫೋನ್ 8 ನಲ್ಲಿ ಹೋಮ್ ಬಟನ್ ಇಲ್ಲವಂತೆ..!!

ಇದಲ್ಲದೇ ಮುಂದಿನ ವರ್ಷದ ಅಂತ್ಯದ ವೇಳೆಗೆ ಲಾಂಚ್ ಆಗಲಿರುವ ಆಂಡ್ರಾಯ್ಡ್ P ಆಪ್ಡೇಟ್ ಸಹ ನೋಕಿಯಾ ಪೋನ್ ಗಳಿಗೆ ಲಭ್ಯವಿರಲಿದೆ. ಈ ಹಿನ್ನಲೆಯಲ್ಲಿ ನೋಕಿಯಾ ಖರೀದಿಸುವವರಿಗೆ ಇದು ಉತ್ತಮ ಸಂಗತಿಯಾಗಿದೆ.

Read more about:
English summary
The Android software update will fix some security bugs on Nokia 5.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot