ಇತ್ತೀಚಿನ ಹೊಸ ನೋಕಿಯಾ ಸ್ಮಾರ್ಟ್‌ಫೋನ್‌ಗಳ ಬೆಲೆ ಇಳಿಕೆ!

|

ಎವರ್‌ಗ್ರೀನ್ ಮೊಬೈಲ್ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ನೋಕಿಯಾ ಇತ್ತೀಚಿಗೆ ಆಂಡ್ರಾಯ್ಡ್‌ ಆವೃತ್ತಿಯ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಗ್ರಾಹಕರಿಂದ ಸೈ ಅನಿಸಿಕೊಂಡಿದೆ. ಇಂದಿನ ನೋಕಿಯಾ ಸ್ಮಾರ್ಟ್‌ಫೋನ್‌ಗಳಿಗೂ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆಯಿದ್ದು, ಇತ್ತೀಚಿನ ಕೆಲವು ಸ್ಮಾರ್ಟ್‌ಫೋನ್‌ಗಳು ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿವೆ. ಆ ಪೈಕಿ ಇದೀಗ ನೋಕಿಯಾದ ಮೂರು ಸ್ಮಾರ್ಟ್‌ಫೋನ್‌ಗಳಿಗ ಭರ್ಜರಿ ಬೆಲೆ ಇಳಿಕೆ ಕಂಡಿವೆ.

ನೋಕಿಯಾ 4.2

ಹೌದು, ಜನಪ್ರಿಯ ನೋಕಿಯಾ ಸಂಸ್ಥೆಯ ನೋಕಿಯಾ 7.1, ನೋಕಿಯಾ 6.2 ಮತ್ತು ನೋಕಿಯಾ 4.2 ಸ್ಮಾರ್ಟ್‌ಫೋನ್‌ಗಳು ಇದೀಗ ದೊಡ್ಡ ಮೊತ್ತದಲ್ಲಿ ದರ ಕಡಿತ ಕಂಡಿವೆ. ಇನ್ನು ಈ ಸ್ಮಾರ್ಟ್‌ಫೋನ್‌ಗಳು ಅತ್ಯುತ್ತಮ ಕ್ಯಾಮೆರಾ, ಪ್ರೊಸೆಸರ್, ಬ್ಯಾಟರಿ ಮತ್ತು ಆಂಡ್ರಾಯ್ಡ್‌ ಓಎಸ್‌ ಫೀಚರ್ಸ್‌ಗಳಿಂದ ಹೆಚ್ಚು ಆಕರ್ಷಣಿಯವಾಗಿ ಗುರುತಿಸಿಕೊಂಡಿವೆ. ಇನ್ನು ನೋಕಿಯಾದ ಈ ಮೂರು ಸ್ಮಾರ್ಟ್‌ಫೋನ್‌ಗಳ ಫೀಚರ್ಸ್‌ಗಳೆನು ಮತ್ತು ಡಿಸ್ಕೌಂಟ್ ಬೆಲೆ ಎಷ್ಟು ಎಂಬುದನ್ನು ತಿಳಿಯಲು ಸ್ಕ್ರಾಲ್ ಮಾಡಿ.

ನೋಕಿಯಾ 4.2

ನೋಕಿಯಾ 4.2

ನೋಕಿಯಾ 4.2 ಸ್ಮಾರ್ಟ್‌ಫೋನ್ ಬೆಲೆಯು 10,990ರೂ.ಗಳಾಗಿದ್ದು, ಇದೀಗ ಬೆಲೆ ಇಳಿಕೆ ಕಂಡು ಕೇವಲ 6,975ರೂ.ಗಳಿಗೆ ದೊರೆಯಲಿದೆ. ಅಂದಹಾಗೇ ಈ ಸ್ಮಾರ್ಟ್‌ಫೋನ್ ಕ್ವಲಾ್ಕಮ್ ಸ್ನ್ಯಾಪ್‌ಡ್ರಾಗನ್ 439 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 9 ಪೈ ಓಎಸ್‌ ಸಾಮರ್ಥ್ಯವನ್ನು ಒಳಗೊಂಡಿದೆ. ಹಾಗೆಯೇ 3GB RAM ಮತ್ತು 32GB ಸ್ಟೋರೇಜ್ ಸಂಗ್ರಹ ಸ್ಥಳಾವಕಾಶವನ್ನು ಪಡೆದಿದೆ. ವಾಟರ್‌ಡ್ರಾಪ್ ನಾಚ್ ಡಿಸ್‌ಪ್ಲೇ ಮಾದರಿಯನ್ನು ಹೊಂದಿದೆ.

ನೋಕಿಯಾ 6.2

ನೋಕಿಯಾ 6.2

ನೋಕಿಯಾ 6.2 ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ತ್ರಿವಳಿ ಕ್ಯಾಮೆರಾ ಸೆಟ್‌ಅಪ್ ಪಡೆದಿದ್ದು, 16ಎಂಪಿ ಸೆನ್ಸಾರ್‌ ಹೊಂದಿದೆ. 120 ಡಿಗ್ರಿ ವೈಲ್ಡ್‌ ಆಂಗಲ್ ಲೆನ್ಸ್‌ ಒಳಗೊಂಡಿದೆ. 6.3 ಇಂಚಿನ ಪ್ಯೂರ್‌ ಡಿಸ್‌ಪ್ಲೇ ಸ್ಕ್ರೀನ್‌ ಜೊತೆಗೆ HDR10+ ಸಪೋರ್ಟ್‌ ಸಹ ಪಡೆದುಕೊಂಡಿದೆ. ಇನ್ನು ಈ ಫೋನ್ ಬೆಲೆಯು 17,699ರೂ.ಗಳಾಗಿದ್ದು, ಆದರೆ ದರ ಇಳಿಕೆಯಿಂದಾಗಿ 13,440ರೂ.ಗಳಿಗೆ ಸಿಗಲಿದೆ.

ನೋಕಿಯಾ 7.2

ನೋಕಿಯಾ 7.2

ಆರಂಭದಲ್ಲಿ 19,999ರೂ.ಗಳಿಗೆ ಲಾಂಚ್ ಆಗಿದ್ದ ನೋಕಿಯಾ 7.1 ಸ್ಮಾರ್ಟ್‌ಫೋನ್ ಈಗ ಬೆಲೆ ಇಳಿಕೆಯಿಂದಾಗಿ ಕೇವಲ 11,274ರೂ.ಗಳಿಗೆ ಸಿಗಲಿದೆ. ಇನ್ನು ಈ ಫೋನ್ 4GB RAM ಮತ್ತು 64GB ಆಂತರಿಕ ಸ್ಟೋರೇಜ್ ಒಳಗೊಂಡಿದ್ದು, ಹಾಗೆಯೇ ಡ್ಯುಯಲ್‌ ಕ್ಯಾಮೆರಾ ಸೆಟ್‌ಅಪ್‌ ಪಡೆದಿದೆ ಅವು ಕ್ರಮವಾಗಿ 12+5ಎಂಪಿ ಸೆನ್ಸಾರ್‌ನಲ್ಲಿವೆ. ಸ್ನ್ಯಾಪ್‌ಡ್ರಾಗನ್ 636 ಪ್ರೊಸೆಸರ್ ಈ ಫೋನ್ ಹೊಂದಿದ್ದು, 3,060mAh ಬ್ಯಾಟರಿ ಬಾಳಿಕೆ ಪಡೆದಿದೆ.

Most Read Articles
Best Mobiles in India

English summary
Nokia is offering some pretty clean deals on most smartphones in their line-up. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X