Subscribe to Gizbot

ಒನ್‌ಪ್ಲಸ್ ದಿಪಾವಳಿ ಸೇಲ್‌: ರೂ.1 ಕ್ಕೆ ಒನ್‌ಪ್ಲಸ್ 3

Written By:

ಒನ್‌ಪ್ಲಸ್ ಈಗ ದಿಪಾವಳಿ ಬಿಗ್‌ ಸೇಲ್ ಮಾರುಕಟ್ಟೆಗೆ ಸೇರಿಕೊಂಡಿದೆ. ಅಲ್ಲದೇ ತನ್ನ ಸ್ವಂತ ಫೆಸ್ಟಿವ್‌ ಸೇಲ್‌ ಅನ್ನು ಸಹ ನಡೆಸುತ್ತಿದೆ. ಚೀನ ಕಂಪನಿ ಆದ ಒನ್‌ಪ್ಲಸ್‌ ಅಕ್ಟೋಬರ್ 24 ರಿಂದ 26 ರವರೆಗೆ ದಿಪಾವಳಿ ಬಿಗ್‌ ಸೇಲ್‌ ಅನ್ನು ರೂ.1 ಕ್ಕೆ ಆಯೋಜಿಸಿದೆ. ಈ ಫೇಸ್ಟಿವ್ ಸೇಲ್‌ನಲ್ಲಿ ಗ್ರಾಹಕರು ಒನ್‌ಪ್ಲಸ್ 3 ಸಾಫ್ಟ್ ಗೋಲ್ಡ್, ಒನ್‌ಪ್ಲಸ್ ಆಕ್ಸೆಸೀರೀಸ್ ಮತ್ತು ಇತರೆ ಪ್ರಾಡಕ್ಟ್‌ಗಳನ್ನು ಕಂಪನಿಯ ಆನ್‌ಲೈನ್‌ ಸ್ಟೋರ್‌ನಲ್ಲಿ ಜಸ್ಟ್ ರೂ.1 ಕ್ಕೆ ಖರೀದಿಸಬಹುದು.

ಒನ್‌ಪ್ಲಸ್ ದಿಪಾವಳಿ ಸೇಲ್‌: ರೂ.1 ಕ್ಕೆ ಒನ್‌ಪ್ಲಸ್ 3

ಒನ್‌ಪ್ಲಸ್ ಫ್ಲ್ಯಾಶ್‌ ಸೇಲ್‌ ಅನ್ನು ಸಮಯ 4pm, 6pm, 8pm ಗೆ ಆಯೋಜಿಸಿದ್ದು, ಈ ಸೇಲ್ ಮೂರು ದಿನಗಳ ನಡೆಯಲಿದೆ. ಒನ್‌ಪ್ಲಸ್ ಮಿಸ್ಟೆರಿ ಬಾಕ್ಸ್ ಅನ್ನು ಆಯ್ಕೆಯಾದ ನೋಂದಾಯಿತ ಗ್ರಾಹಕರಿಗೆ ಲಕ್ಕಿ ಡ್ರಾ ತೆಗೆಸುವುದರೊಂದಿಗೆ ಆಫರ್‌ ಮಾಡಲಿದೆ. ಬಳಕೆದಾರರು 3 ಗಂಟೆಯೊಳಗೆ ಮಿಸ್ಟೆರಿ ಬಾಕ್ಸ್ ಚೆಕ್ ಮಾಡಿ ಅದರ ಒಳೊಗೆ ಏನಿದೆ ಎಂದು ಪತ್ತೆಹಚ್ಚಬೇಕು.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಒನ್‌ಪ್ಲಸ್ ದಿಪಾವಳಿ ಸೇಲ್‌: ರೂ.1 ಕ್ಕೆ ಒನ್‌ಪ್ಲಸ್ 3

ಅಂದಹಾಗೆ ಸೇಲ್‌ನಲ್ಲಿ ಭಾಗವಹಿಸಲು ಒನ್‌ಪ್ಲಸ್ ಸ್ಟೋರ್‌ನಲ್ಲಿ ನೋಂದಾಯಿಸಿಕೊಳ್ಳಬೇಕು. ಒನ್‌ಪ್ಲಸ್ ಐಡಿ ಕ್ರಿಯೇಟ್ ಮಾಡಬೇಕು ಮತ್ತು ಅಗತ್ಯವಾದ ಬಿಲ್ಲಿಂಗ್ ಮತ್ತು ಪೇಮೆಂಟ್ ಮಾಹಿತಿಯನ್ನು ಫಿಲ್‌ ಮಾಡಬೇಕು. ಮೊಬೈಲ್ ನಂಬರ್ ವೆರಿಫೈ ಮಾಡಬೇಕು. ನಂತರ ಸಾಮಾಜಿಕ ತಾಣದಲ್ಲಿ #OnePlusDiwaliDash ಎಂದು ಶೇರ್ ಮಾಡಬೇಕು. 'OnePlus Diwali Dash Sale'ನಲ್ಲಿ ಭಾಗವಹಿಸಲು ನೋಂದಾವಣಿಗಾಗಿ 4 ಹಂತಗಳನ್ನು ಪೂರ್ಣಗೊಳಿಸಬೇಕು.

English summary
OnePlus Diwali Dash Sale to Offer OnePlus 3 at Re. 1 and More. To know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot