ಆಫ್ ಲೈನ್ ಮಾರುಕಟ್ಟೆಗೆ ಕಾಲಿಟ್ಟ ನೋಕಿಯಾ 6: ವಿಶೇಷತೆಗಳು

By Lekhaka
|

ಸದ್ಯ ಭಾರತೀಯ ಮಾರುಕಟ್ಟೆಗೆ HMD ಕಂಪನಿ ನೋಕಿಯಾ 2 ಸ್ಮಾರ್ಟ್ ಫೋನ್ ಅನ್ನು ಪರಿಚಯ ಮಾಡಿದ್ದು, ರೂ. 6,999ಕ್ಕೆ ಈ ಫೋನ್ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿದೆ. ಈ ಸ್ಮಾರ್ಟ್ ಫೋನ್ ಮೊದಲಿಗೆ ಆಫ್ ಲೈನ್ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದ್ದು, ನಂತರದಲ್ಲಿ ಆನ್ ಲೈನ್ ಗೆ ಬರುವ ಸಾಧ್ಯತೆಗಳಿಗೆ.

ಆಫ್ ಲೈನ್ ಮಾರುಕಟ್ಟೆಗೆ ಕಾಲಿಟ್ಟ ನೋಕಿಯಾ 6: ವಿಶೇಷತೆಗಳು

ಇದೇ ಮಾದರಿಯಲ್ಲಿ ಅಮೆಜಾನ್ ನಲ್ಲಿ ಮಾತ್ರವೇ ಲಭ್ಯವಿದ್ಧ ನೋಕಿಯಾದ ಮತ್ತೊಂದು ಸ್ಮಾರ್ಟ್ ಫೋನ್ ನೋಕಿಯಾ 6, ಆಗಸ್ಟ್ ನಿಂದಲೇ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದೆ. ನೋಕಿಯಾ 6 ರೂ. 14,999ಕ್ಕೆ ದೊರೆಯುತ್ತಿತ್ತು. ಸದ್ಯ ಈ ಫೋನ್ ಅನ್ನು ನೋಕಿಯಾ ಆಫ್ ಲೈನ್ ಮಾರುಕಟ್ಟೆಗೂ ಪರಿಚಯಿಸಿದೆ.

ಅಮೆಜಾನ್ ಮತ್ತು ಆಫ್ ಲೈನ್ ಮಾರುಕಟ್ಟೆ ಎರಡರಲ್ಲೂ ನೋಕಿಯಾ 6 ಸ್ಮಾರ್ಟ್ ಫೋನ್ ದೊರೆಯಲಿದೆ ಎನ್ನಲಾಗಿದೆ. ಇದರಿಂದಾಗಿ ನೋಕಿಯಾ ಭಾರತದಲ್ಲಿ ಲಾಂಚ್ ಮಾಡಿರುವ ಎಲ್ಲಾ ಸ್ಮಾರ್ಟ್ ಫೋನ್ ಗಳು ಆಫ್ ಲೈನ್ ಮತ್ತು ಆನ್ ಲೈನ್ ನಲ್ಲಿ ದೊರೆಯಲಿದೆ ಎನ್ನಲಾಗಿದೆ.

<strong>ನಷ್ಟದ ಹಾದಿಯಲ್ಲಿ ಏರ್‌ಟೆಲ್-ವೊಡಾ: ಜಿಯೋ ಸೆಪ್ಟೆಂಬರ್ ತಿಂಗಳ ಆದಾಯ ಎಷ್ಟು ಗೊತ್ತಾ..?</strong>ನಷ್ಟದ ಹಾದಿಯಲ್ಲಿ ಏರ್‌ಟೆಲ್-ವೊಡಾ: ಜಿಯೋ ಸೆಪ್ಟೆಂಬರ್ ತಿಂಗಳ ಆದಾಯ ಎಷ್ಟು ಗೊತ್ತಾ..?

ಮತ್ತೆ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿರುವ ನೋಕಿಯಾವನ್ನು HMD ಕಂಪನಿಯೂ ನಡೆಸುತ್ತಿದೆ ಎನ್ನಲಾಗಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಮಧ್ಯಮ ಸರಣಿಯ ಫೋನ್ ಗಳನ್ನು ಮಾತ್ರವೇ ಬಿಡುಗಡೆ ಮಾಡಿರುವ ನೋಕಿಯಾ ಕೊಂಚ ಪ್ರಮಾಣದ ಯಶಸ್ಸನ್ನು ಸಹ ಕಂಡಿದೆ. ಈ ಹಿನ್ನಲೆಯಲ್ಲಿ ಮುಂದಿನ ದಿನಗಳಲ್ಲಿ ಎರಡು ಮಾರುಕಟ್ಟೆಯಲ್ಲಿಯೂ ನೋಕಿಯಾ ರಾರಾಜಿಸಲಿದೆ ಎನ್ನಲಾಗಿದೆ.

ನೋಕಿಯಾ 6 ಸ್ಮಾರ್ಟ್ ಫೋನ್ 5.5 ಇಂಚಿನ FHD ಡಿಸ್ ಪ್ಲೇಯನ್ನು ಹೊಂದಿದ್ದು, ಸ್ನಾಪ್ ಡ್ರಾಗನ್ 430 ಪ್ರೋಸೆಸರ್ ಹಾಗೂ 3GB RAM ಜೊತೆಗೆ 32GB ಇಂಟರ್ನಲ್ ಮೆಮೊರಿಯನ್ನು ಒಳಗೊಂಡಿದೆ. ಅಲ್ಲದೇ 128GB ವರೆಗೂ ಮೆಮೊರಿಯನ್ನು ವಿಸ್ತರಿಸಿಕೊಳ್ಳುವ ಅವಕಾಶವನ್ನು ಹೊಂದಿದೆ. ಅಲ್ಲದೇ 16MP ಹಿಂಭಾಗದ ಕ್ಯಾಮೆರಾವನ್ನು, ಮುಂಭಾಗದಲ್ಲಿ 8MP ಕ್ಯಾಮೆರಾವನ್ನು ಈ ಫೋನಿನಲ್ಲಿ ಅಳವಡಿಸಲಾಗಿದೆ.

Best Mobiles in India

Read more about:
English summary
Nokia 6 that was an Amazon India exclusive is now available via the offline stores in the country for the same price of Rs. 14,999.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X