Subscribe to Gizbot

ನೋಕಿಯಾ ಸ್ಮಾರ್ಟ್ ಫೋನ್ ಖರೀದಿಸುವ ಮುನ್ನವೇ ಮತ್ತೋಂದು ಸಂತಸದ ಸುದ್ದಿ...!!!!

Posted By: Precilla Dias

ನೋಕಿಯಾ ಮತ್ತೇ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ವರಸೆಯನ್ನು ತೋರಿಸಲು ಶುರು ಮಾಡಿದ್ದು, ಈಗಾಗಲೇ ಮೂರು ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳನ್ನು ಲಾಂಚ್ ಮಾಡಿದೆ. ಅದರಲ್ಲಿ ನೋಕಿಯಾ 6 ಸ್ಮಾರ್ಟ್ ಫೋನನ್ನು ಆನ್ ಲೈನಿನಲ್ಲಿ, ನೋಕಿಯಾ 3 ಮತ್ತು 5 ಸ್ಮಾರ್ಟ್ ಫೋನ್ ಗಳನ್ನು ಆಫ್ ಲೈನ್ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುವುದಾಗಿ ತಿಳಿದೆ.

ನೋಕಿಯಾ ಸ್ಮಾರ್ಟ್ ಫೋನ್ ಖರೀದಿಸುವ ಮುನ್ನವೇ ಮತ್ತೋಂದು ಸಂತಸದ ಸುದ್ದಿ...!!!!

ಇದೇ ಸಂದರ್ಭದಲ್ಲಿ ನೋಕಿಯಾ ಸ್ಮಾರ್ಟ್ ಫೋನ್ ಗಳನ್ನು ಮಾರಾಟ ಮಾಡುವ ಹಕ್ಕನ್ನು ಖರೀದಿಸಿರುವ HMD ಗ್ಲೋಬಲ್ ಸಂಸ್ಥೆಯೂ ನೋಕಿಯಾ ಆಂಡ್ರಾಯ್ಡ್ ಫೋನುಗಳಿಗೆ ಆಂಡ್ರಾಯ್ಡ್ 'O’ ಮತ್ತು ಆಂಡ್ರಾಯ್ಡ್ 'P’ ಆಪ್ ಡೇಟ್ ಗಳನ್ನು ಮುಂದಿನ ಎರಡು ವರ್ಷದಲ್ಲಿ ನೀಡುವುದಾಗಿ ತಿಳಿಸಿದೆ.

ಈಗ ಲಭ್ಯವಿರುವ ನೋಕಿಯಾ ಸ್ಮಾರ್ಟ್ ಫೋನ್ ಗಳು ಆಂಡ್ರಾಯ್ಡ್ ನ್ಯಾಗ ದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಮುಂದಿನ ಅಪ್ ಡೇಟ್ ಬಿಡುಗಡೆಯಾದ ಸಂದರ್ಭದಲ್ಲಿ ತನ್ನ ಫೋನುಗಳಿಗೂ ಹೊಸ ಆಂಡ್ರಾಯ್ಡ್ ಓದಗಿಸುವ ಆಶ್ವಾಸನೆಯನ್ನು ನೀಡಿದೆ.

2017ರ ಕೊನೆಗೆ ಆಂಡ್ರಾಯ್ಡ್ O ಲಭ್ಯವಿರಲಿದ್ದು, ಇದೇ ಸಂದರ್ಭದಲ್ಲಿ ನೋಕಿಯಾ ಫೋನ್ ಗಳು ಆಂಡ್ರಾಯ್ಡ್ ನೂತನ ಆವೃತ್ತಿಗೆ ಆಪ್ ಡೇಟ್ ಆಗಲಿವೆ. ಇದಲ್ಲದೇ ಆಂಡ್ರಾಯ್ಡ್ O ಈಗಾಗಲೇ ಪರೀಕ್ಷಾ ಹಂತದಲ್ಲಿದ್ದು, ಆಂಡ್ರಾಯ್ಡ್ P ಮುಂದಿನ ವರ್ಷದಲ್ಲಿ ಬಳಕೆಗೆ ಲಭ್ಯವಿರಲಿದೆ.

ನೋಕಿಯಾ ಇದೇ ಮೊದಲ ಬಾರಿ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳನ್ನು ಲಾಂಚ್ ಮಾಡಿದ್ದು, ಅದಕ್ಕಾಗಿ ಗ್ರಾಹಕರಿಗೆ ಬೆಸ್ಟ್ ಸೇವೆಯನ್ನು ನೀಡುವ ಮನಸ್ಸು ಮಾಡಿದೆ ಎನ್ನಲಾಗಿದೆ.

Read more about:
English summary
HMD Global has confirmed that the Nokia 6, Nokia 5 and Nokia 3 Android smartphones will receive Android O and Android P updates.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot