10 ನಿಮಿಷಗಳಲ್ಲಿ ಫುಡ್‌ ಡೆಲಿವರಿ ಸೇವೆ ನೀಡಲು ಮುಂದಾದ ಒಲಾ ಕಂಪೆನಿ!

|

ಒಲಾ ಕಂಪೆನಿ ಆಪ್‌ ಆಧಾರಿತ ಟ್ಯಾಕ್ಸಿ ಸೇವೆಯಲ್ಲಿ ಸಾಕಷ್ಟು ಪ್ರಸಿದ್ಧಿ ಪಡೆದುಕೊಂಡಿದೆ. ದೇಶ ಮಹಾನಗರಗಳಲ್ಲಿ ಟ್ಯಾಕ್ಸಿ ಸೇವೆ ಮೂಲಕ ಎಲ್ಲರ ಮನಗೆದ್ದಿದೆ. ಸದ್ಯ ಇದೀಗ ಭಾರತದಲ್ಲಿ ಕೇವಲ 10 ನಿಮಿಷಗಳಲ್ಲಿ ಫುಡ್‌ ಡೆಲಿವರಿ ಸೇವೆಯನ್ನು ಪರೀಕ್ಷಿಸಲು ಪ್ರಾರಂಭಿಸಿದೆ. ಅದರಂತೆ ಒಲಾ ಕಂಪನಿಯು ತನ್ನ ಮೆನುವಿನ ಭಾಗವಾಗಿ ಪಿಜ್ಜಾ, ರೋಲ್ಸ್ ಮತ್ತು ಖಿಚಡಿಯಂತಹ ಆಯ್ದ ಆಹಾರ ಪದಾರ್ಥಗಳನ್ನು ನೀಡಲು ಪ್ರಾರಂಭಿಸಿದೆ.

ಓಲಾ ಕಂಪೆನಿ

ಹೌದು, ಓಲಾ ಕಂಪೆನಿ ಭಾರತದಲ್ಲಿ ವೇಗವಾಗಿ ಫುಡ್‌ ಡೆಲಿವರಿ ಮಾಡುವ ಸೇವೆ ನೀಡಲು ಮುಂದಾಗಿದೆ. ಈ ಸೇವೆಯ ಪರೀಕ್ಷಿಸುವುದಕ್ಕಾಗಿ ಪಿಜ್ಜಾ, ರೋಲ್ಸ್‌ ಮತ್ತು ಖಿಚಡಿಯಂತಹ ಆಯ್ದ ಆಹಾರ ಪದಾರ್ಥಗಳನ್ನು ನೀಡುವುದಕ್ಕೆ ಮುಂದಾಗಿದೆ. ಇದಕ್ಕಾಗಿ 'ಫ್ರೆಶ್ಲಿ ಪ್ರಿಪೇರ್ಡ್' ಎಂದು ವಿವರಿಸಿದೆ. ಅಲ್ಲದೆ ಈ ವಸ್ತುಗಳನ್ನು ತಲುಪಿಸಲು ತನ್ನ ಡೆಲಿವೆರಿ ವಿಂಗ್‌ ವಿಭಾಗವಾದ ಓಲಾ ಡ್ಯಾಶ್ ಅನ್ನು ಬಳಸುತ್ತಿದೆ. ಹಾಗಾದ್ರೆ ಒಲಾ ಕಂಪೆನಿ ಹತ್ತು ನಿಮಿಷಗಳಲ್ಲಿ ಫುಡ್‌ ಡೆಲಿವರಿ ಸೇವೆಯನ್ನು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಆನ್‌ಲೈನ್‌ ಆಧಾರಿತ

ಆನ್‌ಲೈನ್‌ ಆಧಾರಿತ ಫುಡ್‌ ಡೆಲಿವರಿ ಸೇವೆ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ. ನಗರ ಪ್ರದೇಶಗಳಲ್ಲಿ ಹೆಚ್ಚಿನ ಬೇಡಿಕೆ ಪಡೆದುಕೊಂಡಿವೆ. ಇದೇ ಕಾರಣಕ್ಕೆ ಆನ್‌ಲೈನ್‌ ಫುಡ್‌ ಡೆಲಿವರಿ ಸೇವೆ ನೀಡುವ ಅನೇಕ ಅಪ್ಲಿಕೇಶನ್‌ಗಳು ಇಂದು ಲಬ್ಯವಿವೆ. ಇವುಗಳಲ್ಲಿ ಸ್ವಿಗ್ಗಿ, ಜೋಮೋಟೋ ಸೇವೆಗಳು ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿವೆ. ಇದೇ ಕಾರಣಕ್ಕೆ ಇದೀಗ ಓಲಾ ಕಂಪೆನಿ ಹತ್ತು ನಿಮಿಷಗಳಲ್ಲಿ ಫುಡ್‌ ಡೆಲಿವರಿ ನೀಡುವ ಹೊಸ ಸೇವೆ ಪ್ರಾರಂಭಿಸುವುದಕ್ಕೆ ಹೆಜ್ಜೆ ಹಾಕಿದೆ.

