ಜಿಯೋನಿ A1-ಈಗ ಭಾರತದಲ್ಲಿ ರಿಯಾಯಿತಿ ದರದಲ್ಲಿ ಲಭ್ಯ!

ಹಬ್ಬದ ಪ್ರಯುಕ್ತ ಜಿಯೋನಿ ತನ್ನ ಫ್ಲ್ಯಾಗ್ಶಿಪ್ ಮೊಭೈಲ್ ಆದ ಜಿಯೋನಿ A1 ಗೆ ರೂ3000 ದಷ್ಟು ರಿಯಾಯಿತಿ ಮತ್ತು ಜಿಯೋ ನ ಬಂಡಲ್ಡ್ ಡೇಟಾ ಆಫರ್ ಅನ್ನು ಘೋಷಿಸಿದ್ದು ಮಾರುಕಟ್ಟೆಯಲ್ಲಿ ರೂ 16,999ಕ್ಕೆ ಲಭ್ಯವಿದೆ.

By Tejaswini P G
|

ಈ ಹಬ್ಬದ ಸಂದರ್ಭದಲ್ಲಿ ಪ್ರತಿಯೊಂದು ಸ್ಮಾರ್ಟ್ಫೋನ್ ಬ್ರ್ಯಾಂಡ್ ನಾಮುಂದು ತಾಮುಂದು ಎಂದು ಜನರಿಗೆ ಹಬ್ಬದ ರಿಯಾಯಿತಿಗಳನ್ನು ನೀಡುತ್ತಿದೆ. ಹೀಗಿರುವಾಗ ಜಿಯೋನಿ ಇಂಡಿಯಾ ಕೂಡ ತನ್ನ ಗ್ರಾಹಕರಿಗೆ ಒಳ್ಳೆಯ ಹಬ್ಬದ ಉಡುಗೊರೆಯನ್ನೇ ನೀಡ ಹೊರಟಿದೆ. ಹೌದು, ಜಿಯೋನಿ ತನ್ನ ಫ್ಲ್ಯಾಗ್ಶಿಪ್ ಮೊಬೈಲ್ ಆದ ಜಿಯೋನಿ A1 ಗೆ ನೀಡಿದೆ ಹಬ್ಬದ ಪ್ರಯುಕ್ತ ವಿಶೇಷ ರಿಯಾಯಿತಿ ರೂ 3000 ದಷ್ಟು!!

ಜಿಯೋನಿ A1-ಈಗ ಭಾರತದಲ್ಲಿ ರಿಯಾಯಿತಿ ದರದಲ್ಲಿ ಲಭ್ಯ!

ಜಿಯೋನಿ A1 ನ ನಿಜವಾದ ಬೆಲೆ ರೂ 19,999 ಆಗಿದ್ದು, ಈಗ ಈ ರಿಯಾಯಿತಿಯ ನಂತರ ಕೇವಲ ರೂ 16,999ಕ್ಕೆ ಖರೀದಿಸಬಹುದಾಗಿದೆ. ಇದರೊಂದಿಗೆ ರಿಲಯೆನ್ಸ್ ಜಿಯೋ ನ ಬಂಡಲ್ಡ್ ಡೇಟಾ ಆಫರ್ ಕೂಡ ದೊರೆಯಲಿದ್ದು , ಗ್ರಾಹಕರಿಗೆ ಜಿಯೋನಿ A1 ಖರೀದಿಸಲು ಇದೇ ಸುಸಮಯ.

ಗ್ರಾಹಕರು ತಮ್ಮ ಜಿಯೋನಿ A1 ಮೊಬೈಲ್ ಅನ್ನು ಮೊದಲ ಬಾರಿಗೆ ಜಿಯೋ ನೆಟ್ವರ್ಕ್ ನಲ್ಲಿ ರೂ 309 ಅಥವ ಅದಕ್ಕಿಂತ ಅಧಿಕ ರೀಚಾರ್ಜ್ ಉಪಯೋಗಿಸಿ ಆಕ್ಟಿವೇಟ್ ಮಾಡುವ ಮೂಲಕ ಅವರು ಹೆಚ್ಚಿನ 60GB ಡೇಟಾ ಪಡೆಯಲು ಅರ್ಹರಾಗುತ್ತಾರೆ. ಕಂಪೆನಿಯ ಅನುಸಾರ ಗ್ರಾಹಕರಿಗೆ ಈ ಹೆಚ್ಚಿನ ಡೇಟಾ ಮುಂದಿನ 6 ರೂ 309 ಅಥವಾ ಮೇಲ್ಪಟ್ಟ ರೀಚಾರ್ಜ್ ಮಾಡಿಸಿದಾಗ ದೊರೆಯಲಿದೆ.

ಜಿಯೋನಿ A1 ಅನ್ನು MWC 2017 ರಲ್ಲಿ ಬಿಡುಗಡೆ ಮಾಡಲಾಗಿತ್ತು. ಬಿಡುಗಡೆಯ ವೇಳೆ ಜಿಯೋನಿಯು ಶಕ್ತಿಶಾಲಿ ಬ್ಯಾಟರಿ ಮತ್ತು ಶ್ರೇಷ್ಠ ಗುಣಮಟ್ಟದ ಸೆಲ್ಫೀ ಫೋಟೋ ಜಿಯೋನಿ A1 ನ ಪ್ರಮುಖ ಅಂಶಗಳು ಎಂದು ತಿಳಿಸಿತ್ತು.

ಬನ್ನಿ, ಜಿಯೋನಿ A1 ನ ಪ್ರಮುಖ ಫೀಚರ್ಗಳತ್ತ ಒಂದು ಇಣುಕು ನೋಟ ಹರಿಸೋಣ. 5.5ಇಂಚ್ ಫುಲ್-HD (1080X1920 ಪಿಕ್ಸೆಲ್ಸ್) ಡಿಸ್ಪ್ಲೇ ಹೊಂದಿರುವ ಜಿಯೋನಿ A1 ನಲ್ಲಿದೆ ಮೀಡಿಯಾಟೆಕ್ ಹೀಲಿಯೋ P10(MT6755) SoC. ಜಿಯೋನಿ A1 4GB ರ್ಯಾಮ್ ಮತ್ತು 64GB ಇಂಟರ್ನಲ್ ಸ್ಟೋರೇಜ್ ಹೊಂದಿದ್ದು ಮೈಕ್ರೋSD ಕಾರ್ಡ್ ಬಳಸಿ 256GBವರೆಗೆ ವಿಸ್ತರಿಸಬಹುದು.

ಜಿಯೋನಿ A1 ನ ಕ್ಯಾಮೆರಾ ಬಗ್ಗೆ ಹೇಳುವುದಾದರೆ ಇಲ್ಲಿದೆ 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ F/2.0 ಅಪರ್ಚರ್,1/3.06-ಇಂಚ್ ಸೆನ್ಸರ್, 5P ಲೆನ್ಸ್ ಮತ್ತು ಫ್ಲ್ಯಾಶ್ ಜೊತೆಗೆ. ಅಲ್ಲದೆ ಇದರ 13 ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾ 1/3.06-ಇಂಚ್ ಸೋನಿ IMX258 ಸೆನ್ಸರ್ ಮತ್ತು ಡ್ಯುಯಲ್-LED ಫ್ಲ್ಯಾಶ್ ಹೊಂದಿದೆ.

ಅಮಿಗೋ 4.0 ಆಧಾರಿತ ಆಂಡ್ರಾಯ್ಡ್ 7.0 ಮೇಲೆ ಓಡುವ ಜಿಯೋನಿ A1 4010mAH ನಾನ್-ರಿಮೂವೆಬಲ್ ಬ್ಯಾಟರಿ ಹೊಂದಿದೆ. ಜಿಯೋನಿ A1 ಮೊಬೈಲ್ ನ ಸುತ್ತಳತೆ 154.50mmX76.50mmX8.30mm(ಉದ್ದXಅಗಲXದಪ್ಪ) ಇದ್ದು 183.00 ಗ್ರಾಮ್ ತೂಕ ಹೊಂದಿದೆ.

ಸ್ಮಾರ್ಟ್‌ಫೋನ್ ಬಳಕೆದಾರರೇ CC ಕ್ಲಿನರ್ ಅನ್‌ಇನ್‌ಸ್ಟಾಲ್ ಮಾಡಿ! ಯಾಕೆ?ಸ್ಮಾರ್ಟ್‌ಫೋನ್ ಬಳಕೆದಾರರೇ CC ಕ್ಲಿನರ್ ಅನ್‌ಇನ್‌ಸ್ಟಾಲ್ ಮಾಡಿ! ಯಾಕೆ?

ಜಿಯೋನಿ A1 ಡ್ಯುಯಲ್ ಸಿಮ್( GSM ಮತ್ತು GSM) ಸ್ಮಾರ್ಟ್ಫೋನ್ ಆಗಿದ್ದು ಒಂದು ನ್ಯಾನೋ ಸಿಮ್ ಮತ್ತು ಒಂದು ಮೈಕ್ರೋಸಿಮ್ ಸ್ಲಾಟ್ ಹೊಂದಿದೆ. ವೈ-ಫೈ,GPS,ಬ್ಲೂಟೂತ್, USB OTG, FM, 3G ಮತ್ತು 4G(ಭಾರತದಲ್ಲಿ ಕೆಲವು LTE ನೆಟ್ವರ್ಕ್ಗಳು ಬಳಸುವ ಬ್ಯಾಂಡ್ 40 ಬೆಂಬಲದೊಂದಿಗೆ) ಮುಂತಾದ ಕನೆಕ್ಟಿವಿಟಿ ಫೀಚರ್ಗಳು ಕೂಡ ಇದೆ.

ಕಂಪಾಸ್ ಮ್ಯಾಗ್ನೆಟೋಮೀಟರ್, ಪ್ರಾಕ್ಸಿಮಿಟ್ ಸೆನ್ಸರ್, ಆಕ್ಸೆಲರೋಮೀಟರ್, ಆಂಬಿಯೆಂಟ್ ಲೈಟ್ ಸೆನ್ಸರ್ ಮತ್ತು ಗೈರೋಸ್ಕೋಪ್ ಇತ್ಯಾದಿ ಸೆನ್ಸರ್ಗಳೂ ಈ ಫೋನ್ ನಲ್ಲಿದೆ. ಬ್ಲ್ಯಾಕ್, ಗೋಲ್ಡ್ ಮತ್ತು ಗ್ರೇ ಬಣ್ಣಗಳಲ್ಲಿ ಜಿಯೋನಿ A1 ಮಾರುಕಟ್ಟೆಯಲ್ಲಿ ಲಭ್ಯವಿದೆ.

Best Mobiles in India

Read more about:
English summary
Gionee India is aiming to give something to the consumers and its fans this festive season.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X