MWC 2018ರಲ್ಲಿ ಅನಾವರಣಗೊಳ್ಳಲಿದೆ ನೋಕಿಯಾ 9, ನೋಕಿಯಾ 2 ಮತ್ತು ನೋಕಿಯಾ 7

HMD ಗ್ಲೋಬಲ್ ಸಂಸ್ಥೆಯ ನೂತನ ಸ್ಮಾರ್ಟ್ಫೋನ್ಗಳಾದ ನೋಕಿಯಾ 2, ನೋಕಿಯಾ 9 ಮತ್ತು ನೋಕಿಯಾ 7 2018ರ ವರ್ಷಾರಂಭದಲ್ಲಿ ಬಿಡುಗಡೆಯಾಗಲಿದೆ.

By Tejaswini P G
|

HMD ಗ್ಲೋಬಲ್ ಸಂಸ್ಥೆಯು ಈ ವರ್ಷದಲ್ಲಿ ಈಗಾಗಲೇ ನೋಕಿಯಾ 8, ನೋಕಿಯಾ 6, ನೋಕಿಯಾ 5 ಮತ್ತು ನೋಕಿಯಾ 3 ಎಂಬ ನಾಲ್ಕು ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡಿದೆ. ಅಲ್ಲದೆ HMD ಗ್ಲೋಬಲ್ ಸಂಸ್ಥೆಯು ಇನ್ನೂ ಮೂರು ಹೊಸ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡುವ ತಯಾರಿಯಲ್ಲಿದೆ ಎನ್ನುತ್ತದೆ ಕೆಲವು ವದಂತಿಗಳು.

MWC 2018ರಲ್ಲಿ ಅನಾವರಣಗೊಳ್ಳಲಿದೆ ನೋಕಿಯಾ 9, ನೋಕಿಯಾ 2 ಮತ್ತು ನೋಕಿಯಾ 7

ನೋಕಿಯಾ 2, ನೋಕಿಯಾ 7 ಮತ್ತು ನೋಕಿಯಾ 9 HMD ಗ್ಲೋಬಲ್ ಸಂಸ್ಥೆಯು ಬಿಡುಗಡೆ ಮಾಡಲಿರುವ ನೂತನ ಸ್ಮಾರ್ಟ್ಫೋನ್ಗಳು. ನೋಕಿಯಾ 2 ಈ ನವಂಬರ್ ನಲ್ಲೇ ಬಿಡುಗಡೆಯಾಗಲಿದೆ ಎಂಬ ವರದಿಗಳು ಕೇಳಿಬಂದಿತ್ತು. ಆದರೆ ಇತ್ತೀಚೆಗೆ ಬರುತ್ತಿರುವ ಮಾಹಿತಿಯ ಪ್ರಕಾರ ಈ ಸುದ್ದಿ ಸುಳ್ಳಾಗಲಿದೆ.

Nokiamob ನ ಮೂಲಕ Gadget Philipinas ಪ್ರಕಟಿಸಿರುವ ವರದಿಯ ಅನುಸಾರ ನೋಕಿಯಾ 2 ಮತ್ತು ನೋಕಿಯಾ 9 2018 ವರ್ಷಾರಂಭದಲ್ಲಿ ನಡೆಯಲಿರುವ ಮೊಬೈಲ್ ವರ್ಲ್ಡ್ ಕಾಂಗ್ರೆಸ್ (MWC -2018) ಟೆಕ್ ಶೋ ನಲ್ಲಿ ಅನಾವರಣಗೊಳ್ಳಲಿದೆ.