ಒಲಾ ಕಂಪೆನಿ

ಒಲಾ ಕಂಪೆನಿ ವೇಗವಾಗಿ ಫುಡ್‌ ಡೆಲಿವರಿ ಸೇವೆಯ ಮೂಲಕ ಹೊಸ ಹೆಜ್ಜೆ ಇಡಲು ಮುಂದಾಗಿದೆ. ಇದಕ್ಕಾಗಿ ಒಲಾ ರೊಬೊಟಿಕ್ಸ್ ಸ್ಟಾರ್ಟ್ಅಪ್ ಮುಕುಂದ ಫುಡ್ಸ್ ನೀಡುವ ಸೇವೆಗಳ ಲಾಭವನ್ನು ಪಡೆದುಕೊಳ್ಳಲು ಮುಂದಾಗಿದೆ. ಜೊಮಾಟೊ ಕಂಪನಿಯಲ್ಲಿ 16.66% ಪಾಲನ್ನು ಮುಕುಂದ ಫುಡ್ಸ್‌ನಲ್ಲಿ $5 ಮಿಲಿಯನ್ ಹೂಡಿಕೆ ಮಾಡಿದ ಒಂದು ತಿಂಗಳ ನಂತರ ಈ ಸುದ್ದಿ ವರದಿಯಾಗಿದೆ. ಇಲ್ಲಿ ಗಮನಿಸಬೇಕಾದ ವಿಚಾರವೆಂದರೆ ಮುಕುಂದ ಫುಡ್ಸ್ ಟಾಪ್ ಕ್ಲೌಡ್ ಕಿಚನ್‌ಗಳು ಮತ್ತು ತಿನಿಸುಗಳಿಗೆ ತನ್ನ ಸೇವೆಯನ್ನು ಒದಗಿಸುತ್ತದೆ.

ಒಲಾ

ಒಲಾ ಕಂಪನಿಯ 10 ನಿಮಿಷಗಳ ಆಹಾರ ವಿತರಣಾ ಸೇವೆಯಾಗಿರುವ ಝೊಮಾಟೊ ಇನ್‌ಸ್ಟಂಟ್‌ನಲ್ಲಿ ಮುಕುಂದ ಫುಡ್ಸ್‌ ಪ್ರಮುಖ ಪಾತ್ರವನ್ನು ವಹಿಸಲಿದೆ. ಇನ್ನು ಒಲಾ ತನ್ನ 10 ನಿಮಿಷಗಳ ಫುಡ್‌ ಡೆಲಿವರಿ ಸೇವೆಯನ್ನು ಬೆಂಗಳೂರಿನಲ್ಲಿ ಈಗಾಗಲೇ ಕೆಲವು ದಿನಗಳಿಂದ ಪರೀಕ್ಷೆ ನಡೆಸುತ್ತಿವುದನ್ನು ದೃಢಪಡಿಸಿದೆ. ಇನ್ನು ವೇಗವಾಗಿ ಫುಡ್‌ ಡೆಲಿವರಿ ಮಾಡುವುದಕ್ಕೆ ಒಲಾ ಕಂಪೆನಿ ಮಾತ್ರ ಮುಂದಾಗಿಲ್ಲ. ಭಾರತದಲ್ಲಿ ಸ್ಪೀಡ್‌ ಫುಡ್‌ ಡೆಲಿವರಿ ಸೇವೆ ನೀಡುವುದಕ್ಕೆ ಸ್ವಿಗ್ಗಿ ಕೂಡ ಪ್ಲಾನ್‌ ನಡೆಸಿದೆ.

ಪ್ರಿಪೇರ್‌

ಇನ್ನು ಸ್ವಿಗ್ಗಿ ಕೂಡ ಮುಕುಂದ ಫುಡ್ಸ್ ಜೊತೆಗೆ ಆಟೋಮ್ಯಾಟಿಕ್‌ ಫುಡ್‌ ಪ್ರಿಪೇರ್‌ ಮಾಡುವುದಕ್ಕೆ ಪಾಲುದಾರಿಕೆ ಹೊಂದುವುದಕ್ಕೆ ಮುಂದಾಗಿದೆ. ಭಾರತೀಯ ಮತ್ತು ಚೈನೀಸ್ ಭಕ್ಷ್ಯಗಳಿಗಾಗಿ ಅಡುಗೆ ಸಮಯವನ್ನು ಸುಮಾರು 20 ರಿಂದ 50% ರಷ್ಟು ಕಡಿಮೆ ಮಾಡುವ ರೋಬೋಟಿಕ್ ಡಿವೈಸ್‌ಗೆ ಮಾತುಕತೆ ನಡೆಸುತ್ತಿದೆ ಎಂದು ವರದಿಯಾಗಿದೆ. ಹಾಗೆಯೇ ಜೋಮೋಟೋ ಕಂಪೆನಿ ಕೂಡ 10 ನಿಮಿಷಗಳ ಆಹಾರ ವಿತರಣಾ ಸೇವೆಯನ್ನು ಪ್ರಾರಂಭಿಸಿದೆ.

ಸಂಸ್ಥೆ

ಇದಲ್ಲದೆ ಸ್ವಿಗ್ಗಿ ಸಂಸ್ಥೆ ಡ್ರೋನ್‌ ಮೂಲಕ ಫುಡ್‌ ಡೆಲಿವರಿ ಮಾಡುವ ಕಾಲ ಸನ್ನಿಹಿತವಾಗಿದೆ. ಈ ಮೂಲಕ ಭಾರತದಲ್ಲಿ ಕೆಲವು ದಿನಗಳಲ್ಲಿ ಡ್ರೋನ್‌ ಮೂಲಕ್‌ ಫುಡ್‌ ಡೆಲಿವರಿ ಮಾಡುವ ಪ್ರಯೋಗಗಳು ಪ್ರಾರಂಭವಾಗುವ ನಿರೀಕ್ಷೆಯಿದೆ. ಇದು ಶೀಘ್ರದಲ್ಲೇ ಅಧಿಕೃತ ಡ್ರೋನ್ ಆಹಾರ ವಿತರಣೆಯು ನಿಮ್ಮ ಮನೆ ಬಾಗಿಲಲ್ಲಿಯೇ ಪ್ರಾರಂಭವಾಗುತ್ತದೆ.

Best Mobiles in India

Read more about:
English summary
Ola has piloted 10-minute food delivery service in India. The service is currently limited to Bengaluru.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X