ಗಂಟೆಯಲ್ಲಿ ಒನ್ ಪ್ಲಸ್ ಒನ್ ಡೆಲಿವರಿಯಾಗದಿದ್ದರೆ ಫೋನೇ ಉಚಿತ!!!

Written By:

30 ನಿಮಿಷಗಳಲ್ಲಿ ಪಿಜಾ ಡೆಲಿವರಿ ಇಲ್ಲವೇ ನಿಮಗೆ ಉಚಿತ ಪಿಜಾ ಮೊದಲಾದ ಜಾಹೀರಾತುಗಳನ್ನು ಮತ್ತು ಆಫರ್‌ಗಳನ್ನು ಪಿಜಾ ಹಟ್‌ಗಳಲ್ಲಿ ನಿಮಗೆ ನೋಡಬಹುದಾಗಿದೆ. ಆದರೆ ಇದೇ ಉಪಾಯವನ್ನು ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್ ಕಂಪೆನಿಗಳು ಅನುಸರಿಸುತ್ತಿದ್ದು ಒನ್ ಪ್ಲಸ್ ಒನ್ ಇದೇ ವಿಧಾನವನ್ನು ಅನುಸರಿಸಿ ಫೋನ್ ಕ್ಷೇತ್ರದಲ್ಲಿ ಹೊಸ ದಿಟ್ಟ ಹೆಜ್ಜೆಯನ್ನು ಇರಿಸಲು ಮುಂದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಒನ್ ಪ್ಲಸ್ ಒನ್ ಡೆಲಿವರಿ

ಒನ್ ಪ್ಲಸ್ ಒನ್ ಡೆಲಿವರಿ

60 ನಿಮಿಷಗಳಲ್ಲಿ ಒನ್ ಪ್ಲಸ್ ಒನ್ ಡೆಲಿವರಿ ನಿಮಗೆ ತಲುಪದೇ ಇದ್ದಲ್ಲಿ ಈ ಫೋನ್ ನಿಮಗೆ ಉಚಿತ ಎಂಬ ಒಕ್ಕಣೆಯನ್ನು ಈ ಫೋನ್ ಮಾಡಿದೆ.

ಕಂಪೆನಿಯ ಹೊಸ ಪ್ರೊಮೋಶನ್ ನೀತಿ

ಕಂಪೆನಿಯ ಹೊಸ ಪ್ರೊಮೋಶನ್ ನೀತಿ

ಕಂಪೆನಿಯ ಹೊಸ ಪ್ರೊಮೋಶನ್ ನೀತಿ ಇದಾಗಿದ್ದು, ಬೆಂಗಳೂರು ಮೂಲದ ಮಾರ್ಕೆಟ್ ಪ್ಲೇಸ್‌ ಬ್ಲೋಹಾರ್ನ್‌ನೊಂದಿಗೆ ಕಂಪೆನಿಯೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದೆ.

ಮೆಚ್ಚಿನ ಡಿವೈಸ್

ಮೆಚ್ಚಿನ ಡಿವೈಸ್

ಗಂಟೆಗಳಲ್ಲಿ ನಿಮ್ಮ ಮೆಚ್ಚಿನ ಡಿವೈಸ್ ಅನ್ನು ನಿಮ್ಮದಾಗಿಸಿಕೊಳ್ಳುವ ಈ ಸುವರ್ಣವಕಾಶವನ್ನು ಕೈಯಿಂದ ತಪ್ಪಿಹೋಗದಂತೆ ನೋಡಿಕೊಳ್ಳಿ.

ಗಂಟೆಯಲ್ಲಿ ಈ ಡಿವೈಸ್ ನಿಮ್ಮನ್ನು ತಲುಪಿಲ್ಲ

ಗಂಟೆಯಲ್ಲಿ ಈ ಡಿವೈಸ್ ನಿಮ್ಮನ್ನು ತಲುಪಿಲ್ಲ

ಎಲ್ಲಿಯಾದರೂ ಗಂಟೆಯಲ್ಲಿ ಈ ಡಿವೈಸ್ ನಿಮ್ಮನ್ನು ತಲುಪಿಲ್ಲ ಎಂದಾದಲ್ಲಿ ಪಿಜಾದಂತೆಯೇ ಫೋನ್ ಕೂಡ ನಿಮಗೆ ಉಚಿತವಾಗಿ ಲಭ್ಯವಾಗಲಿದೆ.

ಬ್ಲೊಹಾರ್ನ್ ಮೊಬೈಲ್ ಅಪ್ಲಿಕೇಶನ್‌

ಬ್ಲೊಹಾರ್ನ್ ಮೊಬೈಲ್ ಅಪ್ಲಿಕೇಶನ್‌

ಬ್ಲೊಹಾರ್ನ್ ಮೊಬೈಲ್ ಅಪ್ಲಿಕೇಶನ್‌ ಮೂಲಕ ಒನ್ ಪ್ಲಸ್ ಒನ್ ಫೋನ್ ಅನ್ನು ಆರ್ಡರ್ ಮಾಡಬೇಕಾಗುತ್ತದೆ. ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಈ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ.

ನಿಮ್ಮ ಫೋನ್‌ಗಾಗಿ ಆರ್ಡರ್

ನಿಮ್ಮ ಫೋನ್‌ಗಾಗಿ ಆರ್ಡರ್

ನೀವು ಅಪ್ಲಿಕೇಶನ್‌ನಲ್ಲಿ ಒಮ್ಮೆ ಇದ್ದೊಡನೆಯೇ, ನಿಮ್ಮ ಫೋನ್‌ಗಾಗಿ ಆರ್ಡರ್ ಅನ್ನು ಇದರಲ್ಲಿ ಮಾಡಿಕೊಳ್ಳಿ ಮತ್ತು ನಿಮ್ಮ ಆರ್ಡರ್ ಸ್ವೀಕಾರವಾದೊಡನೆ 60 ನಿಮಿಷಗಳಲ್ಲಿ ಆರ್ಡರ್ ಸ್ವೀಕರಿಸುವುದನ್ನು ನಿರೀಕ್ಷಿಸಿ.

ತನ್ನ ಯೋಜನೆ

ತನ್ನ ಯೋಜನೆ

ಇನ್ನು ಒನ್ ಪ್ಲಸ್ ಒನ್ ಹೇಳಿಕೆಯ ಪ್ರಕಾರ, ಈ ಯೋಜನೆಯನ್ನು ಬೆಂಗಳೂರಿನದಲ್ಲಿ ಪ್ರಸ್ತುತಪಡಿಸಲಾಗಿದ್ದು, ಮುಂದಿನ ದಿನಗಳಲ್ಲಿ ತನ್ನ ಯೋಜನೆಯನ್ನು ಇತರ ನಗರಗಳಿಗೂ ಕಂಪೆನಿ ಯೋಜಿಸುವ ನಿಟ್ಟಿನಲ್ಲಿದೆ.

ಅದ್ಭುತ ಯೋಜನೆ

ಅದ್ಭುತ ಯೋಜನೆ

ನೀವು ಪಿಜಾ ಆದೇಶ ಮಾಡಿದಂತೆಯೇ ನೀವು ಆರ್ಡರ್ ಮಾಡಿರುವ ಸ್ಮಾರ್ಟ್‌ಫೋನ್ ನಿಮ್ಮನ್ನು ತಲುಪುವ ಈ ಯೋಜನೆಯನ್ನು ನೀವು ಎಂದಾದರೂ ಯೋಚಿಸಿದ್ದೀರಾ ಅಂತಹ ಅದ್ಭುತ ಯೋಜನೆಗೆ ನಾವು ಕೈಹಾಕಿದ್ದೇವೆ ಎಂಬುದಾಗಿ ಭಾರತದ ಕಂಪೆನಿಯ ಜನರಲ್ ಮ್ಯಾನೇಜರ್ ವಿಕಾಸ್ ಅಗರ್‌ವಾಲ್ ತಿಳಿಸಿದ್ದಾರೆ.

ಸುವರ್ಣವಕಾಶ

ಸುವರ್ಣವಕಾಶ

ಕಂಪೆನಿಯು ಇಂತಹ ಚಾಲೆಂಜಿಗೆ ತಯಾರಾಗಿದ್ದು ಬಳಕೆದಾರರಿಗೆ ಸ್ಫೂರ್ತಿಯನ್ನೊದಗಿಸಲು ಈ ಯೋಜನೆಯನ್ನು ನಾವು ಕೈಗೆತ್ತಿಕೊಂಡಿರುವೆವು. ಇನ್ನು ಬೆಂಗಳೂರಿನ ಒನ್ ಪ್ಲಸ್ ಒನ್ ಅಭಿಮಾನಿಗಳಿಗೆ 60 ನಿಮಿಷಗಳಲ್ಲಿ ಫೋನ್ ಒದಗಿಸುವ ಸುವರ್ಣವಕಾಶವನ್ನು ನಾವು ಪ್ರಸ್ತುತಪಡಿಸಲಿರುವೆವು ಎಂದು ವಿಕಾಸ್ ತಿಳಿಸಿದ್ದಾರೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
You might recall a popular pizza outlet offer of delivery in 30 minutes or else, you get the pizza for free! Times are certainly changing and now smartphone companies such as OnePlus are conducting delivery programs offering the OnePlus One smartphone for free if it’s not delivered in 60 minutes.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot