Subscribe to Gizbot

ಒನ್ ಪ್ಲಸ್ 6 ಸ್ಮಾರ್ಟ್ ಫೋನ್ ಅಮೆಜಾನ್ ನಲ್ಲಿ ಮಾರಾಟ..!

Written By: Lekhaka

ಒನ್ ಪ್ಲಸ್ 6 ಸ್ಮಾರ್ಟ್ ಫೋನ್ ಮಾರುಕಟ್ಟೆಗೆ ಕಾಲಿಡಲಿದೆ ಎನ್ನುವ ಸುದ್ದಿಯೊಂದಿಗೆ ಹಲವಾರು ರೂಮರ್ ಗಳು ಕೇಳಿ ಬರುತ್ತಿದ್ದು, ಇದೇ ಮಾದರಿಯಲ್ಲಿ ಒನ್ ಪ್ಲಸ್ 6 ಸ್ಮಾರ್ಟ್ ಫೋನ್ ಎಕ್ಸ್ ಕ್ಲೂಸಿವ್ ಆಗಿ ಅಮೆಜಾನ್ ನಲ್ಲಿ ಮಾರಾಟವಾಗಲಿದೆ ಎನ್ನಲಾಗಿದೆ. ಈಗಾಗಲೇ ಮಾರುಟಕ್ಟೆಯಲ್ಲಿ ಒನ್ ಪ್ಲಸ್ 6 ಕುರಿತಂತೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿದ್ದು, ಅಮೆಜಾನ್ ನಲ್ಲಿ ಮಾರಾಟವಾಗುವುದು ಪಕ್ಕಾ ಆಗಿದೆ.

ಒನ್ ಪ್ಲಸ್ 6 ಸ್ಮಾರ್ಟ್ ಫೋನ್ ಅಮೆಜಾನ್ ನಲ್ಲಿ ಮಾರಾಟ..!

ಒನ್ ಪ್ಲಸ್ 6 ಸ್ಮಾರ್ಟ್ ಫೋನ್ ಪ್ರೋಮೋಷನ್ ಲೀಕ್ ಆಗಿದ್ದು,ಇದರಲ್ಲಿ ಈ ಸ್ಮಾರ್ಟ ಫೋನ್ ಬ್ಲೂ ಬಣ್ಣದಲ್ಲಿ ಮಾರಾಟವಾಗಲಿದೆ ಎನ್ನಲಾಗಿದೆ. ಅಲ್ಲದೇ ಡ್ಯಾಷ್ ಚಾರ್ಜಿಂಗ್ ಸಪೋರ್ಟ್ ಮಾಡಲಿದ್ದು, ಎರಡು ಆವೃತ್ತಿಯಲ್ಲಿ ದೊರೆಯಲಿದೆ ಎನ್ನಲಾಗಿದೆ. 6GB / 8GB RAM ನೊಂದಿಗೆ ಲಭ್ಯವಿರಲಿದ್ದು, 256GB ಇಂಟರ್ನಲ್ ಮೆಮೊರಿಯೊಂದಿಗೆ ಮಾರಾಟವಾಗಲಿದೆ ಎಂಬುದು ತಿಳಿದುಬಂದಿದೆ.

ಒನ್ ಪ್ಲಸ್ 6 ಸ್ಮಾರ್ಟ್ ಫೋನ್ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾವನ್ನು ಕಾಣಬಹುದಾಗಿದ್ದು, 20 MP + 16MP ಕ್ಯಾಮೆರಾಗಳು ಇದಾಗಿದೆ. ಇದಲ್ಲದೇ ಮುಂಭಾಗದಲ್ಲಿ ಉತ್ತಮ ಸೆಲ್ಪೀಗಳನ್ನು ಸೆರೆಹಿಡಿಯಲು 16MP ಕ್ಯಾಮೆರಾವೊಂದನ್ನು ಸಹ ನೀಡಲಾಗಿದೆ. ಅಲ್ಲದೇ ಬಳಕೆದಾರರಿಗೆ ಉತ್ತಮ ಪೋಟರೆಟ್ ಗಳನ್ನು ಸೆರೆಹಿಡಿಯಲು ಸಹಾಯಕಾರಿಯಾಗಲಿದೆ.

ಒನ್ ಪ್ಲಸ್ 6 ಸ್ಮಾರ್ಟ್ ಫೋನ್ ಎಂದು ಬಿಡುಗಡೆಯಾಗಲಿದೆ ಎಂಬುದನ್ನು ಒನ್ ಪ್ಲಸ್ ಇನ್ನು ಬಹಿರಂಗ ಪಡಿಸಿಲ್ಲ ಎನ್ನಲಾಗಿದೆ. ಮೂಲಗಳ ಪ್ರಕಾರ ಮುಂದಿನ ತಿಂಗಳು ಲಾಂಚ್ ಆಗುವ ಸಾಧ್ಯತೆ ಇದೆ. ಇದಲ್ಲದೇ ಈ ಸ್ಮಾರ್ಟ್ ಫೋನಿನಲ್ಲಿ ಸ್ನಾಪ್ ಡ್ರಾಗನ್ 845 ಪ್ರೋಸೆಸರ್, 64GB, 128GB, 256 GB ಇಂಟರ್ನಲ್ ಮೆಮೊರಿಯೊಂದಿಗೆ ಲಭ್ಯವಿರಲಿದೆ ಎನ್ನಲಾಗಿದೆ.

ಸ್ಮಾರ್ಟ್‌ಫೋನ್ ತಯಾರಕ ಒನ್‌ಪ್ಲಸ್ ಬೆಳೆದಿದ್ದು ಹೇಗೆ ಗೊತ್ತಾ..? ಆಚ್ಚರಿಯ ಮಾಹಿತಿ..!

What is Jio Cricket Gold Pass? How to Buy it
ಆಂಡ್ರಾಯ್ಡ್ 8.1 ನಲ್ಲಿ ಕಾರ್ಯನಿರ್ವಹಿಸುವ ಒನ್ ಪ್ಲಸ್ 6 ಸ್ಮಾರ್ಟ್ ಫೋನ್, 3500mAh ಬ್ಯಾಟರಿಯೊಂದಿಗೆ ಕಾಣಿಸಿಕೊಳ್ಳಲಿದ್ದು, 6.28 ಇಂಚಿನ ಅಮೊಲೈಡ್ FHD+ ಗುಣಮಟ್ಟದ ಡಿಸ್ ಪ್ಲೇಯನ್ನು ಹೊಂದಿರಲಿದ್ದು, 19:* ಅನುಪಾತದ ಡಿಸ್ ಪ್ಲೇ ಇದಾಗಲಿದೆ. ನೋಡಲು ಐಫೋನ್ X ಮಾದರಿಯಲ್ಲಿ ಕಾಣಿಸುತ್ತಿದೆ.

English summary
OnePlus 6 will be exclusively available on Amazon, suggests a new teaser promo of the smartphone which was showed at cinemas in India. The teaser is basically a longer version of "The Speed You Need" video we came across earlier this month. Although the video didn't give away any specifications, it did confirm that OnePlus 5T's successor will be an Amazon exclusive.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot