ಎರಡು ಹೊಸ ಆವೃತ್ತಿಯಲ್ಲಿ ನೋಕಿಯಾ 6 (2018) ಸ್ಮಾರ್ಟ್ ಫೋನ್..!
HMD ಗ್ಲೋಬಲ್ ಸಂಸ್ಥೆಯೂ ಇದೇ ಕೆಲವು ದಿನಗಳ ಹಿಂದೆ ನೋಕಿಯಾ 6 ಸ್ಮಾರ್ಟ್ ಫೋನ್ ಅನ್ನು ಹೊಸ ಅವತಾರದಲ್ಲಿ ಬಿಡುಗಡೆ ಮಾಡಲಿದೆ ಎನ್ನು ಸುದ್ದಿಯೂ ಲೀಕ್ ಆಗಿತ್ತು. ನೋಕಿಯಾ 6 (2018) ಆವೃತ್ತಿಯೂ ಜನವರಿಯಲ್ಲಿಯೇ ಬಿಡುಗಡೆಯಾಗಲಿದ್ದು, ಇದು ಎರಡು ಆವೃತ್ತಿಯಲ್ಲಿ ಕಾಣಿಸಿಕೊಳ್ಳಲಿದೆ ಎನ್ನಲಾಗಿದೆ.

ಈಗಾಗಲೇ ಮಾರುಕಟ್ಟೆಯಲ್ಲಿ ನೋಕಿಯಾ 6 ಸ್ಮಾರ್ಟ್ ಫೋನ್ ಹೆಚ್ಚಿನ ಖ್ಯಾತಿಯನ್ನು ಪಡೆದುಕೊಂಡಿದ್ದು, ಈ ಹಿನ್ನಲೆಯಲ್ಲಿ ಎರಡು ಆವೃತ್ತಿಯಲ್ಲಿ ನೂತನವಾಗಿ ಮಾರುಕಟ್ಟೆಗೆ ಬರಲಿದೆ ಎನ್ನಲಾಗಿದೆ. 16:8 ಡಿಸ್ ಪ್ಲೇ ಅನುಪಾತದಲ್ಲಿ ಒಂದು ಹಾಗೇಯೇ ಸದ್ಯದ ಮಾರುಕಟ್ಟೆ ಟ್ರೆಂಟ್ 18:9 ಅನುಪಾತದಲ್ಲಿ ಮತ್ತೊಂದು ಫೋನ್ ಕಾಣಿಸಿಕೊಳ್ಳಲಿದೆ.
ನೋಕಿಯಾ 6 ಸ್ಮಾರ್ಟ್ ಫೋನಿನಲ್ಲಿ 5.5 ಇಂಚಿನ ಡಿಸ್ ಪ್ಲೇಯನ್ನು ಕಾಣಬಹುದಾಗಿದ್ದು, ಇದು FHD ಗುಣಮಟ್ಟವನ್ನು ಹೊಂದಿದೆ ಎನ್ನಲಾಗಿದೆ. ಇದಲ್ಲದೇ ಈ ಫೋನ್ 2.2GHz ವೇಗದ ಆಕ್ಟಾ ಕೋರ್ ಕ್ವಾಲ್ಕಮ್ ಸ್ಯಾಪ್ ಡ್ರಾಗನ್ ಪ್ರೋಸೆಸರ್ ಒಳಗೊಂಡಿದೆ. ಇದರಲ್ಲಿ ಸ್ನಾಪ್ ಡ್ರಾಗನ್ 630 ಇಲ್ಲವೇ 660 ಚಿಪ್ ಸೆಟ್ ಅಳವಡಿಸುವ ಸಾಧ್ಯತೆ ಇದೆ.
ನೋಕಿಯಾ 6 (2018) ಸ್ಮಾರ್ಟ್ ಫೋನಿನಲ್ಲಿ 4GB RAM ನೊಂದಿಗೆ 32GB ಇಲ್ಲವೇ 64GB ಇಂಟರ್ನಲ್ ಮೆಮೊರಿಯನ್ನು ಕಾಣುವ ಸಾಧ್ಯತೆ ಇದೆ. ಅಲ್ಲದೇ ಇದನ್ನು ಮೆಮೊರಿ ಕಾರ್ಡ್ ಹಾಕಿಕೊಳ್ಳುವ ಮೂಲಕ ವಿಸ್ತರಿಸಿಕೊಳ್ಳಲುವ ಸಾಧ್ಯತೆಯನ್ನು ಮಾಡಿಕೊಡಲಾಗಿದೆ.
'ಅಲ್ಲದೇ ಈ ಫೋನಿನ ಹಿಂಭಾಗದಲ್ಲಿ 16MP ಕ್ಯಾಮೆರಾವನ್ನು ಕಾಣಬಹುದಾಗಿದ್ದು, ಮುಂಭಾಗದಲ್ಲಿ 8MP ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಅಲ್ಲದೇ 3000mAh ಬ್ಯಾಟರಿಯನ್ನುಈ ಫೋನಿನಲ್ಲಿ ನೀಡಲಾಗಿದ್ದು, ಆಂಡ್ರಾಯ್ಡ್ 7.1.1 ನಲ್ಲಿ ಈ ಫೋನ್ ಕಾರ್ಯನಿರ್ವಹಿಸಲಿದೆ.


Click it and Unblock the Notifications








