Just In
- 3 min ago
ವಿಶ್ವದ ಮೊದಲ 200MP ಸೆನ್ಸಾರ್ ಕ್ಯಾಮೆರಾ ಸ್ಮಾರ್ಟ್‌ಫೋನ್ ಬಿಡುಗಡೆ!
- 57 min ago
ಭಾರತಕ್ಕೆ ಎಂಟ್ರಿ ಕೊಟ್ಟ ಮೊಟೊ G62 5G ಸ್ಮಾರ್ಟ್‌ಫೋನ್!..ಬೆಲೆ ಎಷ್ಟು?
- 1 hr ago
ಬಂದೇ ಬಿಡ್ತು 'ಮೊಟೊ ರೇಜರ್ 2022 ಫೋಲ್ಡಬಲ್' ಸ್ಮಾರ್ಟ್‌ಫೋನ್!..ಏನಿದರ ವಿಶೇಷ!
- 3 hrs ago
ಭಾರತದಲ್ಲೂ ಸಿಂಗಲ್ ಚಾರ್ಜರ್ ನೀತಿ ಜಾರಿಗೆ ಬರುತ್ತಾ? ಹಾಗಾದ್ರೆ ನಿಮ್ಮ ಚಾರ್ಜರ್ಗಳ ಕಥೆ ಏನು?
Don't Miss
- News
Secret Politics: ಶಿಕಾರಿಪುರದಲ್ಲಿ ವಿಜಯೇಂದ್ರ ಶುರು ಮಾಡಿದರೇ ಮತ ಶಿಕಾರಿ!?
- Sports
ರಶೀದ್ ಖಾನ್, ಲಿವಿಂಗ್ಸ್ಟೋನ್ ಸೇರಿ ಐವರು MI ಕೇಪ್ಟೌನ್ ಫ್ರಾಂಚೈಸಿಗೆ ಸಹಿ
- Movies
ಪ್ರಭಾಸ್ 'ಸಲಾರ್'ನಲ್ಲಿ ಯಶ್ 10 ನಿಮಿಷದ ಅತಿಥಿ ಪಾತ್ರ?
- Automobiles
ಸ್ವಾತಂತ್ರ್ಯ ದಿನದಂದು ಬಿಎಂಟಿಸಿ ಪ್ರಯಾಣಿಕರಿಗೆ ಎರಡು ಗಿಫ್ಟ್: ಉಚಿತ ಪ್ರಯಾಣ ಹಾಗೂ 75 ಇವಿ ಬಸ್ಗಳ ಆಗಮನ
- Finance
ಅಟಲ್ ಪಿಂಚಣಿ ಯೋಜನೆ ಹೂಡಿಕೆ ನಿಯಮ ಬದಲಾವಣೆ, ಹೊಸತೇನು?
- Lifestyle
ಸ್ವಾತಂತ್ರ್ಯೋತ್ಸವ ಮತ್ತು ಗಣರಾಜ್ಯ ದಿನದಂದು ಬೇರೆ ಬೇರೆ ರೀತಿಯಲ್ಲಿ ತ್ರಿವರ್ಣ ಧ್ವಜ ಹಾರಿಸುತ್ತಾರೆ ಏಕೆ?
- Travel
ಭಾರತದಲ್ಲಿಯ 10 ಪ್ರಸಿದ್ದ ಹನುಮಂತ ದೇವರ ದೇವಾಲಯಗಳು
- Education
CAT 2022 Preparation Tips : ಕ್ಯಾಟ್ ಪರೀಕ್ಷೆಗೆ ಸಿದ್ಧತೆ ನಡೆಸಲು ಸಲಹೆಗಳು ಇಲ್ಲಿವೆ
ನೋಕಿಯಾ ಸಂಸ್ಥೆಯಿಂದ ಹೊಸ ನೋಕಿಯಾ G11 ಪ್ಲಸ್ ಸ್ಮಾರ್ಟ್‌ಫೋನ್ ಅನಾವರಣ!
ನೋಕಿಯಾ ಕಂಪೆನಿ ಮೊಬೈಲ್ ಮಾರುಕಟ್ಟೆಯಲ್ಲಿ ಇಂದಿಗೂ ಕೂಡ ಎವರ್‌ಗ್ರೀನ್ ಬ್ರ್ಯಾಂಡ್ ಎನಿಸಿಕೊಂಡಿದೆ. ತನ್ನ ವಿಶೇಷವಾದ ಫೋನ್‌ಗಳ ಮೂಲಕ ಮಾರುಕಟ್ಟೆಯಲ್ಲಿ ತನ್ನದೇ ಆದ ಪ್ರಾಬಲವನ್ನು ಹೊಂದಿದೆ. ಇನ್ನು ಸ್ಮಾರ್ಟ್‌ಫೋನ್ ವಿಚಾರದಲ್ಲಿಯೂ ಕೂಡ ನೋಕಿಯಾ ಕಂಪೆನಿ ಹಿಂದೆ ಬಿದ್ದಿಲ್ಲ. ಈಗಾಗಲೇ ಹಲವು ಆಕರ್ಷಕ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಸದ್ಯ ಇದೀಗ ಟೆಕ್ ಮಾರುಕಟ್ಟೆಯಲ್ಲಿ ತನ್ನ ಹೊಸ ನೋಕಿಯಾ G11 ಪ್ಲಸ್ ಸ್ಮಾರ್ಟ್‌ಫೋನ್ ಲಾಂಚ್ ಮಾಡಿದೆ.

ಹೌದು, ನೋಕಿಯಾ ಕಂಪೆನಿ ತನ್ನ G ಸರಣಿಯಲ್ಲಿ ಹೊಸ ನೋಕಿಯಾ G11 ಪ್ಲಸ್ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್ ಈ ವರ್ಷದ ಆರಂಭದಲ್ಲಿ ಬಿಡುಗಡೆಯಾದ ನೋಕಿಯಾ G11 ಗಿಂತ ಇದು ಅಪ್‌ಗ್ರೇಡ್ ಆಗಿದೆ ಎನ್ನಲಾಗಿದೆ. ಇದು 90Hz ರಿಫ್ರೆಶ್ ರೇಟ್ ಹೊಂದಿರುವ ಡಿಸ್‌ಪ್ಲೇ ಹೊಂದಿದೆ. ಈ ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿದೆ. ಜೊತೆಗೆ ಸಿಂಗಲ್ ಚಾರ್ಜ್‌ನಲ್ಲಿ ಮೂರು ದಿನಗಳ ಬ್ಯಾಟರಿ ಅವಧಿ ನೀಡುವ ಬ್ಯಾಟರಿ ಪ್ಯಾಕಪ್ ಹೊಂದಿದೆ.

ನೋಕಿಯಾ G11 ಪ್ಲಸ್ ಸ್ಮಾರ್ಟ್‌ಫೋನ್ ಎರಡು ಆಂಡ್ರಾಯ್ಡ್ ಅಪ್ಡೇಟ್ ಮತ್ತು ಮೂರು ವರ್ಷಗಳ ಮಾಸಿಕ ಭದ್ರತಾ ನವೀಕರಣಗಳನ್ನು ಸ್ವೀಕರಿಸುವ ಭರವಸೆಯನ್ನು ನೀಡಿದೆ. ಇಇನ್ನು ಈ ಸ್ಮಾರ್ಟ್‌ಫೋನ್ ಅನ್ನು ಅಧಿಕೃತವಾಗಿ ನೋಕಿಯಾ ವೆಬ್‌ಸೈಟ್‌ನಲ್ಲಿ ಅನಾವರಣಗೊಳಿಸಲಾಗಿದೆ. ಈ ಫೋನ್ ಚಾರ್ಕೋಲ್ ಗ್ರೇ ಮತ್ತು ಲೇಕ್ ಬ್ಲೂ ಬಣ್ಣಗಳ ಆಯ್ಕೆಯಲ್ಲಿ ಬರುತ್ತದೆ. ಹಾಗೆಯೇ 4GB RAM + 64GB ಇಂಟರ್ ಸ್ಟೋರೇಜ್ ರೂಪಾಂತರದ ಆಯ್ಕೆಯಲ್ಲಿ ದೊರೆಯಲಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ
ನೋಕಿಯಾ G11 ಪ್ಲಸ್ ಸ್ಮಾರ್ಟ್‌ಫೋನ್ 6.5 ಇಂಚಿನ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 90Hz ರಿಫ್ರೆಶ್ ರೇಟ್ ಅನ್ನು ಒಳಗೊಂಡಿದೆ. ಇನ್ನು ಈ ಡಿಸ್‌ಪ್ಲೇ ಮೃದುವಾದ ಸ್ಮಾರ್ಟ್‌ಫೋನ್ ಅನುಭವವನ್ನು ನೀಡಲಿದೆ. ಜೊತೆಗೆ ಸ್ಕ್ರೋಲಿಂಗ್, ಸ್ವೈಪಿಂಗ್ ಮತ್ತು ಶೇರಿಂಗ್‌ನಲ್ಲಿ ಪರಿಪೂರ್ಣವಾದ ಅನುಭವ ನೀಡಲಿದೆ. ಇದಲ್ಲದೆ ವೀಡಿಯೊ ಕರೆ ಮತ್ತು ವೀಡಿಯೊ ವೀಕ್ಷಣೆಗೆ ಯೋಗ್ಯ ಮಾದರಿಯನ್ನು ಹೊಂದಿದೆ.

