ಹೊಸ ಸ್ನಾಪ್‌ಡ್ರಾಗನ್‌ 8 ಜನ್‌ 2 ನಲ್ಲಿ ಕಾರ್ಯನಿರ್ವಹಿಸಲಿದೆ ಒನ್‌ಪ್ಲಸ್‌ 11!

|

ಸ್ಮಾರ್ಟ್‌ಫೋನ್‌ ವಿಭಾಗದಲ್ಲಿ ಒನ್‌ಪ್ಲಸ್‌ ನ ಸ್ಮಾರ್ಟ್‌ಫೋನ್‌ಗಳು ಹೆಚ್ಚು ಜನಪ್ರಿಯತೆ ಪಡೆದುಕೊಂಡಿವೆ. ಅದರಲ್ಲೂ ಗ್ರಾಹಕರು ಬಹು ಕಾತುರದಿಂದ ಎದುರು ನೋಡುತ್ತಿರುವ ಒನ್‌ಪ್ಲಸ್‌ 11 ರ ಸ್ಮಾರ್ಟ್‌ಫೋನ್ ಬಗ್ಗೆ ಕೆಲವು ಪ್ರಮುಖ ಫೀಚರ್ಸ್‌ ವಿವರ ಬಹಿರಂಗವಾಗಿದೆ. ಅದರಂತೆ ಈ ಫೋನ್‌ ಅಧಿಕೃತವಾಗಿ ಸ್ನಾಪ್‌ಡ್ರಾಗನ್‌ 8 ಜನ್‌ 2 ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸಲಿದೆ.

ಒನ್‌ಪ್ಲಸ್‌

ಹೌದು, ಒನ್‌ಪ್ಲಸ್‌ ಸ್ಮಾರ್ಟ್‌ಫೋನ್‌ಗಳು ತಮ್ಮ ಕಾರ್ಯಕ್ಷಮತೆ ಕಾರಣಕ್ಕೆ ಹಲವಾರು ಗ್ರಾಹಕರ ನೆಚ್ಚಿನ ಸ್ಮಾರ್ಟ್‌ಫೋನ್‌ ಆಗಿ ಗುರುತಿಸಿಕೊಂಡಿವೆ. ಇದರ ನಡುವೆ ಈಗ ಒನ್‌ಪ್ಲಸ್‌ 11 ಸ್ಮಾರ್ಟ್‌ಫೋನ್‌ ನ ಕೆಲವು ಫೀಚರ್ಸ್‌ ಲೀಕ್‌ ಆಗಿವೆ. ಈ ಫೋನ್‌ ಹೊಸ ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸುವ ಮೊದಲ ಫೋನ್‌ ಆಗಿ ಗುರುತಿಸಿಕೊಳ್ಳಲಿದೆ. ಹಾಗಿದ್ರೆ ಈ ಫೋನ್‌ನ ಇತರೆ ಫೀಚರ್ಸ್ ಏನು?, ಯಾವಾಗ ಗ್ರಾಹಕರಿಗೆ ಲಭ್ಯವಾಗಲಿದೆ ಎಂಬ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ ಓದಿರಿ.

ಡಿಸ್‌ಪ್ಲೇ ವಿವರ

ಡಿಸ್‌ಪ್ಲೇ ವಿವರ

ಒನ್‌ಪ್ಲಸ್‌ 11 ಸ್ಮಾರ್ಟ್‌ಫೋನ್‌ 6.7 ಇಂಚಿನ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದ್ದು, ಈ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್‌ ಆಯ್ಕೆ ಪಡೆದುಕೊಂಡಿದೆ. ಹಾಗೆಯೇ ಕರ್ವ್ಡ ಡಿಸ್‌ಪ್ಲೇ ಇದಾಗಿದ್ದು, QHD+ ರೆಸಲ್ಯೂಶನ್‌ ಆಯ್ಕೆ ಹೊಂದಿರಲಿದೆ ಎನ್ನಲಾಗಿದೆ.

ಹೊಸ ಚಿಪ್‌ಸೆಟ್‌

ಹೊಸ ಚಿಪ್‌ಸೆಟ್‌

ಈ ಸ್ಮಾರ್ಟ್‌ಫೋನ್ ಪ್ರಮುಖವಾಗಿ ಹೊಸದಾಗಿ ಲಾಂಚ್‌ ಆದ ಸ್ನಾಪ್‌ಡ್ರಾಗನ್ 8 ಜನ್‌ 2 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ ಈ ಫೋನ್ ತನ್ನದೇ ಆದ ಆಕ್ಸಿಜನ್‌ ಓಎಸ್‌ 13 ರಲ್ಲಿ ರನ್‌ ಆಗಲಿದ್ದು, 16GB RAM ಹಾಗೂ 512GB ಇಂಟರ್ನಲ್‌ ಸ್ಟೋರೇಜ್‌ ಆಯ್ಕೆ ಪಡೆದುಕೊಂಡಿರಲಿದೆ.

ಕ್ಯಾಮೆರಾ ಆಯ್ಕೆ

ಕ್ಯಾಮೆರಾ ಆಯ್ಕೆ

ಈ ಸ್ಮಾರ್ಟ್‌ಫೋನ್ 48 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್, 32 ಮೆಗಾಪಿಕ್ಸೆಲ್‌ನ ಟೆಲಿಫೋಟೋ ಲೆನ್ಸ್‌ನೊಂದಿಗೆ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರವನ್ನು ಇದು ಹೊಂದಿದ್ದು, ಈ ಮೂಲಕ ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ ಪಡೆದಿರಲಿದೆ. ಹಾಗೆಯೇ ಸೆಲ್ಫಿಗಾಗಿ 32 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿರುವ ಸಾಧ್ಯತೆಗಳಿವೆ.

ಬ್ಯಾಟರಿ ಹಾಗೂ ಇತರೆ

ಬ್ಯಾಟರಿ ಹಾಗೂ ಇತರೆ

ಈ ಫೋನ್ ಪ್ರಮುಖವಾಗಿ 5000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದುಕೊಂಡಿದ್ದು, ಇದಕ್ಕೆ 100W ವೇಗದ ಚಾರ್ಜಿಂಗ್ ಬೆಂಬಲ ಪಡೆಯಲಿದೆ. ಇನ್ನುಳಿದಂತೆ ಈ ಫೋನ್ ಬ್ಲೂಟೂತ್‌, ವೈ-ಫೈ ಸೇರಿದಂತೆ ಇನ್ನಿತರೆ ಕನೆಕ್ಟಿವಿಟಿ ಆಯ್ಕೆ ಪಡೆದುಕೊಂಡಿದೆ.

ಸ್ಮಾರ್ಟ್‌ಫೋನ್‌

ಈ ಸ್ಮಾರ್ಟ್‌ಫೋನ್‌ ಅನ್ನು 2023 ರ ಆರಂಭದಲ್ಲಿ ಲಾಂಚ್‌ ಮಾಡಲಾಗುತ್ತದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆಯಾದರೂ ಕಂಪೆನಿ ಮಾತ್ರ ಈ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಆದರೆ, ಹೊಸ ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದೆ ಎಂಬ ಬಗ್ಗೆ ಮಾತ್ರ ಮಾಹಿತಿ ನೀಡಿದೆ. ಇದೇ ಮಾದರಿಯಲ್ಲಿ ಹೊಸ ಪ್ರೊಸೆಸರ್‌ ಬಲವನ್ನು ತಮ್ಮ ಸ್ಮಾರ್ಟ್‌ಫೋನ್‌ಗಳಿಗೆ ನೀಡಲು ಪ್ರಮುಖ ಬ್ರ್ಯಾಂಡ್‌ಗಳು ಮುಂದಾಗಿವೆ.

ಹೊಸ ಪ್ರೊಸೆಸರ್‌ ಬಗ್ಗೆ ಒಂದಿಷ್ಟು ವಿವರ

ಹೊಸ ಪ್ರೊಸೆಸರ್‌ ಬಗ್ಗೆ ಒಂದಿಷ್ಟು ವಿವರ

ಕ್ವಾಲ್‌ಕಾಮ್ ಸಂಸ್ಥೆಯ ಇತ್ತೀಚಿನ ಪ್ರಮುಖ ಮೊಬೈಲ್ ಪ್ರೊಸೆಸರ್ ಸ್ನಾಪ್‌ಡ್ರಾಗನ್ 8 ಜನ್ 2 ಅನ್ನು ಸಮ್ಮಿಟ್ 2022 ಈವೆಂಟ್‌ನಲ್ಲಿ ಲಾಂಚ್‌ ಮಾಡಲಾಗಿದೆ. ಹಾಗೆಯೇ 2022 ರ ಮಧ್ಯದಲ್ಲಿ ಬಿಡುಗಡೆಯಾದ ಸ್ನಾಪ್‌ಡ್ರಾಗನ್ 8+ ಜನ್‌ 1 ಚಿಪ್‌ಸೆಟ್ ಸರಣಿಯ ಮುಂದುವರೆದ ಭಾಗವಾಗಿದ್ದು, ಗರಿಷ್ಠ ಕಾರ್ಯಕ್ಷಮತೆ ಹಾಗೂ ಕಡಿಮೆ ಪವರ್‌ ಬಳಕೆಯ ಮೇಲೆ ಇವು ಕೇಂದ್ರೀಕರಿಸುತ್ತವೆ. ಇದರ ನಡುವ ಈ ಹೊಸ ಪ್ರೊಸೆಸರ್‌ ಮೀಡಿಯಾ ಟೆಕ್‌ನ ಡೈಮೆನ್ಸಿಟಿ 9200 ಮತ್ತು ಆಪಲ್‌ನ A16 ಬಯೋನಿಕ್‌ ಪ್ರೊಸೆಸರ್‌ಗಳಿಗೆ ಆರೋಗ್ಯಕರ ಪೈಪೋಟಿ ನೀಡಲಿದೆ.

ಪ್ರೊಸೆಸರ್‌

ಕೆಲವು ದಿನಗಳ ಹಿಂದೆಯಷ್ಟೇ ಅನಾವರಣಗೊಂಡ ಸ್ನಾಪ್‌ಡ್ರಾಗನ್ 8 ಜೆನ್‌ 2 ಪ್ರೊಸೆಸರ್‌ ಸ್ಮಾರ್ಟ್‌ಫೋನ್‌ಗಳ ಕಾರ್ಯಕ್ಷಮತೆಯನ್ನು ವೃದ್ಧಿಸಲಿದ್ದು, ಇದರಲ್ಲಿ 8K ವಿಡಿಯೋಗಳನ್ನು ರೆಕಾರ್ಡ್ ಮಾಡಬಹುದು. ಹಾಗೆಯೇ 64ಮೆಗಾಪಿಕ್ಸೆಲ್ ಸ್ಥಿರ ಚಿತ್ರಗಳನ್ನು ಏಕಕಾಲದಲ್ಲಿ ಸೆರೆಹಿಡಿಯಬಹುದಾಗಿದೆ. ಜೊತೆಗೆ ಪ್ರತಿ ವಿಡಿಯೋ ಫ್ರೇಮ್‌ಗೆ ನಾಲ್ಕು ಎಕ್ಸ್‌ಪೋಶರ್‌ಗಳನ್ನು ವಿಶಾಲ ಡೈನಾಮಿಕ್ ಶ್ರೇಣಿಗಾಗಿ ಸೆರೆಹಿಡಿಯಲಾಗುವ ಅವಕಾಶವನ್ನು ಇದು ನೀಡಲಿದೆ. ಜೊತೆಗೆ ISP ಡಾಲ್ಬಿ ವಿಷನ್, HDR10+ ಮತ್ತು HLG ನಲ್ಲಿ ಎನ್‌ಕೋಡಿಂಗ್ ವಿಡಿಯೋಗಳನ್ನು ಈ ಪ್ರೊಸೆಸರ್‌ ಬೆಂಬಲಿಸುತ್ತದೆ.

Best Mobiles in India

English summary
OnePlus smartphones have become very popular in the smartphone segment. Meanwhile, the OnePlus 11 smartphone will run on a new processor.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X