ಏಪ್ರಿಲ್ 4 ರಂದು ಭಾರತಕ್ಕೆ ಬರಲಿದೆ ನೋಕಿಯಾ 6, ನೋಕಿಯಾ 7 ಪ್ಲಸ್ ಮತ್ತು ನೋಕಿಯಾ 8 ಸಿರೊಕ್ಕೋ

By Tejaswini P G

  ನೋಕಿಯಾ ಬ್ರ್ಯಾಂಡ್ ನ ಸ್ಮಾರ್ಟ್ಫೋನ್ ಗಳ ತಯಾರಿಯ ಪರವಾನಿಗಿ ಹೊಂದಿರುವ HMD ಗ್ಲೋಬಲ್ ಸಂಸ್ಥೆ ಭಾರತದಲ್ಲಿ ಏಪ್ರಿಲ್ 4 ರಂದು ಆಯೋಜಿಸಿರುವ ಸಮಾರಂಭವೊಂದಕ್ಕೆ ಮಾಧ್ಯಮಗಳಿಗೆ ಆಹ್ವಾನ ಪತ್ರಿಕೆಗಳನ್ನು ಕಳುಹಿಸಿದೆ. ಈ ಆಹ್ವಾನ ಪತ್ರಿಕೆಯ ಅನುಸಾರ ಈ ಸಮಾರಂಭವು ದೆಹಲಿಯಲ್ಲಿ ಪೂರ್ವಾಹ್ನ 11.30 ಗೆ ಪ್ರಾರಂಭವಾಗಲಿದೆ. ಈ ಸಮಾರಂಭದಲ್ಲಿ ಬಿಡುಗಡೆಯಾಗಲಿರುವ ಸಾಧನಗಳ ಕುರಿತು ಯಾವುದೇ ಮಾಹಿತಿ ನೀಡಲಾಗಿಲ್ಲ. ಆದರೆ MWC 2018ರಲ್ಲಿ ಅನಾವರಣಗೊಂಡ ಸಾಧನಗಳು ಇಲ್ಲಿ ಬಿಡುಗಡೆಯಾಗಬಹುದೆಂಬ ಅನಿಸಿಕೆ ನಮ್ಮದು.

  ಏಪ್ರಿಲ್ 4 ರಂದು ಭಾರತಕ್ಕೆ ಬರಲಿದೆ ನೋಕಿಯಾ 6, ನೋಕಿಯಾ 7 ಪ್ಲಸ್ ಮತ್ತು ನೋಕಿಯಾ 8

  HMD ಗ್ಲೋಬಲ್ ಸಂಸ್ಥೆಯು ಈಗಾಗಲೇ ನೋಕಿಯಾ 1 ಆಂಡ್ರಾಯ್ಡ್ ಓರಿಯೋ( ಗೋ ಎಡಿಶನ್) ಅನ್ನು ರೂ 5,499 ಬೆಲೆಗೆ ಯಾವುದೇ ಸದ್ದಿಲ್ಲದೆ ಭಾರತದಲ್ಲಿ ಬಿಡುಗಡೆ ಮಾಡಿದೆ. MWC 2018ರಲ್ಲಿ ಅನವಾರಣಗೊಂಡ ನೋಕಿಯಾ ಸ್ಮಾರ್ಟ್ಫೋನ್ ಗಳು ಭಾರತಕ್ಕೆ ಏಪ್ರಿಲ್ ನಲ್ಲಿ ಬರಲಿವೆ ಎಂಬ ವರದಿಗಳು ಈ ಮೊದಲೂ ಕೇಳಿಬಂದಿತ್ತು. ಹಾಗಾಗಿ ನೋಕಿಯಾ 7 ಪ್ಲಸ್, ನೋಕಿಯಾ 6(2018), ನೋಕಿಯಾ 8 ಸಿರೊಕ್ಕೋ ಮೊದಲಾದ ಸ್ಮಾರ್ಟ್ಫೋನ್ ಗಳು ಮತ್ತು ನೋಕಿಯಾ 8110 4G ಫೀಚರ್ ಫೋನ್ ಬರುವ ವಾರ ಭಾರತಕ್ಕೆ ಬರುವ ಸಾಧ್ಯತೆಗಳಿವೆ.

  ಈ ಆಹ್ವಾನ ಪತ್ರಿಕೆ " ವಿ ವೆಲ್ಕಂ ಯು ಟು ಡಿಸ್ಕವರ್ ಎನ್-ಪವರ್ಡ್ ಸಿಟಿ ಆಫ್ ಟುಮಾರೋ" ಎಂಬ ಟ್ಯಾಗ್ ಲೈನ್ ಹೊಂದಿದೆ. ಈ ಟ್ಯಾಗ್ ಲೈನ್ ದೇಶದಲ್ಲಿ ಬಿಡುಗಡೆಯಾಗಲಿರುವ ಮುಂದಿನ ನೋಕಿಯಾ ಬ್ರ್ಯಾಂಡ್ ನ ಸಾಧನಗಳನ್ನು ಸೂಚಿಸುತ್ತದೆ. ಅಲ್ಲದೆ ಇದರೊಂದಿಗೆ "ವಿ ವೆಲ್ಕಂ ಯು ಟು ಎಕ್ಸ್ಪ್ಲೋರ್, ಎಕ್ಸ್ಪ್ರೆಸ್, ಕ್ರಿಯೇಟ್, ರಿ-ಇಮ್ಯಾಜಿನ್" ಎಂಬ ಗುಪ್ತ ಸಂದೇಶವೂ ಇದ್ದು, ಫೋಟೋಗ್ರಾಫಿ ಮತ್ತು ಸ್ಟೋರಿ-ಟೆಲ್ಲಿಂಗ್ ನ ಸೂಚನೆಯನ್ನು ಇದು ನೀಡುತ್ತದೆ.

  ಮುಂದಿನ ವಾರ ಭಾರತದಲ್ಲಿ ಲಾಂಚ್ ಆಗಲಿರುವ ಎಲ್ಲಾ ನೋಕಿಯಾ ಸ್ಮಾರ್ಟ್ಫೋನ್ ಗಳೂ ಆಂಡ್ರಾಯ್ಡ್ ಒನ್ ಪ್ರೋಗ್ರಾಮ್ ನ ಅಂಗವಾಗಿದೆ ಎನ್ನುವುದು ಗಮನಿಸಬೇಕಾದ ವಿಷಯವಾಗಿದೆ. ಈ ಪ್ಲ್ಯಾಟ್ಫಾರ್ಮ್ ಸಮಯಕ್ಕೆ ಸರಿಯಾಗಿ ಕ್ಷಿಪ್ರ ಮತ್ತು ಸುರಕ್ಷಿತ ಅಪ್ಡೇಟ್ಗಳನ್ನು ಪಡೆಯಲು ಅನುವು ಮಾಡಿಕೊಡುತ್ತದೆ. HMD ಗ್ಲೋಬಲ್ ಕಳೆದ ವರ್ಷ ಬಿಡುಗಡೆಯಾದ ತಮ್ಮ ಮೊದಲನೇ ಬ್ಯಾಚ್ ನ ಸ್ಮಾರ್ಟ್ಫೋನ್ ಗಳಿಗೆ 2 ವರ್ಷಗಳ ಓಎಸ್ ಸಪೋರ್ಟ್ ಮತ್ತು ಕಾಲ ಕಾಲಕ್ಕೆ ತಮ್ಮ ಸ್ಮಾರ್ಟ್ಫೋನ್ ಗಳಿಗೆ ಸಾಫ್ಟ್ವೇರ್ ಅಪ್ಡೇಟ್ ಗಳನ್ನು ನೀಡುವಲ್ಲಿ ಒಳ್ಳೆಯ ಹೆಸರು ಪಡೆದಿದೆ. ಈ ಸ್ಮಾರ್ಟ್ಫೋನ್ ಗಳು ಆಂಡ್ರಾಯ್ಡ್ ಒನ್ ಬಳಸುವುದರಿಂದ ಅಪ್ಡೇಟ್ಗಳು ನೇರವಾಗಿ ಗೂಗಲ್ ನಿಂದಲೇ ದೊರೆಯಲಿದೆ.

  ಮೊಟೊ E5 ಸ್ಮಾರ್ಟ್ ಫೋನ್ ಮಾಹಿತಿ ಲೀಕ್: ಶೀಘ್ರವೇ ಮಾರುಕಟ್ಟೆಗೆ..!

  ಏಪ್ರಿಲ್ 4 ರಂದು ಭಾರತದಲ್ಲಿ ಲಾಂಚ್ ಆಗಲಿರುವ ನೋಕಿಯಾ ಸ್ಮಾರ್ಟ್ಫೋನ್ ಗಳ ಪೈಕಿ ನೋಕಿಯಾ 8 ಸಿರೊಕ್ಕೋ HMD ಗ್ಲೋಬಲ್ ಸಂಸ್ಥೆಯ ಇತ್ತೀಚಿನ ಫ್ಲ್ಯಾಗ್ಶಿಪ್ ಮೊಬೈಲ್ ಆಗಿದೆ. ಇದು ಕಳೆದ ವರ್ಷದ ಫ್ಲ್ಯಾಗ್ಶಿಪ್ ಮೊಬೈಲ್ ಆದ ನೋಕಿಯಾ 8 ನ ಸೀಕ್ವೆಲ್ ಎನಿಸಿದೆ. ಇನ್ನು ನೋಕಿಯಾ 8110 4G ಫೀಚರ್ ಫೋನ್ ಒಂದು ಸ್ಲೈಡರ್ ಫೋನ್ ಆಗಿದ್ದು, VoLTE ಬೆಂಬಲವನ್ನು ಹೊಂದಿದೆ. ಇದು ರಿಲಯೆನ್ಸ್ ಜಿಯೋಫೋನ್ ಮತ್ತು ಅದೇ ಮಾದರಿಯ ಇತರ 4G ಫೀಚರ್ ಫೋನ್ ಗಳಿಗೆ ಕಠಿಣ ಪ್ರತಿಸ್ಪರ್ಧಿಯಾಗಲಿದೆ.

  Read more about:
  English summary
  HMD Global has started sending out media invites for the launch of the Nokia smartphones in India on April 4. We can expect the smartphones such as Nokia 7 Plus, Nokia 6 (2018), and Nokia 8 Sirocco and the Nokia 8110 4G feature phone to come to India in the next week. Lately, Nokia 1, the Android Oreo (Go edition) smartphone was launched in the country.
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more