ನಿಮ್ಮ ಆಕೌಂಟ್ ಪಾಸ್‌ವರ್ಡ್‌ಗಳು ಇದೇನಾ ನೋಡಿ..? ಇದೇ ಆಗಿದ್ರೆ ಈ ಕ್ಷಣನೇ ಬದಲಾವಣೆ ಮಾಡಿ...!

ನಾವು ನೀಡುವ ಪಾಸ್‌ವರ್ಡ್‌ಗಳು ಸುಲಭವಾಗಿದಷ್ಟು ಹ್ಯಾಕ್ ಮಾಡುವುದು ಸುಲಭ ಈ ಹಿನ್ನಲೆಯಲ್ಲಿ ಕ್ಲಿಷ್ಟವಾಗಿರುವ ಪಾಸ್‌ವರ್ಡ್‌ಗಳನ್ನು ನೀಡುವುದು ಸೂಕ್ತ.

|

ಸದ್ಯ ದೇಶದಲ್ಲಿ ಡಿಜಿಟಲ್ ಕ್ರಾಂತಿ ನಡೆಯುತ್ತಿದ್ದು, ಅದರಲ್ಲೂ ನೋಟ್ ಬ್ಯಾನ್ ಆದ ನಂತರದಲ್ಲಿ ಡಿಜಿಟಲ್ ಬ್ಯಾಂಕಿಂಗ್ ಮತ್ತು ಮೊಬೈಲ್ ಬ್ಯಾಂಕಿಂಗ್ ತ್ವರಿತಗತಿಯಲ್ಲಿ ಬೆಳವಣಿಗೆ ಸಾಧಿಸುತ್ತಿದ್ದ ಈ ಹಿನ್ನಲೆಯಲ್ಲಿ ಪಾಸ್‌ವರ್ಡ್‌ಗಳು ಬಹುಮುಖ್ಯ ಪಾತ್ರವಹಿಸುತ್ತವೆ.

ನಿಮ್ಮ ಆಕೌಂಟ್ ಪಾಸ್‌ವರ್ಡ್‌ಗಳು ಇದೇನಾ ನೋಡಿ..? ಈ ಕ್ಷಣನೇ ಬದಲಾವಣೆ ಮಾಡಿ...!

ಓದಿರಿ: ನಿತ್ಯ ಫೇಸ್‌ಬುಕ್ ಯೂಸ್‌ ಮಾಡಿದ್ರೂ ಈ 5 ಫೀಚರ್‌ಗಳು ನಿಮಗೆ ಗೊತ್ತಿಲ್ಲ...! ಅವು ಯಾವುವು ಇಲ್ಲಿದೇ ನೋಡಿ..!

ನಾವು ನೀಡುವ ಪಾಸ್‌ವರ್ಡ್‌ಗಳು ಸುಲಭವಾಗಿದಷ್ಟು ಹ್ಯಾಕ್ ಮಾಡುವುದು ಸುಲಭ ಈ ಹಿನ್ನಲೆಯಲ್ಲಿ ಕ್ಲಿಷ್ಟವಾಗಿರುವ ಪಾಸ್‌ವರ್ಡ್‌ಗಳನ್ನು ನೀಡುವುದು ಸೂಕ್ತ.

ಅತೀ ಹೆಚ್ಚು ಬಳಸಿರುವ ಪಾಸ್‌ವರ್ಡ್‌ ಯಾವುದು..?

ಅತೀ ಹೆಚ್ಚು ಬಳಸಿರುವ ಪಾಸ್‌ವರ್ಡ್‌ ಯಾವುದು..?

ಈ ಹಿನ್ನಲೆಯಲ್ಲಿ ಅಧ್ಯಯನವೊಂದು ನಡೆದಿದ್ದು, 2016ರಲ್ಲಿ ಅತೀ ಹೆಚ್ಚು ಜನರು ತಮ್ಮ ಆಕೌಂಟ್‌ಗಳಿಗೆ ನೀಡಿರುವ ಪಾಸ್‌ವರ್ಡ್‌ '123456789' ಅದನ್ನು ಬಿಟ್ಟರೆ, 'qwerty' ಈ ಎರಡು ಪಾಸ್‌ವರ್ಡ್‌ಗಳು ಅತೀ ಹೆಚ್ಚು ಜನರು ಬಳಸಿರುವುದಾಗಿದೆ. ಹಾಗಾಗಿ ಹ್ಯಾಕ್ ಮಾಡುವವರಿಗೆ ಇದು ಬಹಳ ಸುಲಭವಾಗಿದೆ ಈ ಹಿನ್ನಲೆಯಲ್ಲಿ ನಿಮ್ಮ ಪಾಸ್‌ವರ್ಡ್‌ ಸಹ ಇದೇ ಆಗಿದ್ದಲ್ಲಿ ಈಗಲೇ ಅದನ್ನು ಬದಲಾಯಿಸಿ. ಇಲ್ಲವಾದರೆ ನಿಮ್ಮ ಆಕೌಂಟ್ ಸಹ ಹ್ಯಾಕ್ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಟಾಪ್ ಪಾಸ್‌ವರ್ಡ್‌ಗಳಾಗುವುದು..?

ಟಾಪ್ ಪಾಸ್‌ವರ್ಡ್‌ಗಳಾಗುವುದು..?

ಸುಮಾರು 10 ಮಿಲಿಯನ್ ಆಕೌಂಟ್‌ಗಳನ್ನು ಅಧ್ಯಯನಕ್ಕೆ ಒಳಪಡಿಸಿದ ಸಂದರ್ಭದಲ್ಲಿ ಈ ಅಂಶ ಬೆಳಕಿಗೆ ಬಂದಿದ್ದು, 2016ರಲ್ಲಿ ಬಳಕೆಯಾಗಿರುವ ಟಾಪ್ 10 ವಾಸ್‌ವರ್ಡ್‌ಗಳಲ್ಲಿ 6 ಅಂಕಿಗಳ ಪಾಸ್‌ವರ್ಡ್‌ಗಳೆ ಹೆಚ್ಚಾಗಿವೆ ಉದಾ: '12345678', '111111', '1234567890', '1234567', 'password', '123123', '987654321' ಇವುಗಳನ್ನು ಹ್ಯಾಕ್ ಮಾಡುವುದು ಸುಲಭವಾಗಿದೆ.

ನಿಮ್ಮ ಪಾಸ್‌ವರ್ಡ್‌ಗಳು ಇವುಗಳಲ್ಲಿ ಒಂದೇ..?

ನಿಮ್ಮ ಪಾಸ್‌ವರ್ಡ್‌ಗಳು ಇವುಗಳಲ್ಲಿ ಒಂದೇ..?

ಈ ಮೇಲಿರುವ ಪಾಸ್‌ವರ್ಡ್‌ಗಳಲ್ಲಿ ನಿಮ್ಮ ಪಾಸ್‌ವರ್ಡ್‌ಗಳು ಇದ್ದರೆ ತಕ್ಷಣ ಅವುಗಳನ್ನು ಬದಲಾಯಿಸುವ ಕಾರ್ಯವನ್ನು ಮಾಡಿರಿ. ಇಲ್ಲವಾದರೆ ಮುಂದೊಂದು ದಿನ ನಿಮ್ಮ ಆಕೌಂಟ್‌ಗಳು ಹ್ಯಾಕ್ ಆಗಿ ತೊಂದರೆ ಅನುಭವಿಸಬೇಕಾಗುತ್ತದೆ. ಅಲ್ಲದೇ ನಿಮ್ಮ ಬ್ಯಾಂಕ್‌ ವ್ಯವಹಾರದ ಅಂಶಗಳು ನಿಮ್ಮ ಆಕೌಂಟಿನಲ್ಲಿದ್ದರೆ ನಿಮ್ಮ ಹಣವೇಲ್ಲ ನಷ್ಟವಾಗುವುದು ಖಂಡಿತ.

ಪಾಸ್‌ವರ್ಡ್‌ ಬದಾಲಾಯಿಸಿ, ಹೇಗೆ ಅಂದ್ರೆ..?

ಪಾಸ್‌ವರ್ಡ್‌ ಬದಾಲಾಯಿಸಿ, ಹೇಗೆ ಅಂದ್ರೆ..?

ಈ ಮೇಲಿನ ರೀತಿಯಲ್ಲಿ ನಿಮ್ಮ ಪಾಸ್‌ವರ್ಡ್‌ಗಳು ಇದ್ದರೆ ಕಷ್ಟ ಹಾಗಾಗಿ ಪಾಸ್‌ವರ್ಡ್‌ಗಳನ್ನು 8 ಅಂಕಿ ಅಥಾವ ಅಕ್ಷರಗಳನ್ನು ಹೊಂದಿದ್ದರೆ ಸೂಕ್ತ, ನಿಮ್ಮ ಪಾಸ್‌ವರ್ಡ್‌ನಲ್ಲಿ ಅಂಕಿಗಳು, ಅಕ್ಷರಗಳು ಜೊತೆಗೆ ಸಂಕೇತಗಳು ಸೇರಿದ್ದರೆ ನಿಮ್ಮ ಆಕೌಂಟನ್ನು ಹ್ಯಾಕ್ ಮಾಡುವುದು ಸುಲಭವಲ್ಲ. ಉದಾ: $1q2w3e4r@ ಈ ರೀತಿಯಲ್ಲಿದ್ದರೆ ಪಾಸ್‌ವರ್ಡ್‌ ಹ್ಯಾಕ್ ಮಾಡುವುದು ಕಷ್ಟ.

Best Mobiles in India

Read more about:
English summary
Numeric combination of '123456' was the most common password of 2016, followed by '123456789' and 'qwerty', according to researchers who reviewed over 10 million security codes that became public following data breaches. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X