ಲಾಂಚ್‌ ಆಗಲಿದೆ ಒನ್‌ಪ್ಲಸ್‌ನ 100W ಫಾಸ್ಟ್ ಚಾರ್ಜರ್; 10 ನಿಮಿಷಕ್ಕೇ ಇಷ್ಟು ಚಾರ್ಜ್‌ ಆಗುತ್ತೆ!

|

ಸ್ಮಾರ್ಟ್‌ ಗ್ಯಾಜೆಟ್‌ಗಳು ಇಂದು ನಮ್ಮೆಲ್ಲರಿಗೂ ಅಗತ್ಯವಾದ ವಿಷಯವಾಗಿವೆ. ಇವುಗಳಿಲ್ಲದೆ ದಿನ ಕಳೆಯುವುದು ಹಲವರಿಗೆ ತುಂಬಾ ಕಷ್ಟವಾದ ಕೆಲಸ. ಹಾಗೆಯೇ ಸ್ಮಾರ್ಟ್‌ ಗ್ಯಾಜೆಟ್‌ಗಳಿಗೆ ಅಗತ್ಯವಾಗಿರುವುದು ಜಾರ್ಜರ್‌ಗಳು. ಈ ಚಾರ್ಜಿಂಗ್‌ ವಿಭಾಗದಲ್ಲಿ ಹೊಸ ನವೀಕರಣಗಳಾಗುತ್ತಿದ್ದು, ಸೂಪರ್‌ಫಾಸ್ಟ್‌ ಚಾರ್ಜಿಂಗ್‌ ಡಿವೈಸ್‌ಗಳಿಗೆ ಬಳಕೆದಾರರು ಹೆಚ್ಚಿನ ಗಮನ ಹರಿಸುತ್ತಿದ್ದಾರೆ.

ಸ್ಮಾರ್ಟ್‌ಫೋನ್

ಹೌದು, ಸ್ಮಾರ್ಟ್‌ಫೋನ್ ಹಾಗೂ ಇನ್ನಿತರೆ ಡಿವೈಸ್‌ಗಳಿಗೆ ಫಾಸ್ಟ್‌ ಚಾರ್ಜರ್‌ ಒಂದು ವರದಾನ. ಈ ಮೂಲಕ ಚಾರ್ಜಿಂಗ್‌ಗಾಗಿಯೇ ಹೆಚ್ಚಿನ ಸಮಯ ಮೀಸಲಿಡುವುದನ್ನು ತಪ್ಪಿಸಬಹುದಾಗಿದೆ. ಹಾಗೆಯೇ ಅಗತ್ಯ ಇರುವ ಕೆಲಸವನ್ನು ತಕ್ಷಣವೇ ಮಾಡಲು ಇದು ಸಹಕಾರಿ. ಇದರ ಬೆನ್ನಲ್ಲೇ ಪ್ರಮುಖ ಸ್ಮಾರ್ಟ್ ಡಿವೈಸ್‌ ತಯಾರಿಕಾ ಕಂಪೆನಿಗಳಲ್ಲಿ ತನ್ನದೇ ಆದ ಜನಪ್ರಿಯತೆ ಪಡೆದುಕೊಂಡಿರುವ ಒನ್‌ಪ್ಲಸ್‌‌ ಬರೋಬ್ಬರಿ 100W ನ ಚಾರ್ಜಿಂಗ್‌ ಪರಿಚಯಿಸಲು ಮುಂದಾಗಿದೆ.

ಒನ್‌ಪ್ಲಸ್‌

ಒನ್‌ಪ್ಲಸ್‌ ಸ್ಮಾರ್ಟ್‌ಫೋನ್‌ಗಳ ಹೊರತಾಗಿ ಇತರೆ ಉತ್ಪನ್ನಗಳನ್ನೂ ಸಹ ಪ್ರಾರಂಭಿಸಲು ಮುಂದಾಗಿದೆ. ಇದರ ಭಾಗವಾಗಿಯೇ ಇತ್ತೀಚಿಗೆ ವಿಭಿನ್ನ ಫೀಚರ್ಸ್‌ ಇರುವ ಮಾನಿಟರ್‌ ಒಂದನ್ನು ಸಹ ಅನಾವರಣ ಮಾಡಿತ್ತು. ಇದರೊಂದಿಗೆ ಈ ಕಂಪೆನಿಯ TWS ಇಯರ್‌ಬಡ್ಸ್ ಮತ್ತು ಟಿವಿಗಳು ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡುತ್ತಿವೆ. ಇದೆಲ್ಲದರ ನಡುವೆ ಹೊಸ ಸೂಪರ್‌ಫಾಸ್ಟ್‌ ಚಾರ್ಜರ್‌ ಎಲ್ಲರನ್ನೂ ಮೂಕವಿಸ್ಮಿತರನ್ನಾಗಿ ಮಾಡಲು ಮುಂದಾಗಿದೆ.

ಮೊದಲ ಚಾರ್ಜರ್‌

ಮೊದಲ ಚಾರ್ಜರ್‌

ಒನ್‌ಪ್ಲಸ್‌ ಮೊದಲ ಬಾರಿಗೆ ಈ 100W ಡ್ಯುಯಲ್ ಪೋರ್ಟ್ ಸೂಪರ್ ಫ್ಲಾಶ್ ಚಾರ್ಜರ್ ಅನ್ನು ಪರಿಚಯಿಸುತ್ತಿದ್ದು, ಈ ಚಾರ್ಜರ್ 65W ವರೆಗೆ ಪಿಡಿ ವೇಗದ ಚಾರ್ಜಿಂಗ್ ಅನ್ನು ಒದಗಿಸುತ್ತದೆ. ಹಾಗೆಯೇ ಈ ಹೊಸ ಚಾರ್ಜರ್ ಡ್ಯುಯಲ್ ಯುಎಸ್‌ಬಿ-ಎ ಹಾಗೂ ಟೈಪ್‌- ಸಿಇಂಟರ್ಫೇಸ್ ಆಯ್ಕೆ ಹೊಂದಿರಲಿದೆ ಎಂದು ಹೆಳಲಾಗುತ್ತಿದೆ.

ಏಕಕಾಲದಲ್ಲಿ ಎರಡೂ ಡಿವೈಸ್‌ಗಳನ್ನು ಚಾರ್ಜ್‌ ಮಾಡಬಹುದು

ಏಕಕಾಲದಲ್ಲಿ ಎರಡೂ ಡಿವೈಸ್‌ಗಳನ್ನು ಚಾರ್ಜ್‌ ಮಾಡಬಹುದು

ಈ ಚಾರ್ಜರ್‌ನ ಪ್ರಮುಖ ವಿಶೇಷ ಎಂದರೆ ಏಕಕಾಲದಲ್ಲಿ ಎರಡೂ ಪೋರ್ಟ್‌ಗಳನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಅದರಲ್ಲೂ ಲ್ಯಾಪ್‌ಟಾಪ್‌ಗಳು, TWS ಮತ್ತು ಸ್ಮಾರ್ಟ್‌ಫೋನ್‌ಗಳಂತಹ ನಿಮ್ಮ ಎಲ್ಲಾ ಹೊಂದಾಣಿಕೆಯ ಡಿವೈಸ್‌ಗಳನ್ನು ಚಾರ್ಜ್ ಮಾಡಲು ಈ ಚಾರ್ಜರ್ ಅನುಕೂಲವಾಗಿದೆ.

ಒನ್‌ಪ್ಲಸ್ 11 ಸ್ಮಾರ್ಟ್‌ಫೋನ್‌ಗೆ ಸಹಾಯಕ

ಒನ್‌ಪ್ಲಸ್ 11 ಸ್ಮಾರ್ಟ್‌ಫೋನ್‌ಗೆ ಸಹಾಯಕ

ಈ ಸೂಪರ್‌ ಫಾಸ್ಟ್‌ ಚಾರ್ಜರ್‌ ನಿಮಿಷಗಳ ಲೆಕ್ಕದಲ್ಲಿ ನಿಮ್ಮ ಡಿವೈಸ್‌ಗಳನ್ನು ಚಾರ್ಜ್‌ ಮಾಡುತ್ತದೆ. ಅದರಲ್ಲೂ ಮುಂದೆ ಮಾರುಕಟ್ಟೆಯಲ್ಲಿ ಸದ್ದು ಮಾಡಲಿರುವ ಒನ್‌ಪ್ಲಸ್ 11 ಅನ್ನು ಗುರಿಯಾಗಿಸಿಕೊಂಡು ಈ ಡಿವೈಸ್‌ ತಯಾರಿಸಲಾಗಿದೆ ಎಂದು ಹೇಳಲಾಗುತ್ತಿದ್ದು, ಈ ಸ್ಮಾರ್ಟ್‌ಫೋನ್‌ 5000mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಆಗಿರಲಿದೆ ಎಂದು ಹೇಳಲಾಗುತ್ತಿದೆ.

10 ನಿಮಿಷಗಳಲ್ಲಿ ಆಗುವ ಚಾರ್ಜಿಂಗ್‌ ಎಷ್ಟು?

10 ನಿಮಿಷಗಳಲ್ಲಿ ಆಗುವ ಚಾರ್ಜಿಂಗ್‌ ಎಷ್ಟು?

ಖಂಡಿತಾ ಈ ವಿಷಯದಲ್ಲಿ ನಿಮಗೆ ಆಸಕ್ತಿ ಇದ್ದೇ ಇರುತ್ತದೆ. ಯಾಕೆಂದರೆ ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯ ಇರುವ ಸೂಪರ್‌ ಫಾಸ್ಟ್‌ ಚಾರ್ಜರ್‌ಗಳು ತಮ್ಮದೇ ಆದ ಶಕ್ತಿಯನ್ನು ಪ್ರದರ್ಶಿಸಿವೆ. ಇದರ ನಡುವೆ ಹೊಸದಾಗಿ ಅನಾವರಣ ಆಗುತ್ತಿರುವ ಡಿವೈಸ್‌ ಕೇವಲ 25 ನಿಮಿಷಗಳಲ್ಲಿ 100% ಮತ್ತು ಕೇವಲ 10 ನಿಮಿಷಗಳಲ್ಲಿ 50% ವರೆಗೆ ಚಾರ್ಜ್‌ ಮಾಡಲಿದೆ. ಅಂದರೆ ಬೆಳಗ್ಗೆ ಎದ್ದು ನಿಮ್ಮ ಹಾಸಿಗೆ ಹಾಗೂ ಕೋಣೆಯನ್ನು ಸ್ವಚ್ಛ ಮಾಡುವುದರ ಒಳಗೆ ನಿಮ್ಮ ಡಿವೈಸ್‌ ಚಾರ್ಜ್‌ ಭರ್ತಿ ಆಗಿರುತ್ತದೆ.

ಒನ್‌ಪ್ಲಸ್

ಇನ್ನು ಒನ್‌ಪ್ಲಸ್ 11 ದೀರ್ಘ ಸಾಮರ್ಥ್ಯ ಬ್ಯಾಟರಿ ಇರುವ ಸ್ಮಾರ್ಟ್‌ಫೋನ್‌ ಆಗಿರಲಿದ್ದು, ಈ ಹೊಸ ಚಾರ್ಜರ್ ಬೆಂಬಲಿಸುವ ಮೊದಲ ಸ್ಮಾರ್ಟ್‌ಫೋನ್‌ ಆಗಿರಲಿದೆ . ಈ ಫೋನ್ 13 ಸೆನ್ಸರ್‌ ಮತ್ತು ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾದ ಬ್ಯಾಟರಿ ನಿರ್ವಹಣೆ ಚಿಪ್ ಮೂಲಕ ಇದು ಕಾರ್ಯನಿರ್ವಹಿಸಲಿದ್ದು, ಬ್ಯಾಟರಿಯ ಸ್ಥಿತಿಗತಿ ಬಗ್ಗೆ ಸದಾಕಾಲ ಕಣ್ಣಿಟ್ಟಿರುತ್ತದೆ.

ಬ್ರ್ಯಾಂಡಿಂಗ್

ಒನ್‌ಪ್ಲಸ್‌ ತನ್ನ ಬ್ರ್ಯಾಂಡಿಂಗ್ ಮೂಲಕ ಈ 100W ಡ್ಯುಯಲ್ ಪೋರ್ಟ್ ಫಾಸ್ಟ್‌ ಚಾರ್ಜರ್ ಅನಾವರಣ ಮಾಡಲು ಸಿದ್ಧವಾಗುತ್ತಿದ್ದು, ಈ ಡಿವೈಸ್‌ ಬಗ್ಗೆ ಚೀನಿ ಮಾರುಕಟ್ಟೆಯಲ್ಲಿ ಮಾತ್ರ ಅಧಿಕೃತವಾಗಿ ದೃಢೀಕರಿಸಲಾಗಿದೆ. ಆದರೆ, ಜಾಗತಿಕವಾಗಿ ಯಾವಾಗಲಿಂದ ಇದು ಲಭ್ಯವಾಗಲಿವೆ ಎಂಬ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ.

Best Mobiles in India

English summary
OnePlus ready to Launch 100W Dual Port Fast Charger.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X