Subscribe to Gizbot

ಭಾರತದಲ್ಲಿ ನೋಕಿಯಾ ವೆಬ್ ಸೈಟ್ ಓಪನ್: ಬಳಕೆದಾರರು ಫುಲ್ ಖುಷ್..!

Posted By: Precilla Dias

ಭಾರತೀಯ ಬಳಕೆದಾರರ ಮನಗೆದ್ದಿರುವ ನೋಕಿಯಾ ಸ್ಮಾರ್ಟ್ ಫೋನ್ ಗಳು ಈಗಾಗಲೇ ಮಾರುಕಟ್ಟೆಯಲ್ಲಿ ಹೆಚ್ಚಿನ ಬಳಕೆದಾರರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇದುವರೆಗೆ ಹೆಚ್ಚಾಗಿ ಆನ್ ಲೈನ್ ಮಾರುಕಟ್ಟೆಯನ್ನು ಅವಲಂಬಿಸಿದ್ದ ನೋಕಿಯಾ ಸ್ಮಾರ್ಟ್ ಫೋನ್ ಗಳು ಇನ್ನು ಮುಂದೆ ನೋಕಿಯಾ ವೆಬ್ ಸೈಟಿನಲ್ಲಿಯೇ ಮಾರಾಟವಾಗಲಿದೆ. ಇನ್ನು ಮುಂದೆ ಗ್ರಾಹಕರು ಅಧಿಕೃತ ನೋಕಿಯಾ ತಾಣದಲ್ಲಿಯೇ ಮೊಬೈಲ್ ಫೋನ್ ಗಳನ್ನು ಖರೀದಿಸಬಹುದಾಗಿದೆ.

ಭಾರತದಲ್ಲಿ ನೋಕಿಯಾ ವೆಬ್ ಸೈಟ್ ಓಪನ್: ಬಳಕೆದಾರರು ಫುಲ್ ಖುಷ್..!

ಈಗಾಗಲೇ ನೋಕಿಯಾ ಬಜೆಟ್ ಬೆಲೆಯಿಂದ ಹಿಡಿದು ಟಾಪ್ ಎಂಡ್ ವರೆಗೂ ಫೋನ್ ಗಳನ್ನು ಲಾಂಚ್ ಮಾಡಿದೆ. ಆದರೆ ಈ ಬಾರಿ ನಡೆದ ಮೊಬೈಲ್ ಕಾಂಗ್ರೆಸ್ ಸಮಾವೇಶದಲ್ಲಿ ಯಾವುದೇ ಟಾಪ್ ಎಂಡ್ ಮೊಬೈಲ್ ಅನ್ನು ಪರಿಚಯ ಮಾಡಿಲ್ಲ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ನೋಕಿಯಾ ವೆಬ್ ಸೈಟಿನ ಕುರಿತು ಮಾಹಿತಿ ಮುಂದಿನಂತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನೋಕಿಯಾ ವೆಬ್ ಸೈಟ್:

ನೋಕಿಯಾ ವೆಬ್ ಸೈಟ್:

ನೋಕಿಯಾ ವೆಬ್ ಸೈಟಿನಲ್ಲಿ ನೋಕಿಯಾ ಮೊಬೈಲ್ ಮತ್ತು ಆಕ್ಸಿಸಿರಿಸ್ ಗಳನ್ನು ಗ್ರಾಹಕರು ಖರೀದಿಸಬಹುದಾಗಿದ್ದು, ಸ್ಮಾರ್ಟ್ ಫೋನ್ ಮತ್ತು ಫಿಚರ್ ಫೋನ್ ಗಳೇರಡು ಅಲ್ಲಿ ಲಭ್ಯವಿದೆ. ಅಲ್ಲದೇ ಇಲ್ಲಿ ಖರೀದಿಸುವ ಸ್ಮಾರ್ಟ್ ಫೋನ್ ಗಳನ್ನು ನೋಕಿಯಾ ಉಚಿತವಾಗಿ ಡಿಲಿವರಿ ಮಾಡಲಿದೆ. ಅಲ್ಲದೇ 10 ದಿನಗಳ ರಿಟನ್ ಪಾಲಿಸಿ ಸಹ ಇದೆ.

ಎಲ್ಲಾ ನೋಕಿಯಾ ಫೋನ್ ದೊರೆಯುವುದಿಲ್ಲ:

ಎಲ್ಲಾ ನೋಕಿಯಾ ಫೋನ್ ದೊರೆಯುವುದಿಲ್ಲ:

ಭಾರತದಲ್ಲಿ ನೋಕಿಯಾ ಲಾಂಚ್ ಮಾಡಿರುವ ಸ್ಮಾರ್ಟ್ ಫೋನ್ ಗಳನ್ನು ಮಾತ್ರವೇ ಗ್ರಾಹಕರು ಖರೀದಿಸಲು ಸಾಧ್ಯವಿದೆ. ಇದರಲ್ಲಿ ನೋಕಿಯಾ 6 ದೊರೆಯುತ್ತಿಲ್ಲ. ಇದಲ್ಲದೇ ನೋಕಿಯಾ 8110 ಸಹ ದೊರೆಯುತ್ತಿಲ್ಲ. ಇದನ್ನು ಹೊರತು ಪಡಿಸಿ ಬೇರೆ ಎಲ್ಲಾ ಸ್ಮಾರ್ಟ್ ಫೋನ್ ಗಳನ್ನು ಖರೀದಿಸಬಹುದಾಗಿದೆ.

ಫ್ಲಾಷ್ ಸೇಲಿನಲ್ಲಿ ಮತ್ತೊಮ್ಮೆ ರೆಡ್‌ಮಿ 5A ಸ್ಮಾರ್ಟ್‌ಫೋನ್: ಖರೀದಿದಾರರಿಗೆ ಬೊಂಬಾಟ್ ಆಫರ್..!

ನಿಮ್ಮ Aadhaar ದುರುಪಯೋಗವಾಗಿದೆಯೇ..? ಪತ್ತೆ ಹಚ್ಚುವುದು ಹೇಗೆ..?
ನೂತನ ಫೋನ್ ಗಳು:

ನೂತನ ಫೋನ್ ಗಳು:

ಈಗಾಗಲೇ ನೋಕಿಯಾ ಮಾರುಕಟ್ಟೆಗೆ ನೋಕಿಯಾ 8110G, ನೋಕಿಯಾ 1 ಮತ್ತು ನೋಕಿಯಾ 6 (2018), ನೋಕಿಯಾ 7 ಪ್ಲಸ್ ಮತ್ತು ನೋಕಿಯಾ 8 ಸ್ಮಾರ್ಟ್ ಫೋನ್ ಗಳು ಲಿಸ್ಟ್ ನಲ್ಲಿದೆ. ಇವು ಶೀಘ್ರವೇ ಭಾರತದಲ್ಲಿ ಲಾಂಚ್ ಆಗಲಿದ್ದು, ತದ ನಂತರದಲ್ಲಿ ಖರೀದಿಗೆ ದೊರೆಯಲಿದೆ ಎನ್ನಲಾಗಿದೆ. ಒಟ್ಟಿನಲ್ಲಿ ಭಾರತದಲ್ಲಿ ನೋಕಿಯಾ ತನ್ನದೇ ತಾಣವನ್ನು ತರೆಯುವ ಮೂಲಕ ಹೊಸ ಭಾಷ್ಯವನ್ನು ಬರೆದಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Nokia phones and accessories can be directly purchased from its official website. Both smartphones and feature phones are available on the website. The good news is the website offers free shipping with all units.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot