ಒನ್‌ಪ್ಲಸ್‌ ಬಡ್ಸ್‌ ಪ್ರೊ 2 ಲಾಂಚ್‌; 39 ಗಂಟೆಗಳ ಬ್ಯಾಟರಿ ಬ್ಯಾಕಪ್ ಆಯ್ಕೆ!

|

ಮಾರುಕಟ್ಟೆಯಲ್ಲಿ ಲಾಂಚ್‌ ಆಗುವ ಮುನ್ನವೇ ಸದ್ದು ಮಾಡಿದ್ದ ಒನ್‌ಪ್ಲಸ್‌ 11 ಸ್ಮಾರ್ಟ್‌ಫೋನ್‌ ಇಂದು ಅನಾವರಣವಾಗಿದೆ. ಅಬ್ಬಾ.. ಕೊನೆಗೂ ಲಾಂಚ್‌ ಆಯ್ತಲ್ಲ ಎಂದು ಈ ಹೊಸ ಸ್ಮಾರ್ಟ್‌ಫೋನ್‌ ಖರೀದಿ ಮಾಡಬೇಕು ಎಂದುಕೊಂಡಿರುವವರು ಸಂತೋಷಗೊಂಡಿದ್ದರೆ ಈ ಸಂತೋಷವನ್ನು ಇನ್ನಷ್ಟು ಹೆಚ್ಚು ಮಾಡುವ ಕೆಲಸವನ್ನು ಒನ್‌ಪ್ಲಸ್‌ ಮಾಡಿದೆ. ಅಂದರೆ ಒನ್‌ಪ್ಲಸ್‌ ಬಡ್ಸ್ ಪ್ರೊ 2 ಇಯರ್‌ಬಡ್ಸ್‌ ಅನ್ನು ಸಹ ಅನಾವರಣ ಮಾಡಲಾಗಿದೆ.

ಬಡ್ಸ್‌

ಹೌದು, ಒನ್‌ಪ್ಲಸ್‌ ಬಡ್ಸ್‌ ಪ್ರೊ 2 ( OnePlus Buds Pro 2 ) ಅನಾವರಣಗೊಂಡಿದ್ದು, ಈ ಡಿವೈಸ್‌ ಕಳೆದ ವರ್ಷ ಲಾಂಚ್‌ ಆಗಿದ್ದ ಒನ್‌ಪ್ಲಸ್‌ ಬಡ್ಸ್‌ ಪ್ರೊನ ಉತ್ತರಾಧಿಕಾರಿ ಎಂದು ಹೇಳಲಾಗುತ್ತಿದೆ. ಈ ಹೊಸ ಇಯರ್‌ಬಡ್ಸ್‌ ಆಕ್ಟಿವ್‌ ನಾಯ್ಸ್‌ ಕ್ಯಾನ್ಸಲಿಂಗ್‌ ಫೀಚರ್ಸ್‌ ಹೊಂದಿದ್ದು, ಬಡ್ಸ್‌ಗಳಲ್ಲಿರುವ 11mm ಡೈನಾಮಿಕ್ ಡ್ರೈವರ್ ಬಳಕೆದಾರರಿಗೆ ಉತ್ತಮ ಸೌಂಡ್‌ ಕ್ವಾಲಿಟಿ ನೀಡಲಿದೆ. ಹಾಗಿದ್ರೆ, ಇದರ ಇನ್ನಷ್ಟು ಪ್ರಮುಖ ಫೀಚರ್ಸ್ ಹಾಗೂ ಬೆಲೆ ಬಗ್ಗೆ ಈ ಲೇಖನದಲ್ಲಿ ವಿವರಿಸಲಾಗಿದೆ ಓದಿರಿ.

ಪ್ರಮುಖ ಫೀಚರ್ಸ್

ಪ್ರಮುಖ ಫೀಚರ್ಸ್

ಒನ್‌ಪ್ಲಸ್‌ ಬಡ್ಸ್‌ ಪ್ರೊ 2 ಇಯರ್‌ಬಡ್ಸ್‌ ಡಾಲ್ಬಿ ಅಟ್ಮಾಸ್ ಪ್ರಾದೇಶಿಕ ಆಡಿಯೋ ಬೆಂಬಲ ಹಾಗೂ ಡೈನಾಡಿಯೊ ಟ್ಯೂನಿಂಗ್ ಫೀಚರ್ಸ್‌ ಹೊಂದಿದ್ದು, ಇಯರ್‌ಬಡ್‌ಗಳು 11 ಎಂಎಂ ಡೈನಾಮಿಕ್ ಡ್ರೈವರ್ ಮತ್ತು 6 ಎಂಎಂ ಪ್ಲ್ಯಾನರ್ ಡಯಾಫ್ರಾಮ್‌ನೊಂದಿಗೆ ಪ್ಯಾಕ್‌ ಆಗಿವೆ.

ಬಡ್ಸ್

ಹಾಗೆಯೇ ಈ ಬಡ್ಸ್ ಪ್ರೊ 2 ವಾಲ್ಯೂಮ್, ಟ್ರ್ಯಾಕ್ ಬದಲಾವಣೆ ಮತ್ತು ಕರೆಗೆ ಉತ್ತರಿಸಲು ಸೂಕ್ಷ್ಮ ನಿಯಂತ್ರಣ ಆಯ್ಕೆ ಪಡೆದುಕೊಂಡಿದ್ದು, ಬ್ಲೂಟೂತ್ ಆವೃತ್ತಿ 5.3 ನ ಕನೆಕ್ಟಿವಿಟಿ ಆಯ್ಕೆ ಇದರಲ್ಲಿದೆ. ಜೊತೆಗೆ ಆಂಡ್ರಾಯ್ಡ್‌ ಮತ್ತು ಐಓಎಸ್‌ ಆಪರೇಟಿಂಗ್ ಸಿಸ್ಟಮ್‌ಗಳಲ್ಲಿ ಇದು ಕಾರ್ಯನಿರ್ವಹಿಸುತ್ತದೆ.

ಇಯರ್‌ಬಡ್‌

ಇದಿಷ್ಟೇ ಅಲ್ಲದೆ ಇಯರ್‌ಬಡ್‌ಗಳು ಆಕ್ಟಿವ್‌ ನಾಯ್ಸ್‌ ಕ್ಯಾನ್ಸಲಿಂಗ್‌ ಫೀಚರ್ಸ್‌ ಹೊಂದಿದ್ದು, ಸ್ಪಷ್ಟ ಕರೆ ಅನುಭವಕ್ಕಾಗಿ ಟ್ರಿಪಲ್ ಮೈಕ್ರೊಫೋನ್‌ ಆಯ್ಕೆ ಹೊಂದಿರುವುದು ಈ ಇಯರ್‌ಬಡ್ಸ್‌ನ ಮತ್ತೊಂದು ವಿಶೇಷ.

ಫೀಚರ್ಸ್‌

ಈ ಎಲ್ಲಾ ಫೀಚರ್ಸ್‌ ಜೊತೆಗೆ ಬೈನೌರಲ್ ಕಡಿಮೆ-ಲೇಟೆನ್ಸಿ ಬ್ಲೂಟೂತ್ ಟ್ರಾನ್ಸ್‌ಮಿಷನ್‌ ಆಯ್ಕೆ ಹೊಂದಿದ್ದು, ಈ ಮೂಲಕ ಹೆಚ್ಚಿನ ಗೇಮಿಂಗ್ ಅನುಭವ ಪಡೆಯಬಹುದಾಗಿದೆ. ಅಂದರೆ ಈ ಇಯರ್‌ಬಡ್ಸ್‌ 54ms ಅಲ್ಟ್ರಾ ಲೋ ಲೇಟೆನ್ಸಿ ಮೋಡ್ ಹೊಂದಿದೆ.

ನೀರು ಹಾಗೂ ಧೂಳು ನಿರೋಧಕ

ನೀರು ಹಾಗೂ ಧೂಳು ನಿರೋಧಕ

ಇದರೊಂದಿಗೆ ಈ ಹೊಸ ಇಯರ್‌ಬಡ್ಸ್‌ IPX4 ರೇಟಿಂಗ್‌ನೊಂದಿಗೆ ನೀರು ಮತ್ತು ಧೂಳು ನಿರೋಧಕವಾಗಿದೆ. ಇಯರ್‌ಬಡ್‌ಗಳು ಡ್ಯುಯಲ್ ಕನೆಕ್ಷನ್‌ಗಳನ್ನು ಮತ್ತು ವಿವಿಧ ಡಿವೈಸ್‌ಗಳೊಂದಿಗೆ ಸುಲಭವಾಗಿ ಕನೆಕ್ಟ್‌ ಆಗುತ್ತದೆ.

ಆರೋಗ್ಯ ಮೇಲ್ಟಿಚಾರಣೆ

ಆರೋಗ್ಯ ಮೇಲ್ಟಿಚಾರಣೆ

ಒನ್‌ಪ್ಲಸ್ ಬಡ್ಸ್ ಪ್ರೊ 2 ಆಸಕ್ತಿದಾಯಕ ಸರ್ವಿಕಲ್ ಸ್ಪಿನ್ ಆರೋಗ್ಯ ಸಂಬಂಧಿ ಮೇಲ್ವಿಚಾರಣೆ ಮಾಡಲಿದ್ದು, ಈ ಮೂಲಕ ನಿಮ್ಮ ಭಂಗಿಯನ್ನು ಇದು ಪರಿಶೀಲಿಸುತ್ತದೆ. ಈ ಸೌಲಭ್ಯ ನಿಮಗೆ ಬೇಕು ಎಂದರೆ ಕಲರ್‌ ಓಎಸ್‌ 11.0 ಚಾಲಿತ ಸ್ಮಾರ್ಟ್‌ಫೋನ್‌ ಬಳಕೆ ಮಾಡಬೇಕಿದೆ.

ಬ್ಯಾಟರಿ ಸಾಮರ್ಥ್ಯ

ಬ್ಯಾಟರಿ ಸಾಮರ್ಥ್ಯ

ಒನ್‌ಪ್ಲಸ್ ಬಡ್ಸ್ ಪ್ರೊ 2 ಒಟ್ಟು 39 ಗಂಟೆಗಳ ಬ್ಯಾಟರಿ ಬ್ಯಾಕಪ್ ಅನ್ನು ನೀಡಲಿದ್ದು, ಇದು ವಾಯರ್‌ಲೆಸ್ ಚಾರ್ಜಿಂಗ್ ಅನ್ನು ಸಹ ಬೆಂಬಲಿಸಲಿದೆ.

ಬೆಲೆ ಹಾಗೂ ಲಭ್ಯತೆ

ಬೆಲೆ ಹಾಗೂ ಲಭ್ಯತೆ

ಈ ಆಕರ್ಷಕ ಇಯರ್‌ಬಡ್ಸ್‌ 2 899 ಯುವಾನ್ (10,821 ರೂ. ಗಳ ) ಬೆಲೆ ಘೋಷಣೆ ಮಾಡಲಾಗಿದ್ದು, ಗ್ರಾಹಕರು ಈ ಇಯರ್‌ಬಡ್‌ಗಳನ್ನು ಅಬ್ಸಿಡಿಯನ್ ಬ್ಲಾಕ್ ಮತ್ತು ಆರ್ಬರ್ ಗ್ರೀನ್ ಬಣ್ಣದ ಆಯ್ಕೆಗಳಲ್ಲಿ ಖರೀದಿಸಬಹುದು. ಈ ಡಿವೈಸ್‌ ಜನವರಿ 9 ರಿಂದ ಚೀನಾದಲ್ಲಿ ಮಾರಾಟವಾಗಲಿದೆ. ಹಾಗೆಯೇ ಒನ್‌ಪ್ಲಸ್ 11 ಸ್ಮಾರ್ಟ್‌ಫೋನ್‌ನೊಂದಿಗೆ ಫೆಬ್ರವರಿ 7 ರಂದು ಭಾರತದಲ್ಲಿ ಖರೀದಿಗೆ ಲಭ್ಯವಿದೆ.

Best Mobiles in India

English summary
OnePlus Buds Pro 2 with active noise cancellation launched.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X