ನೋಕಿಯಾದಿಂದ ಹೊಸ ಲ್ಯಾಪ್‌ಟಾಪ್‌ಗಳ ಅನಾವರಣ! ಆತ್ಯಾಕರ್ಷಕ ಎನಿಸುವ ಫಿಚರ್ಸ್‌!

|

ಟೆಕ್‌ ವಲಯದಲ್ಲಿ ನೋಕಿಯಾ ಕಂಪೆನಿ ಎವರ್‌ಗ್ರೀನ್‌ ಬ್ರ್ಯಾಂಡ್‌ ಎನಿಸಿಕೊಂಡಿದೆ. ನೋಕಿಯಾ ಕಂಪೆನಿ ಮೊಬೈಲ್‌ ಮಾತ್ರವಲ್ಲದೆ ಲ್ಯಾಪ್‌ಟಾಪ್‌ ಮಾರುಕಟ್ಟೆಯಲ್ಲಿ ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ. ಸದ್ಯ ಇದೀಗ ಬರ್ಲಿನ್‌ ನಲ್ಲಿ ನಡೆಯುತ್ತಿರುವ IFA 2022 ಈವೆಂಟ್‌ನಲ್ಲಿ ಹೊಸ ನೋಕಿಯಾ ಪ್ಯೂರ್‌ಬುಕ್‌ ಫೋಲ್ಡ್‌, ಪ್ಯೂರ್‌ಬುಕ್‌ ಲೈಟ್‌ ಮತ್ತು ಪ್ಯೂರ್‌ಬುಕ್‌ ಪ್ರೊ 15.6 (2022) ಅನ್ನು ಲಾಂಚ್‌ ಮಾಡಿದೆ. ಇದರಲ್ಲಿ ನೋಕಿಯಾ ಪ್ಯೂರ್‌ಬುಕ್‌ ಫೋಲ್ಡ್‌, ಪ್ಯೂರ್‌ಬುಕ್‌ ಲೈಟ್‌ ಒಂದೇ ತೆರನಾದ ಫೀಚರ್ಸ್‌ಗಳನ್ನು ಪಡೆದುಕೊಂಡಿವೆ.

ನೋಕಿಯಾ

ಹೌದು, ನೋಕಿಯಾ ಕಂಪೆನಿ IFA 2022 ಈವೆಂಟ್‌ನಲ್ಲಿ ಮೂರು ಹೊಸ ನೋಟ್‌ಬುಕ್‌ ಲ್ಯಾಪ್‌ಟಾಪ್‌ಗಳನ್ನು ಪರಿಚಯಿಸಿದೆ. ಈ ಲ್ಯಾಪ್‌ಟಾಪ್‌ಗಳು ಹೊಸ ತಲೆಮಾರಿನ ನೋಟ್‌ಬುಕ್‌ಗಳಾಗಿದ್ದು, ನವೀನ ಮಾದರಿಯ ವಿನ್ಯಾಸವನ್ನು ಪಡೆದಿವೆ. ಇವುಗಳಲ್ಲಿ ನೋಕಿಯಾ ಪ್ಯೂರ್‌ಬುಕ್ ಪ್ರೊ 15.6 (2022) ಲ್ಯಾಪ್‌ಟಾಪ್ ಇಂಟೆಲ್ ಕೋರ್ ಐ3 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗಾದ್ರೆ ಈ ಮೂರು ಲ್ಯಾಪ್‌ಟಾಪ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಮುಂದೆ ಓದಿರಿ.

ನೋಕಿಯಾ ಪ್ಯೂರ್‌ಬುಕ್‌ ಫೋಲ್ಡ್

ನೋಕಿಯಾ ಪ್ಯೂರ್‌ಬುಕ್‌ ಫೋಲ್ಡ್

ನೋಕಿಯಾ ಪ್ಯೂರ್‌ಬುಕ್‌ ಫೋಲ್ಡ್ 14.1 ಇಂಚಿನ IPS LCD ಡಿಸ್‌ಪ್ಲೇಯನ್ನು ಹೊಂದಿದೆ. ಇದು 1,080x1,920 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದಿದೆ. ಈ ಡಿಸ್‌ಪ್ಲೇ 60Hz ರಿಫ್ರೆಶ್ ರೇಟ್ ಅನ್ನು ಒಳಗೊಂಡಿದೆ. ಇನ್ನುಈ ಲ್ಯಾಪ್‌ಟಾಪ್‌ ಇಂಟೆಲ್ ಪೆಂಟಿಯಮ್ ಸಿಲ್ವರ್ N6000 ಪ್ರೊಸೆಸರ್‌ ಬಲವನ್ನು ಪಡೆದಿದ್ದು, ವಿಂಡೋಸ್‌ 11 ನಲ್ಲಿ ರನ್‌ ಆಗಲಿದೆ. ಹಾಗೆಯೇ 8GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿದೆ.

ಲ್ಯಾಪ್‌ಟಾಪ್

ಈ ಲ್ಯಾಪ್‌ಟಾಪ್ 38Whr ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 45W ಚಾರ್ಜಿಂಗ್ ಬೆಂಬಲವನ್ನು ಒಳಗೊಂಡಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಎರಡು ಯುಎಸ್‌ಬಿ ಟೈಪ್-ಸಿ 3.2 ಪೋರ್ಟ್‌ಗಳು, ಒಂದು ಯುಎಸ್‌ಬಿ ಟೈಪ್-ಎ 3.0 ಪೋರ್ಟ್, ಒಂದು 3.5 ಎಂಎಂ ಆಡಿಯೊ ಜ್ಯಾಕ್ ಮತ್ತು ಮೈಕ್ರೊ ಎಸ್‌ಡಿ ಕಾರ್ಡ್ ಸ್ಲಾಟ್ ಅನ್ನು ಒಳಗೊಂಡಿದೆ. ಇದಲ್ಲದೆ 1 ಮೆಗಾಪಿಕ್ಸೆಲ್ ವೆಬ್‌ಕ್ಯಾಮ್ ಮತ್ತು ಡ್ಯುಯಲ್ ಸ್ಪೀಕರ್ ಸೆಟಪ್ ಅನ್ನು ಒಳಗೊಂಡಿದೆ. ಹಾಗೆಯೇ Wi-Fi 5 ಮತ್ತು ಬ್ಲೂಟೂತ್ v5 ಬೆಂಬಲವನ್ನು ಪಡೆದಿದೆ.

ನೋಕಿಯಾ ಪ್ಯೂರ್‌ಬುಕ್‌ ಲೈಟ್‌

ನೋಕಿಯಾ ಪ್ಯೂರ್‌ಬುಕ್‌ ಲೈಟ್‌

ನೋಕಿಯಾ ಪ್ಯೂರ್‌ಬುಕ್‌ ಲೈಟ್‌ ಲ್ಯಾಪ್‌ಟಾಪ್ 14.1-ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ IPS LCD ಡಿಸ್‌ಪ್ಲೇಯನ್ನು ಹೊಂದಿದೆ. ಇದು ಇಂಟೆಲ್ ಪೆಂಟಿಯಮ್ ಸಿಲ್ವರ್ N6000 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ವಿಂಡೋಸ್‌ 11 ನಲ್ಲಿ ರನ್‌ ಆಗಲಿದೆ. ಇದು 45W ಚಾರ್ಜಿಂಗ್ ಬೆಂಬಲಿಸುವ 38Whr ಸಾಮರ್ಥ್ಯದ ಬ್ಯಾಟರಿ ಬ್ಯಾಕ್ಅಪ್ ಅನ್ನು ಪಡದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಎರಡು ಯುಎಸ್‌ಬಿ ಟೈಪ್-ಸಿ 3.2 ಪೋರ್ಟ್‌ಗಳು, ಒಂದು ಯುಎಸ್‌ಬಿ ಟೈಪ್-ಎ 3.0 ಪೋರ್ಟ್, 3.5 ಎಂಎಂ ಆಡಿಯೊ ಜ್ಯಾಕ್ ಮತ್ತು ಮೈಕ್ರೊ ಎಸ್‌ಡಿ ಕಾರ್ಡ್ ಸ್ಲಾಟ್ ಅನ್ನು ಒಳಗೊಂಡಿದೆ.

ನೋಕಿಯಾ ಪ್ಯೂರ್‌ಬುಕ್‌ ಪ್ರೊ 15.6 (2022)

ನೋಕಿಯಾ ಪ್ಯೂರ್‌ಬುಕ್‌ ಪ್ರೊ 15.6 (2022)

ನೋಕಿಯಾ ಪ್ಯೂರ್‌ಬುಕ್‌ ಪ್ರೊ 15.6 (2022) 15.6-ಇಂಚಿನ ಫುಲ್‌ ಹೆಚ್‌ಡಿ IPS LCD ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 1,080x1,920 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಹೊಂದಿದೆ. ಇದು ಇಂಟೆಲ್ ಕೋರ್ i3-1220P ಪ್ರೊಸೆಸರ್‌ ಬಲವನ್ನು ಪಡೆದಿದ್ದು, ವಿಂಡೋಸ್‌ 11ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ 8GB RAM ಮತ್ತು 512GB ಇಂಟರ್‌ ಸ್ಟೋರೇಜ್‌ ಅನ್ನು ಹೊಂದಿದೆ. ಇನ್ನು ಈ ಲ್ಯಾಪ್‌ಟಾಪ್‌ 2 ಮೆಗಾಪಿಕ್ಸೆಲ್ ವೆಬ್‌ಕ್ಯಾಮ್ ಅನ್ನು ಹೊಂದಿದೆ. ಜೊತೆಗೆ ಕ್ವಾಡ್ ಸ್ಪೀಕರ್ ಸೆಟಪ್ ಅನ್ನು ಸಹ ಹೊಂದಿದೆ.

ಲ್ಯಾಪ್‌ಟಾಪ್

ಈ ಲ್ಯಾಪ್‌ಟಾಪ್ ನಂಬರ್‌ ಪ್ಯಾಡ್ ಇಲ್ಲದೆ ಬ್ಯಾಕ್‌ಲಿಟ್ ಕೀಬೋರ್ಡ್ ಅನ್ನು ಹೊಂದಿದೆ. ಇದು 57Whr ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 65W ವೇಗದ ಚಾರ್ಜಿಂಗ್ ಬೆಂಬಲವನ್ನು ಒಳಗೊಂಡಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಎರಡು USB ಟೈಪ್-C 3.2 ಪೋರ್ಟ್‌ಗಳು, ಒಂದು USB ಟೈಪ್-A 3.2 ಪೋರ್ಟ್, 3.5mm ಹೆಡ್‌ಫೋನ್ ಜ್ಯಾಕ್ ಮತ್ತು ಮೈಕ್ರೊ SD ಕಾರ್ಡ್ ಸ್ಲಾಟ್ ಅನ್ನು ಒಳಗೊಂಡಿದೆ. ಸೆಕ್ಯುರಿಟಿಗಾಗಿ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಸಹ ಒಳಗೊಂಡಿದೆ.

ನೋಕಿಯಾ

ಇನ್ನು ನೋಕಿಯಾ ಕಂಪೆನಿ ಈ ಮೂರು ಲ್ಯಾಪ್‌ಟಾಪ್‌ಗಳ ಬೆಲೆ ವಿವರಗಳನ್ನು ಬಹಿರಂಗಪಡಿಸಿಲ್ಲ. ಸದ್ಯ IFA 2022 ಈವೆಂಟ್‌ನಲ್ಲಿ ಲ್ಯಾಪ್‌ಟಾಪ್‌ಗಳನ್ನು ಅನಾವರಣಗೊಳಿಸಿದೆಯಷ್ಟೇ. ಮುಂದಿನ ದಿನಗಳಲ್ಲಿ ಇವುಗಳ ಸೇಲ್‌ ಡೇಟ್‌ ಬಹಿರಂಗವಾಗಲಿದ್ದು, ಆಗ ಇದರ ಬೆಲೆ ವಿವರ ಬಹಿರಂಗವಾಗುವ ಸಾಧ್ಯತೆಯಿದೆ. ಇನ್ನು ನೋಕಿಯಾ ಪ್ಯೂರ್‌ಬುಕ್ ಫೋಲ್ಡ್ ಮತ್ತು ಪ್ಯೂರ್‌ಬುಕ್ ಲೈಟ್ ಕಪ್ಪು, ನೀಲಿ ಮತ್ತು ಕೆಂಪು ಬಣ್ಣದ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಆದರೆ ನೋಕಿಯಾ ಪ್ಯೂರ್‌ಬುಕ್ ಪ್ರೊ 15.6 (2022) ನೀಲಿ, ಡಾರ್ಕ್ ಸಿಲ್ವರ್, ರೆಡ್ ಮತ್ತು ಸಿಲ್ವರ್ ಬಣ್ಣದ ಆಯ್ಕೆಗಳಲ್ಲಿ ಬರಲಿದೆ ಎನ್ನಲಾಗಿದೆ.

Best Mobiles in India

English summary
Nokia three New PureBook Laptops launched at IFA 2022

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X