ಒನ್‌ಪ್ಲಸ್‌, ಒಪ್ಪೋ ಗ್ರಾಹಕರೇ ನೀವಿನ್ನೂ ಟೆನ್ಷನ್ ಫ್ರೀ!..ನಿಮಗಾಗಿಯೇ ಈ ಹೊಸ ಆಪ್‌!

|

ಇಂದಿನ ಸ್ಮಾರ್ಟ್‌ಫೋನ್‌ ಬಳಕೆ ಮಾಡುವ ಬಹುತೇಕರು ಕಾಲ್ ರೆಕಾರ್ಡಿಂಗ್ ಆಪ್‌ ಇನ್‌ಸ್ಟಾಲ್‌ ಮಾಡಿಕೊಳ್ಳಲು ಮುಂದಾಗುತ್ತಾರೆ. ಏಕೆಂದರೇ ಎಷ್ಟೋ ಸಂದರ್ಭಗಳಲ್ಲಿ ಕರೆ ರೇಕಾರ್ಡ್‌ ಮಾಡುವುದು ಮುಖ್ಯ ಎನಿಸುತ್ತದೆ. ಈ ನಿಟ್ಟಿನಲ್ಲಿ ಪ್ರಮುಖ ಮೊಬೈಲ್‌ ಕಂಪನಿಗಳು ಇನ್‌ಬಿಲ್ಟ್‌ ಕಾಲ್ ರೆಕಾರ್ಡಿಂಗ್ ಸೌಲಭ್ಯ ನೀಡಿವೆ. ಅದೇ ದಿಸೆಯಲ್ಲಿ ಮುಂದುವರಿದಿರುವ ಒಪ್ಪೋ ಸಂಸ್ಥೆಯು ಓಡೈಯಲರ್ (ODialer app) ಆಪ್‌ ಪರಿಚಯಿಸಿ, ತನ್ನ ಬಳಕೆದಾರರಿಗೆ ಖುಷಿ ಪಡಿಸಿದೆ.

ಒಪ್ಪೋ ಮೊಬೈಲ್‌ ಸಂಸ್ಥೆ

ಹೌದು, ಒಪ್ಪೋ ಮೊಬೈಲ್‌ ಸಂಸ್ಥೆಯು ಓಡೈಯಲರ್ (ODialer app) ಆಪ್‌ ಪರಿಚಯಿಸಿದ್ದು, ಹೀಗಾಗಿ ಒನ್‌ಪ್ಲಸ್‌, ಒಪ್ಪೋ, ರಿಯಲ್‌ಮಿ ಬಳಕೆದಾರರು ಪ್ರತ್ಯೇಕ ಕಾಲ್ ರೆಕಾರ್ಡಿಂಗ್ ಆಪ್‌ ಇನ್‌ಸ್ಟಾಲ್‌ ಮಾಡುವ ಅಗತ್ಯ ಇರದು. ಅಲ್ಲದೇ ಈಗಾಗಲೇ ಬಳಕೆಗೆ ಲಭ್ಯವಿದ್ದ, ಗೂಗಲ್‌ ಫೋನ್‌ ಆಪ್‌ (Google Phone app) ಸಹ ಅಗತ್ಯ ಎನಿಸದು. ಒಪ್ಪೋ ODialer ಆಪ್ ಅಭಿವೃದ್ಧಿಪಡಿಸಿ, ಈಗ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಲಭ್ಯ ಮಾಡಿದೆ.

ಅನಾನುಕೂಲ

ಗೂಗಲ್‌ ಫೋನ್ ಆಪ್‌ ಅತ್ಯುತ್ತಮ ಆಗಿದ್ದು, ಆದರೆ ಇದು ಕರೆ ಮಾಡಿರುವವರಿಗೆ ತಿಳಿಸದೆ ಕರೆ ರೆಕಾರ್ಡ್ ಮಾಡಲು ಸಾಧ್ಯವಿಲ್ಲವಾಗಿತ್ತು. ಇದು ಗೂಗಲ್‌ ಫೋನ್‌ ಆಪ್‌ನ ಒಂದು ಪ್ರಮುಖ ಅನಾನುಕೂಲ ಎಂದು ಹೇಳಲಾಗುತ್ತದೆ. ಈ ನಿಟ್ಟಿನಲ್ಲಿ ಒಪ್ಪೋ ಸಂಸ್ಥೆಯ ODialer ಆಪ್‌ ಬಳಕೆದಾರರಿಗೆ ಅತ್ಯುತ್ತಮ ಎನಿಸಲಿದೆ. ಅಂದಹಾಗೆ ODialer ಆಪ್‌ ಈಗಾಗಲೇ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ 5000+ ಡೌನ್‌ಲೋಡ್‌ ಕಂಡಿದ್ದು, 3.9 ರೇಟಿಂಗ್ ಸಹ ಪಡೆದಿದೆ.

ಒಪ್ಪೋದ ನೂತನ ODialer ಕಾಲ್ ರೆಕಾರ್ಡಿಂಗ್ ಆಪ್‌ ಫೀಚರ್ಸ್‌

ಒಪ್ಪೋದ ನೂತನ ODialer ಕಾಲ್ ರೆಕಾರ್ಡಿಂಗ್ ಆಪ್‌ ಫೀಚರ್ಸ್‌

ಈ ಆಪ್‌ನಲ್ಲಿ ಕರೆಯಲ್ಲಿ ಮಾತನಾಡುವ ವ್ಯಕ್ತಿಗೆ ಮಾಹಿತಿ/ ಸೂಚನೆ ನೀಡದೆ ಕರೆಗಳನ್ನು ರೆಕಾರ್ಡ್ ಮಾಡಬಹುದು. ಇದರೊಂದಿಗೆ ಬಳಕೆದಾರರು ಇತ್ತೀಚಿನ ಕರೆಗಳನ್ನು ಸಹ ವೀಕ್ಷಿಸಬಹುದು. ಅಲ್ಲದೇ ಬಳಕೆದಾರರ ಕರೆಗಳನ್ನು ರೆಕಾರ್ಡ್ ಮಾಡಲು, ಸ್ಪೀಡ್‌ ಡಯಲ್‌ ಜೊತೆಗೆ ತ್ವರಿತವಾಗಿ ಫೋನ್ ಕರೆ ಮಾಡಲು ಮತ್ತು ಬಳಕೆದಾರರ ಕಾಂಟ್ಯಾಕ್ಟ್‌ಗಳನ್ನು ಒಂದೇ ಸ್ಥಳದಲ್ಲಿ ನಿರ್ವಹಿಸಲು ಆಪ್‌ ಬಳಕೆದಾರರಿಗೆ ಅನುಮತಿಸುತ್ತದೆ.

ಆಂಡ್ರಾಯ್ಡ್‌

ಹಾಗೆಯೇ ODialer ಆಪ್‌ ಇತ್ತೀಚಿನ ಆಂಡ್ರಾಯ್ಡ್‌ 12 (Android 12) ಅಥವಾ ಅದಕ್ಕಿಂತ ಮುಂದಿನ ಆಪ್‌ರೇಟಿಂಗ್ ಸಿಸ್ಟಮ್‌ ಬೇಡುತ್ತದೆ. ಇನ್ನು ಈ ಅಪ್ಲಿಕೇಶನ್ ಸರಳ ಆಪರೇಟಿಂಗ್ ಆಯ್ಕೆಗಳನ್ನು ಪಡೆದಿದ್ದು, ಬಳಕೆದಾರರಿಗೆ ಥರ್ಡ್‌ ಪಾರ್ಟಿ ಕಾಲ್ ರೆಕಾರ್ಡಿಂಗ್‌ ಆಪ್‌ಗಳ ಬಳಕೆ ದೂರ ಮಾಡಲಿದೆ.

ಕೆಲವು ವಾಯಿಸ್‌ ಎಡಿಟಿಂಗ್‌ ಆಪ್‌ಗಳ ಮಾಹಿತಿ

ಕೆಲವು ವಾಯಿಸ್‌ ಎಡಿಟಿಂಗ್‌ ಆಪ್‌ಗಳ ಮಾಹಿತಿ

ವಾಯಿಸ್‌ ಪ್ರೊ ವಾಯಿಸ್‌ ಪ್ರೊ
ವಾಯಿಸ್ ಎಡಿಟಿಂಗ್ ಆಪ್ ಭಿನ್ನ ಫೀಚರ್ಸ್‌ಗಳಿಂದ ಗಮನ ಸೆಳೆದಿದ್ದು, ಒಟ್ಟು 100 ಭಿನ್ನ ಮಾದರಿ ಫಾರ್ಮೇಟ್‌ನಲ್ಲಿ ರೆಕಾರ್ಡಿಂಗ್ ಅವಕಾಶ ನೀಡುತ್ತದೆ. ವಾಯಿಸ್ ರೆಕಾರ್ಡಿಂಗ್ ಫೈಲ್‌ಗಳನ್ನು ಮೊನೊ ಅಥವಾ ಸ್ಟೀರಿಯೊ ಫಾರ್ಮೇಟ್‌ನಲ್ಲಿ ದಾಖಲಿಸಬಹುದು. ಇದರೊಂದಿಗೆ ನಿಮ್ಮ ರೆಕಾರ್ಡಿಂಗ್‌ಗೆ ಹಿನ್ನಲೆ ಮ್ಯೂಸಿಕ್ ಸಹ ಸೇರಿಸಬಹುದಾಗ ಸೌಲಭ್ಯ ಇದೆ. ಅದಕ್ಕಾಗಿ ಮಿಕ್ಸ್ ಮತ್ತು ಮರ್ಜ್ ಆಯ್ಕೆಗಳು ಇವೆ. ಕಾಲ್ ರೆಕಾರ್ಡಿಂಗ್ ಆಯ್ಕೆ ಸಹ ಇದೆ.

ಮ್ಯೂಸಿಕ್ ಎಡಿಟರ್

ಮ್ಯೂಸಿಕ್ ಎಡಿಟರ್

ಮ್ಯೂಸಿಕ್ ಎಡಿಟರ್ ಅಪ್ಲಿಕೇಶನ್ ಹಾಡುಗಳ ಎಡಿಟ್‌ಗೆ ಬೆಸ್ಟ್ ತಾಣವಾಗಿದೆ. ಈ ಆಪ್ ಮೂಲಕ ಹಾಡುಗಳನ್ನು ಕಟ್ ಮಾಡಬಹುದು, ರಿಂಗ್‌ಟ್ಯೂನ್ ಸಿದ್ಧಪಡಿಸಿಕೊಳ್ಳಬಹುದು, ಹಾಡುಗಳನ್ನು ಎಡಿಟ್ ಮಾಡಬಹುದು ಹಾಗೂ ಇನ್ನಿತರೆ ಎಡಿಟಿಂಗ್ ಸೌಲಭ್ಯಗಳು ಸಹ ಇವೆ. ಜೊತೆಗೆ ಈ ಆಪ್‌ನಲ್ಲಿ ಬಳಕೆದಾರರು ಆಡಿಯೊ ಕಂಪೋಸ್, ಟ್ರಿಮ್ ಆಡಿಯೊ, ಮರ್ಜ್ ಆಡಿಯೊ, ಫೈಲ್ ಸೇರಿಸುವುದು ಸೌಲಭ್ಯಗಳನ್ನು ಬಳಕೆ ಮಾಡಬಹುದಾಗಿದೆ.

Best Mobiles in India

English summary
OnePlus, Oppo and Realme Phones Get a New Dialer App, Supports Call Recording. to know more visit kannada gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X