ಇಂದು ಲಾಂಚ್‌ ಆಗಲಿದೆ ನಥಿಂಗ್‌ ಫೋನ್‌ (1); ಲೈವ್‌ ವೀಕ್ಷಣೆ ಹೇಗೆ?..ಬೆಲೆ ಎಷ್ಟು?

|

ವಿಶ್ವ ಮೊಬೈಲ್‌ ಮಾರುಕಟ್ಟೆಯ ಗಮನ ಸೆಳೆದಿರುವ ನಥಿಂಗ್‌ ಫೋನ್‌ (1) (Nothing Phone 1) ಇಂದು ಅಧಿಕೃತವಾಗಿ ಬಿಡುಗಡೆ ಆಗಲಿದೆ. ಈಗಾಗಲೇ ಈ ಫೋನಿನ ಫೀಚರ್ಸ್‌ಗಳು ಬಹಿರಂಗ ಆಗಿದ್ದು, ಮೊಬೈಲ್‌ ಪ್ರಿಯಲ್ಲಿ ಕುತೂಹಲ ಹೆಚ್ಚಿಸಿವೆ. ನಥಿಂಗ್‌ ಫೋನ್‌ (1) ಸ್ನ್ಯಾಪ್‌ಡ್ರಾಗನ್‌ 778G+ SoC ಪ್ರೊಸೆಸರ್‌ ಅನ್ನು ಒಳಗೊಂಡಿದ್ದು, 120Hz ರಿಫ್ರೇಶ್‌ ರೇಟ್‌ ಸಾಮರ್ಥದೊಂದಿಗೆ, OLED ಡಿಸ್‌ಪ್ಲೇ ಮಾದರಿಯನ್ನು ಹೊಂದಿದೆ.

ಭಾರತದಲ್ಲಿ

ನಥಿಂಗ್‌ ಫೋನ್‌ (1) (Nothing Phone 1) ಗ್ಲೋಬಲ್‌ ಮಾರುಕಟ್ಟೆಗೆ ಪರಿಚಯಿತವಾಗಲಿದೆ. ಫೋನ್ ಬಿಡುಗಡೆ ಕಾರ್ಯಕ್ರಮವನ್ನು ಕಂಪನಿಯ ಅಧಿಕೃತ ಯೂಟ್ಯೂಬ್ ಚಾನೆಲ್ ಮೂಲಕ ಭಾರತದಲ್ಲಿಇಂದು (ಜುಲೈ 12) ರಾತ್ರಿ 8.30 ಗಂಟೆಗೆ ಲೈವ್ ಸ್ಟ್ರೀಮ್ ಮಾಡಲಾಗುತ್ತದೆ. ಕಂಪನಿಯ ವೆಬ್‌ಸೈಟ್‌ನಲ್ಲಿ ಫೋನ್ ಬಿಡುಗಡೆಯ ಕುರಿತು ನೋಟಿಫಿಕೇಶನ್‌ಗಳನ್ನು ಸ್ವೀಕರಿಸಲು ಬಳಕೆದಾರರು ಸೈನ್ ಅಪ್ ಮಾಡಲು ಸಹ ಆಯ್ಕೆ ಮಾಡಬಹುದು.

ಫೋನಿನ ನಿರೀಕ್ಷಿತ ಬೆಲೆ ಎಷ್ಟು?

ಫೋನಿನ ನಿರೀಕ್ಷಿತ ಬೆಲೆ ಎಷ್ಟು?

ಯುಕೆ ಮೂಲದ ನಥಿಂಗ್ ಕಂಪನಿಯ ಮೊದಲ ಸ್ಮಾರ್ಟ್‌ಫೋನ್ ನಥಿಂಗ್ ಫೋನ್ 1 ಆಗಿದ್ದು, ಭಾರತದಲ್ಲಿ ಇದರ ಬೆಲೆ 30,000 ರೂ.ಗಳಿಂದ 40,000 ರೂ.ಗಳ ಆಸುಪಾಸಿನಲ್ಲಿ ಇರಬಹುದು ಎಂದು ಅಂದಾಜಿಸಲಾಗಿದೆ. ಅಮೆಜಾನ್ ಜರ್ಮನ್ ವೆಬ್‌ಸೈಟ್‌ನಲ್ಲಿ ಫೋನ್‌ ಅನ್ನು ಪಟ್ಟಿ ಮಾಡಲಾಗಿದೆ ಎಂದು ವರದಿಯಾಗಿದೆ. ವರದಿ ಪ್ರಕಾರ, 8GB RAM + 128 GB ಅಂತರ್ಗತ ಶೇಖರಣಾ ರೂಪಾಂತರವು EUR 469.99 (ಭಾರತದಲ್ಲಿ ಅಂದಾಜು 37,900 ರೂ), 12GB RAM + 256GB ಅಂತರ್ಗತ ಶೇಖರಣಾ ರೂಪಾಂತರವು EUR 549.909, 8GB RAM + 256GB ಸ್ಟೋರೇಜ್ ರೂಪಾಂತರವು EUR 499.99 (ಭಾರತದಲ್ಲಿ ಅಂದಾಜು 40,300ರೂ.) ಬೆಲೆ ಇರಲಿದೆ.

ನಥಿಂಗ್ ಫೋನ್ (1) ಫೋನಿನ ಲೀಕ್ ಫೀಚರ್ಸ್‌:

ನಥಿಂಗ್ ಫೋನ್ (1) ಫೋನಿನ ಲೀಕ್ ಫೀಚರ್ಸ್‌:

ನಥಿಂಗ್‌ನ ಮೊದಲ ಸ್ಮಾರ್ಟ್‌ಫೋನ್ ಪಂಚ್-ಹೋಲ್ ನಾಚ್ ಹೊಂದಿರಲಿದ್ದು, ಆಕರ್ಷಕ ಬೆಜೆಲ್‌ಗಳೊಂದಿಗೆ ಬರುತ್ತದೆ ಎಂದು ದೃಢಪಡಿಸಲಾಗಿದೆ. ಇತ್ತೀಚಿನ ಲೀಕ್ ಪ್ರಕಾರ ಮೊಬೈಲ್‌ 6.55 ಇಂಚಿನ OLED ಡಿಸ್‌ಪ್ಲೇ ಪ್ಯಾನೆಲ್ ಅನ್ನು ಬಳಗೊಂಡಿರಬಹುದು ಡಂದು ತಿಳಿಸುತ್ತದೆ. ಹಾಗೆಯೇ ಇದು 120Hz ರಿಫ್ರೇಶ್ ರೇಟ್ ಪಡೆದಿರುವ ಸಾಧ್ಯತೆಗಳಿವೆ. ಹಾಗೆಯೇ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್‌ನ ಸ್ಕ್ರೀನ್‌ನಿಂದ ಮುಚ್ಚಲಾಗುತ್ತದೆ.

ಫೋನಿನ

ನಥಿಂಗ್ ಫೋನ್ (1) ಫೋನ್ ಡ್ಯುಯಲ್‌ ಕ್ಯಾಮೆರಾ ರಚನೆ ಪಡೆದಿರುವ ಸಾಧ್ಯತೆಗಳಿವೆ. ಈ ಫೋನಿನ ಪ್ರಾಥಮಿಕ ಸಂವೇದಕವು f/1.8 ದ್ಯುತಿರಂಧ್ರದೊಂದಿಗೆ 50 ಮೆಗಾ ಪಿಕ್ಸಲ್‌ ಸೆನ್ಸಾರ್ ಹೊಂದಿರಲಿದೆ. ಹಾಗೆಯೇ 60fps ನಲ್ಲಿ 4k ವೀಡಿಯೊಗಳನ್ನು ಮಾಡುವ ಸಾಮರ್ಥ್ಯ ವನ್ನು ಹೊಂದಿರುತ್ತದೆ. ಅದರೊಂದಿಗೆ ಅಲ್ಟ್ರಾ-ವೈಡ್-ಆಂಗಲ್ ಕಾರ್ಯವನ್ನು ತರಬಹುದಾದ ಮತ್ತೊಂದು ಸಂವೇದಕವು ಇದರೊಂದಿಗೆ ಇರಲಿದೆ.

ನಿರ್ವಹಿಸಲಿದೆ

ನಥಿಂಗ್ ಫೋನ್ (1) ಫೋನ್‌ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 778G+ ಪ್ರೊಸೆಸರ್‌ ನಲ್ಲಿ ಕಾರ್ಯ ನಿರ್ವಹಿಸಲಿದೆ. ಹಾಗೆಯೇ ನಥಿಂಗ್ ಓಎಸ್‌ನೊಂದಿಗೆ ಪೂರ್ವ-ಲೋಡ್ ಆಗಿರಲಿದ್ದು, ಇದು ಆಂಡ್ರಾಯ್ಡ್ 12 ಅನ್ನು ಆಧರಿಸಿದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್ 8 GB RAM ಮತ್ತು 128 GB ಯ ಸ್ಟೋರೇಜ್ ವೇರಿಯಂಟ್‌ ಆಯ್ಕೆಯಲ್ಲಿ ಬರಲಿದೆ ಎಂದು ಅಂದಾಜಿಸಲಾಗಿದೆ. ಇನ್ನು ಈ ನಥಿಂಗ್ ಫೋನ್ (1) ಫ್ಲಾಟ್ ಎಡ್ಜ್ ವಿನ್ಯಾಸ ಮತ್ತು ಅಲ್ಯೂಮಿನಿಯಂನಿಂದ ಮಾಡಲ್ಪಟ್ಟ ಲೋಹದ ಚಾಸಿಸ್ನೊಂದಿಗೆ ಬರುತ್ತದೆ. ಹ್ಯಾಂಡ್‌ಸೆಟ್ ಪಾರದರ್ಶಕ ವಿನ್ಯಾಸ ಭಾಷೆ ಮತ್ತು ಗ್ಲಾಸ್ ಬ್ಯಾಕ್ ಪ್ಯಾನೆಲ್ ಅನ್ನು ನೀಡುತ್ತದೆ ಇದು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ರಕ್ಷಣೆಯನ್ನು ಸಹ ಹೊಂದಿರುತ್ತದೆ.

ಪಾಸ್

ನಥಿಂಗ್ ಫೋನ್ (1) (Nothing Phone 1) ಅನ್ನು ಪ್ರಿ ಆರ್ಡರ್‌ ಮಾಡುವುದಕ್ಕೆ ಸಂಸ್ಥೆಯು ಅವಕಾಶ ನೀಡಿತ್ತು. ಬಳಕೆದಾರರು ನಥಿಂಗ್‌ ಫೋನ್‌ (1) ಅನ್ನು ನೀವು ಪ್ರಿ-ಆರ್ಡರ್ ಮಾಡಬೇಕಾದರೆ ಪ್ರಿ ಆರ್ಡರ್‌ ಪಾಸ್ ಬುಕ್ ಮಾಡುವುದು ಹೇಗೆ ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.

ನಥಿಂಗ್ ಫೋನ್ (1) ಪ್ರಿ-ಆರ್ಡರ್ ಪಾಸ್

ನಥಿಂಗ್ ಫೋನ್ (1) ಪ್ರಿ-ಆರ್ಡರ್ ಪಾಸ್

ಈಗಾಗಲೇ ಬಹಿರಂಗವಾಗಿರುವ ಮಾಹಿತಿ ಪ್ರಕಾರ ನಥಿಂಗ್ ಫೋನ್ (1) ಭಾರತದಲ್ಲಿ ಫ್ಲಿಪ್‌ಕಾರ್ಟ್ ಮೂಲಕ ಲಾಂಚ್‌ ಆಗಲಿದೆ. ಈ ಸ್ಮಾರ್ಟ್‌ಫೋನ್‌ ಭಾರತದಲ್ಲಿ ಜುಲೈ 12 ರಂದು ಬಿಡುಗಡೆಯಾಗಲಿದೆ. ಅದೇ ದಿನ ನಥಿಂಗ್ ಫೋನ್ (1) ಖರೀದಿಸಲು ಬಯಸುವ ಗ್ರಾಹಕರು ಫ್ಲಿಪ್‌ಕಾರ್ಟ್‌ಗೆ ಲಾಗ್‌ ಇನ್‌ ಮಾಡಿ, ನಥಿಂಗ್ ಫೋನ್ (1) ಮಾದರಿಯನ್ನು ಆಯ್ಕೆ ಮಾಡಬೇಕಾಗುತ್ತದೆ. ಅಲ್ಲದೆ ಪ್ರಿ-ಆರ್ಡರ್ ಪಾಸ್ ಪಡೆಯಲು ಭದ್ರತಾ ಠೇವಣಿ ಮೊತ್ತವನ್ನು ಪಾವತಿಸಬೇಕಾಗುತ್ತದೆ.

ಖರೀದಿಸಬೇಕಾಗುತ್ತದೆ

ಅಂದರೆ ನಥಿಂಗ್ ಫೋನ್ (1) ಅನ್ನು ಪ್ರಿ ಆರ್ಡರ್‌ ಮಾಡಲು ಬಯಸುವವರು ಮೊದಲಿಗೆ 2,000 ರೂಪಾಯಿಗಳನ್ನು ಭದ್ರತಾ ಠೇವಣಿಯಾಗಿ ಪಾವತಿಸಬೇಕಾಗುತ್ತದೆ. ಭದ್ರತಾ ಠೇವಣಿಯನ್ನು ಪಾವತಿಸುವ ಮೂಲಕ ಪ್ರಿ-ಆರ್ಡರ್ ಪಾಸ್ ಅನ್ನು ಖರೀದಿಸಬೇಕಾಗುತ್ತದೆ. ಇನ್ನು ಪ್ರಿ-ಆರ್ಡರ್‌ ಪಾಸ್‌ ಬುಕ್ಕಿಂಗ್‌ಗಾಗಿ ತೆರೆಯಲಾಗುವ ಫ್ಲಿಪ್‌ಕಾರ್ಟ್‌ ವಿಂಡೋ ಅದೇ ದಿನ 9:00PM ಕ್ಕೆ ತೆರೆಯುತ್ತದೆ. ಇದರ ಮೂಲಕ ನೀವು ನಥಿಂಗ್ ಫೋನ್ (1) ಅನ್ನು ಮುಂಗಡವಾಗಿ ಆರ್ಡರ್ ಮಾಡಲು ಸಾಧ್ಯವಾಗುತ್ತದೆ. ಒಂದು ವೇಳೆ ನೀವು ಈ ಪಾಸ್ ಅನ್ನು ಪಡೆದುಕೊಳ್ಳಲು ವಿಫಲವಾದರೆ, ನಂತರದ ಹಂತದಲ್ಲಿ ನೀವು ನಥಿಂಗ್ ಫೋನ್ ಅನ್ನು ಪ್ರಿ ಆರ್ಡರ್ ಮಾಡಲು ಸಾಧ್ಯವಾಗುವುದಿಲ್ಲ.

ಗ್ರಾಹಕರಿಗೆ

ಇನ್ನು ನೀವು ನಥಿಂಗ್ ಫೋನ್ (1) ಖರೀದಿಸುವ ಮುನ್ನವೇ ಪ್ರಿ ಆರ್ಡರ್‌ಗಾಗಿ ಪಾವತಿಸುವ ಭದ್ರತಾ ಠೇವಣಿ ಹಣ ಫೋನ್‌ನ ಅಂತಿಮ ಬೆಲೆಯಿಂದ ಕಡಿತಗೊಳಿಸಲಾಗುವುದು ಎಂದು ಹೇಳಲಾಗಿದೆ. ಇದರ ಜೊತೆಗೆ, ಪ್ರಿ ಆರ್ಡರ್‌ ಪಾಸ್ ಅನ್ನು ಖರೀದಿಸು ಗ್ರಾಹಕರಿಗೆ ಕೆಲವು ವಿಶೇಷ ಬಹುಮಾನಗಳು ಕೂಡ ಲಭ್ಯವಾಗಲಿದೆ, ಇದರಲ್ಲಿ ಫ್ರೀಯಾಗಿ ಮೊಬೈಲ್‌ ಪಡೆದುಕೊಳ್ಳುವ ಅವಕಾಶವೂ ಕೂಡ ದೊರೆಯಲಿದೆ. ಅಂದರೆ ನಥಿಂಗ್ ಫೋನ್ (1) ಅನ್ನು ಖರೀದಿಸಲು ಬಯಸುವವರು ಪ್ರಿ ಆರ್ಡರ್‌ ಮಾಡುವಾಗ ಲಭ್ಯವಾಗುವ ಬಹುಮಾನಗಳಲ್ಲಿ ಈ ಸ್ಮಾರ್ಟ್‌ಫೋನ್‌ ಪ್ರೀಯಾಗಿ ದೊರೆಯುವ ಅವಕಾಶವನ್ನು ಸಹ ನೀಡಲಾಗಿದೆ.

Best Mobiles in India

English summary
Nothing Phone 1 Global Launch Today: How to Watch Livestream, Expected Price.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X