Subscribe to Gizbot

13MP ಸೆಲ್ಫೀ ಕ್ಯಾಮೆರಾದೊಂದಿಗೆ ಬರಲಿದೆ ನೋಕಿಯಾ 8!

By: Tejaswini P G

ಈಗಾಗಲೇ ಬಹಳಷ್ಟು ಹವಾ ಸೃಷ್ಟಿಸಿರುವ ಹೆಚ್ ಎಮ್ ಡಿ ಗ್ಲೋಬಲ್ ನ ಹೊಸ ಫ್ಲ್ಯಾಗ್ಶಿಪ್ ಸ್ಮಾರ್ಟ್ಫೋನ್ ನೋಕಿಯಾ 8 ಆಗಸ್ಟ್ 16ರಂದು ಬಿಡುಗಡೆಗೆ ಸಜ್ಜಾಗಿ ನಿಂತಿದೆ.ಇದರ ಲಾಂಚ್ ಗೆ ಇನ್ನೂ ಒಂದು ವಾರದ ಸಮಯವಿದ್ದರೂ ಇದರ ಬೆಲೆ ಮತ್ತು ಫೀಚರ್ಗಳ ಕುರಿತು ಸಾಕಷ್ಟು ವಿಷಯಗಳು ಈಗಾಗಲೇ ಆನ್ಲೈನ್ ನಲ್ಲಿ ಸೋರಿಕೆಯಾಗಿದೆ.

13MP ಸೆಲ್ಫೀ ಕ್ಯಾಮೆರಾದೊಂದಿಗೆ ಬರಲಿದೆ ನೋಕಿಯಾ 8!

ನೋಕಿಯಾ 8 ಡ್ಯುಯಲ್ ಲೆನ್ಸ್ ಪ್ರೈಮರಿ ಕ್ಯಾಮೆರಾ ಹೊಂದಿರಲಿದ್ದು ಕಾರ್ಲ್ ಝೈಸ್ ಎಂಬ ಪ್ರಸಿದ್ಧ ಬ್ರ್ಯಾಂಡ್ ನ ಲೆನ್ಸ್ ಉಪಯೋಗಿಸಲಿದೆ ಎಂದು ತುಂಬಾ ಮಂದಿಗೆ ಈಗಾಗಲೇ ತಿಳಿದಿದೆ.ಆದರೆ ಅದರ ರೆಸೊಲ್ಯೂಶನ್ ಕುರಿತಾಗಿ ಸ್ಪಷ್ಟ ಮಾಹಿತಿ ಇರಲಿಲ್ಲ.

ಈಗ ಫೋನ್ ಎರೇನಾ ಸೈಟ್ನಲ್ಲಿ ಲಭ್ಯವಿರುವ ಮಾಹಿತಿ ಅನುಸಾರ ನೋಕಿಯಾ 8 ನ ಕ್ಯಾಮೆರಾ ರೆಸೊಲ್ಯುಶನ್ 13MP ಇರಲಿದೆ. ಚೀನಾದ ವೆಬ್ಸೈಟ್ ವಿಟೆಕ್ಗ್ರಫಿಯಲ್ಲೂ ಈ ಕುರಿತು ಮಾಹಿತಿ ಇದೆಯಂತೆ.ಈ ವರದಿಗಳ ಅನ್ವಯ ನೋಕಿಯಾ 8 ರಲ್ಲಿ 2 13MP ಪ್ರೈಮರಿ ಕ್ಯಾಮೆರಾ ಸೆನ್ಸರ್ಗಳು ಮತ್ತು ಒಂದು 13MP ಸೆಲ್ಫೀ ಕ್ಯಾಮೆರಾ ಕೂಡ ಇರಲಿದೆ!!

ನಿಮ್ಮ ಫೋನಿನಲ್ಲಿ ಈ ಆಪ್ ಇದ್ದರೇ ಮೊದಲು ತೆಗೆದು ಬಿಡಿ..!!

