ಜಿಯೋ ಗ್ರಾಹಕರಿಗೆ ಗುಡ್‌ ನ್ಯೂಸ್‌ ಕೊಟ್ಟ ಒನ್‌ಪ್ಲಸ್‌! ಏನಿದು ಹೊಸ ಒಪ್ಪಂದ!

|

ಒನ್‌ಪ್ಲಸ್‌ ಕಂಪೆನಿ ತನ್ನ ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಗುಡ್‌ ನ್ಯೂಸ್‌ ನೀಡಿದೆ. ಒನ್‌ಪ್ಲಸ್‌ 5G ಸ್ಮಾರ್ಟ್‌ಫೋನ್‌ ಬಳಸುವವರು ಇನ್ಮುಂದೆ ಜಿಯೋ 5G ನೆಟ್‌ವರ್ಕ್‌ ಅನ್ನು ಸುಲಭವಾಗಿ ಪ್ರವೇಶಿಸಬಹುದಾಗಿದೆ. ಇದಕ್ಕಾಗಿ ಒನ್‌ಪ್ಲಸ್‌ ಕಂಪೆನಿ ಜಿಯೋ 5Gಗೆ ಬೆಂಬಲಿಸಲು OTA ಸಾಫ್ಟ್‌ವೇರ್‌ ಅಪ್ಡೇಟ್‌ಗಳನ್ನು ಬಿಡುಗಡೆ ಮಾಡಿದೆ,ಇದು ಜಿಯೋ 5G ಗೆ ಬೆಂಬಲಿಸಲಿದೆ. ಇದರಿಂದ ಒನ್‌ಪ್ಲಸ್‌ ಜಿಯೋ ಜೊತೆಗಿನ ತನ್ನ ಸಹಯೋಗವನ್ನು ಪ್ರಕಟಿಸಿದೆ.

ಒನ್‌ಪ್ಲಸ್‌

ಹೌದು, ಒನ್‌ಪ್ಲಸ್‌ ಕಂಪೆನಿ ತನ್ನ 5G ಸ್ಮಾರ್ಟ್‌ಫೋನ್‌ಗಳು ಜಿಯೋ 5G ಬೆಂಬಲಿಸುವ ಸಾಫ್ಟ್‌ವೇರ್‌ ಅಪ್ಡೇಟ್‌ ಬಿಡುಗಡೆ ಮಾಡಿದೆ. ಆದ್ದರಿಂದ ಜಿಯೋ ಗ್ರಾಹಕರಾಗಿರುವ ಭಾರತದ ಒನ್‌ಪ್ಲಸ್‌ 5G ಫೋನ್‌ ಬಳಕೆದಾರರು 5G ನೆಟ್‌ವರ್ಕ್‌ ಬಳಸಬಹುದಾಗಿದೆ. ಇದಕ್ಕಾಗಿ ಒನ್‌ಪ್ಲಸ್‌ ಡಿವೈಸ್‌ನ ಇತ್ತೀಚಿನ ಸಾಫ್ಟ್‌ವೇರ್‌ ಅನ್ನು ಅಪ್ಡೇಟ್‌ ಮಾಡುವುದು ಅಗತ್ಯವಾಗಿದೆ. ಹಾಗಾದ್ರೆ ಒನ್‌ಪ್ಲಸ್‌ ಕಂಪೆನಿಯ ಯಾವೆಲ್ಲಾ ಸ್ಮಾರ್ಟ್‌ಫೋನ್‌ಗಳು ಜಿಯೋ 5G ನೆಟ್‌ವರ್ಕ್‌ ಬೆಂಬಲಿಸಲಿವೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಜಿಯೋ 5G ಬೆಂಬಲಿಸುವ ಒನ್‌ಪ್ಲಸ್‌ ಡಿವೈಸ್‌ಗಳು

ಜಿಯೋ 5G ಬೆಂಬಲಿಸುವ ಒನ್‌ಪ್ಲಸ್‌ ಡಿವೈಸ್‌ಗಳು

ಒನ್‌ಪ್ಲಸ್‌ ಕಂಪೆನಿ ಜಿಯೋ 5Gಗಾಗಿ ಹೊಸ ಸಾಫ್ಟ್‌ವೇರ್‌ ಅಪ್ಡೇಟ್‌ ಪರಿಚಯಿಸಿದೆ. ಇದರಿಂದ ಒನ್‌ಪ್ಲಸ್‌ 5G ಡಿವೈಸ್‌ಗಳಾದ ಒನ್‌ಪ್ಲಸ್‌ 10 ಸರಣಿ, ಒನ್‌ಪ್ಲಸ್‌ 9R, ಒನ್‌ಪ್ಲಸ್‌ ನಾರ್ಡ್‌, ಒನ್‌ಪ್ಲಸ್‌ ನಾರ್ಡ್‌ 2T, ಒನ್‌ಪ್ಲಸ್‌ ನಾರ್ಡ್‌ CE, ಒನ್‌ಪ್ಲಸ್‌ ನಾರ್ಡ್‌ 2, ಒನ್‌ಪ್ಲಸ್‌ ನಾರ್ಡ್‌ CE 2, ಒನ್‌ಪ್ಲಸ್‌ ನಾರ್ಡ್‌ CE 2 ಲೈಟ್‌, ಮತ್ತು ಒನ್‌ಪ್ಲಸ್‌ 8 ಸರಣಿಗಳು ಸೇರಿದಂತೆ ಒನ್‌ಪ್ಲಸ್‌ 5G ಫೋನ್‌ಗಳು ಜಿಯೋ 5Gಗೆ ಬೆಂಬಲವನ್ನು ನೀಡಲಿವೆ. ಇದಲ್ಲದೆ ಒನ್‌ಪ್ಲಸ್‌ 9 ಪ್ರೊ, ಒನ್‌ಪ್ಲಸ್‌ 9 ಮತ್ತು ಒನ್‌ಪ್ಲಸ್‌ 9RT ಕೂಡ ಶೀಘ್ರದಲ್ಲೇ ಜಿಯೋ ಟ್ರೂ 5Gಗೆ ಪ್ರವೇಶವನ್ನು ನೀಡಲಿದೆ.

ಇಕೋಸಿಸ್ಟಂ

ಇನ್ನು ಭಾರತದಲ್ಲಿ 5G ಇಕೋಸಿಸ್ಟಂ ಅನ್ನು ಎಲ್ಲೆಡೆ ಪಸರಿಸಲಿ ಜಿಯೋ ಮತ್ತು ಒನ್‌ಪ್ಲಸ್ ಸಹಯೋಗವನ್ನು ಹೊಂದಿದೆ. ಅದರಂತೆ ಭಾರತೀಯ ಗ್ರಾಹಕರಿಗೆ 5G ತಂತ್ರಜ್ಞಾನವನ್ನು ಹೆಚ್ಚು ಪ್ರವೇಶಿಸುವಂತೆ ಮಾಡಲು ಬ್ಯಾಕೆಂಡ್‌ನಲ್ಲಿ ಸಕ್ರಿಯವಾಗಿ ಒಟ್ಟಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಒನ್‌ಪ್ಲಸ್‌ ಕಂಪೆನಿ ಹೇಳಿದೆ. ಇನ್ನು ಒನ್‌ಪ್ಲಸ್‌ 5G ಡಿವೈಸ್‌ಗಳು ಜಿಯೋ 5Gಗೆ ಬೆಂಬಲಿಸಲು OTA ಸಾಫ್ಟ್‌ವೇರ್‌ ಅಪ್ಡೇಟ್‌ಗಳನ್ನು ಪಡೆದುಕೊಂಡಿವೆ ಎನ್ನಲಾಗಿದೆ. ಈ ಮೂಲಕ ಭಾರತದಲ್ಲಿ ಜಿಯೋ ಟ್ರೂ 5G ಲಭ್ಯವಿರುವ ಎಲ್ಲಾ ಪ್ರದೇಶಗಳಲ್ಲಿಯೂ ಇದೀಗ ಒನ್‌ಪ್ಲಸ್‌ 5G ಫೋನ್‌ ಬಳಕೆದಾರರು 5G ನೆಟ್‌ವರ್ಕ್‌ ಆನಂಧಿಸಬಹುದು.

ಒನ್‌ಪ್ಲಸ್‌ ವಾರ್ಷಿಕೋತ್ಸವದಲ್ಲಿ ವಿಶೇಷ ಆಫರ್‌

ಒನ್‌ಪ್ಲಸ್‌ ವಾರ್ಷಿಕೋತ್ಸವದಲ್ಲಿ ವಿಶೇಷ ಆಫರ್‌

ಇನ್ನು ಇದೇ ಸಂದರ್ಭದಲ್ಲಿ ಡಿಸೆಂಬರ್ 13 ರಿಂದ ಡಿಸೆಂಬರ್ 18, 2022 ರವರೆಗೆ ಒನ್‌ಪ್ಲಸ್‌ ವಾರ್ಷಿಕೋತ್ಸವ ಸೇಲ್‌ ನಡೆಯುತ್ತಿದೆ. ಇದರಲ್ಲಿ ಒನ್‌ಪ್ಲಸ್‌ ಮತ್ತು ಜಿಯೋ 5G ಬಳಕೆದಾರರು 10,800ರೂ ವರೆಗಿನ ವಿಶೇಷ ಪ್ರಯೋಜನಗಳನ್ನು ಆನಂದಿಸಬಹುದು. ಮೊದಲ 1000 ಫಲಾನುಭವಿಗಳು 1,499 ರೂಪಾಯಿ ಮೌಲ್ಯದ ರೆಡ್ ಕೇಬಲ್ ಕೇರ್ ಪ್ಲಾನ್‌ ಮತ್ತು 399 ರೂಪಾಯಿ ಮೌಲ್ಯದ ಜಿಯೋಸಾವನ್‌ ಪ್ರೊ ಪಡೆದುಕೊಳ್ಳಬಹುದಾಗಿದೆ ಎಂದು ಒನ್‌ಪ್ಲಸ್‌ ಕಂಪೆನಿ ಹೇಳಿಕೊಂಡಿದೆ.

ಒನ್‌ಪ್ಲಸ್‌

ಇದರ ನಡುವೆ ಒನ್‌ಪ್ಲಸ್‌ ಇಂಡಿಯಾ ಸಿಇಒ ಭಾರತದಲ್ಲಿ ನಮ್ಮ ಸಮುದಾಯಕ್ಕೆ 5G ತಂತ್ರಜ್ಞಾನವನ್ನು ತರಲು ಜಿಯೋ ತಂಡದೊಂದಿಗೆ ಪಾಲುದಾರಿಕೆ ಹೊಂದಲು ನಾವು ಸಂತೋಷಪಡುತ್ತೇವೆ ಎಂದು ಹೇಳಿದ್ದಾರೆ. ಅದೇ ರೀತಿ ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್‌ನ ಅಧ್ಯಕ್ಷ ಸುನಿಲ್ ದತ್, ಭಾರತದಲ್ಲಿ 5Gಡಿವೈಸ್‌ ಇಕೋ ಸಿಸ್ಟಂ ಅನ್ನು ಸಕ್ರಿಯಗೊಳಿಸಲು ನಮ್ಮೊಂದಿಗೆ ಕೆಲಸ ಮಾಡಲು ಸಿದ್ದವಿರುವ ಒನ್‌ಪ್ಲಸ್ ಜೊತೆಗೆ ಪಾಲುದಾರರಾಗಿರಲು ನಾವು ಸಂತೋಷಪಡುತ್ತೇವೆ ಎಂದು ಹೇಳಿದ್ದಾರೆ.

Best Mobiles in India

English summary
OnePlus has announced a new partnership with Jio in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X