ಪ್ರೊಸೆಸರ್ ಯಾವುದು?
ನೋಕಿಯಾ ಬ್ರ್ಯಾಂಡ್ ಪರವಾನಗಿ ಹೊಂದಿರುವ HMD ಗ್ಲೋಬಲ್ ನೋಕಿಯಾ G11 ಪ್ಲಸ್ ಸ್ಮಾರ್ಟ್‌ಫೋನ್ ಯಾವ ಪ್ರೊಸೆಸರ್ ಹೊಂದಿದೆ ಅನ್ನೊದನ್ನ ಇನ್ನು ಬಹಿರಂಗಪಡಿಸಿಲ್ಲ. ಆದರೆ ಈ ಸ್ಮಾರ್ಟ್‌ಫೋನ್ 4GB RAM ಮತ್ತು 64GB ಇಂಟರ್ ಸ್ಟೊರೇಜ್ ಹೊಂದಿದೆ ಎನ್ನುವುದನ್ನು ನೋಕಿಯಾ ವೆಬ್‌ಸೈಟ್ ಖಚಿತಪಡಿಸಿದೆ. ಇದಲ್ಲದೆ ಮೈಕ್ರೋ SD ಕಾರ್ಡ್ ಮೂಲಕ 512GB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುವುದಕ್ಕೆ ಅವಕಾಶವನ್ನು ನೀಡಲಾಗಿದೆ.

ಕ್ಯಾಮೆರಾ ಸೆಟ್‌ಅಪ್
ನೋಕಿಯಾ G11 ಪ್ಲಸ್ ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆಕೆಂಡರಿ ಸೆನ್ಸಾರ್ ಅನ್ನು ಹೊಂದಿದೆ. ಇನ್ನು ಕ್ಯಾಮರಾ ಸೆಟಪ್ ಅನ್ನು ಎಲ್ಇಡಿ ಫ್ಲ್ಯಾಷ್‌ನೊಂದಿಗೆ ಜೋಡಿಸಲಾಗಿದೆ. ಇದಲ್ಲದೆ ಸೆಲ್ಫಿಗಳು ಮತ್ತು ವೀಡಿಯೊ ಚಾಟ್‌ಗಳಿಗಾಗಿ, 8 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ.

ಬ್ಯಾಟರಿ ಮತ್ತು ಇತರೆ
ನೋಕಿಯಾ G11 ಪ್ಲಸ್ ಸ್ಮಾರ್ಟ್‌ಫೋನ್ ಬ್ಯಾಟರಿ ಪ್ಯಾಕಪ್ ಬಗ್ಗೆ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. ಆದರೆ ಈ ಸ್ಮಾರ್ಟ್‌ಫೋನ್ ಸಿಂಗಲ್ ಚಾರ್ಜ್‌ನಲ್ಲಿ ಮೂರು ದಿನಗಳ ಬ್ಯಾಟರಿ ಅವಧಿ ನೀಡಲಿದೆ ಎಂದು ಹೇಳಲಾಗಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G LTE, Wi-Fi, ಬ್ಲೂಟೂತ್, GPS/ A-GPS, USB ಟೈಪ್-C ಮತ್ತು 3.5mm ಹೆಡ್‌ಫೋನ್ ಜ್ಯಾಕ್ ಅನ್ನು ಒಳಗೊಂಡಿವೆ. ಇದಲ್ಲದೆ ಹಿಂಭಾಗದಲ್ಲಿ ಫಿಂಗರ್‌ಪ್ರಿಂಟ್ ಸೆನ್ಸಾರ್ ಅನ್ನು ಕೂಡ ಅಳವಡಿಸಲಾಗಿದೆ.