ನೋಕಿಯಾ 8ರ ಡ್ಯುಯಲ್ ರೇರ್/ಪ್ರೈಮರಿ ಕ್ಯಾಮೆರಾ ದ ವಿಶೇಷತೆಯೇನೆಂದರೆ ಇದರ 2 13MP ಸೆನ್ಸರ್ ಗಳಲ್ಲಿ ಒಂದು RGB ಸೆನ್ಸರ್ ಆಗಿದ್ದು ಮತ್ತೊಂದು ಮೊನೋಕ್ರೋಮ್ಯಾಟಿಕ್ ಸೆನ್ಸರ್ ಆಗಿರಲಿದೆ. ಇದರ ಇತರ ಫೀಚರ್ಗಳ ಕುರಿತು ಹೇಳುವುದಾದರೆ ,ಈ ಸ್ಮಾರ್ಟ್ಫೋನ್ ಕ್ವಾಲ್ಕಮ್ ಸ್ನ್ಯಾಪ್ಡ್ರ್ಯಾಗನ್ 835 SoC ಹೊಂದಿರಲಿದ್ದು 4GB RAM ಮತ್ತು 64GB ಮೆಮೋರಿಯಂದಿಗೆ ಬರಲಿದೆ.ಅಲ್ಲದೆ ನೋಕಿಯಾ 8 5.3 ಇಂಚ್ ಕಾರ್ಲ್ ಝೈಸ್ ಬ್ರ್ಯಾಂಡ್ ನ ಡಿಸ್ಪ್ಲೇ ಪ್ಯಾನಲ್ ಹೊಂದಿರಲಿದೆ.

ನೋಕಿಯಾ 8 13MP ಯ ಶ್ರೇಷ್ಠ ಗುಣಮಟ್ಟದ ಸೆಲ್ಫೀ ಕ್ಯಾಮೆರಾ ಹೊಂದಿದ್ದು 4K ವೀಡಿಯೋ ಜೊತೆಗೆ ಉತ್ತಮ ಸೆಲ್ಫೀಗಳನ್ನು ಸೆರೆಹಿಡಿಯುವ ಸಾಮರ್ಥ್ಯವನ್ನೂ ಪಡೆದಿದೆ.

ನೋಕಿಯಾ 8 ಆಂಡ್ರಾಯ್ಡ್ ಓ ಜೊತಗೆ ಬರುವ ಸಾಧ್ಯತೆ ಕಡಿಮೆಯಾದರೂ, ಆಂಡ್ರಾಯಡ್ ಓ ಬಳಸಿ ನೋಕಿಯಾ 8 ರನ್ ಆಗುವುದನ್ನು ಕಂಡವರಿದ್ದಾರೆ. ಹೆಚ್ ಎಮ್ ಡಿ ಗ್ಲೋಬಲ್ ಈ ಕರಿತು ಕೆಲವು ಟೆಸ್ಟ್ಗಳನ್ನು ನಡೆಸುತ್ತಿದೆ ಎಂಬ ವದಂತಿಗಳಿಗೆ ಈ ಸುದ್ದಿ ಆಧಾರವಾಗಿದೆ.

ಇತ್ತೀಚೆಗೆ ನೋಕಿಯಾ 8 ರ ಬೆಲೆ ಕುರಿತು ಹಲವು ಮಾಹಿತಿಗಳು ಸುದ್ದಿ ಜಾಲದಲ್ಲಿ ಕಂಡುಬಂದಿದ್ದು, ಇದರ ಬೆಲೆ ರೂ 40,000ಕ್ಕಿಂತ ಕಡಿಮೆ ಇರಲಿದೆ ಎಂದು ಹೇಳಲಾಗುತ್ತಿದೆ.

ಈ ಮಾಹಿತಿ ನಿಜವಾದರೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಫ್ಲ್ಯಾಗ್ಶಿಪ್ ಸ್ಮಾರ್ಟ್ಫೋನ್ಗಳ ಪೈಕಿಯಲ್ಲಿ ನೋಕಿಯಾ 8 ಎಲ್ಲರಿಗೂ ಕೈಗೆಟಕುವ ಶ್ರೇಣಿಯಲ್ಲಿರಲಿದೆ.ಈ ಕುರಿತು ಹೆಚ್ ಎಮ್ ಡಿ ಗ್ಲೋಬಲ್ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲವಾದ್ದರಿಂದ ಈ ವದಂತಿಗಳ ಸತ್ಯಾಸತ್ಯತೆ ಬಗ್ಗೆ ಏನೂ ಹೇಳಲಾಗದು. ಇನ್ನೇನು ನೋಕಿಯಾ 8 ಸಧ್ಯದಲ್ಲೇ ಲಾಂಚ್ ಆಗಲಿದೆ..ಕಾದು ನೋಡೋಣ.

Read more about:
English summary
Nokia 8 slated to be launched on August 16 might arrive with a 13MP selfie camera on board, claims a recent report.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot