ವಿಶ್ವದ ಟಾಪ್ 5 ಮೊಬೈಲ್ ಕಂಪೆನಿಗಳು ಯಾವುವು ಗೊತ್ತಾ?..ಶಿಯೋಮಿಗೆ ಸ್ಥಾನ!

|

ಏಪ್ರಿಲ್ ನಿಂದ ಜೂನ್ ವರೆಗೆ ಈ ವರ್ಷದ ಎರಡನೇ ತ್ರೈಮಾಸಿಕದ ಜಾಗತಿಕ ಸ್ಮಾರ್ಟ್‌ಪೋನ್ ಮಾರಾಟದ ಬಗ್ಗೆ ಗಾರ್ಟ್ನರ್ ರಿಸರ್ಚ್ ವರದಿ ಬಿಡುಗಡೆ ಮಾಡಿದೆ. ಎರಡನೇ ತ್ರೈಮಾಸಿಕದ ಅವಧಿಯಲ್ಲಿ ಸ್ಮಾರ್ಟ್‌ಫೋನ್ ಮಾರಾಟದಲ್ಲಿ ಶೇ 20.4% ಪಾಲನ್ನು ಹೊಂದಿರುವ ಸ್ಯಾಮ್‌ಸಂಗ್ ಮಾರುಕಟ್ಟೆಯ ಪಾಲನ್ನು ಆಧರಿಸಿ ಮಾರುಕಟ್ಟೆಯಲ್ಲಿ ಮುನ್ನಡೆ ಸಾಧಿಸಿದರೆ, ಶಿಯೋಮಿ ಕಂಪೆನಿ ಜಾಗತಿಕ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿದೆ.

ವಿಶ್ವದ ಟಾಪ್ 5 ಮೊಬೈಲ್ ಕಂಪೆನಿಗಳು ಯಾವುವು ಗೊತ್ತಾ?..ಶಿಯೋಮಿಗೆ ಸ್ಥಾನ!

ಹೌದು, ವಿಶ್ವ ಮೊಬೈಲ್ ಮಾರುಕಟ್ಟೆಯಲ್ಲಿ ಸ್ಯಾಮ್‌ಸಂಗ್, ಹುವಾವೆ ಮತ್ತು ಆಪಲ್ ನಡುವಿನ ಸಮರಕ್ಕೆ ಇದೀಗ ಶಿಯೋಮಿ ಎಂಟ್ರಿ ನೀಡಿದೆ. ವರ್ಷದ ಎರಡನೇ ತ್ರೈ ಮಾಸಿಕದಲ್ಲಿ ಶಿಯೋಮಿ ನಾಲ್ಕನೆ ಸ್ಥಾನ ಪಡೆದು ಮೊದಲು ಮೂರು ಸ್ಥಾನಗಳಲ್ಲಿರುವ ಸ್ಯಾಮ್‌ಸಂಗ್, ಹುವಾವೆ ಮತ್ತು ಆಪಲ್ ಕಂಣನಿಗಳ ಜೊತೆಗೆ ಸೆಣೆಸಲು ಮುಂದಾಗಿದೆ. ಆಪಲ್ ಶೇ. 10.5% ಮಾರುಕಟ್ಟೆ ಪಾಲನ್ನು ಹೊಂದಿದ್ದರೆ, ಶಿಯೋಮಿ 9% ರಷ್ಟು ಮಾರುಕಟ್ಟೆ ಪಾಲನ್ನು ಪಡೆದು ಆಶ್ಚರ್ಯ ಮೂಡಿಸಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ 60 ಗ್ಯಾಲಕ್ಸಿ ಎ ಸರಣಿಯ ಬಲವಾದ ಬೇಡಿಕೆಯು ಸ್ಯಾಮ್‌ಸಂಗ್‌ನ ಪ್ರಭಾವಶಾಲಿಮಾರಾಟಕ್ಕೆ ಪ್ರಮುಖ ಪಾತ್ರ ವಹಿಸಿದೆ. ಸ್ಯಾಮ್‌ಸಂಗ್ 15.8% ಮಾರುಕಟ್ಟೆ ಪಾಲನ್ನು ಹೊಂದಿದ್ದರೆ, ಹುವಾವೇ ನಂತರದ ಸ್ಥಾನದಲ್ಲಿ ಶೇ 15.8% ರಷ್ಟು ಪಾಲನ್ನು ಹೊಂದಿದೆ. ಹಾಗಾದರೆ, ಈ ವರ್ಷದ ಎರಡನೇ ತ್ರೈಮಾಸಿಕದ ಜಾಗತಿಕ ಸ್ಮಾರ್ಟ್‌ಪೋನ್ ಮಾರುಕಟ್ಟೆ ಹೇಗಿದೆ?, ವಿಶ್ವದ ಟಾಪ್ ಐದು ಮೊಬೈಲ್ ಕಂಪೆನಿಗಳು ಯಾವುವು ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಮತ್ತೆ ಸ್ಯಾಮ್‌ಸಂಗ್ ಹವಾ

ಮತ್ತೆ ಸ್ಯಾಮ್‌ಸಂಗ್ ಹವಾ

ವಿಶ್ವ ಮೊಬೈಲ್ ಮಾರುಕಟ್ಟೆಯಲ್ಲಿ ಕಳೆದ ಕೆಲ ವರ್ಷಗಳಿಂದಲೂ ಮೊದಲ ಸ್ಥಾನದಲ್ಲೇ ಕುಳಿತಿರುವ ಸ್ಯಾಮ್‌ಸಂಗ್ ಈ ಬಾರಿಯೂ ತನ್ನ ಮೊದಲ ಸ್ಥಾನವನ್ನು ಅಲಂಕರಿಸಿದೆ. ಈ ಅವಧಿಯಲ್ಲಿ ಸ್ಮಾರ್ಟ್‌ಫೋನ್ ಮಾರಾಟದಲ್ಲಿ ಶೇ,20.4% ಪಾಲನ್ನು ಹೊಂದುವ ಮೂಲಕ ಮಾರುಕಟ್ಟೆಯಲ್ಲಿ ಮುನ್ನಡೆ ಸಾಧಿಸಿದೆ.ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ 60 ಗ್ಯಾಲಕ್ಸಿ ಎ ಸರಣಿಯ ಬಲವಾದ ಬೇಡಿಕೆಯು ಸ್ಯಾಮ್‌ಸಂಗ್‌ನ ಪ್ರಭಾವಶಾಲಿಮಾರಾಟಕ್ಕೆ ಪ್ರಮುಖ ಪಾತ್ರ ವಹಿಸಿದೆ ಎಂದು ವರದಿ ಹೇಳಿದೆ.

2ನೇ ಸ್ಥಾನದಲ್ಲಿ ಹುವಾವೆ

2ನೇ ಸ್ಥಾನದಲ್ಲಿ ಹುವಾವೆ

ಜಗತ್ತಿನ ಬಹುತೇಕ ದೇಶಗಳಲ್ಲಿ ನಿಷೇಧಗೊಂಡರೂ ಸಹ ಚೀನಾದ ದೈತ್ಯ ಮೊಬೈಲ್ ಕಂಪೆನಿ ಹುವಾವೇ ಮತ್ತೆ ಪಾರುಪತ್ಯ ಮೆರೆದಿದೆ. ಗಾರ್ಟ್ನರ್ ರಿಸರ್ಚ್ ವರದಿ ಪ್ರಕಾರ, ಈ ಅವಧಿಯಲ್ಲಿ ಸ್ಮಾರ್ಟ್‌ಫೋನ್ ಮಾರಾಟದಲ್ಲಿ ಶೇ,15.8% ಪಾಲನ್ನು ಹೊಂದುವ ಮೂಲಕ ಮಾರುಕಟ್ಟೆಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ. ಅಮೆರಿಕಾ ಮತ್ತು ಗೂಗಲ್‌ನಂತಹ ದೈತ್ಯ ಕಂಪೆನಿಯ ಕಪಿಮುಷ್ಟಿಯನ್ನು ಮೀರಿ ಹೊಸ ಗ್ರಾಹಕರನ್ನು ಹೊಂದುವಲ್ಲಿ ಹುವಾವೇ ಕಂಪೆನಿ ಸಫಲವಾಗಿದೆ ಎಂದು ಹೇಳಬಹುದು.

3ನೇ ಸ್ಥಾನದಲ್ಲಿ ಆಪಲ್

3ನೇ ಸ್ಥಾನದಲ್ಲಿ ಆಪಲ್

ಮಧ್ಯಮ ಬೆಲೆಯ ಐಫೋನ್‌ಗಳನ್ನು ಪರಿಚಯಿಸಿದರೂ ಸಹ ಆಪಲ್ ಕಂಪೆನಿ ತನ್ನ ಮಾರುಕಟ್ಟೆಯನ್ನು ಏರಿಸಿಕೊಳ್ಳುವಲ್ಲಿ ವಿಫಲವಾಗಿದೆ. ಐಫೋನ್ ಎಕ್ಸ್ ಆರ್ ಮಾದರಿ ಫೋನ್‌ಗಳು ಹೆಚ್ಚು ಮಾರಾಟವಾದರೂ ಸಹ ಆಪಲ್ ಶೇ. 10.5% ಮಾರುಕಟ್ಟೆ ಪಾಲನ್ನು ಹೊಂದಿವ ಮೂಲಕ ಮೂರನೇ ಸ್ಥಾನದಲ್ಲಿದೆ. ಆಪಲ್ ಐಫೋನ್ಗಳ ಬೇಡಿಕೆ 2019 ರ ಕ್ಯೂ 2 ನಲ್ಲಿ ಕೇವಲ 38.5 ಮಿಲಿಯನ್ ಸಾಗಣೆಯೊಂದಿಗೆ ಕುಸಿಯುತ್ತಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 44.7 ಮಿಲಿಯನ್ ಇತ್ತು ಎಂದು ವರದಿ ಹೇಳಿದೆ.

 ಶಿಯೋಮಿ ಹವಾ!

ಶಿಯೋಮಿ ಹವಾ!

ಎರಡನೇ ತ್ರೈಮಾಸಿಕದ ಜಾಗತಿಕ ಸ್ಮಾರ್ಟ್‌ಪೋನ್ ಮಾರಾಟದಲ್ಲಿ ಶಿಯೋಮಿ ಕಂಪೆನಿಯ ಹವಾ ಹೆಚ್ಚಾಗಿದೆ. ಶಿಯೋಮಿ ಶೇ. 9% ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿರುವ ಮೊದಲ ಐದು ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದೆ. ಗಾರ್ಟ್ನರ್ ರಿಸರ್ಚ್ ಪ್ರಕಾರ, ಮಧ್ಯಮ ಶ್ರೇಣಿಯ ಮತ್ತು ಕಡಿಮೆ ಮಟ್ಟದ ಸ್ಮಾರ್ಟ್‌ಫೋನ್‌ಗಳ ಬೇಡಿಕೆಗಿಂತ ಹೆಚ್ಚಿನ ಮಟ್ಟದ ಸ್ಮಾರ್ಟ್‌ಫೋನ್‌ಗಳ ಬೇಡಿಕೆ ನಿಧಾನವಾಗಿದೆ. ಹಾಗಾಗಿ, ಶಿಯೋಮಿ ಆಪಲ್‌ ಕಂಪೆನಿಗೆ ಹತ್ತಿರವಾಗುತ್ತಿದೆ ಎಂದು ಗಾರ್ಟ್ನರ್ ವಿವರಿಸುತ್ತದೆ.

ಒಪ್ಪೊಗೆ 5ನೇ ಸ್ಥಾನ

ಒಪ್ಪೊಗೆ 5ನೇ ಸ್ಥಾನ

ವಿಶ್ವದ ಟಾಪ್ ಐದನೇ ಸ್ಮಾರ್ಟ್‌ಪೋನ್ ಕಂಪೆನಿಯಾಗಿ ಒಪ್ಪೊ ಕಾಣಿಸಿಕೊಂಡಿದೆ. ಒಪ್ಪೊ ಕಂಪೆನಿ ಶೇ. 7.6 ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ. ಇನ್ನು ಟಾಪ್ 5 ಕಂಪೆನಿಗಳನ್ನು ಬಿಟ್ಟರೆ ವಿಶ್ವದ ಇತರೆ ಎಲ್ಲಾ ಮೊಬೈಲ್ ಕಂಪೆನಿಗಳು ಸೇರಿ ಶೇ.36ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿವೆ. ಪ್ರತಿ ದೇಶ ಆಧಾರದ ಮೇಲೆ, ಚೀನಾ ಈ ಅವಧಿಯಲ್ಲಿ ಅತಿ ಹೆಚ್ಚು ಸ್ಮಾರ್ಟ್‌ಫೋನ್ ಮಾರಾಟವನ್ನು 101 ಮಿಲಿಯನ್ ಯುನಿಟ್‌ಗಳೊಂದಿಗೆ ಹೊಂದಿದ್ದು, ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಸ್ವಲ್ಪ 0.5% ಹೆಚ್ಚಾಗಿದೆ.

ಒಟ್ಟಾರೆ ವಿಶ್ವ ಮಾರುಕಟ್ಟೆ ಹೇಗಿದೆ?

ಒಟ್ಟಾರೆ ವಿಶ್ವ ಮಾರುಕಟ್ಟೆ ಹೇಗಿದೆ?

ಎರಡನೇ ತ್ರೈಮಾಸಿಕದ ಜಾಗತಿಕ ಸ್ಮಾರ್ಟ್‌ಪೋನ್ ಮಾರುಕಟ್ಟೆಯಲ್ಲಿ ಒಟ್ಟು 368 ಮಿಲಿಯನ್ ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ ಎಂದು ಸಂಶೋಧನಾ ಸಂಸ್ಥೆ ಗಾರ್ಟ್ನರ್ ರಿಸರ್ಚ್ ಅಂದಾಜಿಸಿದೆ, ಇದು ಕಳೆದ ವರ್ಷಕ್ಕಿಂತ 1.7% ಕಡಿಮೆಯಾಗಿದೆ. ಅಂದರೆ, ಈ ಬಾರಿ ವಿಶ್ವ ಮೊಬೈಲ್ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಫೋನ್‌ ಮಾರಾಟ ಸ್ವಲ್ಪ ಇಳಿಕೆಯಾಗಿದೆ. ಆದರೆ, ಇದಕ್ಕೆ ವಿರುದ್ಧವಾಗಿ ಭಾರತದಲ್ಲಿ ಸ್ಮಾರ್ಟ್‌ಪೋನ್‌ಗಳ ಮಾರಾಟ ಹೆಚ್ಚಿದೆ ಎಂಬ ರಿಪೋರ್ಟ್ ಇತ್ತೀಚಿಗಷ್ಟೇ ಹೊರಬಿದ್ದಿತ್ತು.

Best Mobiles in India

English summary
Samsung maintained its lead of the market in terms of market share with a 20.4% share of smartphone sales for the period. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X