ಇಂದು 'ಒನ್‌ಪ್ಲಸ್‌ ನಾರ್ಡ್‌ 2T 5G' ಫಸ್ಟ್‌ ಸೇಲ್‌!..ನೀವು ಖರೀದಿಸುತ್ತೀರಾ?

|

ಒನ್‌ಪ್ಲಸ್‌ ಸಂಸ್ಥೆಯು ಭಾರತದಲ್ಲಿ ಹೊಸದಾಗಿ ಲಾಂಚ್ ಮಾಡಿರುವ 'ಒನ್‌ಪ್ಲಸ್‌ ನಾರ್ಡ್‌ 2T 5G' ಸ್ಮಾರ್ಟ್‌ಫೋನ್ ಈಗಾಗಲೇ ಆಕರ್ಷಕ ಫೀಚರ್ಸ್‌ ಗಳಿಂದ ಮಾರುಕಟ್ಟೆಯಲ್ಲಿ ಸದ್ದು ಮಾಡಿದೆ. ಈ ಸ್ಮಾರ್ಟ್‌ಫೋನ್ ಇಂದು (ಜುಲೈ 5) ಅಮೆಜಾನ್ ಇ ಕಾಮರ್ಸ್‌ ಪ್ಲಾಟ್‌ಫಾರ್ಮ್ ಮೂಲಕ ಮಧ್ಯಾಹ್ನ 12ಕ್ಕೆ ಮೊದಲ ಸೇಲ್‌ ಪ್ರಾರಂಭಿಸಲಿದೆ. ಇನ್ನು ಈ ಫೋನ್ ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 1300 SoC ಪ್ರೊಸೆಸರ್‌ SoC ಪ್ರೊಸೆಸರ್‌ ಹೊಂದಿದೆ.

ಪಾಯಿಂಟ್

ಹೌದು, ಒನ್‌ಪ್ಲಸ್‌ ಸಂಸ್ಥೆಯ 'ಒನ್‌ಪ್ಲಸ್‌ ನಾರ್ಡ್‌ 2T 5G' ಸ್ಮಾರ್ಟ್‌ಫೋನ್ ಮಾರಾಟ ಇಂದು ಇ ಕಾಮರ್ಸ್ ದೈತ್ಯ ಅಮೆಜಾನ್ ನಡೆಯಲಿದೆ. ಈ ಫೋನ್ ಟ್ರಿಪಲ್‌ ಕ್ಯಾಮೆರಾ ಸೆಟ್‌ಅಪ್, ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸಲ್ ಸೆನ್ಸಾರ್‌ ಸಾಮರ್ಥ್ಯದಲ್ಲಿರುವುದು ಪ್ಲಸ್‌ ಪಾಯಿಂಟ್ ಆಗಿ ಕಾಣಿಸಿಕೊಂಡಿದೆ. ಜೊತೆಗೆ 4,500mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಹೊಂದಿದೆ.

ಸ್ಮಾರ್ಟ್‌ಫೋನ್‌

ಇನ್ನು ಒನ್‌ಪ್ಲಸ್‌ ನಾರ್ಡ್‌ 2T 5G ಫೋನ್‌ 90Hz ರಿಫ್ರೆಶ್‌ ರೇಟ್‌ ಬೆಂಬಲಿಸುವ ಡಿಸ್‌ಪ್ಲೇ ಹೊಂದಿದೆ. ಇದು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್‌ ಅನ್ನು ಒಳಗೊಂಡಿದೆ. ಈ ಸ್ಮಾರ್ಟ್‌ಫೋನ್‌ ಕ್ಯಾಮೆರಾ ಬಳಸಿ 30fps ನಲ್ಲಿ 4K ವೀಡಿಯೊ ರೆಕಾರ್ಡಿಂಗ್ ಮಾಡಬಹುದಾಗಿದೆ. ಹಾಗೆಯೇ 960fps ವರೆಗಿನ ಸೂಪರ್ ಸ್ಲೋ ಮೋಷನ್ ವೀಡಿಯೊ ಫೀಚರ್ಸ್‌ ಅನ್ನು ಕೂಡ ನೀಡಲಾಗಿದೆ. ಇದು ಗ್ರೇ ಶ್ಯಾಡೋ ಮತ್ತು ಜೇಡ್ ಫಾಗ್ ಕಲರ್‌ ಆಯ್ಕೆಗಳಲ್ಲಿ ಬರಲಿದೆ. ಹಾಗಾದರೇ ಒನ್‌ಪ್ಲಸ್‌ ನಾರ್ಡ್‌ 2T 5G ಸ್ಮಾರ್ಟ್‌ಫೋನಿನ ಬೆಲೆ ಎಷ್ಟು? ಹಾಗೂ ಈ ಫೋನಿನ ಇತರೆ ಫೀಚರ್ಸ್‌ಗಳು ಯಾವುವು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ

ಒನ್‌ಪ್ಲಸ್‌ ನಾರ್ಡ್‌ 2T 5G ಸ್ಮಾರ್ಟ್‌ಫೋನ್‌ 6.43 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದೆ. ಇನ್ನು ಈ ಡಿಸ್‌ಪ್ಲೇ 1,080x2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಹೊಂದಿದೆ. ಈ ಡಿಸ್‌ಪ್ಲೇ 20:9 ರಚನೆಯ ಅನುಪಾತವನ್ನು ಒಳಗೊಂಡಿದೆ. ಇದು 90Hz ರಿಫ್ರೆಶ್ ರೇಟ್‌ ಹೊಂದಿದ್ದು, HDR 10+ ಪ್ರಮಾಣೀಕರಣವನ್ನು ಹೊಂದಿದೆ. ಜೊತೆಗೆ ಈ ಡಿಸ್‌ಪ್ಲೇ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್‌ ಅನ್ನು ಒಳಗೊಂಡಿದೆ.

ಪ್ರೊಸೆಸರ್‌ ಯಾವುದು?

ಪ್ರೊಸೆಸರ್‌ ಯಾವುದು?

ಒನ್‌ಪ್ಲಸ್‌ ನಾರ್ಡ್‌ 2T 5G ಸ್ಮಾರ್ಟ್‌ಫೋನ್‌ ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 1300 SoC ಪ್ರೊಸೆಸರ್‌ ಅನ್ನು ಹೊಂದಿದೆ. ಇದು ಆಂಡ್ರಾಯ್ಡ್ 12 ಅನ್ನು ಆಕ್ಷಿಜನ್‌ OS 12.1 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 8 GB RAM + 128 GB ಮತ್ತು 12 GB RAM ಮತ್ತು 256 GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯದ ವೇರಿಯೆಂಟ್‌ ಆಯ್ಕೆಗಳಲ್ಲಿ ಬರಲಿದೆ. ಈ ಸ್ಮಾರ್ಟ್‌ಫೋನ್‌ನಲ್ಲಿ ಮೆಮೊರಿ ಕಾರ್ಡ್‌ ಮೂಲಕ ಸಂಗ್ರಹ ಸಾಮರ್ಥ್ಯ ವಿಸ್ತರಿಸುವುದಕ್ಕೆ ಅವಕಾಶ ನೀಡಿಲ್ಲ.

ಕ್ಯಾಮೆರಾ ಹೇಗಿದೆ?

ಕ್ಯಾಮೆರಾ ಹೇಗಿದೆ?

ಒನ್‌ಪ್ಲಸ್‌ ನಾರ್ಡ್‌ 2T 5G ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೋನಿ IMX766 ಸೆನ್ಸಾರ್‌ ಹೊಂದಿದೆ. ಇದು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಬೆಂಬಲವನ್ನು ಹೊಂದಿದೆ. ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್‌ ಹೊಂದಿದ್ದು, 120 ಡಿಗ್ರಿಗಳ ಫೀಲ್ಡ್-ಆಫ್-ವ್ಯೂ ನೀಡಲಿದೆ. ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮೊನೊಕ್ರೋಮ್ ಸೆನ್ಸಾರ್ ಅನ್ನು ಹೊಂದಿದೆ. ಇದಲ್ಲದೆ 32 ಮೆಗಾಪಿಕ್ಸೆಲ್ ಸೋನಿ IMX615 ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ನೀಡಲಾಗಿದೆ.

