ನಥಿಂಗ್ ಇಯರ್ ಸ್ಟಿಕ್ ಖರೀದಿಸುವ ಗ್ರಾಹಕರಿಗೆ ನೇರವಾಗಿ 1,000ರೂ. ಡಿಸ್ಕೌಂಟ್‌!

|

ಟೆಕ್ ಮಾರುಕಟ್ಟೆಯಲ್ಲಿ ನಥಿಂಗ್ (Nothing) ಸಂಸ್ಥೆಯು ತನ್ನ ಕೆಲವು ಉತ್ಪನ್ನಗಳ ಮೂಲಕ ಹೊಸ ಅಲೆ ಪ್ರಾರಂಭಿಸಿದೆ. ಹಾಗೆಯೇ ನಥಿಂಗ್ ಸಂಸ್ಥೆಯು ತನ್ನ ಗ್ರಾಹಕರಿಗೆ ಇದೀಗ ಭರ್ಜರಿ ಸಿಹಿಸುದ್ದಿ ಹೊರಹಾಕಿದೆ. ಅದು ಏನೆಂದರೆ, ಕಂಪನಿಯು ಇತ್ತೀಚಿಗಷ್ಟೆ ಬಿಡುಗಡೆ ಮಾಡಿರುವ ನಥಿಂಗ್ ಇಯರ್ ಸ್ಟಿಕ್ (Nothing Ear Stick) ಖರೀದಿಸುವ ಗ್ರಾಹಕರಿಗೆ ಸಿಗಲಿದೆ ಭಾರೀ ಡಿಸ್ಕೌಂಟ್‌.

ನಥಿಂಗ್ ಇಯರ್ ಸ್ಟಿಕ್

ಹೌದು, ನಥಿಂಗ್ ಸಂಸ್ಥೆಯು ನಥಿಂಗ್ ಇಯರ್ ಸ್ಟಿಕ್ (Nothing Ear Stick) ಖರೀದಿಸುವ ಗ್ರಾಹಕರಿಗೆ 1,000ರೂ. ರಿಯಾಯಿತಿ ನೀಡಲಿದೆ. ಅಂದಹಾಗೆ ಈ ಕೊಡುಗೆಯು ಈಗಾಗಲೆ ನಥಿಂಗ್ ಉತ್ಪನ್ನ (ನಥಿಂಗ್ ಫೋನ್ 1 ಅಥವಾ ನಥಿಂಗ್ ಇಯರ್‌ 1) ಹೊಂದಿರುವ ಗ್ರಾಹಕರಿಗೆ ಮಾತ್ರ ಲಭ್ಯವಾಗಲಿದೆ. ಇನ್ನು ನೂತನ ನಥಿಂಗ್ ಇಯರ್ ಸ್ಟಿಕ್ ಡಿವೈಸ್ ಅದೇ ನವೆಂಬರ್ 17 ರಂದು ಫ್ಲಿಪ್‌ಕಾರ್ಟ್‌ (Flipkart) ಮೂಲಕ ಮಾರಾಟ ಪ್ರಾರಂಭಿಸಲಿದೆ.

ನಥಿಂಗ್ ಉತ್ಪನ್ನ

ಇನ್ನು ನಥಿಂಗ್ ಉತ್ಪನ್ನವನ್ನು ಹೊಂದಿರುವ ಗ್ರಾಹಕರು, ನವೆಂಬರ್ 17 ರ ಸೇಲ್‌ ದಿನಾಂಕದ ಮೂರು ದಿನಗಳ ಮೊದಲು ಅಂದರೆ ನವೆಂಬರ್ 14 ರಂದು ನಥಿಂಗ್ ಇಯರ್ ಸ್ಟಿಕ್ ಡಿವೈಸ್‌ ಅನ್ನು ಖರೀದಿಸಬಹುದು. ಇದು ಸೀಮಿತ ಅವಧಿಯ ಕೊಡುಗೆಯಾಗಿದೆ. ಹಾಗಾದರೆ ನಥಿಂಗ್ ಇಯರ್ ಸ್ಟಿಕ್ ಡಿವೈಸ್‌ನ ಫೀಚರ್ಸ್‌ಗಳೆನು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ನಥಿಂಗ್ ಇಯರ್ ಸ್ಟಿಕ್‌ ಫೀಚರ್ಸ್‌ ಹೀಗಿವೆ:

ನಥಿಂಗ್ ಇಯರ್ ಸ್ಟಿಕ್‌ ಫೀಚರ್ಸ್‌ ಹೀಗಿವೆ:

ನಥಿಂಗ್ ಇಯರ್ ಸ್ಟಿಕ್‌ (Nothing Ear stick) ಇಯರ್‌ಬಡ್ಸ್‌ ಹೊಸ ಆಕರ್ಷಕ ವಿನ್ಯಾಸವನ್ನು ಹೊಂದಿದ್ದು, ಫ್ಲಿಪ್ ಓಪನಿಂಗ್‌ಗಿಂತ ಭಿನ್ನವಾಗಿ, ನಥಿಂಗ್ ಇಯರ್ ಸ್ಟಿಕ್ ಕೇಸ್ ಟ್ವಿಸ್ಟ್ ಓಪನಿಂಗ್‌ನೊಂದಿಗೆ ಬರುತ್ತದೆ. ಈ ಇಯರ್‌ಬಡ್‌ಗಳು ಪ್ರತಿಯೊಂದರಲ್ಲೂ ಮೂರು ಮೈಕ್ರೋಫೋನ್‌ಗಳನ್ನು ಒಳಗೊಂಡಿವೆ. ಇದರಲ್ಲಿ ಒಂದು ವಾಯಿಸ್‌ ಅನ್ನು ಸೆರೆಹಿಡಿಯಲು, ಇನ್ನೊಂದು ಕರೆಗಳ ಸಮಯದಲ್ಲಿ ಬ್ಯಾಕ್‌ಗ್ರೌಂಡ್‌ ನಾಯ್ಸ್‌ ಕ್ಯಾನ್ಸಲ್‌ ಮಾಡಲಿದೆ. ಮೂರನೇಯದು ಇಯರ್‌ಬಡ್‌ನೊಳಗೆ ಇಯರ್‌ ಕ್ಯಾನಲ್‌ ಗಾತ್ರವನ್ನು ಅಳೆಯುವುದಕ್ಕೆ ಸೂಕ್ತವಾಗಿದೆ.

ಇಯರ್‌ಬಡ್ಸ್‌ನ ಮೈಕ್ರೋಫೋನ್‌

ಇನ್ನು ಈ ಇಯರ್‌ಬಡ್ಸ್‌ನ ಮೈಕ್ರೋಫೋನ್‌ಗಳು ವಾಯ್ಸ್‌ ಕಾಲ್‌ ಸಮಯದಲ್ಲಿ ಗಾಳಿಯ ಶಬ್ದ ಮತ್ತು ಜನಸಂದಣಿಯ ಶಬ್ದವನ್ನು ಕೂಡ ಕೇಳದಂತೆ ಮಾಡಲಿದೆ ಎಂದು ನಥಿಂಗ್‌ ಕಂಪನಿ ಹೇಳಿಕೊಂಡಿದೆ. ಈ ಇಯರ್ ಸ್ಟಿಕ್ 'ಪ್ರೆಸ್ ಕಂಟ್ರೋಲ್' ಅನ್ನು ಒಳಗೊಂಡಿದ್ದು, ಒದ್ದೆ ಕೈಗಳಿಂದಲೂ ಕೂಡ ಕಾರ್ಯನಿರ್ವಹಿಸಲಿದೆ.

ಇಯರ್ ಸ್ಟಿಕ್

ನಥಿಂಗ್ ಇಯರ್ ಸ್ಟಿಕ್ ಇಯರ್‌ಬಡ್‌ಗಳು 12.6mm ಡೈನಾಮಿಕ್ ಆಡಿಯೋ ಡ್ರೈವರ್‌ಗಳನ್ನು ಹೊಂದಿದ್ದು, ಧೂಳು, ನೀರು ಮತ್ತು ಬೆವರಿನಿಂದ ರಕ್ಷಿಸಲು IP54 ಪ್ರಮಾಣೀಕರಣವನ್ನು ಪಡೆದಿದೆ. ಈ ಇಯರ್‌ಬಡ್ಸ್‌ ಇನ್-ಇಯರ್ ಡಿಟೆಕ್ಷನ್ ಸೌಲಭ್ಯ ಅನ್ನು ಒಳಗೊಂಡಿವೆ.

ಚಾರ್ಜಿಂಗ್‌ ಕೇಸ್‌

ಇದಲ್ಲದೆ ನಥಿಂಗ್‌ ಇಯರ್ ಸ್ಟಿಕ್ ಬಳಕೆದಾರರಿಗೆ 7 ಗಂಟೆಗಳ ಪ್ಲೇ ಬ್ಯಾಕ್‌ ಟೈಂ ಒದಗಿಸಲಿದೆ. ಚಾರ್ಜಿಂಗ್‌ ಕೇಸ್‌ನಲ್ಲಿ 29 ಗಂಟೆಗಳ ಆಲಿಸುವ ಸಮಯವನ್ನು ನೀಡಲಿದ್ದು, 12 ಗಂಟೆಗಳ ವರೆಗೆ ಟಾಕ್ ಟೈಮ್ ಅನ್ನು ನೀಡುತ್ತದೆ. ಇದರ ಜೊತೆಗೆ ಚಾರ್ಜಿಂಗ್ ಕೇಸ್ USB ಟೈಪ್-C ಕೇಬಲ್‌ ಸಹ ಲಭ್ಯವಾಗಲಿದೆ. ಇದು AAC ಮತ್ತು SBC ಆಡಿಯೊ ಕೊಡೆಕ್‌ಗಳಿಗೆ ಬೆಂಬಲವನ್ನು ಈ ಸಾಧನವು ಒಳಗೊಂಡಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ನಥಿಂಗ್‌ ಇಯರ್ ಸ್ಟಿಕ್ (Nothing Ear stick) ಭಾರತದಲ್ಲಿ 8,499ರೂ. ಬೆಲೆಯನ್ನು ಪಡೆದಿದೆ. ಆದರೆ ನಥಿಂಗ್ ಉತ್ಪನ್ನ ಹೊಂದಿರುವ ಗ್ರಾಹಕರಿಗೆ 1000ರೂ. ರಿಯಾಯಿತಿ ಲಭ್ಯವಾಗಲಿದೆ. ಇನ್ನು ಈ ಡಿವೈಸ್ ಇದೇ ನವೆಂಬರ್ 17 ರಂದು ಫ್ಲಿಪ್‌ಕಾರ್ಟ್‌ನಲ್ಲಿ ಮಾರಾಟ ಶುರು ಮಾಡಲಿದೆ.

Best Mobiles in India

English summary
Nothing Ear (stick) is cheaper in India if you already own a Nothing product.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X