ಭಾರತದಲ್ಲಿ ಒನ್‌ಪ್ಲಸ್‌ ಕಂಪೆನಿಯ ಮೊದಲ ಸ್ಮಾರ್ಟ್‌ ಮಾನಿಟರ್‌ ಲಾಂಚ್‌!

|

ಭಾರತದ ಮಾರುಕಟ್ಟೆಯಲ್ಲಿ ಒನ್‌ಪ್ಲಸ್‌ ಕಂಪೆನಿ ಭಿನ್ನ ಶ್ರೇಣಿಯ ಡಿವೈಸ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಸ್ಮಾರ್ಟ್‌ಫೋನ್‌ಗಳು, ಸ್ಮಾರ್ಟ್‌ವಾಚ್‌ಗಳು, ಆಡಿಯೋ ಆಕ್ಸಿಸರೀಸ್‌ಗಳು ಮತ್ತು ವಿವಿಧ ಮಾದರಿಯ ಡಿವೈಸ್‌ಗಳನ್ನು ಮಾರಾಟ ಮಾಡುತ್ತುದೆ. ಸದ್ಯ ಇದೀಗ ಭಾರತದಲ್ಲಿ ಇದೇ ಮೊದಲ ಬಾರಿಗೆ ತನ್ನ ಎರಡು ಹೊಸ ಮಾನಿಟರ್‌ಗಳನ್ನು ಬಿಡುಗಡೆ ಮಾಡಿದೆ. ಈ ಮಾನಿಟರ್‌ಗಳನ್ನು ಒನ್‌ಪ್ಲಸ್‌ ಮಾನಿಟರ್‌ X 27 ಮತ್ತು ಒನ್‌ಪ್ಲಸ್‌ ಮಾನಿಟರ್‌ E 24 ಎಂದು ಹೆಸರಿಸಲಾಗಿದೆ.

ಒನ್‌ಪ್ಲಸ್‌

ಹೌದು, ಒನ್‌ಪ್ಲಸ್‌ ಕಂಪೆನಿ ಭಾರತದಲ್ಲಿ ಒನ್‌ಪ್ಲಸ್‌ ಮಾನಿಟರ್‌ X 27 ಮತ್ತು ಒನ್‌ಪ್ಲಸ್‌ ಮಾನಿಟರ್‌ E 24 ಅನ್ನು ಬಿಡುಗಡೆ ಮಾಡಿದೆ. ಈ ಎರಡು ಸ್ಮಾರ್ಟ್‌ ಮಾನಿಟರ್‌ಗಳು ಭಿನ್ನ ಗಾತ್ರದ ಡಿಸ್‌ಪ್ಲೇಯನ್ನು ಹೊಂದಿದೆ. ಒಂದಕೊಂದು ಸಾಕಷ್ಟು ವಿಭಿನ್ನವಾದ ಫೀಚರ್ಸ್‌ಗಳನ್ನು ಒಳಗೊಂಡಿವೆ. ಹಾಗಾದ್ರೆ ಈ ಹೊಸ ಸ್ಮಾರ್ಟ್‌ ಮಾನಿಟರ್‌ಗಳ ವಿಶೇಷತೆ ಏನು? ಇದರ ಬೆಲೆ ಹೇಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಒನ್‌ಪ್ಲಸ್‌ ಮಾನಿಟರ್‌ X 27

ಒನ್‌ಪ್ಲಸ್‌ ಮಾನಿಟರ್‌ X 27

ಒನ್‌ಪ್ಲಸ್‌ ಮಾನಿಟರ್‌ X 27 ಹೆಸರೇ ಸೂಚಿಸುವಂತೆ ಇದು 27 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಮಾನಿಟರ್‌ 165Hz ರಿಫ್ರೆಶ್ ರೇಟ್‌ ಬೆಂಬಲಿಸಲಿದೆ. ಇದು ವೇಗವಾದ 1ms ಪ್ರೊಸೆಸರ್‌ ಟೈಂ ನೀಡಲಿದೆ. ಇದು ವೃತ್ತಿಪರ-ಮಟ್ಟದ ಗೇಮಿಂಗ್ ಅನುಭವವನ್ನು ನೀಡಲಿದೆ. ಇದಕ್ಕಾಗಿ AMD ಫ್ರೀಸಿಂಕ್ ಪ್ರೀಮಿಯಂ, 2K QHD ವಿಶ್ಯುಯಲ್‌ ರೆಸಲ್ಯೂಶನ್ ಅನ್ನು ಒಳಗೊಂಡಿದೆ. ಜೊತೆಗೆ ವಿಶಾಲವಾದ DCI-P3 95% ಕಲರ್‌ ಗ್ಯಾಮಟ್‌, TÃœV ರೈನ್‌ಲ್ಯಾಂಡ್ ಪ್ರಮಾಣೀಕರಣವನ್ನು ಪಡೆದುಕೊಂಡಿದೆ.

ಒನ್‌ಪ್ಲಸ್‌

ಇನ್ನು ಒನ್‌ಪ್ಲಸ್‌ ಮಾನಿಟರ್‌ X 27 ಪ್ರೀಮಿಯಂ ಹಾರ್ಡ್‌ವೇರ್ ಸ್ಪೋರ್ಟಿಂಗ್ ಮೆಟಲ್ ಸ್ಟ್ಯಾಂಡ್ ಮತ್ತು ಮೆಟಲ್ ಫಿನಿಶ್ ಅನ್ನು ಹೊಂದಿದೆ. ಇದರ ಮಲ್ಟಿ ಆಂಗಲ್‌ ಸೆಟ್ಟಿಂಗ್‌ ಸ್ಟ್ಯಾಂಡ್ ಕೂಡ ಹೊಂದಿದೆ. ಇದರಿಂದ ಮಾನಿಟರ್‌ ಅನ್ನು ಬಳಕೆದಾರರಿಗೆ ಅಗತ್ಯವಿರುವಂತೆ ಓರೆಯಾಗಿಸಬಹುದು ಮತ್ತು ತಿರುಗಿಸಬಹುದು. ಇದರೊಂದಿಗೆ ಮಾನಿಟರ್‌ ಸ್ಟ್ಯಾಂಡರ್ಡ್ ಮೋಡ್, ಮೂವೀ ಮೋಡ್, ಪಿಕ್ಚರ್ ಮೋಡ್, ವೆಬ್ ಮೋಡ್ ಮತ್ತು ಗೇಮ್ ಮೋಡ್ ಸೇರಿದಂತೆ ಐದು ವಿಭಿನ್ನ ಮೋಡ್‌ಗಳೊಂದಿಗೆ ಬರುತ್ತದೆ.

ಮಾನಿಟರ್‌

ಒನ್‌ಪ್ಲಸ್‌ ಮಾನಿಟರ್‌ X 27 ನಾಲ್ಕು ಆಪ್ಟಿಮೈಸ್ಡ್ ಸಬ್‌-ಮೋಡ್ಸ್‌ಗಳನ್ನು ನೀಡಲಿದೆ. ಇವುಗಳನ್ನು MOBA ಮೋಡ್, FPS ಮೋಡ್, RTS ಮೋಡ್ ಮತ್ತು RPG ಮೋಡ್ ಎಂದು ಹೆಸರಿಸಲಾಗಿದೆ. ಇದಲ್ಲದೆ ಈ ಮಾನಿಟರ್ ಡ್ಯುಯಲ್ PbP ಮತ್ತು PiP ಸ್ಪ್ಲಿಟ್-ಸ್ಕ್ರೀನ್ ಮೋಡ್‌ಗಳನ್ನು ಸಹ ಒಳಗೊಂಡಿದೆ. ಇದು ಬಳಕೆದಾರರಿಗೆ ಮಲ್ಟಿ ಫಂಕ್ಷನ್‌ ಅನ್ನು ಎಫೆಕ್ಟಿವ್‌ ಆಗಿ ಬಳಸುವುದಕ್ಕೆ ಅನುಮತಿಸಲಿದೆ. ಇದರಿಂದ ಎರಡು ವಿಭಿನ್ನ ಡಿವೈಸ್‌ಗಳಲ್ಲಿರುವ ಡಾಕ್ಯುಮೆಂಟ್‌ಗಳನ್ನು ಅಕ್ಕಪಕ್ಕದಲ್ಲಿ ವೀಕ್ಷಿಸಲು ಸಾಧ್ಯವಾಗಲಿದೆ.

ಒನ್‌ಪ್ಲಸ್‌ ಮಾನಿಟರ್‌ E 24

ಒನ್‌ಪ್ಲಸ್‌ ಮಾನಿಟರ್‌ E 24

ಒನ್‌ಪ್ಲಸ್‌ ಮಾನಿಟರ್ E 24 ಸ್ಮಾರ್ಟ್‌ ಮಾನಿಟರ್‌ ಫುಲ್‌ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 75 Hz ರಿಫ್ರೆಶ್ ರೇಟ್‌ ಮತ್ತು ಡೈನಾಮಿಕ್ ಫ್ರೇಮ್ ರೇಟ್‌ ನಿರ್ವಹಣೆಯನ್ನು ನೀಡುವ ಅಡಾಪ್ಟಿವ್ ಸಿಂಕ್ ಟೆಕ್ನಾಲಜಿಯನ್ನು ನೀಡಲಿದೆ. ಇದಲ್ಲದೆ ಈ ಮಾನಿಟರ್‌ TUV ರೈನ್‌ಲ್ಯಾಂಡ್ ಪ್ರಮಾಣೀಕರಣ, ನಯವಾದ ಮತ್ತು ಕನಿಷ್ಠ ವಿನ್ಯಾಸ, ಗಟ್ಟಿಮುಟ್ಟಾದ ಹೊಂದಾಣಿಕೆಯ ಲೋಹದ ಸ್ಟ್ಯಾಂಡ್ ಅನ್ನು ಕೂಡ ಹೊಂದಿದೆ. ಇದಲ್ಲದೆ ಇನ್‌ಬಿಲ್ಟ್‌ ಕೇಬಲ್ ಮ್ಯಾನೇಜ್‌ ಫೀಚರ್ಸ್‌, ಟೈಪ್-ಸಿ ಪೋರ್ಟ್ ಸಂಪರ್ಕದಂತಹ ಫೀಚರ್ಸ್‌ಗಳನ್ನು ಒಳಗೊಂಡಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಒನ್‌ಪ್ಲಸ್‌ ಮಾನಿಟರ್‌ X27 ಭಾರತದಲ್ಲಿ 27,999ರೂ. ಬೆಲೆಯಲ್ಲಿ ಲಭ್ಯವಾಗಲಿದೆ. ಇದು ಡಿಸೆಂಬರ್ 15 ರಿಂದ ಒನ್‌ಪ್ಲಸ್‌.ಇನ್‌ ಮೂಲಕ ಖರೀದಿಗೆ ಲಭ್ಯವಾಗಲಿದೆ. ಈ ಮಾನಿಟರ್‌ ಲಾಂಚ್‌ ಆಫರ್‌ನಲ್ಲಿ ICICI ಬ್ಯಾಂಕ್ ಕ್ರೆಡಿಟ್ ಅಥವಾ ಡೆಬಿಟ್ EMI ಮತ್ತು ನೆಟ್‌ಬ್ಯಾಂಕಿಂಗ್ ವಹಿವಾಟುಗಳ ಮೇಲೆ 1,000 ರೂ ಮೌಲ್ಯದ ತ್ವರಿತ ಬ್ಯಾಂಕ್ ರಿಯಾಯಿತಿಯನ್ನು ನೀಡುತ್ತಿದೆ. ಜೊತೆಗೆ ಗ್ರಾಹಕರು 6 ತಿಂಗಳವರೆಗೆ ಯಾವುದೇ ವೆಚ್ಚವಿಲ್ಲದ EMI ಅನ್ನು ಸಹ ಪಡೆಯಬಹುದು.
ಇನ್ನು ಒನ್‌ಪ್ಲಸ್‌ ಮಾನಿಟರ್‌ E24 ಬೆಲೆ ಮತ್ತು ಮಾರಾಟದ ಮಾಹಿತಿಯನ್ನು ಶೀಘ್ರದಲ್ಲೇ ಬಹಿರಂಗಪಡಿಸಲಾಗುವುದು ಎಂದು ಒನ್‌ಪ್ಲಸ್‌ ಕಂಪನಿ ಹೇಳಿಕೊಂಡಿದೆ.

Best Mobiles in India

Read more about:
English summary
OnePlus has launched two new monitors in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X