ಒನ್ ಪ್ಲಸ್ 5T ಸ್ಮಾರ್ಟ್ ಫೋನ್ ಹೆಸರನ್ನು ಅಧಿಕೃತಗೊಳಿಸಿದ ಒನ್ ಪ್ಲಸ್

Written By: Lekhaka

ಒನ್ ಪ್ಲಸ್ ಈಗಾಗಲೇ ಮಾರುಕಟ್ಟೆಯಲ್ಲಿ ಸಾಕಷ್ಟು ಹೆಸರು ಗಳಿಸಿಕೊಂಡಿದೆ ಈ ಹಿನ್ನಲೆಯಲ್ಲಿ ಒನ್ ಪ್ಲಸ್ ಶೀಘ್ರವೇ ಲಾಂಚ್ ಮಾಡಲಿರುವ ಒನ್ ಪ್ಲಸ್ 5T ಸ್ಮಾರ್ಟ್ ಫೋನ್ ಸಖತ್ ಸದ್ದು ಮಾಡುತ್ತಿದೆ. ದಿನಕ್ಕೊಂದು ರೂಮರ್ ಗಳು ಈ ಫೋನಿನ ಕುರಿತು ಕೇಳಸಿಗುತ್ತಿದೆ.

ಒನ್ ಪ್ಲಸ್ 5T ಸ್ಮಾರ್ಟ್ ಫೋನ್ ಹೆಸರನ್ನು ಅಧಿಕೃತಗೊಳಿಸಿದ ಒನ್ ಪ್ಲಸ್

ಈ ಸ್ಮಾರ್ಟ್ ಫೋನ್ ನಲ್ಲಿರುವ ವಿಶೇಷತೆಗಳ ಕುರಿತು ದಿನಕ್ಕೊಂದು ಮಾಹಿತಿಗಳು ದೊರೆಯುತ್ತಿದೆ. ಈಗಾಗಲೇ ಒನ್ ಪ್ಲಸ್ ತನ್ನ ಮುಂದಿನ ಫೋನಿಗೆ ಒನ್ ಪ್ಲಸ್ 5T ಎಂದು ನಾಮಕರಣ ಮಾಡಲಿದೆ ಎನ್ನಲಾಗಿತ್ತು, ಆದರೆ ಇದು ಕೆಲವು ಟ್ವೀಟರ್ ಮೂಲಗಳಿಂದ ಅಧಿಕೃತ ಎಂದು ತಿಳಿದು ಬಂದಿದೆ.

ಒನ್ ಪ್ಲಸ್ 5T ಸ್ಮಾರ್ಟ್ ಫೋನ್ ಎಡ್ಜ್ ಟು ಎಡ್ಜ್ ಡಿಸ್ ಪ್ಲೇ ವಿನ್ಯಾಸವನ್ನು ಹೊಂದಲಿದೆ. 6 ಇಂಚಿನ ಪರದೆಯನ್ನು ಕಾಣಬಹುದಾಗಿದ್ದು, ಅದುವೇ FHD ಪ್ಲಸ್ ಗುಣಮಟ್ಟದಿಂದ ಕೂಡಿದೆ ಎನ್ನಲಾಗಿದೆ.

ಆಪಲ್ ಸ್ಟೋರ್ ತಲುಪಲಿಲ್ಲ ಐಫೋನ್ X: ಟ್ರಕ್‌ನಿಂದಲೇ 300 ಫೋನ್ ಎಗರಿಸಿದ ಕದಿಮರು..!

ಇದಲ್ಲದೇ ಒನ್ ಪ್ಲಸ್ 5T ಸ್ಮಾರ್ಟ್ ಫೋನ್ ನಲ್ಲಿ 3.5 ಎಂಎಂ ಆಡಿಯೋ ಜಾಕ್ ಅನ್ನು ನೀಡಲಾಗಿದೆ. USB Type C ಪೋರ್ಟ್ ಅನ್ನು ಕಾಣಬಹುದಾಗಿದೆ. ಇದಲ್ಲದೇ ಈ ಸ್ಮಾರ್ಟ್ ಫೋನ್ ನಲ್ಲೂ ಡ್ಯುಯಲ್ ಲೈನ್ಸ್ ಕ್ಯಾಮೆರಾವನ್ನು ನೀಡಲಾಗಿದೆ.

ಇದರಲ್ಲಿ 20MP + 20MP ಕ್ಯಾಮೆರಾ ಡ್ಯುಯಲ್ ಸೆಟಪ್ ಕಾಣಬಹುದಾಗಿದ್ದು, ಉತ್ತಮ ಚಿತ್ರಗಳನ್ನು ಸೆರೆಹಿಡಿಯಲು ಸಹಾಯಕಾರಿಯಾಗಿದೆ. ಇದು ಆಂಡ್ರಾಯ್ಡ್ ಒರಿಯೋದಲ್ಲಿ ಕಾರ್ಯನಿರ್ವಹಿಸಲಿದ್ದು, ಸ್ನಾಪ್ ಡ್ರಾಗನ್ 835 ಪ್ರೋಸೆಸರ್ ಹೊಂದಿದೆ.

ಇದಲ್ಲದೇ ಈ ಫೋನಿನಲ್ಲಿ 6GB/8GB RAM ಹಾಗೂ 64GB/128GB ಇಂಟರ್ನಲ್ ಮೆಮೊರಿಯನ್ನು ನೀಡಲಾಗಿದೆ. ಮೂಲಗಳ ಪ್ರಕಾರ ಈ ಫೋನ್ ನವೆಂಬರ್ 16ಕ್ಕೆ ಲಾಂಚ್ ಆಗಲಿದೆ ಎನ್ನಲಾಗಿದೆ.

Read more about:
English summary
OnePlus 5T, the name of the upcoming smartphone gets confirmed by an official teaser posted by the company on Twitter.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot