ಈ ವಿಚಾರದಲ್ಲಿ ಭಾರತ-ಅಮೆರಿಕಾ ಒಂದಾದರೂ ಚೀನಾವನ್ನು ಮೀರಿಸಲು ಸಾಧ್ಯವೇ ಇಲ್ಲ..!

|

ಭಾರತೀಯ ಮಾರುಕಟ್ಟೆಯೂ ಅತ್ಯಂತ ಬೇಗವಾಗಿ ಬೆಳವಣಿಗೆಯನ್ನು ಸಾಧಿಸುತ್ತಿದೆ. ಅದರಲ್ಲಿಯೂ ಸ್ಮಾರ್ಟ್‌ಫೋನ್ ಮಾರುಕಟ್ಟೆಯ ವಿಸ್ತಾರ ಅವಧಿಕವಾಗುತ್ತಿರುವುದಲ್ಲದೇ, ವಹಿವಾಟು ಸಹ ದಾಖಲೆ ಪ್ರಮಾಣದಲ್ಲಿ ಅಧಿಕವಾಗುತ್ತಿದೆ. ಈ ಹಿನ್ನಲೆಯಲ್ಲಿ ದಿನಕ್ಕೊಂದು ಸ್ಮಾರ್ಟ್‌ಫೋನ್ ತಯಾಕರ ಕಂಪನಿಗಳು ಭಾರತೀಯ ಮಾರುಟಕ್ಟೆಯನ್ನು ಪ್ರವೇಶಿಸುತ್ತಿವೆ, ಆದರೆ ವಿಶ್ವದಲ್ಲಿ ಭಾರತೀಯರು ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಎಷ್ಟನೇ ಸ್ಥಾನದಲ್ಲಿದ್ದಾರೆ ಗೊತ್ತಾ..?

ಈ ವಿಚಾರದಲ್ಲಿ ಭಾರತ-ಅಮೆರಿಕಾ ಒಂದಾದರೂ ಚೀನಾವನ್ನು ಮೀರಿಸಲು ಸಾಧ್ಯವೇ ಇಲ್ಲ..!

ಭಾರತೀಯ ಸ್ಮಾರ್ಟ್‌ಫೋನ್ ಬಳಕೆದಾರರು ವಿಶ್ವ ಮಾರುಕಟ್ಟೆಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಜನಸಂಖ್ಯೆಯಲ್ಲಿ ಮೊದಲ ಸ್ಥಾನವನ್ನು ಅಲಂಕರಿಸಿರುವ ಚೀನಾ, ಸ್ಮಾರ್ಟ್‌ಫೋನ್ ಬಳಕೆದಾರರ ಸಂಖ್ಯೆಯಲ್ಲಿಯೂ ಮೊದಲ ಸ್ಥಾನವನ್ನು ಪಡೆದುಕೊಂಡಿದೆ ಎನ್ನಲಾಗಿದೆ. ಭಾರತ-ಅಮೆರಿಕಾದ ಬಳಕೆದಾರರನ್ನು ಒಂದು ಮಾಡಿದರೂ ಚೀನಾವನ್ನು ಮೀರಿಸಲು ಸಾಧ್ಯವಿಲ್ಲ. ಬನ್ನಿ ಸ್ಮಾರ್ಟ್‌ಫೋನ್‌ ಬಳಕೆದಾರರಲ್ಲಿ ಯಾವ ದೇಶ ಎಷ್ಷನೇ ಸ್ಥಾನದಲ್ಲಿದೆ ಎಂಬುದನ್ನು ನೋಡುವ.

10ನೇ ಸ್ಥಾನದಲ್ಲಿ ಯೂನಿಟೆಡ್ ಕಿಂಡಮ್:

10ನೇ ಸ್ಥಾನದಲ್ಲಿ ಯೂನಿಟೆಡ್ ಕಿಂಡಮ್:

44.95 ಮಿಲಿಯನ್ ಸ್ಮಾರ್ಟ್‌ಫೋನ್ ಬಳಕೆದಾರರನ್ನು ಯೂನಿಟೆಡ್ ಕಿಂಡಮ್ ನಲ್ಲಿ ಕಾಣಬಹುದಾಗಿದ್ದು, ಈ ಮಾರುಕಟ್ಟೆಯಲ್ಲಿ ಟಾಪ್ ಎಂಡ್ ಸ್ಮಾರ್ಟ್‌ಫೋನ್‌ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ ಎನ್ನಲಾಗಿದೆ.

ಮೆಕ್ಸಿಕೋಗೆ 9ನೇ ಸ್ಥಾನ:

ಮೆಕ್ಸಿಕೋಗೆ 9ನೇ ಸ್ಥಾನ:

ಮೆಕ್ಸಿಕೋದಲ್ಲಿಯೂ ಸ್ಮಾರ್ಟ್‌ಫೋನ್ ಬಳಕೆದಾರರ ಸಂಖ್ಯೆಯೂ ಅಧಿಕವಾಗಿದ್ದು, 52.99 ಮಿಲಿಯನ್ ಸ್ಮಾರ್ಟ್‌ಫೋನ್ ಬಳಕೆದಾರರನ್ನು ಇಲ್ಲಿ ಕಾಣಬಹುದಾಗಿದೆ. ಇಲ್ಲಿಯೂ ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಿದೆ.

8ನೇ ಸ್ಥಾನದಲ್ಲಿ ಇಂಡೋನೇಷ್ಯಾ:

8ನೇ ಸ್ಥಾನದಲ್ಲಿ ಇಂಡೋನೇಷ್ಯಾ:

ಸುಮಾರು 54.49 ಮಿಲಿಯನ್ ಸ್ಮಾರ್ಟ್‌ಫೋನ್ ಬಳಕೆದಾರರನ್ನು ಹೊಂದಿರುವ ಇಂಡೋನೇಷ್ಯಾ ಸಹ ಬೆಳೆಯುತ್ತಿರುವ ಮಾರುಕಟ್ಟೆಯಾಗಿದ್ದು, ಟಾಪ್ ಕಂಪನಿಗಳು ಈ ಮಾರುಕಟ್ಟೆಯಲ್ಲಿ ಹೆಚ್ಚಿನ ಹೂಡಿಕೆ ಮಾಡುತ್ತಿವೆ.

ಏಳನೇ ಸ್ಥಾನದಲ್ಲಿ ಜರ್ಮನಿ:

ಏಳನೇ ಸ್ಥಾನದಲ್ಲಿ ಜರ್ಮನಿ:

ಜಾಗತಿಕವಾಗಿ 7ನೇ ಸ್ಥಾನದಲ್ಲಿ ಕಾಣಿಸಿಕೊಂಡಿರುವ ಜರ್ಮನಿಯಲ್ಲಿ ಸ್ಮಾರ್ಟ್‌ಫೋನ್ ಬಳಕೆದಾರರ ಸಂಖ್ಯೆಯೂ 55.49ರಷ್ಟಿದ್ದು, ಇಲ್ಲಿಯೂ ಸಹ ಸ್ಮಾರ್ಟ್‌ಫೋನ್ ಕಡೆಗೆ ಒಲವು ಅಧಿಕವಾಗುತ್ತಿದೆ ಎನ್ನಲಾಗಿದೆ.

ಜಪಾನ್ 6ನೇ ಸ್ಥಾನದಲ್ಲಿ:

ಜಪಾನ್ 6ನೇ ಸ್ಥಾನದಲ್ಲಿ:

ತಂತ್ರಜ್ಞಾನದ ತವರು ಎನ್ನಿಸಿಕೊಂಡಿರುವ ಜಪಾನ್‌ನಲ್ಲಿ 63.09 ಮಿಲಿಯನ್ ಸ್ಮಾರ್ಟ್‌ಫೋನ್ ಬಳಕೆದಾರಿದ್ದು, ಜಾಗತಿಕವಾಗಿ 6ನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ ಎನ್ನಲಾಗಿದೆ.

5ನೇ ಸ್ಥಾನದಲ್ಲಿ ರಷ್ಯಾ:

5ನೇ ಸ್ಥಾನದಲ್ಲಿ ರಷ್ಯಾ:

ಜಾಗತಿಕವಾಗಿ ದೊಡ್ಡಣ್ಣನಿಗೆ ಸೆಡ್ಡು ಹೊಡೆಯುವ ಸಾಮರ್ಥ್ಯವನ್ನು ಹೊಂದಿರುವ ರಷ್ಯಾ, 78.36 ಮಿಲಿಯನ್ ಸ್ಮಾರ್ಟ್‌ಫೋನ್ ಬಳಕೆದಾರರನ್ನು ಹೊಂದಿದೆ ಎನ್ನಲಾಗಿದೆ.

ನಾಲ್ಕನೇ ಸ್ಥಾನದಲ್ಲಿ ಬ್ರೆಜಿಲ್:

ನಾಲ್ಕನೇ ಸ್ಥಾನದಲ್ಲಿ ಬ್ರೆಜಿಲ್:

ಬೆಳೆಯುತ್ತಿರುವ ಮಾರುಕಟ್ಟೆಯಲ್ಲಿ ಭಾರತದೊಂದಿಗೆ ಸ್ಪರ್ಧೆಗೆ ನಿಂತಿರುವ ಬ್ರೆಜಿಲ್, 79.58 ಮಿಲಿಯನ್ ಸ್ಮಾರ್ಟ್‌ಫೋನ್ ಬಳಕೆದಾರರನ್ನು ಹೊಂದಿದ್ದು, ಈ ಮೂಲಕ ನಾಲ್ಕನೇ ಸ್ಥಾನವನ್ನು ಅಲಂಕರಿಸಿದೆ ಎನ್ನಲಾಗಿದೆ.

ಮೂರನೇ ಸ್ಥಾನದಲ್ಲಿ ಅಮೆರಿಕಾ:

ಮೂರನೇ ಸ್ಥಾನದಲ್ಲಿ ಅಮೆರಿಕಾ:

ವಿಶ್ವದ ದೊಡ್ಡಣ್ಣ ಎನ್ನುವ ಖ್ಯಾತಿಗೆ ಪಾತ್ರವಾಗಿರುವ ಅಮೆರಿಕಾ, ಸ್ಮಾರ್ಟ್‌ಫೋನ್ ಬಳಕೆದಾರರ ಸಂಖ್ಯೆಯಲ್ಲಿ 3ನೇ ಸ್ಥಾನವನ್ನು ಪಡೆದುಕೊಂಡಿದ್ದು, 226.29 ಮಿಲಿಯನ್ ಬಳಕೆದಾರರನ್ನು ಹೊಂದಿದೆ ಎನ್ನಲಾಗಿದೆ.

ಭಾರತ ನಂಬರ್ 2:

ಭಾರತ ನಂಬರ್ 2:

ಇತ್ತೀಚೆಗೆ ಭಾರತೀಯ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಫೋನ್‌ ಬಳಕೆದಾರರ ಸಂಖ್ಯೆ ಅಧಿಕವಾಗಿದ್ದು, ಎರಡನೇ ಸ್ಥಾನದಲ್ಲಿರುವ ಭಾರತ 300.12 ಮಿಲಿಯನ್ ಸ್ಮಾರ್ಟ್‌ಫೋನ್ ಬಳಕೆದಾರರನ್ನು ಹೊಂದಿದೆ. ದಿನದಿಂದ ದಿನಕ್ಕೆ ಬಳಕೆದಾರರ ಸಂಖ್ಯೆಯೂ ಅಧಿಕವಾಗುತ್ತಿದೆ.

How to find out where you can get your Aadhaar card done (KANNADA)
ಚೀನಾ ನಂಬರ್ ಒನ್:

ಚೀನಾ ನಂಬರ್ ಒನ್:

ಸ್ಮಾರ್ಟ್‌ಫೋನ್ ತಯಾರಿಕೆಯಲ್ಲಿ ಇಡೀ ವಿಶ್ವದಲ್ಲಿಯೇ ಮುಂಚುಣಿಯಲ್ಲಿರುವ ಚೀನಾ, ಸ್ಮಾರ್ಟ್‌ಫೋನ್ ಬಳಕೆದಾರರ ಪಟ್ಟಿಯಲ್ಲಿಯೂ ಮೊದಲ ಸ್ಥಾನದಲ್ಲಿದೆ. ಒಟ್ಟು 717.31 ಮಿಲಿಯನ್ ಸ್ಮಾರ್ಟ್‌ಫೋನ್ ಬಳಕೆದಾರರು ಚೀನಾದಲ್ಲಿದ್ದಾರೆ.

Best Mobiles in India

English summary
Number of smartphone users. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X