ಬ್ಯಾಟರಿ ಮತ್ತು ಇತರೆ ಸೌಲಭ್ಯಗಳು

ಬ್ಯಾಟರಿ ಮತ್ತು ಇತರೆ ಸೌಲಭ್ಯಗಳು

ಒನ್‌ಪ್ಲಸ್‌ ನಾರ್ಡ್‌ 2T 5G ಸ್ಮಾರ್ಟ್‌ಫೋನ್‌ 4,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 80W SuperVOOC ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 6, ಬ್ಲೂಟೂತ್ v5.2, GPS/ A-GPS/ NavIC, NFC, ಮತ್ತು USB ಟೈಪ್-C ಪೋರ್ಟ್ ಸೇರಿದೆ. ಇದಲ್ಲದೆ ಅಕ್ಸಿಲೆರೊಮೀಟರ್, ಆಂಬಿಯೆಂಟ್ ಲೈಟ್, ಗೈರೊಸ್ಕೋಪ್, ಮ್ಯಾಗ್ನೆಟೋಮೀಟರ್, ಪ್ರಾಕ್ಸಿಮಿಟಿ ಸೆನ್ಸಾರ್‌ ಮತ್ತು SAR ಸೆನ್ಸಾರ್‌ ಅನ್ನು ಒಳಗೊಂಡಿದೆ. ಜೊತೆಗೆ ಈ ಫೋನ್ ಇನ್-ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್‌ ಹೊಂದಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಭಾರತದಲ್ಲಿ ಒನ್‌ಪ್ಲಸ್‌ ನಾರ್ಡ್‌ 2T 5G ಸ್ಮಾರ್ಟ್‌ಫೋನ್‌ ಬೇಸ್‌ ಮಾಡೆಲ್‌ 8 GB RAM + 128 GB ಸ್ಟೋರೇಜ್ ಆಯ್ಕೆಗೆ 28,999 ರೂ.ಬೆಲೆ ಹೊಂದಿದೆ. ಹಾಗೆಯೇ 12GB + 256GB ಮಾದರಿಯ ಆಯ್ಕೆಗೆ 33,999 ರೂ.ಬೆಲೆಯನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಇದೇ ಜುಲೈ 5 ರಿಂದ ಅಮೆಜಾನ್‌, ಒನ್‌ಪ್ಲಸ್‌.ಇನ್‌, ಒನ್‌ಪ್ಲಸ್‌ ಸ್ಟೋರ್‌ ಅಪ್ಲಿಕೇಶನ್‌, ಒನ್‌ಪ್ಲಸ್‌ ಎಕ್ಸ್‌ಪೀರಿಯೆನ್ಸ್‌ ಸ್ಟೋರ್‌ಗಳಲ್ಲಿ ಮಾರಾಟವಾಗಲಿದೆ. ಇದು ಗ್ರೇ ಶ್ಯಾಡೋ ಮತ್ತು ಜೇಡ್ ಫಾಗ್ ಬಣ್ಣದ ಆಯ್ಕೆಗಳಲ್ಲಿ ಬರಲಿದೆ.

ಏನಾದ್ರೂ ಕೊಡುಗೆ ಇದೆಯಾ?

ಏನಾದ್ರೂ ಕೊಡುಗೆ ಇದೆಯಾ?

ಒನ್‌ಪ್ಲಸ್‌ ನಾರ್ಡ್‌ 2T 5G ಸ್ಮಾರ್ಟ್‌ಫೋನ್‌ ಲಾಂಚ್‌ ಆಫರ್‌ನಲ್ಲಿ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳನ್ನು ಬಳಸುವ ಗ್ರಾಹಕರು 1,500 ತ್ವರಿತ ಬ್ಯಾಂಕ್ ರಿಯಾಯಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಈ ತ್ವರಿತ ಬ್ಯಾಂಕ್ ರಿಯಾಯಿತಿಯು ಜುಲೈ 5 ರಿಂದ ಜುಲೈ 11ರ ನಡುವೆ ಲಭ್ಯವಿರುತ್ತದೆ. ಅಲ್ಲದೆ, ಐಸಿಐಸಿಐ ಬ್ಯಾಂಕ್ ಕಾರ್ಡ್‌ದಾರರು ಜುಲೈ ಅಂತ್ಯದವರೆಗೆ ಮೂರು ತಿಂಗಳವರೆಗೆ ನೋ ಕಾಸ್ಟ್‌ EMI ಆಯ್ಕೆಗಳನ್ನು ಪಡೆಯಲು ಅವಕಾಶವನ್ನು ನೀಡಲಾಗಿದೆ.

ಆಫರ್

ಇದಲ್ಲದೆ ಒನ್‌ಪ್ಲಸ್‌.ಇನ್‌ ವೆಬ್‌ಸೈಟ್ ಮತ್ತು ಒನ್‌ಪ್ಲಸ್‌ ಸ್ಟೋರ್ ಅಪ್ಲಿಕೇಶನ್ ಮೂಲಕ ಒನ್‌ಪ್ಲಸ್‌ ನಾರ್ಡ್‌ 2T 5G ಅನ್ನು ಖರೀದಿಸುವ ಗ್ರಾಹಕರು ಹೆಚ್ಚುವರಿ 3,000ರೂ ಎಕ್ಸ್‌ಚೇಂಜ್‌ ಆಫರ್ ಪಡೆಯಲಿದ್ದಾರೆ. ಆದರೆ ಈ ಆಫರ್‌ ನಿಮಗೆ ಜುಲೈ 5 ರಿಂದ ಜುಲೈ 14 ರ ನಡುವೆ ಲಭ್ಯವಾಗಲಿದೆ. ಜೊತೆಗೆ ಒನ್‌ಪ್ಲಸ್‌ ಸ್ಟೋರ್ ಅಪ್ಲಿಕೇಶನ್‌ನಲ್ಲಿ ಮೊದಲ 1,000 ಶಾಪರ್‌ಗಳು ಒನ್‌ಪ್ಲಸ್‌ ನಾರ್ಡ್ ಹ್ಯಾಂಡಿ ಫ್ಯಾನಿ ಪ್ಯಾಕ್ ಅನ್ನು ಸಹ ಪಡೆದುಕೊಳ್ಳಬಹುದು.

Best Mobiles in India

English summary
OnePlus Nord 2T 5G goes for first sale Today: Price, Specifications.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X