ಬೆಲೆ ಮತ್ತು ಲಭ್ಯತೆ
ನೋಕಿಯಾ G11 ಪ್ಲಸ್ ಸ್ಮಾರ್ಟ್‌ಫೋನ್ ಬೆಲೆಯ ಬಗ್ಗೆ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ. ಸದ್ಯ ಈ ಸ್ಮಾರ್ಟ್‌ಫೋನ್ ನೋಕಿಯಾ ವೆಬ್‌ಸೈಟ್‌ನಲ್ಲಿ ಅನಾವರಣಗೊಂಡಿರುವುದರಿಂದ ಶೀಘ್ರದಲ್ಲೇ ಬೆಲೆಯ ವಿವರಗಳು ಬಹಿರಂಗವಾಗುವ ಸಾಧ್ಯತೆಯಿದೆ.

ಇನ್ನು ಇತ್ತೀಚಿಗೆ ನೋಕಿಯಾ ಕಂಪೆನಿ ಭಾರತದಲ್ಲಿ ತನ್ನ G ಸರಣಿಯಲ್ಲಿ ನೋಕಿಯಾ G21 ಸ್ಮಾರ್ಟ್‌ಫೋನ್ ಪರಿಚಯಿಸಿತ್ತು. ಈ ಸ್ಮಾರ್ಟ್‌ಫೋನ್ ನೋಕಿಯಾ G21 ಸ್ಮಾರ್ಟ್‌ಫೋನ್ 720x1,600 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.5 ಇಂಚಿನ HD+ ಡಿಸ್‌ಪ್ಲೇ ಹೊಂದಿದೆ. ಇದು ಆಕ್ಟಾ-ಕೋರ್ ಯುನಿಸೊಕ್ T606 SoC ಪ್ರೊಸೆಸರ್ ಬಲವನ್ನು ಪಡೆದುಕೊಂಡಿದೆ. ಇದು ಆಂಡ್ರಾಯ್ಡ್ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 6GB RAM ಮತ್ತು 128GB ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ.

ಇನ್ನು ಈ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ f/1.8 ಲೆನ್ಸ್ ಹೊಂದಿದೆ. ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸಾರ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಅನ್ನು ಹೊಂದಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಜೊತೆಗೆ ಈ ಸ್ಮಾರ್ಟ್‌ಫೋನ್ 5,050mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 18W ವೇಗದ ಚಾರ್ಜಿಂಗ್ ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G LTE, Wi-Fi 802.11ac, ಬ್ಲೂಟೂತ್ v5.0, FM ರೇಡಿಯೋ, GPS/ A-GPS, USB ಟೈಪ್-C, ಮತ್ತು 3.5mm ಹೆಡ್‌ಫೋನ್ ಜ್ಯಾಕ್ ಬೆಂಬಲಿಸಲಿದೆ. ಭಾರತದಲ್ಲಿ ನೋಕಿಯಾ G21 ಸ್ಮಾರ್ಟ್‌ಫೋನ್ ಬೇಸ್ ಮಾಡೆಲ್ 4GB RAM + 64GB ಇಂಟರ್ ಸ್ಟೋರೇಜ್ ರೂಪಾಂತರ ಆಯ್ಕೆಗೆ 12,999ರೂ.ಬೆಲೆ ಹೊಂದಿದೆ. ಇನ್ನು ಈ ಫೋನ್ 6GB + 128GB ಮಾದರಿಯ ಆಯ್ಕೆಗೆ 14,999ರೂ. ಬೆಲೆ ಹೊಂದಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
44,999
-
15,999
-
20,449
-
7,332
-
18,990
-
31,999
-
54,999
-
17,091
-
17,091
-
13,999
-
31,830
-
31,499
-
26,265
-
24,960
-
21,839
-
15,999
-
11,570
-
11,700
-
7,070
-
7,086