Subscribe to Gizbot

ದೀಪಾವಳಿಗೆ ನೋಕಿಯಾ ಧಮಾಕ: ಬರಲಿದೆ ನೋಕಿಯಾ 8 ಸ್ಮಾರ್ಟ್ ಫೋನ್.!

Written By: Lekhaka

ನೋಕಿಯಾ 8 ಸ್ಮಾರ್ಟ್ ಫೋನ್ ಈಗಾಗಲೇ ವಿಶ್ವ ಮಾರುಕಟ್ಟೆಯಲ್ಲಿ ಲಾಂಚ್ ಆದ್ದು, ಈ ಸ್ಮಾರ್ಟ್ ಫೋನ್ ಅನ್ನು ಶೀಘ್ರವೇ ಭಾರತೀಯ ಮಾರುಕಟ್ಟೆಯಲ್ಲಿಯೂ ಬಿಡುಗಡೆ ಮಾಡಲು ಮುಂದಾಗಿರುವ ವಿಚಾರ ಲಭ್ಯವಾಗಿದೆ. ಮೂಲಗಳ ಪ್ರಕಾರ ದೀಪಾವಳಿ ಸಮಯಕ್ಕೆ ಈ ಫೋನ್ ಮಾರುಕಟ್ಟೆಗೆ ಲಗ್ಗೆ ಇಡಲಿದೆ.

ದೀಪಾವಳಿಗೆ ನೋಕಿಯಾ ಧಮಾಕ: ಬರಲಿದೆ ನೋಕಿಯಾ 8 ಸ್ಮಾರ್ಟ್ ಫೋನ್.!

ನಾಲ್ಕು ಬಣ್ಣದಲ್ಲಿ ಈ ಸ್ಮಾರ್ಟ್ ಪೋನ್ ಲಭ್ಯವಿರಲಿದ್ದು, ಕಾಪರ್, ಬ್ಲೂ, ಟೆಂಪರ್ ಬ್ಲೂ ಮತ್ತು ಸ್ಟಿಲ್ ಬಣ್ಣದಲ್ಲಿ ದೊರೆಯಲಿದೆ. ಬೆಲೆ ಸಹ ಸುಮಾರು ರೂ.45,000ದ ಅಸುಪಾಸಿನಲ್ಲಿರಲಿದೆ ಎನ್ನಲಾಗಿದೆ. ಸೆಪ್ಟೆಂಬರ್ ನಲ್ಲಿ ಈ ಫೋನ್ ವಿಶ್ವ ಮಾರುಕಟ್ಟೆಯಲ್ಲಿ ಲಭ್ಯವಾಗಲಿದ್ದು, ಅಕ್ಟೋಬರ್ ವೇಳೆಗೆ ಭಾರತದಲ್ಲಿಯೂ ಲಭ್ಯವಿರಲಿದೆ.

ಯೂನಿ ಬಾಡಿ ಡಿಸೈನ್ ಹೊಂದಿರುವ ಈ ಫೋನ್ 6000 ಸರಣಿಯ ಅಲ್ಯೂಮಿನಿಯಮ್ ನಲ್ಲಿ ಮಾಡಲಾಗಿದೆ. HDM ಗ್ಲೊಬಲ್ ಸಂಸ್ಥೆಯೂ ಮಾರಾಟ ಮಾಡಲಿರುವ ಈ ಸ್ಮಾರ್ಟ್ ಫೋನ್ 5.3 ಇಂಚಿನ ಡಿಸ್ ಪ್ಲೇಯನ್ನು ಹೊಂದಿದ್ದು, QHD ಗುಣಮಟ್ಟದಿಂದ ಕೂಡಿದೆ. ಹಿಂಭಾಗದಲ್ಲಿ 13MP ಡ್ಯುಯಲ್ ಲೆನ್ಸ್ ಕ್ಯಾಮೆರಾವನ್ನು ಇದರಲ್ಲಿ ಕಾಣಬಹುದಾಗಿದೆ. ಮುಂಭಾಗದಲ್ಲಿ 13MP ಕ್ಯಾಮೆರಾ ಇದೆ.

ಎಲ್‌ಜಿ ಪ್ರೇಮಿಗಳಿಗಾಗಿ ಕಂಪೆನಿಯಿಂದ ಇನ್ನೊಂದು ಡಿವೈಸ್ ಎಲ್‌ಜಿ ವಿ30

ಕ್ವಾಲ್ಕಮ್ ಸ್ನಾಪ್ ಡ್ರಾಗನ್ 835 ಪ್ರೋಸೆಸರ್ ಜೊತೆಗೆ 4GB RAM ಮತ್ತು 64 GB ಇಂಟರ್ನಲ್ ಮೆಮೊರಿಯನ್ನು ಹೊಂದಿದೆ. ಅಲ್ಲದೇ ಮೆಮೊರಿ ಕಾರ್ಡ್ ಹಾಕಿಕೊಳ್ಳುವ ಮೂಲಕ 256 GB ವರೆಗೂ ಮೆಮೊರಿಯನ್ನು ವಿಸ್ತರಿಸಿಕೊಳ್ಳಬಹುದಾಗಿದೆ.

ಸ್ಟಾಕ್ ಆಂಡ್ರಾಯ್ಡ್ 7.1.1ನಲ್ಲಿ ಕಾರ್ಯನಿರ್ವಹಿಸುವ ನೋಕಿಯಾ 8 4G LTE ಸಫೋರ್ಟ್ ಮಾಡಲಿದೆ. 3090mAh ಬ್ಯಾಟರಿಯನ್ನು ಇದರಲ್ಲಿ ನೀಡಲಾಗಿದೆ. ಅಲ್ಲದೇ ವೇಗದ ಚಾರ್ಜಿಂಗ್ ಗಾಗಿ ಕ್ವೀಕ್ ಚಾರ್ಜರ್ 3.0 ಸಹ ಇದರಲ್ಲಿದೆ.

Read more about:
English summary
Nokia 8, the flagship smartphone from HMD Global is believed to be released in India sometime during Diwali.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot