ಕೀಪ್ ನೋಟ್ಸ್‌ ಅನ್ನು ಗೂಗಲ್‌ ಡಾಕ್ಸ್‌ಗೆ ವರ್ಗಾಯಿಸುವುದು ಹೇಗೆ?.. ಇಲ್ಲಿದೆ ವಿವರ

|

ಟೆಕ್‌ ಜಗತ್ತಿನ ದೈತ್ಯ ಅಪ್ಲಿಕೇಶನ್‌ಗಳಲ್ಲಿ ಪ್ರಮುಖವಾದ ಗೂಗಲ್‌ ತನ್ನ ಸರ್ಚ್‌ ಇಂಜಿನ್‌ ಮೂಲಕ ಕೇವಲ ಮಾಹಿತಿ ನೀಡುವುದಕ್ಕಷ್ಟೇ ಸೀಮಿತಾಗದೇ ಈಗಾಗಲೇ ಸ್ಮಾರ್ಟ್‌ಫೋನ್‌ ಹಾಗೂ ಸ್ಮಾರ್ಟ್‌ವಾಚ್‌ಗಳನ್ನು ಪರಿಚಯಿಸಿ ಹೆಚ್ಚು ಜನಪ್ರಿಯಗೊಂಡಿದೆ. ಹಾಗೆಯೇ ಗೂಗಲ್ ನಕ್ಷೆಗಳು, ಗೂಗಲ್‌ ಫೋಟೋಗಳು ಎಂಬಿತ್ಯಾದಿ ಅಪ್ಲಿಕೇಶನ್‌ ಮೂಲಕ ಬಳಕೆದಾರರಿಗೆ ಇನ್ನಷ್ಟು ಹತ್ತಿರವಾಗಿದ್ದು, ಪ್ರಸ್ತುತ ಲಭ್ಯ ಇರುವ ಕೆಲವು ಅಪ್ಲಿಕೇಶನ್‌ಗಳಲ್ಲಿ ಕೆಲವು ನವೀಕರಣ ಮಾಡಿದೆ.

ಗೂಗಲ್‌ ನೋಟ್ಸ್‌

ಹೌದು, ಗೂಗಲ್‌ ಈಗಾಗಲೇ ಬಳಕೆದಾರರ ಸ್ನೇಹಿಯಾಗಿ ಹೆಸರುಗಳಿಸುತ್ತಿದ್ದು, ಈಗ ತನ್ನ ಆಪ್‌ಗಳಲ್ಲಿ ಇನ್ನಷ್ಟು ಫೀಚರ್ಸ್‌ಗಳನ್ನು ಪರಿಚಯಿಸಿದೆ. ಗೂಗಲ್‌ ವರ್ಕ್‌ಪ್ಲೇಸ್‌ ಅಪ್ಲಿಕೇಶನ್‌ ವಿಭಾಗದಲ್ಲಿ ಹೊಸ ಫೀಚರ್ಸ್‌ ನೀಡಲಾಗಿದ್ದು ಒಂದಕ್ಕೊಂದು ಸಂಯೋಜಿಸಲ್ಪಟ್ಟಿವೆ. ಈ ಫೀಚರ್ಸ್‌ನಿಂದ ನೀವು ಸುಲಭವಾಗಿ ನಿಮ್ಮ ಗೂಗಲ್‌ ನೋಟ್ಸ್‌ ನಲ್ಲಿರುವ ಮಾಹಿತಿಯನ್ನು ಅಥವಾ ಏನಾದರೂ ವಿಷಯಗಳನ್ನು ಗೂಗಲ್‌ ಡಾಕ್ಸ್‌ನಲ್ಲಿ ಭದ್ರಪಡಿಸಿಕೊಳ್ಳಬಹುದಾಗಿದೆ. ಹಾಗಿದ್ರೆ ಮತ್ಯಾಕೆ ತಡ ಈ ಬಗೆಗಿನ ವಿಷಯವನ್ನು ವಿವರವಾಗಿ ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಏನಿದು ನವೀಕರಣ?

ಏನಿದು ನವೀಕರಣ?

ಗೂಗಲ್‌ನ ತನ್ನ ಗೂಗಲ್‌ ವರ್ಕ್‌ಪ್ಲೇಸ್ ಅಪ್ಲಿಕೇಶನ್‌ಗಳನ್ನು ಸಂಯೋಜಿಸಿದ್ದು, ಅದರಲ್ಲೂ ಪ್ರಮುಖವಾಗಿ ಗೂಗಲ್ ಕೀಪ್ ಹಾಗೂ ಗೂಗಲ್ ಡಾಕ್ಸ್ ನಲ್ಲಿ ಹೆಚ್ಚಿನ ನವೀಕರಣ ತಂದಿದೆ. ಇನ್ನು ಗೂಗಲ್ ಕೀಪ್‌ ಸಾಮಾನ್ಯವಾಗಿ ಸಣ್ಣ ಟಿಪ್ಪಣಿಗಳನ್ನು ಮಾಡಿಕೊಳ್ಳುವ ಆಪ್ ಆಗಿದ್ದು, ಗೂಗಲ್‌ ಡಾಕ್ಸ್ ಆನ್‌ಲೈನ್ ವರ್ಡ್ ಪ್ರೊಸೆಸರ್ ಆಗಿದೆ. ಈಗ ಇವೆರಡೂ ವೆಬ್ ಆಧಾರಿತ ಗೂಗಲ್‌ ಡಾಕ್ಸ್ ಎಡಿಟರ್ಸ್ ಸೂಟ್‌ನ ಒಂದು ಭಾಗವಾಗಿ ಕೆಲಸ ಮಾಡಲಿವೆ.

ಗೂಗಲ್ ಕೀಪ್‌

ನೀವೇನಾದರೂ ಗೂಗಲ್ ಕೀಪ್‌ ನಲ್ಲಿ ಮಾಡುವ ಎಲ್ಲಾ ಟಿಪ್ಪಣಿಗಳನ್ನು ಡೇಟಾ ಬ್ಯಾಂಕ್ ಮಾಡಲು ಮುಂದಾದರೆ ಇನ್ಮುಂದೆ ಗೂಗಲ್‌ ಡಾಕ್ಸ್‌ ಬಳಕೆ ಮಾಡಿಕೊಳ್ಳಬಹುದು. ಯಾಕೆಂದರೆ ಹೊಸ ನವೀಕರಣದಲ್ಲಿ ನೀವು ಕೀಪ್ ನೋಟ್‌ನಿಂದ ಗೂಗಲ್‌ಡಾಕ್ಸ್‌ಗೆ ಎಂಟ್ರಿಯಾಗಲು ಅನುವು ಮಾಡಿಕೊಡುತ್ತದೆ. ಪ್ರಮುಖ ವಿಷಯ ಎಂದರೆ, ಈ ಫೀಚರ್ಸ್‌ ಅನ್ನು ಡೆಸ್ಕ್‌ಟಾಪ್ ಅಥವಾ ವೆಬ್ ಆವೃತ್ತಿಯೊಂದಿಗೆ ಮಾತ್ರ ಬಳಕೆ ಮಾಡಬಹುದಾಗಿದೆ.

 ಕೀಪ್ ನೋಟ್ಸ್

ಇನ್ನು ಕೀಪ್ ನೋಟ್ಸ್ ಅಪ್ಲಿಕೇಶನ್ ಅನ್ನು ಮೊದಲು ನೀವು ಸಕ್ರಿಯಗೊಳಿಸಲು ಅಥವಾ ಅದನ್ನು ಬಳಕೆ ಮಾಡಲು ಗೂಗಲ್‌ ಡಾಕ್ಸ್‌ ಫೈಲ್‌ನ ಕೆಳಗಿನ ಬಲ ಮೂಲೆಯಲ್ಲಿರುವ ಸೈಡ್ ಪ್ಯಾನಲ್ ಬಟನ್ ಅನ್ನು ಕ್ಲಿಕ್ ಮಾಡಿ. ನಂತರ ಅಲ್ಲಿ ಕಾಣುವ ಕೀಪ್ ನೋಟ್ಸ್ ಅನ್ನು ಅಕ್ವಿವ್‌ ಮಾಡಿ. ನಿಮಗೆ ಬೇಕಾದ ಟಿಪ್ಪಣಿಗಳನ್ನು ಮಾಡಿಟ್ಟುಕೊಳ್ಳಿ.

ಕೀಪ್ ನೋಟ್ಸ್ ಅನ್ನು ಗೂಗಲ್‌ ಡಾಕ್ಸ್‌ಗೆ ಹೀಗೆ ವರ್ಗಾಯಿಸಿ

ಕೀಪ್ ನೋಟ್ಸ್ ಅನ್ನು ಗೂಗಲ್‌ ಡಾಕ್ಸ್‌ಗೆ ಹೀಗೆ ವರ್ಗಾಯಿಸಿ

  • * ನೀವು ಗೂಗಲ್‌ ಕೀಪ್ ನಿಂದ ಏನಾದರೂ ಮಾಹಿತಿ ಅಥವಾ ನೀವು ಟಿಪ್ಪಣಿ ಮಾಡಿದ್ದನ್ನು ವರ್ಗಾಯಿಸಲು ಗೂಗಲ್‌ ಡಾಕ್ಸ್‌ ಓಪನ್‌ ಮಾಡಿ.
  • * ಗೂಗಲ್‌ ಡಾಕ್ಸ್‌ ಓಪನ್‌ ಆದ ನಂತರ ಡಾಕ್ಸ್‌ನ ಬಲಭಾಗದ ಪ್ಯಾನಲ್‌ನಲ್ಲಿ ಹಳದಿ ಬಣ್ಣದಲ್ಲಿ ಕಾಣಸಿಗುವ ಕೀಪ್ ನೋಟ್ಸ್ ಐಕಾನ್ ಮೇಲೆ ಟ್ಯಾಪ್ ಮಾಡಿ.
  • * ಇದಾದ ನಂತರ ನಿಮ್ಮ ಗೂಗಲ್‌ ಅಕೌಂಟ್‌ನಲ್ಲಿ ಉಳಿಸಲಾದ ಟಿಪ್ಪಣಿಗಳು ಬಲಭಾಗದ ಪ್ಯಾನಲ್‌ನಲ್ಲಿ ಕಾಣಿಸಿಕೊಳ್ಳುತ್ತವೆ.
  • * ಬಳಿಕ ನೀವು ಯಾವ ಟಿಪ್ಪಣಿಯನ್ನು ಡಾಕ್ಸ್‌ನಲ್ಲಿ ಇರಿಸಬೇಕೋ ಅದರ ಮೇಲೆ ಕ್ಲಿಕ್‌ ಮಾಡಿ ಅದನ್ನು ಡ್ರ್ಯಾಗ್‌ ಮಾಡಿ ಈಗಾಗಲೇ ಓಪನ್‌ ಆಗಿರುವ ಗೂಗಲ್‌ ಡಾಕ್ಸ್‌ ಮೇಲೆ ತಂದು ಬಿಡಿ.
  • * ಡ್ರ್ಯಾಗ್ ಮಾಡಿ ಡಾಕ್ಸ್‌ನಲ್ಲಿ ಇರಿಸಲಾದ ಫೈಲ್‌ ನಿಮ್ಮ ಗೂಗಲ್‌ ಅಕೌಂಟ್‌ ಜೊತೆ ಸಂಯೋಜಿತವಾಗಿರುವ ಗೂಗಲ್‌ ಡ್ರೈವ್‌ನಲ್ಲಿ ಸೇವ್‌ ಆಗುತ್ತದೆ.
  • Copy to Doc

    ಇದಿಷ್ಟೇ ಅಲ್ಲದೆ ಇನ್ನೂ ಒಂದು ಮಾರ್ಗದ ಮೂಲಕ ಈ ಫೀಚರ್ಸ್ ಅನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಅದು ಹೇಗೆ ಎಂದರೆ, ಕೀಪ್ ನೋಟ್‌ ಅನ್ನು ಓಪನ್ ಮಾಡಿದ ನಂತರ ನಿಮಗೆ ಅಲ್ಲಿ 'Copy to Doc' ಎಂಬ ಆಯ್ಕೆ ಬರುತ್ತದೆ. ಅದನ್ನು ಟ್ಯಾಪ್‌ ಮಾಡುವ ಮೂಲಕ ಸುಲಭವಾಗಿ ನಿಮ್ಮ ಟಿಪ್ಪಣಿಯನ್ನು ಡಾಕ್ಸ್‌ಗೆ ನಕಲು ಮಾಡಬಹುದು.ಆದರೆ, ಈ ಫೀಚರ್ಸ್‌ ಅನ್ನು ಡೆಸ್ಕ್‌ಟಾಪ್ ಮತ್ತು ಮೊಬೈಲ್ ಅಪ್ಲಿಕೇಶನ್‌ಗಳ ಮೂಲಕ ಮಾತ್ರವೇ ಮಾಡಬಹುದಾಗಿದೆ.

Best Mobiles in India

Read more about:
English summary
Google has gained huge popularity among the applications giant of the tech world. Now that Google Keep Notes and Google Docs are integrated, learn how to use here.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X