PUBG ಮೊಬೈಲ್ ಇನ್ನು ಮುಂದೆ ಕೇವಲ ಆರು ಘಂಟೆಗಳಿಗೆ ಸೀಮಿತ!

By Gizbot Bureau
|

ಎಲ್ಲರಿಗೂ ಪರಿಚಿತವಿರುವ ಬ್ಯಾಟಲ್ ರಾಯಲ್ ಗೇಮ್, PUBG ಮೊಬೈಲ್ ಅತೀ ದೊಡ್ಡ ಹವಾ ಎಬ್ಬಿಸಿರುವ ಆಟ. ಈಗಾಗಲೇ ಅದೆಷ್ಟೋ ಸಾವಿರ ಮಂದಿ ಈ ಆಟದ ಗೀಳಿಗೆ ಬಿದ್ದು ಬಿಟ್ಟಿದ್ದಾರೆ. ಇತ್ತೀಚೆಗಷ್ಟೇ ಒಬ್ಬ ವಿದ್ಯಾರ್ಥಿ ತನ್ನ ಪರೀಕ್ಷೆಯ ಉತ್ತರ ಪತ್ರಿಕೆಯಲ್ಲೂ ಕೂಡ PUBG ಆಟದ ಬಗ್ಗೆಯೇ ಬರೆದು ಫೇಲ್ ಆಗಿರುವ ಘಟನೆಯೂ ನಡೆದಿದೆ.

ಆಟಕ್ಕೆ ಕೆಟ್ಟ ಹೆಸರು ಬರುವುದನ್ನು ತಪ್ಪಿಸುವುದಕ್ಕೆ ಕ್ರಮ:

ಆಟಕ್ಕೆ ಕೆಟ್ಟ ಹೆಸರು ಬರುವುದನ್ನು ತಪ್ಪಿಸುವುದಕ್ಕೆ ಕ್ರಮ:

ಇಂತಹ ಎಲ್ಲಾ ಘಟನೆಗಳಿಂದ ಆಟಕ್ಕೆ ಕೆಟ್ಟ ಹೆಸರು ಬರುತ್ತಿರುವ ಕಾರಣದಿಂದಲೋ ಏನೋ ಇದೀಗ ಆಟವನ್ನು ಕೆಲವು ಘಂಟೆಗಳಿಗೆ ಸೀಮಿತಗೊಳಿಸುವುದಕ್ಕೆ ನಿರ್ಧರಿಸಲಾಗಿದೆ. ನೀವು ದಿನಕ್ಕೆ ಆರು ತಾಸು ಆಟ ಮಾತ್ರವೇ ಆಡಲು ಅವಕಾಶವಿರುತ್ತದೆ. ಆರು ತಾಸಿನ ನಂತರ ಆಟ ಕ್ಲೋಸ್ ಆಗಿ ಬಿಡುತ್ತದೆ ಮತ್ತು ಮತ್ತೊಮ್ಮೆ ಆಟವಾಡಲು ಮಾರನೆಯ ದಿನದವರೆಗೆ ಕಾಯಲೇ ಬೇಕು. ಇಂತಹ ಒಂದು ನಿಯಮವನ್ನು ಕೆಲವು ದೇಶಗಳಲ್ಲಿ ಜಾರಿಗೆ ತರುವುದಕ್ಕೆ ನಿರ್ಧರಿಸಲಾಗಿದೆ.

ಚಟವನ್ನು ನಿಯಂತ್ರಿಸಲು ಕ್ರಮ:

ಚಟವನ್ನು ನಿಯಂತ್ರಿಸಲು ಕ್ರಮ:

ಕೆಲವು ಆಟಗಾರರಿಗೆ ಅತಿಯಾದ ಚಟವಾಗಿರುವುದು ಮತ್ತು ತಮ್ಮ ಮೊಬೈಲ್ ಡಿವೈಸ್ ಗಳಲ್ಲಿ ಘಂಟೆಗಟ್ಟಲೆ ಇದೇ ಕಾರಣಕ್ಕೆ ಕಾಲಕಳೆಯುವುದು ನಡೆಯುತ್ತಿದೆ.

ಕೆಲವು ದೇಶಗಳಲ್ಲಿ ಟೆಸ್ಟಿಂಗ್:

ಕೆಲವು ದೇಶಗಳಲ್ಲಿ ಟೆಸ್ಟಿಂಗ್:

ಎಲ್ಲರಿಗೂ ತಿಳಿದಿರುವ ಬ್ಯಾಟಲ್ ರಾಯಲ್ ಗೇಮ್ PUBG ಮೊಬೈಲ್ ನ ಮೊoಲ ವಾರ್ಷಿಕೋತ್ಸವ ಮತ್ತು ಅದರ ರಿವಾರ್ಡ್ಸ್ ಗಳು ಜೊತೆಗೆ ಕೆಲವು ಹೊಸ ಅಪ್ ಡೇಟ್ ಮತ್ತು ಹೊಸ ಸೀಸನ್ ಗಳನ್ನು ಈಗಾಗಲೇ ಗಮನಿಸಿದ್ದಾಗಿದೆ. ಇನ್ನು ಕೆಲವು ಘಂಟೆಗಳಿಗೆ ಮಾತ್ರವೇ ಆಟವನ್ನು ಸೀಮಿತಗೊಳಿಸುವ ಬಗೆಗಿನ ವಿಚಾರವನ್ನು ಕೆಲವು ದೇಶಗಳಲ್ಲಿ ಈಗಾಗಲೇ ಟೆಸ್ಟಿಂಗ್ ನಡೆಸಲಾಗುತ್ತಿದೆ

ನಿಷೇಧವಿಲ್ಲದೆ ಆಟವಾಡಲು ಕ್ರಮ:

ನಿಷೇಧವಿಲ್ಲದೆ ಆಟವಾಡಲು ಕ್ರಮ:

ಭಾರತದಲ್ಲಿ ಈ ಆಟವಾಡಿ ಕೆಲವು ಆಟಗಾರರು ಬಂಧನಕ್ಕೆ ಒಳಗಾಗಿದ್ದಾರೆ ಮತ್ತು ಈ ಆಟದ ಮೇಲೆ ನಿಷೇಧವನ್ನು ಕೂಡ ಹೇರಲಾಗಿದೆ. ಈ ವಿಚಾರವು ಸ್ವತಃ ಸಂಸ್ಥೆಗೂ ಕೂಡ ತಿಳಿದಿದೆ. ಅದೇ ಕಾರಣಕ್ಕೆ ಟೆನ್ಸೆಂಟ್ ಗೇಮ್ಸ್ ಕೆಲವು ಹೆಲ್ತ್ ಕಂಟ್ರೋಲ್ ನಿಯಮಾವಳಿಗಳನ್ನು ಟೆಸ್ಟ್ ಮಾಡುತ್ತಿದೆ ಮತ್ತು ಅವುಗಳಿಂದಾಗಿ ಯಾವುದೇ ದೇಶವೂ ಕೂಡ ಆಟಕ್ಕೆ ನಿಷೇಧ ಹೇರುವುದನ್ನು ತಪ್ಪಿಸುವ ಉದ್ದೇಶ ಹೊಂದಲಾಗಿದೆ. ಅಂದರೆ ಆಟಗಾರರು ಯಾವುದೇ ನಿಷೇಧ ಇಲ್ಲದೆ ಆಟವನ್ನು ಎಂಜಾಯ್ ಮಾಡುವುದಕ್ಕೆ ಹೇಗೆ ಅವಕಾಶ ಮಾಡಬಹುದು ಎಂಬ ಬಗ್ಗೆ ಚಿಂತನೆ ನಡೆಸಲಾಗಿದ್ದು ಆ ನಿಟ್ಟಿನಲ್ಲಿ ಕೆಲವು ಕ್ರಮಗಳನ್ನು ಕೈಗೊಳ್ಳಲಾಗಿದೆ.

ಕೇವಲ ಆರು ಘಂಟೆಗೆ ಸೀಮಿತ:

ಕೇವಲ ಆರು ಘಂಟೆಗೆ ಸೀಮಿತ:

ಹೆಲ್ತ್ ಕಂಟ್ರೋಲ್ ಗಮನಿಸಿರುವಂತೆ PUBG ಮೊಬೈಲ್ ಗಮನಿಸಿರುವಂತೆ 6 ಘಂಟೆಗಳಿಗೂ ಅಧಿಕ ಕಾಲ ಇದೇ ಆಟದಲ್ಲಿ ಮುಳುಗಿದ್ದರೆ ಸಮಸ್ಯೆಯಾಗುತ್ತದೆ. 6 ಘಂಟೆಗಳ ತಾಸು ಆಟವಾಡುತ್ತಾ ಕುಳಿತವರಿಗೆ ವಾರ್ನಿಂಗ್ ಮೆಸೇಜ್ ನ್ನು ಕಳುಹಿಸಿಕೊಡಲಾಗುತ್ತದೆ ಮತ್ತು ಸರ್ವರ್ ನ್ನು ಆಕ್ಸಿಸ್ ಮಾಡುವುದಕ್ಕೆ ಅವರಿಗೆ ಅವಕಾಶವಿರುವುದಿಲ್ಲ. ಮಾರನೇ ದಿನ ಬೆಳಿಗ್ಗೆ 5.30 ಕ್ಕೆ ಪುನಃ ಆಟವಾಡಲು ಸಾಧ್ಯವಾಗುತ್ತದೆ.

ಆರು ಘಂಟೆಗಳ ನಿಯಂತ್ರಣ ಸರಿಯೇ?

ಆರು ಘಂಟೆಗಳ ನಿಯಂತ್ರಣ ಸರಿಯೇ?

ಸಾಮಾನ್ಯವಾಗಿ ಇದೆಲ್ಲವೂ ಕೂಡ ಆಕ್ರಮಣಶೀಲ ಕ್ರಮವೆಂದು ಹೇಳಬಹುದು. ಆದರೆ ಎಲ್ಲಾ ವಯಸ್ಸಿನ ಆಟಗಾರರು ಇರುವ ಇಂತಹ ಆಟಗಳನ್ನು ಕಂಟ್ರೋಲ್ ಮಾಡುವುದು ಎಷ್ಟರ ಮಟ್ಟಿಗೆ ಉತ್ತಮ ಕ್ರಮವಾಗುತ್ತದೆ ಎಂಬುದು ತಿಳಿದಿಲ್ಲ. ಈ ನಿಟ್ಟಿನಲ್ಲಿ ಯಾವ ರೀತಿಯ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಕಾದುನೋಡಬೇಕು. PUBG ಗೆ ಆರು ಘಂಟೆಗಳ ಕಾಲ ನಿಯಂತ್ರಣ ಹೇರುವುದು ಸರಿಯೇ? ನಿಮಗೆ ಏನನ್ನಿಸುತ್ತದೆ ಎಂಬುದನ್ನು ಕಮೆಂಟ್ ಮಾಡಿ ತಿಳಿಸಿ.

Most Read Articles
Best Mobiles in India

Read more about:
English summary
OMG! PUBG Mobile Gets A 6-Hour Play Time Restriction

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more