ಅಗ್ಗದ ಬೆಲೆಯಲ್ಲಿ 'ನೋಕಿಯಾ C1' ಸ್ಮಾರ್ಟ್‌ಫೋನ್ ಬಿಡುಗಡೆ!

|

ಮೊಬೈಲ್‌ ಮಾರುಕಟ್ಟೆಯಲ್ಲಿ ದಿಗ್ಗಜನಾಗಿ ಮೆರೆದ 'ನೋಕಿಯಾ' ಸಂಸ್ಥೆಯು ಮಾರುಕಟ್ಟೆಯಲ್ಲಿ ಇಂದಿಗೂ ತನ್ನ ಖದರ್ ಉಳಿಸಿಕೊಂಡಿದೆ. ಸಂಸ್ಥೆಯು ಇತ್ತೀಚಿಗೆ ಹಲವು ಹೊಸ ಆವೃತ್ತಿಯಲ್ಲಿ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದ್ದು, ಅವುಗಳಲ್ಲಿ ಅಗ್ಗದ ಎಂಟ್ರಿ ಲೆವೆಲ್‌ ಫೋನ್‌ಗಳಿಂದ ದುಬಾರಿ ಬೆಲೆಯ ಫ್ಲ್ಯಾಗ್‌ಶಿಫ್ ಫೋನ್‌ಗಳು ಸೇರಿವೆ. ಕಂಪನಿಯು ಇದೀಗ ಅಗ್ಗದ ಬೆಲೆಯಲ್ಲಿ ಮತ್ತೊಂದು 'ಆಂಡ್ರಾಯ್ಡ್ ಗೋ' ಫೋನ್‌ ಅನ್ನು ಅನಾವರಣ ಮಾಡಿದೆ.

ನೋಕಿಯಾ

ಹೌದು, ಜನಪ್ರಿಯ ನೋಕಿಯಾ ಸಂಸ್ಥೆಯು HMD ಗ್ಲೋಬಲ್‌ನಲ್ಲಿ 'ನೋಕಿಯಾ c1' ಸ್ಮಾರ್ಟ್‌ಫೋನ್ ಲಾಂಚ್ ಮಾಡಿದ್ದು, ಆಫ್ರಿಕಾ, ಸೇರಿದಂತೆ ಮಧ್ಯಪೂರ್ವ ರಾಷ್ಟ್ರಗಳಲ್ಲಿ ಲಭ್ಯವಾಗಲಿದೆ. ಇನ್ನು ಈ ಸ್ಮಾರ್ಟ್‌ಫೋನ್ 3G ವೇರಿಯಂಟ್‌ನಲ್ಲಿದ್ದು, 4G ಬೆಂಬಲ ಪಡೆದಿಲ್ಲ. ಇನ್ನು ಈ ಫೋನ್ 1.3GHz ವೇಗದ ಕ್ವಾಡ್‌ ಕೋರ್ ಪ್ರೊಸೆಸರ್‌ ಸಾಮರ್ಥ್ಯ ಪಡೆದಿದ್ದು, 1GB RAM ಜೊತೆಗೆ 16GB ಸ್ಟೋರೇಜ್ ಆಯ್ಕೆಯನ್ನು ಹೊಂದಿದೆ.

ನೋಕಿಯಾ c1 ಸ್ಮಾರ್ಟ್‌ಫೋನ್

ನೋಕಿಯಾ c1 ಸ್ಮಾರ್ಟ್‌ಫೋನ್ 960 x 480 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 5.45 ಇಂಚಿನ IPS ಮಾದರಿಯ ಡಿಸ್‌ಪ್ಲೇಯನ್ನು ಒಳಗೊಂಡಿದೆ. 1.3GHz ವೇಗದ ಕ್ವಾಡ್‌ ಕೋರ್ ಪ್ರೊಸೆಸರ್‌ ಸಾಮರ್ಥ್ಯ ಪಡೆದಿದ್ದು, ಆಂಡ್ರಾಯ್ಡ್‌ 9 ಪೈ (ಗೋ ಎಡಿಷನ್ )ಓಎಸ್‌ನ ಬೆಂಬಲ ಪಡೆದಿದೆ. ಇನ್ನು 1GB RAM ಜೊತೆಗೆ 16GB ವೇರಿಯಂಟ್ ಆಯ್ಕೆಯನ್ನು ಹೊಂದಿದ್ದು, ಎಸ್‌ಡಿ ಕಾರ್ಡ್‌ ಮೂಲಕ ಬಾಹ್ಯ ಮೆಮೊರಿಯನ್ನು 64GB ವರೆಗೂ ವಿಸ್ತರಿಸಿಕೊಳ್ಳುವ ಅವಕಾಶ ಒಳಗೊಂಡಿದೆ.

3G ನೆಟವರ್ಕ

ಹಾಗೆಯೇ ನೋಕಿಯಾ C1 ಸ್ಮಾರ್ಟ್‌ಫೋನ್ ಡ್ಯುಯಲ್ ಸಿಮ್ ಸಪೋರ್ಟ್ ಹೊಂದಿದ್ದು, ಫೋನ್ 3G ನೆಟವರ್ಕನಲ್ಲಿ ಕಾರ್ಯನಿರ್ವಹಿಸಲಿದೆ. ಇದರೊಂದಿಗೆ ಹಿಂಬದಿಯಲ್ಲಿ 5ಎಂಪಿಯ ಸಿಂಗಲ್ ರಿಯರ್ ಕ್ಯಾಮೆರಾ ಮತ್ತು 5ಎಂಪಿಯ ಸೆಲ್ಫಿ ಕ್ಯಾಮೆರಾ ಇದೆ. 2,500mAh ಸಾಮರ್ಥ್ಯದ ಬ್ಯಾಟರಿ ಬಾಳಿಕೆಯನ್ನು ಒಳಗೊಂಡಿದೆ. ಬ್ಲೂಟೂತ್ 4.2, ಮೈಕ್ರೋ ಯುಎಸ್‌ಬಿ, 3.5ಎಂಎಂ ಹೆಡ್‌ಫೋನ್ ಜಾಕ್‌ ಮತ್ತು ಎಫ್‌ಎಮ್‌ ರೇಡಿಯೊ ಸೌಲಭ್ಯಗಳನ್ನು ಪಡೆದುಕೊಂಡಿದೆ. ಇತ್ತೀಚಿನ ಡಿಸೈನ್‌ ಲುಕ್‌ನಲ್ಲಿರುವ ಈ ಫೋನ್ ರೆಡ್ ಮತ್ತು ಬ್ಲಾಕ್ ಬಣ್ಣಗಳ ಆಯ್ಕೆಗಳಲ್ಲಿ ದೊರೆಯಲಿದೆ.

ಅಧಿಕೃತ ಮಾಹಿತಿ

ಇನ್ನು ಈ ಸ್ಮಾರ್ಟ್‌ಫೋನಿನ ಬೆಲೆಯ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಿಲ್ಲ. ಆದರೆ ಕಿನ್ಯಾದಲ್ಲಿ KES 6,000 (ಭಾರತದಲ್ಲಿ ಅಂದಾಜು 4,200ರೂ.). ಜಿಯೋ ವೇಗದ 4G ಸೇವೆಯನ್ನು ಒದಗಿಸುತ್ತಿದೆ ಎನ್ನುವ ಕಾರಣಕ್ಕೆ ಸದ್ಯ ಭಾರತಕ್ಕೆದಲ್ಲಿ ಬಹುತೇಕ ಗ್ರಾಹಕರು ಜಿಯೋ ನೆಟವರ್ಕ ಬಳಕೆಮಾಡುತ್ತಾರೆ. ನೋಕಿಯಾ C1 ಸ್ಮಾರ್ಟ್‌ಫೋನ್ ಕೇವಲ 3G ವೇರಿಯಂಟ್ ಮಾತ್ರ ಪಡೆದಿದ್ದು, ಭಾರತೀಯ ಜಿಯೋ ಗ್ರಾಹಕರಿಗೆ ಈ ಫೋನ್ ಬಹುಶಃ ಉಪಯೋಗಕ್ಕೆ ಸೂಕ್ತ ಅನಿಸುವುದಿಲ್ಲ ಎಂದೆನಿಸುತ್ತದೆ.

Most Read Articles
Best Mobiles in India

English summary
Nokia C1 is being launched as a 3G smartphone for emerging markets. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X