2018ರಲ್ಲಿ ತಯಾರಿಸಿದ ಎಲ್ಲಾ ಪೋನ್‌ಗಳನ್ನು ಮಾರಿದ್ದು ಈ ಎರಡೇ ಕಂಪೆನಿಗಳು!!

|

ದಿನಕ್ಕೊಂದು ಫೋನ್‌ಗಳು ಬಿಡುಗಡೆಯಾಗುತ್ತಿರುವ ಇಂದಿನ ದಿನಗಳಲ್ಲಿ ತಯಾರಾದ ಎಲ್ಲಾ ಮೊಬೈಲ್‌ಗಳು ಮಾರಾಟವಾಗುವುದು ಅಸಾಧ್ಯವೇ ಸರಿ. ಆದರೆ, ಇತ್ತಿಚಿನ ರಿಪೋರ್ಟ್ ಒಂದು 2018ರಲ್ಲಿ ಅತ್ಯಾಧುನಿಕ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂ ನೊಂದಿಗೆ ತಯಾರಾಗಿದ್ದ ಎಲ್ಲಾ ಫೋನ್ಗಳನ್ನು ಮಾರಿದ ಎರಡು ಮೊಬೈಲ್ ತಯಾರಕ ಕಂಪೆನಿಗಳ ಬಗ್ಗೆ ಮಾಹಿತಿ ನೀಡಿದೆ.

ಮೊಬೈಲ್ ಮಾರುಕಟ್ಟೆ ಸಂಶೋಧನೆ ಟೆಕ್ ಎಆರ್ಸಿ ಬಿಡುಗಡೆ ಮಾಡಿರುವ ಅಧ್ಯಯನವೊಂದರ ರಿಪೋರ್ಟ್ ಪ್ರಕಾರ, 2018ರಲ್ಲಿ ತಯಾರಾದ ತನ್ನೆಲ್ಲಾ ಸ್ಮಾರ್ಟ್‌ಫೋನ್ಗಳನ್ನು ಮಾರಾಟ ಮಾಡಿದ ಮೊಬೈಲ್ ಕಂಪೆನಿಗಳ ಮಾಹಿತಿ ಸಿಕ್ಕಿದ್ದು, ಭಾರತದ ಪ್ರೀಮಿಯಮ್ ಮೊಬೈಲ್ ಆಟಗಾರ ಒನ್‌ಪ್ಲಸ್ ಮತ್ತು ಗೂಗಲ್ ಕಂಪೆನಿಗಳು ತಮ್ಮೆಲ್ಲಾ ಸ್ಮಾರ್ಟ್‌ಫೋನ್‌ಗಳನ್ನು ಮಾರಿವೆ.

2018ರಲ್ಲಿ ತಯಾರಿಸಿದ ಎಲ್ಲಾ ಪೋನ್‌ಗಳನ್ನು ಮಾರಿದ್ದು ಈ ಎರಡೇ ಕಂಪೆನಿಗಳು!!

ಕಳೆದ ವರ್ಷ ವಿವಿಧ ಮೊಬೈಲ್ ಸಂಸ್ಥೆಗಳಿಂದ ನೂತನ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂ ಹೊತ್ತು ಒಟ್ಟು 32 ಸ್ಮಾರ್ಟ್‌ಫೋನ್ ಮಾದರಿ (ಮಾಡೆಲ್)ಗಳು ಬಿಡುಗಡೆಯಾಗಿವೆ. ಈ ಪೈಕಿ ಒನ್‌ಪ್ಲಸ್ ಮತ್ತು ಗೂಗಲ್ ಎರಡೇ ಬ್ರ್ಯಾಂಡ್ ಮೊಬೈಲ್ ಕಂಪೆನಿಗಳು ತಮ್ಮೆಲ್ಲಾ ಮೊಬೈಲ್‌ಗಳನ್ನು ಮಾರಿದ್ದು, ಇತರೆ ಕಂಪೆನಿಗಳು ಸಹ ಮಾರುಕಟ್ಟೆಯಲ್ಲಿ ಭಾಗಶಃ ಯಶಸ್ವಿಯಾಗಿವೆ.

ಇತ್ತೀಚಿನ ಆಂಡ್ರಾಯ್ಡ್ ಓಎಸ್ ಆವೃತ್ತಿಯನ್ನು ಹೊತ್ತು 2018ರಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗಿರುವ ಒಟ್ಟು 32 ಸ್ಮಾರ್ಟ್‌ಫೋನ್ ಮಾದರಿ (ಮಾಡೆಲ್)ಗಳಲ್ಲಿ ವಿವೊ ಹೆಚ್ಚು ಮಾಡೆಲ್‌ಗಳನ್ನು ಬಿಡುಗಡೆ ಮಾಡಿದೆ. ಒಟ್ಟು ನೂತನ 7 ಮಾದರಿಗಳನ್ನು ಬಿಡುಗಡೆ ಮಾಡಿರುವ ವಿವೊ ಮೊದಲ ಸ್ಥಾನದಲ್ಲಿದ್ದರೆ, ನೋಕಿಯಾ ಕಂಪೆನಿ ಎರಡನೇ ಸ್ಥಾನದಲ್ಲಿ ಇರುವುದಾಗಿದೆ ಹೇಳಲಾಗಿದೆ.

2018ರಲ್ಲಿ ತಯಾರಿಸಿದ ಎಲ್ಲಾ ಪೋನ್‌ಗಳನ್ನು ಮಾರಿದ್ದು ಈ ಎರಡೇ ಕಂಪೆನಿಗಳು!!

ಇನ್ನು ಟೆಕ್ ಎಆರ್ಸಿ ಪ್ರಕಾರ, ಇತ್ತೀಚಿನ ಆವೃತ್ತಿಗಳಾಗಿರುವ ಆಂಡ್ರಾಯ್ಡ್ 8.1 (ಓರಿಯೊ) ಮತ್ತು ಆಂಡ್ರಾಯ್ಡ್ 9.0 (ಪೈ) ಆವೃತ್ತಿಗಳನ್ನು ಜನರು ಹೆಚ್ಚು ಇಷ್ಟಪಟ್ಟಿದ್ದಾರೆ. ಇದರಲ್ಲಿ ಶೇ 80 ಪ್ರತಿಶತದಷ್ಟು ಸ್ಮಾರ್ಟ್‌ಪೋನ್‌ಗಳು ಮೊದಲೇ ಆಂಡ್ರಾಯ್ಡ್ 8.1 ಒಎಸ್ ಅನ್ನು ಲೋಡ್‌ಮಾಡಿ ಮಾರಾಟಕ್ಕೆ ಬಂದಿದ್ದರೆ, ಇನ್ನುಳಿದ 20% ರಷ್ಟು ಆಂಡ್ರಾಯ್ಡ್ 9.0 (ಪೈ) ಆವೃತ್ತಿಯದ್ದಾಗಿವೆ.

Best Mobiles in India

English summary
The second spot was taken by Nokia which launched 4 followed by Tecno which launched 3 models in 2018 with the latest Android OS version. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X