ನೋಕಿಯಾ 8.2-5G ಮತ್ತು ನೋಕಿಯಾ 5.2 ಫೋನ್ ಬಿಡುಗಡೆಗೆ ಮುಹೂರ್ತ ಫಿಕ್ಸ್‌!

|

ಜನಪ್ರಿಯ ಮೊಬೈಲ್ ಸಂಸ್ಥೆ ನೋಕಿಯಾದ ಇತ್ತೀಚಿನ ಆಂಡ್ರಾಯ್ಡ್ ಫೋನ್‌ಗಳು ಮಾರುಕಟ್ಟೆಯಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದಿವೆ. ಅದರ ಬೆನ್ನಲೇ ನೋಕಿಯಾ ಮತ್ತೆ ಮೂರು ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲು ತಯಾರಿನಡೆಸಿರುವ ಸುದ್ದಿ ಗೊತ್ತಿರುವುದೇ ಆಗಿದೆ. ಆದರೆ ಬರಲಿರುವ ನೋಕಿಯಾ 8.2 5G, ನೋಕಿಯಾ 5.2 ಮತ್ತು ನೋಕಿಯಾ 1.3 ಸ್ಮಾರ್ಟ್‌ಫೋನ್‌ಗಳ ಬಿಡುಗಡೆಗೆ ಇದೀಗ ಅಧಿಕೃತವಾಗಿ ದಿನಾಂಕ ನಿಗದಿಯಾಗಿದೆ.

ನೋಕಿಯಾ 8.2 5G

ಹೌದು, ನೋಕಿಯಾ ಸಂಸ್ಥೆಯ ತನ್ನ ಬಹುನಿರೀಕ್ಷಿತ ನೋಕಿಯಾ 8.2 5G, ನೋಕಿಯಾ 5.2 ಮತ್ತು ನೋಕಿಯಾ 1.3 ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡಲು ಮುಹೂರ್ತ ಫಿಕ್ಸ್ ಮಾಡಿದೆ. ಇದೇ ಫೆಬ್ರುವರಿ 23 ರಿಂದ ನಡೆಯುವ ಮೊಬೈಲ್ ವರ್ಲ್ಡ್ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡುವುದಾಗಿ ಹೇಳಿದೆ. ಹಾಗಾದರೆ ನೋಕಿಯಾದ ಈ ಮೂರು ಸ್ಮಾರ್ಟ್‌ಫೋನ್‌ಗಳು ಯಾವೆಲ್ಲಾ ಫೀಚರ್ಸ್‌ಗಳನ್ನು ಹೊಂದಿರಲಿವೆ ಎಂಬುದನ್ನು ಮುಂದೆ ತಿಳಿಯೋಣ.

ನೋಕಿಯಾ 8.2 5G

ನೋಕಿಯಾ 8.2 5G

ನೋಕಿಯಾ 8.2 5G ಕನೆಕ್ಟಿವಿಟಿ ಬೆಂಬಲ ಪಡೆದಿರಲಿದೆ. ಈ ಫೋನ್ 7nm ಆಧಾರಿತ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 765 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ 4GB RAM + 64GB, 6GB RAM + 128GB ಮತ್ತು 8GB + 256GB ಸ್ಟೋರೇಜ್ ವೇರಿಯಂಟ್ ಆಯ್ಕೆಗಳಲ್ಲಿ ಬಿಡುಗಡೆ ಆಗುವುದು ಖಚಿತ ಎನ್ನಲಾಗಿದೆ. ಪಾಪ್‌ಅಪ್‌ ಕ್ಯಾಮೆರಾ ಇರುವ ಸಾಧ್ಯತೆಗಳಿವೆ. ಹಿಂಬದಿ ಮುಖ್ಯ ಕ್ಯಾಮೆರಾವು 64ಎಂಪಿ ಸಾಮರ್ಥ್ಯದಲ್ಲಿರಲಿದೆ. ಇನ್ನು ಬ್ಯಾಟರಿಯು 3,500mAh ಸಾಮರ್ಥ್ಯ ಪಡೆದಿರಲಿದೆ. ಬೆಲೆಯು EUR 459 ( ಅಂದಾಜು 36,100ರೂ)

ನೋಕಿಯಾ 5.2

ನೋಕಿಯಾ 5.2

ನೋಕಿಯಾ 5.2 ಸ್ಮಾರ್ಟ್‌ಫೋನ್ 6.2 ಇಂಚಿನ ಡಿಸ್‌ಪ್ಲೇ ಹೊಂದಿರಲಿದ್ದು ವಾಟರ್ ಡ್ರಾಪ್ ನಾಚ್ ಪಡೆದಿರಲಿದೆ. ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 632 ಪ್ರೊಸೆಸರ್‌ನಲ್ಲಿ ಕೆಲಸ ಮಾಡಲಿದ್ದು, ಆಂಡ್ರಾಯ್ಡ್ ಒನ್ ಸಫೋರ್ಟ್‌ ಹೊಂದಿದೆ. ಈ ಫೋನ್ 3GB RAM + 32GB ಮತ್ತು 4GB RAM + 64GB ವೇರಿಯಂಟ್ ಆಯ್ಕೆ ಹೊಂದಿರಲಿದ್ದು, 3,500mAh ಸಾಮರ್ಥ್ಯದ ಬ್ಯಾಟರಿ ಪಡೆದಿರಲಿದೆ. 16ಎಂಪಿ ಕ್ಯಾಮೆರಾ ಸೆನ್ಸಾರ್ ಇರಲಿದೆ. ಬೆಲೆಯು EUR 169 (ಅಂದಾಜು 13,300ರೂ)

ನೋಕಿಯಾ 1.3

ನೋಕಿಯಾ 1.3

ನೋಕಿಯಾ 1.3 ಸ್ಮಾರ್ಟ್‌ಫೋನ್ ಎಂಟ್ರಿ ಲೆವೆಲ್ ಮಾದರಿಯಲ್ಲಿ ಲಾಂಚ್ ಆಗಲಿದೆ. ಈ ಫೋನ್ ಸ್ನ್ಯಾಪ್‌ಡ್ರಾಗನ್ 215 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. 4G ಬೆಂಬಲ ಪಡೆದಿರಲಿದ್ದು, ಬ್ಲೂಟೂತ್ 4.2 ಸಫೋರ್ಟ್‌ ಹೊಂದಿರಲಿದೆ. ಇನ್ನು ಈ ಫೋನ್ 13ಎಂಪಿ ಕ್ಯಾಮೆರಾ ಸೆನ್ಸಾರ್ ಒಳಗೊಂಡಿರಲಿದ್ದು, 1GB RAM ಮತ್ತು 8GB ಸ್ಟೋರೇಜ್ ಸಾಮರ್ಥ್ಯದಲ್ಲಿ ಲಾಂಚ್ ಆಗಲಿದೆ. ಬೆಲೆಯು EUR 79 (ಅಂದಾಜು 6,200ರೂ)

Best Mobiles in India

English summary
New Nokia smartphones are expected to be unveiled at HMD Global’s MWC 2020 event which will take place on February 23. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X