ಒನ್‌ಪ್ಲಸ್‌ ದೀಪಾವಳಿ ಸೇಲ್‌ ಘೋಷಣೆ! ಭರ್ಜರಿ ಡಿಸ್ಕೌಂಟ್‌ ಆಫರ್‌!

|

ಭಾರತದಲ್ಲಿ ಇದೀಗ ಹಬ್ಬಗಳ ಸಂಭ್ರಮ ಶುರುವಾಗಿದೆ. ಇದೇ ಸನ್ನಿವೇಶದಲ್ಲಿ ಇ-ಕಾಮರ್ಸ್‌ ಸೈಟ್‌ಗಳು ಡಿಸ್ಕೌಂಟ್‌ ಮೇಳಗಳ ಮೂಲಕ ಎಲ್ಲರನ್ನು ಆಕರ್ಷಿಸುತ್ತಿವೆ. ವಿವಿಧ ಮಾದರಿಯ ಆಫರ್‌ಗಳನ್ನು ಘೋಷಿಸುವ ಮೂಲಕ ಗ್ರಾಹಕರಿಗೆ ಹಬ್ಬದ ಸಂಭ್ರಮವನ್ನು ಹೆಚ್ಚಿಸುವುದಕ್ಕೆ ಮುಂದಾಗಿವೆ. ಸದ್ಯ ಇದೀಗ ಒನ್‌ಪ್ಲಸ್‌ ಕಂಪೆನಿ ಕೂಡ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ದೀಪಾವಳಿ ಸೇಲ್‌ ಆಯೋಜಿಸಲು ಮುಂದಾಗಿದೆ. ಈ ಸೇಲ್‌ ಮೂಲಕ ಒನ್‌ಪ್ಲಸ್‌ ಫೋನ್‌ಗಳಿಗೆ ವಿಶೇಷ ರಿಯಾಯಿತಿಯನ್ನು ಘೋಷಿಸಿದೆ.

ಒನ್‌ಪ್ಲಸ್‌

ಹೌದು, ಒನ್‌ಪ್ಲಸ್‌ ಕಂಪೆನಿ ದೀಪಾವಳಿ ಸೇಲ್‌ ಅನ್ನು ಸೆಪ್ಟೆಂಬರ್ 22 ರಿಂದ ಪ್ರಾರಂಭಿಸುವುದಾಗಿ ಹೇಳಿದೆ. ದೀಪಾವಳಿ ಹಬ್ಬ ಶುರುವಾಗುವ ಮುನ್ನವೇ ಇ-ಕಾಮರ್ಸ್‌ ಸೈಟ್‌ಗಳಿ ದೀಪಾವಳಿ ಸಂಭ್ರಮವನ್ನು ಕಾಣಬಹುದಾಗಿದೆ. ಒನ್‌ಪ್ಲಸ್‌ ಕಂಪೆನಿ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಲು ಬಯಸುವವರಿಗೆ ಇದು ಉತ್ತಮ ಸಮಯವೆಂದು ಹೇಳಬಹುದಾಗಿದೆ. ಅಲ್ಲದೆ ಒನ್‌ಪ್ಲಸ್‌ ವಾಯರ್‌ಲೆಸ್‌ ಇಯರ್‌ಫೋನ್‌ಗಳ ಮೇಲೂ ಕೂಡ ಡಿಸ್ಕೌಂಟ್‌ ದೊರೆಯಲಿದೆ. ಹಾಗಾದ್ರೆ ಒನ್‌ಪ್ಲಸ್‌ ದೀಪಾವಳಿ ಸೇಲ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಒನ್‌ಪ್ಲಸ್‌ 10ಪ್ರೊ

ಒನ್‌ಪ್ಲಸ್‌ 10ಪ್ರೊ

ಒನ್‌ಪ್ಲಸ್‌ ದೀಪಾವಳಿ ಸೇಲ್‌ನಲ್ಲಿ ಒನ್‌ಪ್ಲಸ್‌ 10 ಪ್ರೊ ಸ್ಮಾರ್ಟ್‌ಫೋನ್‌ 55,999ರೂ. ಬೆಲೆಯಲ್ಲಿ ಖರೀದಿಸಬಹುದಾಗಿದೆ. ಆದರೆ ಇದು ಪ್ಲಾಟ್‌ ರಿಯಾಯಿತಿ ಬದಲಿಗೆ ಬ್ಯಾಂಕ್ ಆಫರ್‌ಗಳನ್ನು ಕೂಡ ಒಳಗೊಂಡಿದೆ. ಇನ್ನು ಈ ಸ್ಮಾರ್ಟ್‌ಫೋನ್‌ 6.7 ಇಂಚಿನ QHD+ ಲಿಕ್ವಿಡ್‌ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಆಕ್ಟಾ-ಕೋರ್ ಸ್ನಾಪ್‌ಡ್ರಾಗನ್‌ 8 Gen 1 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಈ ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೋನಿ IMX789 ಸೆನ್ಸಾರ್‌ ಹೊಂದಿದೆ.

ಒನ್‌ಪ್ಲಸ್‌ 10R

ಒನ್‌ಪ್ಲಸ್‌ 10R

ಒನ್‌ಪ್ಲಸ್‌ 10R ಸ್ಮಾರ್ಟ್‌ಫೋನ್‌ ಒನ್‌ಪ್ಲಸ್‌ ದೀಪಾವಳಿ ಸೇಲ್‌ನಲ್ಲಿ 29,999ರೂ.ಬೆಲೆಯಲ್ಲಿ ಲಭ್ಯವಾಗಲಿದೆ. ಅಂದರೆ, ದೀಪಾವಳಿ ಸೇಲ್‌ ಪ್ರಯುಕ್ತ ಗ್ರಾಹಕರು 9,000ರೂ. ವರೆಗಿನ ರಿಯಾಯಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಒನ್‌ಪ್ಲಸ್‌ 10R ಸ್ಮಾರ್ಟ್‌ಫೋನ್‌ 6.7-ಇಂಚಿನ ಫುಲ್‌ HD+ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 8100-ಮ್ಯಾಕ್ಸ್ SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಈ ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್‌ ಹೊಂದಿದೆ.

ಒನ್‌ಪ್ಲಸ್‌ ನಾರ್ಡ್‌ CE 2 ಲೈಟ್‌ 5G

ಒನ್‌ಪ್ಲಸ್‌ ನಾರ್ಡ್‌ CE 2 ಲೈಟ್‌ 5G

ಒನ್‌ಪ್ಲಸ್‌ ನಾರ್ಡ್‌ CE 2 ಲೈಟ್‌ 5G ಸ್ಮಾರ್ಟ್‌ಫೋನ್‌ ಡಿಸ್ಕೌಂಟ್‌ನಲ್ಲಿ 17,499ರೂ.ಬೆಲೆಗೆ ಲಭ್ಯವಾಗಲಿದೆ. ಇದರಿಂದ ಈ ಸ್ಮಾರ್ಟ್‌ಫೋನ್‌ 2,500ರೂ.ವರೆಗೆ ರಿಯಾಯಿತಿ ಪಡೆದುಕೊಂಡಿದೆ. ಈ ಆಫರ್‌ ಬ್ಯಾಂಕ್ ಕಾರ್ಡ್‌ಗಳಿಗೆ ಅನ್ವಯಿಸಲಿದೆ. ಇನ್ನು ಒನ್‌ಪ್ಲಸ್‌ ನಾರ್ಡ್‌ CE 2 5G ಸ್ಮಾರ್ಟ್‌ಫೋನ್‌ 6.43 ಇಂಚಿನ ಫುಲ್ ಹೆಚ್‌ಡಿ+ ಫ್ಲೂಯಿಡ್ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 900 SoC ಪ್ರೊಸೆಸರ್‌ ಬಲವನ್ನು ಪಡೆದಿದೆ. ಈ ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ.

ಒನ್‌ಪ್ಲಸ್‌ ಬಡ್ಸ್ ಪ್ರೊ

ಒನ್‌ಪ್ಲಸ್‌ ಬಡ್ಸ್ ಪ್ರೊ

ಒನ್‌ಪ್ಲಸ್‌ ದೀಪಾವಳಿ ಸೇಲ್‌ನಲ್ಲಿ ಒನ್‌ಪ್ಲಸ್‌ ಬಡ್ಸ್ ಪ್ರೊ ಕೂಡ ವಿಶೇಷ ಡಿಸ್ಕೌಂಟ್‌ನಲ್ಲಿ ದೊರೆಯಲಿದೆ. ಈ ಬಡ್ಸ್‌ ಆಫರ್‌ನಲ್ಲಿ ನಿಮಗೆ ಕೇವಲ 6,490ರೂ.ಗಳಿಗೆ ಖರೀದಿಸಬಹುದಾಗಿದೆ. ಇದರಲ್ಲಿ ಬ್ಯಾಂಕ್ ಕಾರ್ಡ್‌ ಆಫರ್‌ ಕೂಡ ಸೇರಿದೆ. ಒನ್‌ಪ್ಲಸ್ ಬಡ್ಸ್ ಪ್ರೊ ಹೆಚ್ಚಿನ ಬಾಳಿಕೆ ಗುಣಮಟ್ಟವನ್ನು ನಿರ್ವಹಿಸುತ್ತದೆ. ಈ ಮೊಗ್ಗುಗಳನ್ನು IP55 ರೇಟ್ ಮಾಡಲಾಗಿದೆ ಮತ್ತು ಚಾರ್ಜಿಂಗ್ ತೊಟ್ಟಿಲು ಕೂಡ IPX4 ರೇಟ್ ಮಾಡಲಾಗಿದೆ. ಒನ್‌ಪ್ಲಸ್ ಬಡ್ಸ್ ಪ್ರೊ ಕೂಡ ಡಾಲ್ಬಿ ಅಟ್ಮೋಸ್ ಬೆಂಬಲದೊಂದಿಗೆ ಉನ್ನತ ಮತ್ತು ಥಿಯೇಟರ್ ತರಹದ ಧ್ವನಿಯನ್ನು ಸೃಷ್ಟಿಸುತ್ತದೆ, ಇದು ಪ್ರಾದೇಶಿಕ ಆಡಿಯೋ ವ್ಯವಸ್ಥೆಗೆ ಸಮನಾಗಿದೆ.

Best Mobiles in India

English summary
OnePlus Diwali sale: Massive discount on OnePlus 10 Pro and more

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X