ನೋಕಿಯಾ 2 ಒಂದು ಆರಂಭಿಕ ಶ್ರೇಣಿಯ ಸ್ಮಾರ್ಟ್ಫೋನ್ ಆಗಿದ್ದರೆ ನೋಕಿಯಾ 9 ನೋಕಿಯಾದ ಫ್ಲ್ಯಾಗ್ಶಿಪ್ ಮೊಬೈಲ್ ಆಗಿದ್ದು ಹೈ-ಎಂಡ್ ಮತ್ತು ಪ್ರೀಮಿಯಂ ಫೀಚರ್ಗಳನ್ನು ಇದು ಹೊಂದಿರಲಿದೆ. ಈ ಎರಡು ಸ್ಮಾರ್ಟ್ಫೋನ್ಗಳ ವಿವರಗಳು ಈಗಾಗಲೇ ಹಲವಾರು ವರದಿಗಳಲ್ಲಿ ಸೋರಿಕೆಯಾಗಿದೆ. ಈ ಎರಡು ಫೋನ್ಗಳ ಜೊತಜೊತೆಗೆ HMD ಗ್ಲೋಬಲ್ ನೋಕಿಯಾ 7 ಎಂಬ ಮಧ್ಯಮ ಶ್ರೇಣಿಯ ಸ್ಮಾರ್ಟ್ಫೋನ್ ನ ತಯಾರಿಕೆಯಲ್ಲಿ ತೊಡಗಿದೆ ಎಂಬ ವರದಿಗಳು ಕೇಳಿ ಬರುತ್ತಿವೆ.

MWC 2018ರಲ್ಲಿ ಅನಾವರಣಗೊಳ್ಳಲಿದೆ ನೋಕಿಯಾ 9, ನೋಕಿಯಾ 2 ಮತ್ತು ನೋಕಿಯಾ 7

ಈಗ HMD ಗ್ಲೋಬಲ್ ಸಂಸ್ಥೆಯ ಲಾಜಿಸ್ಟಿಕ್ಸ್ ಅನ್ನು ನೋಡಿಕೊಳ್ಳುವ BPO ಒಂದರ ಉದ್ಯೋಗಿಯೆಂದು ಹೇಳಿಕೊಳ್ಳುತ್ತಿರುವ ವ್ಯಕ್ತಿಯೋರ್ವ ಈ ಹೊಸ ನೋಕಿಯಾ ಫೋನ್ಗಳು ಯಾವುದೂ ಈ ವರ್ಷ ಬಿಡುಗಡೆಯಾಗುವುದಿಲ್ಲ ಎಂದು ಹೇಳುತ್ತಿದ್ದಾರೆ. ನೋಕಿಯಾ 2, ನೋಕಿಯಾ 9 ಮತ್ತು ನೋಕಿಯಾ 7 ಸ್ಮಾರ್ಟ್ಫೋನ್ಗಳು 2018ರ ವರ್ಷಾರಂಭದಲ್ಲಿ ಲಾಂಚ್ ಆಗಲಿದೆ ಎಂದು ಅವರು ಹೇಳಿದ್ದಾರೆ.

ಅವರು ಈ ಮಾಹಿತಿಯನ್ನು ಫೇಸ್ಬುಕ್ ನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ HMD ಗ್ಲೋಬಲ್ ಜೊತೆಗಿನ ತನ್ನ ಸಂಬಂಧವನ್ನು ಸಾಬೀತುಮಾಡಲು ಸಂಸ್ಥೆಯ ಟ್ಯಾಗ್ ನ ಫೋಟೋ ಒಂದನ್ನು ಕೂಡ ಇವರು ಶೇರ್ ಮಾಡಿದ್ದಾರೆ.

ಎರಡು ತಿಂಗಳ ಹಿಂದಷ್ಟೇ HMD ಗ್ಲೋಬಲ್ ಸಂಸ್ಥೆಯು ತನ್ನ ಫ್ಲ್ಯಾಗ್ಶಿಪ್ ಮೊಬೈಲ್ ಆದ ನೋಕಿಯಾ 8 ಅನ್ನು ಬಿಡುಗಡೆ ಮಾಡಿತ್ತಾದರೂ ಇನ್ನೂ ಜಾಗತಿಕ ಮಾರುಕಟ್ಟೆಯಲ್ಲಿ ಹಲವಾರು ಕಡೆ ಇದು ಬಿಡುಗಡೆಯಾಗಿಲ್ಲ. ಹೀಗಿರುವಾಗ ಈ ವರ್ಷಾಂತ್ಯದೊಳಗೆ ನೋಕಿಯಾ 9 ಎಂಬ ಇನ್ನೊಂದು ಫ್ಲ್ಯಾಗ್ಶಿಪ್ ಮೊಬೈಲ್ ಅನ್ನು ಲಾಂಚ್ ಮಾಡಿದರೆ ನೋಕಿಯಾ 8 ರ ಮಾರಾಟಕ್ಕೆ ತೊಂದರೆಯಾಗಲಿದೆ. ಈ ಕಾರಣದಿಂದಾಗಿ ನೋಕಿಯಾ 9 ಶೀಘ್ರದಲ್ಲಿ ಬಿಡುಗಡೆಯಾಗುವುದು ಸಂಶಯವೇ ಸರಿ.

ಮೊಟೊ ಫೋನ್‌ಗಳ ಬೆಲೆಯಲ್ಲಿ ರೂ.3000 ಕಡಿತ: ಜೊತೆಗೆ 100GB ಜಿಯೋ ಡೇಟಾ..!ಮೊಟೊ ಫೋನ್‌ಗಳ ಬೆಲೆಯಲ್ಲಿ ರೂ.3000 ಕಡಿತ: ಜೊತೆಗೆ 100GB ಜಿಯೋ ಡೇಟಾ..!

ಇನ್ನು ಈ ಹೊಸ ಸ್ಮಾರ್ಟ್ಫೋನ್ಗಳ ಫೀಚರ್ಗಳ ಕುರಿತು ಹೇಳುವುದಾದರೆ, ನೋಕಿಯಾ 7 ಕುರಿತು ಹೆಚ್ಚಿನ ಮಾಹಿತಿ ಸೋರಿಕೆಯಾಗಿಲ್ಲ. ಆದರೆ ನೋಕಿಯಾ 2, 5-ಇಂಚ್ HD 720p ಡಿಸ್ಪ್ಲೇ ಮತ್ತು ಸ್ನ್ಯಾಪ್ಡ್ರ್ಯಾಗನ್ 212 SoC ಹೊಂದಿರಲಿದೆ. ಜೊತೆಗೆ 1GB ರ್ಯಾಮ್ ಮತ್ತು 16GB ಸ್ಟೋರೇಜ್ ಸಾಮರ್ಥ್ಯವನ್ನೂ ಇದು ಹೊಂದಿರಲಿದೆ. ಹಾಗೆಯೇ ನೋಕಿಯಾ 2 ರಲ್ಲಿರಲಿದೆ 4000 mAH ಬ್ಯಾಟರಿ ಕೂಡ.

ಇನ್ನು ನೋಕಿಯಾ 9 ರ ಕುರಿತು ಹೇಳುವುದಾದರೆ ಇದರಲ್ಲಿರಲಿದೆ ಬೆಝೆಲ್-ಲೆಸ್ ಮತ್ತು ಕರ್ವ್ಡ್ ಎಡ್ಜ್-ಟು-ಎಡ್ಜ್ ಡಿಸ್ಪ್ಲೇ, ಅಂದರೆ ಅಂಚಿನಲ್ಲಿ ಫ್ರೇಮ್ ಇಲ್ಲದೆ ಅಂಚಿನಿಂದ ಅಂಚಿನವರೆಗೆ ಪೂರ್ತಿ ಡಿಸ್ಪ್ಲೇ ಹೊಂದಿರಲಿದೆ. ಸ್ನ್ಯಾಪ್ಡ್ರ್ಯಾಗನ್ 835 SoC ಮತ್ತು 6GB/8GB ರ್ಯಾಮ್ ಹೊಂದಿರುವ ಇದು ನೋಕಿಯಾ 8 ರಂತೆ ಕಾರ್ಲ್ ಝೇಯ್ಸ್ ಬ್ರ್ಯಾಂಡ್ ನ ಲೆನ್ಸ್ ಕೂಡಿದ ಡ್ಯುಯಲ್ ರೇರ್ ಕ್ಯಾಮೆರಾ ಹೊಂದಿರಲಿದೆ.

Best Mobiles in India

Read more about:
English summary
Nokia 9, Nokia 2 and Nokia 7, the second batch of Nokia Android smartphones are said to be launched at the MWC 2018 tech show.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X